ಎಲೆಕ್ಟ್ರಿಕ್ ಕಾರ್ ಅನ್ನು ನೀರಿನೊಳಗೆ ಇಳಿಸಿ ಪರೀಕ್ಷಿಸಿದ ಯೂಟ್ಯೂಬರ್

ಪ್ರಪಂಚದಾದ್ಯಂತ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹಲವು ಖ್ಯಾತ ನಾಮ ಕಂಪನಿಗಳು ಪೆಟ್ರೋಲ್, ಡೀಸೆಲ್ ಎಂಜಿನ್ ವಾಹನಗಳ ಬದಲು ಎಲೆಕ್ಟ್ರಿಕ್ ವಾಹನಗಳನ್ನು ಮಾರಾಟ ಮಾಡಲು ಮುಂದಾಗುತ್ತಿವೆ. ಅಮೆರಿಕಾ ಮೂಲದ ಟೆಸ್ಲಾ (Tesla) ಕಂಪನಿಯು ಎಲೆಕ್ಟ್ರಿಕ್ ಕಾರುಗಳನ್ನು ಮಾತ್ರ ಉತ್ಪಾದಿಸಿ ಮಾರಾಟ ಮಾಡುತ್ತದೆ.

ಎಲೆಕ್ಟ್ರಿಕ್ ಕಾರ್ ಅನ್ನು ನೀರಿನೊಳಗೆ ಇಳಿಸಿ ಪರೀಕ್ಷಿಸಿದ ಯೂಟ್ಯೂಬರ್

ಟೆಸ್ಲಾ ಕಂಪನಿಯ ಕಾರುಗಳು ಅಮೆರಿಕಾದಲ್ಲಿ ಮಾತ್ರವಲ್ಲದೇ ವಿಶ್ವದಾದ್ಯಂತ ಜನಪ್ರಿಯತೆಯನ್ನು ಪಡೆದಿವೆ. ಟೆಸ್ಲಾ ಕಂಪನಿಯು ಹಲವು ಮಾದರಿಗಳನ್ನು ಮಾರಾಟ ಮಾಡುತ್ತದೆ. ಈ ವರ್ಷದ ಆರಂಭದಲ್ಲಿ ಟೆಸ್ಲಾ ಕಂಪನಿಯು ದೇಶಿಯ ಮಾರುಕಟ್ಟೆಗೆ ಪ್ರವೇಶಿಸುವುದನ್ನು ಎದುರು ನೋಡುತ್ತಿರುವುದಾಗಿ ತಿಳಿಸಿತ್ತು. ಕಂಪನಿಯ ಮಾಡೆಲ್ 3 ಹಾಗೂ ಮಾಡೆಲ್ ವೈ ಕಾರುಗಳು ಭಾರತದಲ್ಲಿ ಮೊದಲು ಬಿಡುಗಡೆಯಾಗಲಿವೆ ಎಂದು ನಿರೀಕ್ಷಿಸಲಾಗಿದೆ.

ಎಲೆಕ್ಟ್ರಿಕ್ ಕಾರ್ ಅನ್ನು ನೀರಿನೊಳಗೆ ಇಳಿಸಿ ಪರೀಕ್ಷಿಸಿದ ಯೂಟ್ಯೂಬರ್

ಭಾರತದಲ್ಲಿ ಇನ್ನೂ ಬಿಡುಗಡೆಯಾಗದಿದ್ದರೂ ವಿದೇಶಗಳಲ್ಲಿರುವ ಟೆಸ್ಲಾ ಕಾರು ಮಾಲೀಕರು ತಮ್ಮ ಕಾರುಗಳೊಂದಿಗೆ ವಿವಿಧ ಸಾಹಸಗಳಲ್ಲಿ ತೊಡಗುವುದನ್ನು ನಾವು ಈ ಹಿಂದೆ ನೋಡಿದ್ದೇವೆ. ಇತ್ತೀಚಿಗೆ ಟೆಸ್ಲಾ ಮಾಡೆಲ್ ಎಸ್ ಕಾರು ಮಾಲೀಕರೊಬ್ಬರು ತಮ್ಮ ಕಾರ್ ಅನ್ನು ನೀರಿನಲ್ಲಿ ಮುಳುಗಿಸಿ ಪರೀಕ್ಷಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ವೀಡಿಯೊವನ್ನು ಚಿಲ್ಲಿನ್ ವಿತ್ ಚೆಟ್ ಎಂಬ ಯೂಟ್ಯೂಬ್ ಚಾನೆಲ್ ನಲ್ಲಿ ಪೋಸ್ಟ್ ಮಾಡಲಾಗಿದೆ.

