Just In
- 11 hrs ago
ಹೊಸ ಫೀಚರ್ಸ್ಗಳನ್ನು ಪಡೆಯಲಿದೆ ನ್ಯೂ ಜನರೇಷನ್ ಫೋಕ್ಸ್ವ್ಯಾಗನ್ ಪೊಲೊ
- 13 hrs ago
ಫೋರ್ಡ್ ಮುಸ್ಟಾಂಗ್ ಕಾರಿನಂತೆ ಮಾಡಿಫೈಗೊಂಡ ಬಲೆನೊ ಸೆಡಾನ್ ಕಾರು
- 15 hrs ago
ವಾರದ ಸುದ್ದಿ: ಸಿಟ್ರನ್ ಕಾರು ಬಿಡುಗಡೆ, ಹೊಸ ವಾಹನ ಬೆಲೆ ಹೆಚ್ಚಳ, ಅಲ್ಕಾಜರ್ ಅನಾವರಣ, ಯುಗಾದಿ ಆಫರ್ ಘೋಷಣೆ!
- 1 day ago
ಎಕ್ಸ್ಯುವಿ700 ಎಸ್ಯುವಿ ಕಾರಿನ ಮತ್ತಷ್ಟು ಹೊಸ ಮಾಹಿತಿ ಹಂಚಿಕೊಂಡ ಮಹೀಂದ್ರಾ
Don't Miss!
- Sports
ಐಪಿಎಲ್ 2021: ಕೊಲ್ಕತ್ತಾ ವಿರುದ್ಧದ ಸೋಲಿಗೆ ಕಾರಣ ಹೇಳಿದ ಡೇವಿಡ್ ವಾರ್ನರ್
- News
ಕರ್ಫ್ಯೂ ನಡುವೆಯೂ ಮೋಜು ಮಸ್ತಿ! ಪಾರ್ಟಿ ಮಾಡುತ್ತಿದ್ದ ಗ್ಯಾಂಗ್ ಕಂಬಿ ಹಿಂದೆ..!
- Movies
ಸೋನು ಸೂದ್ಗೆ ವಿಶೇಷ ಗೌರವ ನೀಡಿದ ಪಂಜಾಬ್ ಸರ್ಕಾರ
- Finance
ಟಾಪ್ 10ರಲ್ಲಿ 4 ಕಂಪನಿಗಳ ಮೌಲ್ಯ 1.14 ಲಕ್ಷ ಕೋಟಿ ರುಗೇರಿಕೆ
- Lifestyle
ವಾರ ಭವಿಷ್ಯ:ಈ ವಾರ 12 ರಾಶಿಗಳ ರಾಶಿಫಲ ಹೇಗಿದೆ?
- Education
Bank Of Baroda Recruitment 2021: 512 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಬೆಂಗಳೂರಿನಲ್ಲಿ ಫಿಕ್ಸ್ ಮೈ ಕಾರ್ ಜೊತೆಗೂಡಿ ಮಲ್ಟಿ ಬ್ರಾಂಡ್ ಸರ್ವಿಸ್ ಸೆಂಟರ್ ತೆರೆದ ಟೊಯೊಟಾ
ಟೊಯೊಟಾ ಕಿರ್ಲೊಸ್ಕರ್ ಮೋಟಾರ್ಸ್ ಕಂಪನಿಯು ದೇಶಾದ್ಯಂತ ಪ್ರತಿ ನಗರದಲ್ಲೂ ಕಾರು ಮಾಲೀಕರಿಗೆ ಗುಣಮಟ್ಟದ ಸೇವೆಗಳನ್ನು ಒಂದೇ ಸೂರಿನಡಿಲ್ಲಿ ಒದಗಿಸಲು ಮಲ್ಟಿ ಬ್ರಾಂಡ್ ಸರ್ವಿಸ್ ಸೆಂಟರ್ಗಳ ತೆರೆಯುವ ಹೊಸ ಯೋಜನೆಗೆ ಚಾಲನೆ ನೀಡಿದ್ದು, ಟಿ-ಸರ್ವ್ ಪ್ಲ್ಯಾಟ್ಫಪಾರ್ಮ್ ಮೂಲಕ ಹೊಸ ಯೋಜನೆಗೆ ಅಧಿಕೃತವಾಗಿ ಚಾಲನೆ ನೀಡಿದೆ.

