ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಅಚ್ಚರಿ ಫಲಿತಾಂಶ ಪಡೆದುಕೊಂಡ Tata Punch ಮೈಕ್ರೊ ಎಸ್‌ಯುವಿ

ಟಾಟಾ ಮೋಟಾರ್ಸ್(Tata Motors) ಕಂಪನಿಯು ಇದೇ ತಿಂಗಳು 18ರಂದು ತನ್ನ ಹೊಸ ಪಂಚ್‌(Punch) ಮೈಕ್ರೊ ಎಸ್‌ಯುವಿ ಕಾರು ಮಾದರಿಯನ್ನು ಬಿಡುಗಡೆ ಮಾಡುತ್ತಿದ್ದು, ಹೊಸ ಕಾರು ಬಿಡುಗಡೆಗೂ ಪಂಚ್ ಕಾರಿನ ಅಧಿಕೃತ ಕ್ರ್ಯಾಶ್‌ ಟೆಸ್ಟ್ ಫಲಿತಾಂಶ ಕೂಡಾ ಪ್ರಕಟಗೊಂಡಿದೆ.

ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಅಚ್ಚರಿ ಫಲಿತಾಂಶ ಪಡೆದುಕೊಂಡು Tata Punch ಮೈಕ್ರೊ ಎಸ್‌ಯುವಿ

ಪ್ರಯಾಣಿಕ ವಾಹನಗಳ ಸುರಕ್ಷತೆ ಕುರಿತು ಜಾಗತಿಕ ಮಟ್ಟದಲ್ಲಿ ಹೊಸ ಅಭಿಯಾನ ಕೈಗೊಂಡಿರುವ ಗ್ಲೊಬಲ್ ಎಸ್‌ಸಿಎಪಿ ಸಂಸ್ಥೆಯು ಭಾರತದಲ್ಲೂ ಕೂಡಾ #SAFERCARSFORINDIA ಅಭಿಯಾನದೊಂದಿಗೆ ಹೊಸ ಕಾರುಗಳ ಸುರಕ್ಷತೆಯ ಕುರಿತು ಕ್ರ್ಯಾಶ್ ಟೆಸ್ಟ್ ಮೂಲಕ ರೇಟಿಂಗ್ಸ್ ಬಹಿರಂಗಪಡಿಸುತ್ತಿದ್ದು, ಟಾಟಾ ಮೋಟಾರ್ಸ್ ನಿರ್ಮಾಣದ ಕಾರುಗಳು ಗ್ಲೊಬಲ್ ಎನ್‌ಸಿಎಪಿ ಕ್ರ್ಯಾಶ್‌ಟೆಸ್ಟಿಂಗ್‌ನಲ್ಲಿ ಹೊಸ ದಾಖಲೆಗೆ ಕಾರಣವಾಗಿವೆ.

ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಅಚ್ಚರಿ ಫಲಿತಾಂಶ ಪಡೆದುಕೊಂಡು Tata Punch ಮೈಕ್ರೊ ಎಸ್‌ಯುವಿ

ಟಾಟಾ ಮೋಟಾರ್ಸ್ ಕಂಪನಿಯು ನೆಕ್ಸಾನ್ ನಂತರ ಎಲ್ಲಾ ಕಾರು ಮಾದರಿಗಳಲ್ಲೂ ಗರಿಷ್ಠ ಸುರಕ್ಷಾ ಫೀಚರ್ಸ್‌ಗಳೊಂದಿಗೆ ಅಭಿವೃದ್ದಿಗೊಳಿಸಿದ್ದು,ಇದೀಗ ಹೊಸದಾಗಿ ಬಿಡುಗಡೆಯಾಗುತ್ತಿರುವ ಪಂಚ್ ಮೈಕ್ರೊ ಎಸ್‌ಯುವಿ ಮಾದರಿಯು ಸಹ ಗರಿಷ್ಠ ಮಟ್ಟದ ಸೇಫ್ಟಿ ರೇಟಿಂಗ್ಸ್ ಪಡೆದುಕೊಂಡಿದೆ.

ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಅಚ್ಚರಿ ಫಲಿತಾಂಶ ಪಡೆದುಕೊಂಡು Tata Punch ಮೈಕ್ರೊ ಎಸ್‌ಯುವಿ

ಕಾರುಗಳಲ್ಲಿ ಸುರುಕ್ಷೆ ವಿಚಾರವಾಗಿ ಎರಡು ಹಂತದ ಕ್ರ್ಯಾಶ್ ಟೆಸ್ಟಿಂಗ್ ಮೂಲಕ ಸುರಕ್ಷಾ ರೇಟಿಂಗ್ಸ್ ನಿರ್ಧರಿಸಲಿದ್ದು, ಹೊಸ ಪಂಚ್ ಕಾರು ಮಾದರಿಯು ಗರಿಷ್ಠ 5 ಸ್ಟಾರ್ ರೇಟಿಂಗ್ಸ್ ಪಡೆದುಕೊಂಡಿದ.

ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಅಚ್ಚರಿ ಫಲಿತಾಂಶ ಪಡೆದುಕೊಂಡು Tata Punch ಮೈಕ್ರೊ ಎಸ್‌ಯುವಿ

ಭಾರತದಲ್ಲಿರುವ ಪ್ರಮುಖ ಹ್ಯಾಚ್‌ಬ್ಯಾಕ್ , ಸೆಡಾನ್ ಮತ್ತು ಎಸ್‍‌ಯುವಿ ಕಾರು ಮಾದರಿಗಳು ದುಬಾರಿ ಬೆಲೆ ನಡುವೆಯೂ ಗರಿಷ್ಠ ಮಟ್ಟದ ಸುರಕ್ಷತೆ ನೀಡಲು ವಿಫಲವಾಗಿದ್ದು , ಟಾಟಾ ಮೋಟಾರ್ಸ್ ಕಂಪನಿಗಳು ಮಾತ್ರ ದುಬಾರಿ ಕಾರುಗಳನ್ನೇ ಹಿಂದಿಕ್ಕಿ ಸುರಕ್ಷತೆಯಲ್ಲಿ ಅಗ್ರಸ್ಥಾನ ಗಳಿಸಿದೆ.

ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಅಚ್ಚರಿ ಫಲಿತಾಂಶ ಪಡೆದುಕೊಂಡು Tata Punch ಮೈಕ್ರೊ ಎಸ್‌ಯುವಿ

ಹೊಸ ಪಂಚ್ ಕಾರಿನಲ್ಲಿ ಟಾಟಾ ಕಂಪನಿಯು ಹಲವಾರು ಸೆಗ್ಮೆಂಟ್ ಫಸ್ಟ್ ಸುರಕ್ಷಾ ಫೀಚರ್ಸ್‌ಗಳನ್ನು ಅಳವಡಿಸಿದ್ದು, ಭಾರತೀಯ ಆಟೋ ಉದ್ಯಮ ಇತಿಹಾಸದಲ್ಲಿಯೇ ಎಂಟ್ರಿ ಲೆವಲ್ ಕಾರು ಮಾದರಿಯೊಂದು ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಗರಿಷ್ಠ ಪ್ರಮಾಣದ ಸೇಫ್ಟಿ ರೇಟಿಂಗ್ಸ್ ಪಡೆದುಕೊಳ್ಳುವಲ್ಲಿ ಪಂಚ್ ಯಶಸ್ವಿಯಾಗಿದೆ.

ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಅಚ್ಚರಿ ಫಲಿತಾಂಶ ಪಡೆದುಕೊಂಡು Tata Punch ಮೈಕ್ರೊ ಎಸ್‌ಯುವಿ

ಹೊಸ ಪಂಚ್ ಕಾರು ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಗರಿಷ್ಠ 5 ಸ್ಟಾರ್ ಸೇಫ್ಟಿ ರೇಟಿಂಗ್ಸ್ ಪಡೆದುಕೊಂಡಿದ್ದು, ಕ್ರ್ಯಾಶ್ ಟೆಸ್ಟಿಂಗ್ ಸೇಫ್ಟಿ ರೇಟಿಂಗ್ಸ್ ಕುರಿತಾಗಿ ಗ್ಲೋಬಲ್ ಎನ್‌ಸಿಎಪಿ ಸಂಸ್ಥೆಯು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಬಹಿರಂಗಪಡಿಸಿದೆ.

ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಅಚ್ಚರಿ ಫಲಿತಾಂಶ ಪಡೆದುಕೊಂಡು Tata Punch ಮೈಕ್ರೊ ಎಸ್‌ಯುವಿ

ಗುಣಮಟ್ಟದ ತಾಂತ್ರಿಕ ಸೌಲಭ್ಯ ಪಡೆದುಕೊಂಡಿರುವ ಪಂಚ್ ಕಾರಿನಲ್ಲಿ ಟಾಟಾ ಕಂಪನಿಯು ಹಲವಾರು ಸ್ಟ್ಯಾಂಡರ್ಡ್ ಸೇಫ್ಟಿ ಫೀಚರ್ಸ್‌ಗಳನ್ನು ಜೋಡಣೆ ಮಾಡಿದ್ದು, ಅಪಘಾತಗಳ ಸಂದರ್ಭದಲ್ಲಿ ಪ್ರಯಾಣಿಕರಿಗೆ ಗರಿಷ್ಠ ಸುರಕ್ಷತೆಯನ್ನು ಖಾತ್ರಿಪಡಿಸುತ್ತದೆ.

ವಯಸ್ಕ ಪ್ರಯಾಣಿಕರ ಸುರಕ್ಷತೆಗಾಗಿ ಹೊಸ ಕಾರಿಗೆ 5 ಅಂಕಗಳನ್ನು ನೀಡಲಾಗಿದ್ದು, ಮಕ್ಕಳ ಸುರಕ್ಷತೆಗಾಗಿ 4 ಅಂಕಗಳನ್ನು ನೀಡಲಾಗಿದೆ. ಮಕ್ಕಳ ಸುರಕ್ಷತೆಗಾಗಿ ಹೊಸ ಕಾರಿನಲ್ಲಿ ಇನ್ನು ಕೆಲವು ಸುರಕ್ಷಾ ಸೌಲಭ್ಯಗಳನ್ನು ಅಳವಡಿಸಕೊಳ್ಳಬೇಕಿದ್ದು, ವಯಸ್ಕ ಪ್ರಯಾಣಿಕರಿಗೆ ಗರಿಷ್ಠ ಸುರಕ್ಷತೆಯನ್ನು ಖಾತ್ರಿಪಡಿಸಿರುವುದು ಕಾರು ಮಾರಾಟ ಹೆಚ್ಚಳಕ್ಕೆ ಸಹಕಾರಿಯಾಗಲಿದೆ.

ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಅಚ್ಚರಿ ಫಲಿತಾಂಶ ಪಡೆದುಕೊಂಡು Tata Punch ಮೈಕ್ರೊ ಎಸ್‌ಯುವಿ

ಟಾಟಾ ನಿರ್ಮಾಣದ ಟಿಯಾಗೋ ಮತ್ತು ಟಿಗೋರ್ ಕಾರುಗಳು 4 ಸ್ಟಾರ್ ಸೇಫ್ಟಿ ರೇಟಿಂಗ್ಸ್ ಪಡೆದುಕೊಂಡಿದ್ದರೆ ನೆಕ್ಸಾನ್, ಹ್ಯಾರಿಯರ್ ಮತ್ತು ಸಫಾರಿ ಕಾರುಗಳು 5 ಸ್ಟಾರ್ ಸೇಫ್ಟಿ ರೇಟಿಂಗ್ಸ್ ಪಡೆದುಕೊಂಡಿದ್ದು, ಇದೀಗ ಹೊಸದಾಗಿ ಬಿಡುಗಡೆಯಾಗುತ್ತಿರುವ ಪಂಚ್ ಕಾರು ಕೂಡಾ 5 ಸ್ಟಾರ್ ರೇಟಿಂಗ್ಸ್ ಪಡೆದುಕೊಂಡಿರುವುದು ಪ್ರತಿಸ್ಪರ್ಧಿ ಕಾರುಗಳಿಗೆ ಭರ್ಜರಿ ಪೈಪೋಟಿ ಶುರುವಾಗಲಿದೆ.

ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಅಚ್ಚರಿ ಫಲಿತಾಂಶ ಪಡೆದುಕೊಂಡು Tata Punch ಮೈಕ್ರೊ ಎಸ್‌ಯುವಿ

ಹೊಸ ಕಾರಿನಲ್ಲಿ ಸುರಕ್ಷತೆಗಾಗಿ ಫ್ರಂಟ್ ಡ್ಯುಯಲ್ ಎಬಿಎಸ್ ಜೊತೆ ಇಬಿಡಿ, ಡ್ಯಯಲ್ ಫ್ರಂಟ್ ಏರ್‌ಬ್ಯಾಗ್, ಕ್ರೂಸ್ ಕಂಟ್ರೋಲ್, ಟ್ರಾಕ್ಷನ್ ಕಂಟ್ರೊಲ್, ಹಿಲ್ ಅಸಿಸ್ಟ್, ಫ್ರಂಟ್ ಪಾರ್ಕಿಂಗ್ ಸೆನ್ಸಾರ್, ರಿಯರ್ ಪಾರ್ಕಿಂಗ್ ಸೆನ್ಸಾರ್, ಸೀಟ್ ಬೆಲ್ಟ್ ರಿಮೆಂಡರ್, ಟೈರ್ ಪ್ರೆಷರ್ ಮಾನಿಟಿಂಗ್ ಸಿಸ್ಟಂ, ಹೈ ಸ್ಪೀಡ್ ಅಲರ್ಟ್ ಸೌಲಭ್ಯಗಳಿಲಿವೆ.

ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಅಚ್ಚರಿ ಫಲಿತಾಂಶ ಪಡೆದುಕೊಂಡು Tata Punch ಮೈಕ್ರೊ ಎಸ್‌ಯುವಿ

ಅಲ್ಫಾ ಪ್ಲಾಟ್‌ಫಾರ್ಮ್ ಆಧರಿಸಿರುವ ಹೊಸ ಪಂಚ್ ಕಾರು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಪ್ಯೂರ್, ಅಡ್ವೆಂಚರ್, ಅಕಾಂಪ್ಲಿಶೆಡ್ ಮತ್ತು ಕ್ರಿಯೆಟಿವ್ ಎನ್ನುವ ನಾಲ್ಕು ವೆರಿಯೆಂಟ್‌ಗಳೊಂದಿಗೆ ಖರೀದಿಗೆ ಲಭ್ಯವಿರಲಿದ್ದು, ಪ್ರತಿಸ್ಪರ್ಧಿ ಕಾರು ಮಾದರಿಗಳಿಂತಲೂ ಅತ್ಯುತ್ತಮ ವಿನ್ಯಾಸ, ಬಲಿಷ್ಠ ಎಂಜಿನ್ ಆಯ್ಕೆ ಮತ್ತು ಬೆಲೆ ವಿಚಾರವಾಗಿ ಗ್ರಾಹಕರನ್ನು ಸೆಳೆಯಲಿದೆ.

ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಅಚ್ಚರಿ ಫಲಿತಾಂಶ ಪಡೆದುಕೊಂಡು Tata Punch ಮೈಕ್ರೊ ಎಸ್‌ಯುವಿ

ಹೊಸ ಕಾರು ವಿವಿಧ 12 ಮಾದರಿಗಳೊಂದಿಗೆ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 4.99 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 8 ಲಕ್ಷ ಬೆಲೆ ಹೊಂದಿರಬಹುದೆಂದು ಅಂದಾಜಿಸಲಾಗಿದ್ದು, 1.2-ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಹೊಂದಿದೆ.

ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಅಚ್ಚರಿ ಫಲಿತಾಂಶ ಪಡೆದುಕೊಂಡು Tata Punch ಮೈಕ್ರೊ ಎಸ್‌ಯುವಿ

1.2-ಲೀಟರ್ ತ್ರಿ ಸಿಲಿಂಡರ್ ನ್ಯಾಚುರಲ್ ಆಸ್ಪೆರೆಟೆಡ್ ಪೆಟ್ರೋಲ್ ಮಾದರಿಯು 5-ಸ್ಪೀಡ್ ಮ್ಯಾನುವಲ್ ಅಥವಾ 5-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 83 ಬಿಎಚ್‌ಪಿ ಉತ್ಪಾದನಾ ಗುಣಹೊಂದಿದ್ದು, 187 ಎಂಎಂ ಗ್ರೌಂಡ್ ಕ್ಲಿಯೆರೆನ್ಸ್‌ನೊಂದಿಗೆ ನಗರ ಪ್ರದೇಶಗಳ ರಸ್ತೆಗಳ ಜೊತೆ ಆಫ್ ರೋಡ್‌ನಲ್ಲೂ ಸುಲಭವಾಗಿ ಚಲಿಸಬಲ್ಲದು.

Most Read Articles

Kannada
English summary
Tata punch micro suv 5 star rating in global ncap test
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X