ಎಲೆಕ್ಟ್ರಿಕ್ ಕಾರ್ ಅನ್ನು ನೀರಿನೊಳಗೆ ಇಳಿಸಿ ಪರೀಕ್ಷಿಸಿದ ಯೂಟ್ಯೂಬರ್

ಈ ವಿಡಿಯೋದಲ್ಲಿ ನೀರಿನಲ್ಲಿ ಮುಳುಗಿರುವ ಟೆಸ್ಲಾ ಕಾರನ್ನು ಕಾಣಬಹುದು. ಈ ವೀಡಿಯೊ ಪೋಸ್ಟ್ ಮಾಡಿರುವ ವ್ಯಕ್ತಿ ಇದೇ ರೀತಿ ಟೆಸ್ಲಾ ಕಾರಿನಲ್ಲಿ ಹಲವು ಸಾಹಸಗಳನ್ನು ಮಾಡಿದ್ದಾರೆ. ಈ ವೀಡಿಯೊದಲ್ಲಿ ಟೆಸ್ಲಾ ಮಾಡೆಲ್ ಎಸ್ ಫ್ಲೈಟ್ ಕಾರು ನೀರಿನ ಅಡಿಯಲ್ಲಿ ಚಲಿಸುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ಪರೀಕ್ಷೆ ಮಾಡಿದ್ದಾರೆ. ಈ ಟೆಸ್ಲಾ ಕಾರಿನ ಕ್ಯಾಬಿನ್ ಒಳಗೆ ನೀರು ಬರದಂತೆ ಸಂಪೂರ್ಣವಾಗಿ ಮುಚ್ಚಲಾಗಿದೆ.

ಎಲೆಕ್ಟ್ರಿಕ್ ಕಾರ್ ಅನ್ನು ನೀರಿನೊಳಗೆ ಇಳಿಸಿ ಪರೀಕ್ಷಿಸಿದ ಯೂಟ್ಯೂಬರ್

ಇಂಟೀರಿಯರ್ ನಲ್ಲಿ ಡ್ರೈವರ್ ಸೀಟ್ ಹೊರತುಪಡಿಸಿ ಉಳಿದ ಎಲ್ಲವನ್ನೂ ತೆಗೆದುಹಾಕಲಾಗಿದೆ. ಇದರಿಂದ ಕಾರಿನ ತೂಕ ಕಡಿಮೆಯಾಗಿದೆ. ಇದರಿಂದ ಕಾರು ನೀರಿನಲ್ಲಿ ತೇಲುವ ಸಾಧ್ಯತೆಗಳಿರುತ್ತವೆ. ಆದರೆ ಈ ವೀಡಿಯೋ ಪೋಸ್ಟ್ ಮಾಡಿರುವ ವ್ಯಕ್ತಿ ಕಾರು ನೀರಿನೊಳಗೆ ಹೋಗಬೇಕು ಎಂಬ ಕಾರಣಕ್ಕೆ ಕಾರಿನ ತೂಕವನ್ನು ಹೆಚ್ಚಿಸಿದ್ದಾರೆ. ಈ ಪರೀಕ್ಷೆಗಾಗಿ ವ್ಲಾಗರ್ ಗುಂಡಿ ತೆಗೆದು ಕೊಳ ನಿರ್ಮಿಸಿದ್ದಾರೆ.