ಟಿ-ಸರ್ವ್ ಮಲ್ಟಿ ಬ್ರಾಂಡ್ ವರ್ಕ್ಶಾಪ್ ಮೂಲಕ ಗ್ರಾಹಕರಿಗೆ ಗುಣಮಟ್ಟದ ಸೇವೆಗಳನ್ನು ನೀಡುವ ಉದ್ದೇಶ ಹೊಂದಿರುವ ಟೊಯೊಟಾ ಕಂಪನಿಯು ತನ್ನ ಗ್ರಾಹಕರಿಗೆ ಕಾರ್ ಸರ್ವಿಸ್ ಸೇವೆಯನ್ನು ಮತ್ತಷ್ಟು ಸರಳಗೊಳಿಸುತ್ತಿರುವುದಲ್ಲದೆ ಕಾರು ಮಾಲೀಕರಿಗೂ ನಿಗದಿತ ಅವಧಿಯಲ್ಲಿ ವಿವಿಧ ಸ್ಥಳಗಳಿಗೆ ಅನುಗುಣವಾಗಿ ವಿವಿಧ ಕಾರ್ ಸರ್ವಿಸ್ ಸೇವೆಗಳನ್ನು ಒದಗಿಸುವ ಬೃಹತ್ ಯೋಜನೆಯನ್ನು ಆರಂಭಿಸಿದೆ.

ಟೊಯೊಟಾ ಕಂಪನಿಯು ಮೊದಲ ಟಿ-ಸರ್ವ್ ಮಲ್ಟಿ ಬ್ರಾಂಡ್ ವರ್ಕ್ಶಾಪ್ ಅನ್ನು ಬೆಂಗಳೂರಿನ ಪ್ರಮುಖ ಕಡೆಗಳಲ್ಲಿ ಮೊದಲ ಹಂತವಾಗಿ ಚಾಲನೆ ನೀಡಲಾಗಿದ್ದು, ಬೆಂಗಳೂರಿನಲ್ಲಿ ಫಿಕ್ಸ್ ಮೈ ಕಾರ್ ಸರ್ವಿಸ್ ಸೆಂಟರ್ ಸಮೂಹ ಸಂಸ್ಥೆಯೊಂದಿಗೆ ಜೊತೆಗೂಡಿ ಹೊಸ ಯೋಜನೆಯನ್ನು ಆರಂಭಿಸಲಾಗಿದೆ.

ಟಿ-ಸರ್ವ್ ಯೋಜನೆಗಾಗಿ ಹೊಸ ಮಳಿಗಗಳನ್ನು ತೆರೆಯೆದೆ ಸ್ಥಳೀಯವಾಗಿ ಕಾರುಗಳ ಬಿಡಿಭಾಗಗಳ ಸೇವೆಗಳಲ್ಲಿ ಗ್ರಾಹಕರ ವಿಶ್ವಾಸ ಗಳಿಸಿಕೊಂಡಿರುವ ಸರ್ವಿಸ್ ಸೆಂಟರ್ಗಳನ್ನೇ ಟೊಯೊಟಾ ಕಂಪನಿಯು ತನ್ನ ಹೊಸ ಯೋಜನೆಯಲ್ಲಿ ಸಹಭಾಗೀತ್ವ ಕಂಪನಿಯಾಗಿ ಸೇರ್ಪಡೆಗೊಳಿಸಿಕೊಳ್ಳುತ್ತಿದೆ.