ಎಲೆಕ್ಟ್ರಿಕ್ ಕಾರ್ ಅನ್ನು ನೀರಿನೊಳಗೆ ಇಳಿಸಿ ಪರೀಕ್ಷಿಸಿದ ಯೂಟ್ಯೂಬರ್

ನಂತರ ಕೃತಕ ಕೊಳದಲ್ಲಿ ನೀರು ತುಂಬಿದ್ದಾರೆ. ನಂತರ ತಮ್ಮ ಟೆಸ್ಲಾ ಕಾರಿನ ಡೋರ್, ಫ್ರಂಕ್, ಟ್ರಂಕ್ ಎಲ್ಲವನ್ನೂ ಟೇಪ್ ಬಳಸಿ ಮುಚ್ಚಿದ್ದಾರೆ. ಕಾರಿನೊಳಗೆ ನೀರು ಬರುವುದನ್ನು ತಡೆಯಲು ಈ ರೀತಿ ಮಾಡಿದ್ದಾರೆ. ನಂತರ ವ್ಲಾಗರ್ ಮೊದಲ ಪ್ರಯತ್ನದಲ್ಲಿ ಕಾರನ್ನು ಕೊಳದೊಳಕ್ಕೆ ಇಳಿಸಿದ್ದಾರೆ. ಆದರೆ ಮುಂಭಾಗದಲ್ಲಿ ಸಿಕ್ಕಿಬಿದ್ದ ಗಾಳಿಯು ಕಾರ್ ಅನ್ನು ಸರಿಯಾಗಿ ಮುಳುಗಲು ಬಿಡಲಿಲ್ಲ.

ಎಲೆಕ್ಟ್ರಿಕ್ ಕಾರ್ ಅನ್ನು ನೀರಿನೊಳಗೆ ಇಳಿಸಿ ಪರೀಕ್ಷಿಸಿದ ಯೂಟ್ಯೂಬರ್

ರೇಡಿಯೊ ಮೂಲಕ ತಮ್ಮ ತಂಡಕ್ಕೆ ಮಾಹಿತಿ ನೀಡಿ ಕಾರ್ ಅನ್ನು ಹೊರಗೆ ಎಳೆಯುವಂತೆ ಹೇಳಿದ್ದಾರೆ. ಕಾರ್ ಅನ್ನು ನೀರಿನೊಳಗೆ ಇಳಿಸುವ ಮುನ್ನ ಹಲವಾರು ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಕಾರಿನ ಎರಡೂ ತುದಿಗಳಲ್ಲಿ ಹಗ್ಗವನ್ನು ಕಟ್ಟಲಾಗಿತ್ತು. ಕಾರನ್ನು ಹೊರತೆಗೆದ ನಂತರ ಅವರು ಕಾರಿನ ಮುಂಭಾಗದ ಬಂಪರ್‌ನಲ್ಲಿರುವ ಟೇಪ್ ಅನ್ನು ತೆಗೆದರೆ ಮಾತ್ರ ಕಾರು ನೀರಿನೊಳಗೆ ಹೋಗುತ್ತದೆ ಎಂದು ಅರಿತು ಕೊಂಡರು.

ಎಲೆಕ್ಟ್ರಿಕ್ ಕಾರ್ ಅನ್ನು ನೀರಿನೊಳಗೆ ಇಳಿಸಿ ಪರೀಕ್ಷಿಸಿದ ಯೂಟ್ಯೂಬರ್

ಅವರು ಟೇಪ್ ತೆಗೆದು ಕಾರ್ ಅನ್ನು ಮತ್ತೊಮ್ಮೆ ನೀರಿನೊಳಗೆ ಓಡಿಸಿದರು. ಕಾರ್ ಅನ್ನು ನೀರಿನೊಳಗೆ ಇಳಿಸಿದ ನಂತರ ನೀರು ವಿಂಡ್‌ಶೀಲ್ಡ್‌ನ ಅರ್ಧಭಾಗವನ್ನು ಆವರಿಸಿತ್ತು. ಸ್ವಲ್ಪ ಪ್ರಮಾಣದ ನೀರು ಕಾರಿನ ಒಳಗೂ ಬರುತ್ತಿತ್ತು. ಟೆಸ್ಲಾ ಮಾಡೆಲ್ ಎಸ್ ಕಾರು ಯಾವುದೇ ತೊಂದರೆಗಳಿಲ್ಲದೆ ಹೊರ ಬರುತ್ತದೆ. ನೀರಿನಿಂದ ಹೊರ ಬಂದ ನಂತರ ಕಾರು ಚೆನ್ನಾಗಿ ಕಾರ್ಯ ನಿರ್ವಹಿಸುತ್ತಿತ್ತು.

ಎಲೆಕ್ಟ್ರಿಕ್ ಕಾರ್ ಅನ್ನು ನೀರಿನೊಳಗೆ ಇಳಿಸಿ ಪರೀಕ್ಷಿಸಿದ ಯೂಟ್ಯೂಬರ್

ಆದರೆ ಕೆಲ ಸಮಯದ ನಂತರ ಕಾರಿನ ಸ್ಟೀಯರಿಂಗ್ ತಾನಾಗಿಯೇ ಶೇಕ್ ಆಗಿದೆ. ಟಚ್‌ಸ್ಕ್ರೀನ್ ಸಹ ಕಾರ್ಯ ನಿರ್ವಹಿಸುವುದನ್ನು ನಿಲ್ಲಿಸಿದೆ. ತಕ್ಷಣವೇ ವ್ಲಾಗರ್ ಟೆಸ್ಲಾ ಕಸ್ಟಮರ್ ಕೇರ್ ಸೆಂಟರ್ ಗೆ ಕರೆ ಮಾಡಿದ್ದಾರೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಪರೀಕ್ಷೆ ನಡೆಸಿದ ಒಂದು ದಿನದ ನಂತರ ಕಾರು ಸರಿಯಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ವ್ಲಾಗರ್ ಈ ವೀಡಿಯೊದಲ್ಲಿ ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಅವರು ಈ ಕಾರಿನ ಮೇಲೆ ಮತ್ತಷ್ಟು ಪರೀಕ್ಷೆಗಳನ್ನು ನಡೆಸಲು ಚಿಂತನೆ ನಡೆಸುತ್ತಿದ್ದಾರೆ. ಈ ವೀಡಿಯೊ ವೀಕ್ಷಣೆಯು ಮನಸಿಗೆ ಮುದ ನಿಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಟೆಸ್ಲಾ ಕಾರುಗಳನ್ನೇ ಆಗಲಿ ಅಥವಾ ಇನ್ನಾವುದೇ ಕಾರುಗಳನ್ನೇ ಆಗಲಿ ಈ ರೀತಿ ಪರೀಕ್ಷೆಗೆ ಒಳ ಪಡಿಸುವುದು ಸರಿಯಲ್ಲ. ಎಲೆಕ್ಟ್ರಿಕ್ ಕಾರುಗಳನ್ನು ಈ ರೀತಿ ಪರೀಕ್ಷೆಗೆ ಒಳ ಪಡಿಸುವುದರಿಂದ ರಿಪೇರಿಗೆ ದುಬಾರಿ ಬೆಲೆ ತೆರಬೇಕಾಗುತ್ತದೆ.

ಎಲೆಕ್ಟ್ರಿಕ್ ಕಾರ್ ಅನ್ನು ನೀರಿನೊಳಗೆ ಇಳಿಸಿ ಪರೀಕ್ಷಿಸಿದ ಯೂಟ್ಯೂಬರ್

ಕೆಲವು ಕಂಪನಿಗಳ ಕಾರುಗಳು ನೀರಿಗೆ ಇಳಿದ ತಕ್ಷಣ ಸರಿ ಪಡಿಸಲಾಗದಷ್ಟು ಹಾಳಾಗುತ್ತವೆ. ಕೊಚ್ಚೆ ಗುಂಡಿ, ನೀರಿನ ಕೊಳಗಳಲ್ಲಿ ವಾಹನಗಳನ್ನು ಇಳಿಸಿ ಪರೀಕ್ಷೆ ಮಾಡಲು ಬಯಸುವವರಿಗೆ ಬೇರೆ ರೀತಿಯ ವಾಹನಗಳಿವೆ. ಅದರಲ್ಲೂ ವಿಶೇಷವಾಗಿ ಆಫ್ ರೋಡ್ ವಾಹನಗಳಿವೆ. ಇದಕ್ಕೆ ಸ್ಪಷ್ಟ ಉದಾಹರಣೆ ಎಂದರೆ ಮಹೀಂದ್ರ ಥಾರ್. ಆಫ್ ರೋಡ್ ವಾಹನಗಳನ್ನು ನೀರಿಗೆ ಇಳಿಸಿ ಬೇಕಾದ ರೀತಿಯಲ್ಲಿ ಪರೀಕ್ಷಿಸಬಹುದು.

Most Read Articles

Kannada
Read more on ಟೆಸ್ಲಾ tesla
English summary
Youtuber tests tesla electric car under water video details
Story first published: Saturday, November 6, 2021, 10:22 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X