ಟೊಯೊಟಾ ಕಂಪನಿಯ ಟಿ-ಸರ್ವ್ನೊಂದಿನ ಜಾಲದೊಂದಿಗೆ ಸೆರ್ಪಡೆಯಾದ ನಂತರ ಸ್ಥಳೀಯವಾಗಿ ಗ್ರಾಹಕರ ವಿಶ್ವಾಸ ಗಳಿಸಿಕೊಂಡಿರುವ ಕಾರ್ ಸರ್ವಿಸ್ ಸೆಂಟರ್ಗಳಲ್ಲಿಯೇ ಸುಧಾರಿತ ತಂತ್ರಜ್ಞಾನಗಳ ಅಳಡಿಕೆಗೆ ಮತ್ತು ನುರಿತ ಉದ್ಯೋಗಿಗಳನ್ನು ನೇಮಕ ಮತ್ತು ನಿರ್ವಹಣೆಯನ್ನು ಕಂಪನಿಯೇ ನಿಭಾಯಿಸುತ್ತದೆ. ಈ ಮೂಲಕ ಹೊಸದಾಗಿ ಸರ್ವಿಸ್ ಸೆಂಟರ್ಗಳನ್ನು ನಿರ್ಮಾಣ ಮಾಡುವ ಬದಲು ಈಗಾಗಲೇ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿರುವ ಮತ್ತು ಗ್ರಾಹಕರಿಂದ ಉತ್ತಮ ಅಭಿಪ್ರಾಯ ಹೊಂದಿರುವ ಸರ್ವಿಸ್ ಸೆಂಟರ್ಗಳನ್ನೇ ಹೊಸ ಯೋಜನೆಯಲ್ಲಿ ಸೇರ್ಪಡೆಗೊಳಿಸಿ ಟಿ-ಸರ್ವ್ ಸೆಂಟರ್ಗಳನ್ನು ಅಭಿವೃದ್ದಿಪಡಿಸುವುದು ಈ ಯೋಜನೆಯ ಪ್ರಮುಖ ಗುರಿಯಾಗಿದೆ.

ಸದ್ಯಕ್ಕೆ ಬೆಂಗಳೂರಿನಲ್ಲಿ ಫಿಕ್ಸ್ ಮೈ ಕಾರ್ ಅಡಿಯಲ್ಲಿರುವ 5 ಸರ್ವಿಸ್ ಸೆಂಟರ್ಗಳಲ್ಲಿ ಟಿ-ಸರ್ವ್ ಸರ್ವಿಸ್ ನಿಲ್ದಾಣಗಳಲ್ಲಿ ಹೊಸ ಸೇವೆ ಆರಂಭವಾಗಿದ್ದು, ಮುಂದಿನ ಕೆಲವೇ ತಿಂಗಳಿನಲ್ಲಿ ದೇಶಾದ್ಯಂತ ಪ್ರಮುಖ ನಗರಗಳಲ್ಲಿ ಹೊಸ ಯೋಜನೆಯು ವಿಸ್ತರಣೆಗೊಳ್ಳಲಿದೆ.

ಬೆಂಗಳೂರಿನ ಕಲ್ಯಾಣನಗರದಲ್ಲಿ ಫಿಕ್ಸ್ ಮೈ ಕಾರ್ ಮುಖ್ಯ ಕಾರ್ ಸರ್ವಿಸ್ ಸೆಂಟರ್ನಲ್ಲಿ ಹೊಸ ಯೋಜನೆಗೆ ಅಧಿಕೃತ ಚಾಲನೆ ನೀಡಿದ ಟೊಯೊಟಾ ಕಂಪನಿಯು ಆಯಾ ಪ್ರದೇಶಗಳಲ್ಲಿ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಹೊಂದಿರುವ ಸರ್ವಿಸ್ ಸೆಂಟರ್ಗಳೊಂದಿಗೆ ಜೊತೆಗೂಡಿ ಮಲ್ಟಿ ಬ್ರಾಂಡ್ ಕಾರ್ ಸರ್ವಿಸ್ಗಳನ್ನು ಆರಂಭಿಸಿದೆ.

ಹೊಸ ಯೋಜನೆಯ ಭಾಗವಾಗಿ ಟಿ-ಸರ್ವ್ ಸೆಂಟರ್ಗಳಿಗೆ ಬಿಡಿಭಾಗಗಳನ್ನು ಒದಗಿಸಲು ಡೆನ್ಸೊ, ಇಡಿಮಸ್ಟು, ಬಾಷ್ ಮತ್ತು ಅಡ್ವಿಕ್ಸ್ ಕಂಪನಿಗಳೊಂದಿಗೆ ಜೊತೆಗೂಡಿರುವ ಟೊಯೊಟಾ ಕಂಪನಿಯು ಪ್ರಮುಖ ಕಾರು ಬ್ರಾಂಡ್ಗಳಲ್ಲಿ ಸಹಭಾಗೀತ್ವ ಕಂಪನಿಯ ಬಿಡಿಭಾಗಗಳನ್ನು ನೇರವಾಗಿ ಟಿ-ಸರ್ವ್ ಮೂಲಕ ಒದಗಿಸಲಿದೆ.

ಟಿ-ಸರ್ವ್ ಸೆಂಟರ್ಗಳಲ್ಲಿ ಬಿಡಿಭಾಗಗಳ ಸೇವೆಗಾಗಿ ಫಿಕ್ಸ್ ಮೈ ಕಾರ್ ಕಂಪನಿಯು ಗ್ರಾಹಕರಿಗೆ ಹೊಸ ಸೇವೆಗಳ ಮಾಹಿತಿ ಮತ್ತು ಪ್ಯಾಕೇಜ್ ಬಳಕೆಯ ತಿಳುವಕೆ ನೀಡಲು ಪ್ರತ್ಯೇಕವಾದ ವೆಬ್ಸೈಟ್ ಹೊಂದಿದ್ದು, ವೆಬ್ಸೈಟ್ ಮೂಲಕ ಗ್ರಾಹಕರು ಕಾರ್ ಸೇವೆಗಾಗಿ ಬುಕ್ಕಿಂಗ್ ಮಾಡುವುದರ ಜೊತೆಗೆ ಹಲವಾರು ಆಫರ್ಗಳನ್ನು ಸಹ ಪಡೆಯಬಹುದಾಗಿದೆ.
MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಗ್ರಾಹಕರು ತಮ್ಮ ಬೇಡಿಕೆಗೆ ಅನುಗುಣವಾಗಿ ಕಾರ್ ಸರ್ವಿಸ್ಗಳನ್ನು ಬುಕ್ಕಿಂಗ್ ಮೂಲಕ ಮನೆ ಬಾಗಿಲಿಗೂ ಪಡೆದುಕೊಳ್ಳಬಹುದಾಗಿದ್ದು, ಅಗತ್ಯವಿರುವ ಗ್ರಾಹಕರಿಗೆ ಕಂಪನಿಯೇ ಪಿಕ್ಅಪ್ ಮತ್ತು ಡ್ರಾಪ್ ಸೇವೆಗಳನ್ನು ನೀಡಲಿದೆ.

ಗ್ರಾಹಕರ ಸೇವೆಗಳನ್ನು ಮತ್ತಷ್ಟು ಕೌಶಲ್ಯಭರಿತವಾಗಿಸಲು ಅಗತ್ಯ ತರಬೇತಿಯೊಂದಿಗೆ ಡ್ರಸ್ಸಿಂಗ್ ಕೋಡ್ ಕಡ್ಡಾಯಗೊಳಿಸಿರುವ ಫಿಕ್ಸ್ ಮೈ ಕಾರ್ ಕಂಪನಿಯು ಒಂದೇ ಸೂರಿನಡಿ ವಿವಿಧ ಕಾರ್ ಬ್ರಾಂಡ್ ಗ್ರಾಹಕರಿಗೆ ಅತ್ಯುತ್ತಮ ಸೇವೆಗಳು ನೀಡುವುದಾಗಿ ಭರವಸೆ ನೀಡಿವೆ.
MOST READ: ಪ್ರತಿ ಚಾರ್ಜ್ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್ಯುವಿ..!

ಫಿಕ್ಸ್ ಮೈ ಕಾರ್ಸ್ ಕಂಪನಿಯು ಹೊಸ ಯೋಜನೆಯೊಂದಿಗೆ ಡ್ರೈವ್ಸ್ಪಾರ್ಕ್ ವೆಬ್ತಾಣದ ಓದುಗರಿಗೆ ವಿಶೇಷ ಆಫರ್ ಘೋಷಣೆ ಮಾಡಿದ್ದು, ಅಗತ್ಯವಿರುವ ಗ್ರಾಹಕರು ಈ ಲೇಖನವನ್ನು ಉಲ್ಲೇಖಿಸಿ ವಿಶೇಷ ರಿಯಾಯಿತಿಗಳನ್ನು ಪಡೆದುಕೊಳ್ಳುವ ಸೀಮಿತ ಅವಧಿಯ ಆಫರ್ ಘೋಷಣೆ ಮಾಡಲಾಗಿದೆ.
ಫಿಕ್ಸ್ ಮೈ ಕಾರ್ಸ್ ಸರ್ವಿಸ್ ಸೆಂಟರ್ ವಿಳಾಸ
#122/1, ಚಲ್ಕರೆ, ಕಲ್ಯಾಣ್ ನಗರ ಸರ್ವಿಸ್ ರೋಡ್, ಬೆಂಗಳೂರು- 560043
ದೂರವಾಣಿ ಸಂಖ್ಯೆಗಳು: 7090009537 ಅಥವಾ 7090009547