ಭಾರತದಲ್ಲಿ ಕ್ಯಾಪ್ಟನ್ ಸೀಟ್‌ ಜೊತೆ ಕೈಗೆಟುಕುವ ಬೆಲೆಯಲ್ಲಿ ಸಿಗಲಿರುವ ಕಾರುಗಳು: ಇನ್ನೋವಾ ಕ್ರಿಸ್ಟಾವರೆಗೆ...

ಕಾರು ತಯಾರಕ ಕಂಪನಿಗಳು ಭಾರತೀಯ ಕುಟುಂಬಗಳ ಆದ್ಯತೆ ಹಾಗೂ ಅವಶ್ಯಕತೆಗಳಿಗೆ ಅನುಗುಣವಾಗಿ 3-ರೋ ಎಂವಿಪಿ ಹಾಗೂ ಎಸ್‌ಯುವಿಗಳನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುತ್ತಿರುತ್ತವೆ. ಇತ್ತೀಚಿನ ವರ್ಷಗಳಲ್ಲಿ ಇವು ಅಪಾರ ಜನಪ್ರಿಯತೆಯನ್ನು ಗಳಿಸಿವೆ. ಕ್ಯಾಪ್ಟನ್ ಸೀಟ್‌ಗಳೊಂದಿಗೆ ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಸಿಗಲಿರುವ ಟಾಪ್ 5 ಕಾರುಗಳು ಇಲ್ಲಿವೆ.

ಮಾರುತಿ ಸುಜುಕಿ XL6:
ಭಾರತದ ಮಾರುಕಟ್ಟೆಯಲ್ಲಿ ಅತ್ಯಂತ ಕೈಗೆಟುಕುವ ಕಾರುಗಳಲ್ಲಿ ಮಾರುತಿ ಸುಜುಕಿ XL6 ಕೂಡ ಪ್ರಮುಖವಾಗಿದೆ ಎಂದು ಹೇಳಬಹುದು. 6-ಸೀಟ್ ಕಾನ್ಫಿಗರೇಶನ್ ಜೊತೆಗೆ ಮಿಡಲ್ ರೋನಲ್ಲಿ ಕ್ಯಾಪ್ಟನ್ ಸೀಟ್‌ ಅನ್ನು ಈ ಕಾರು ಹೊಂದಿದ್ದು, 7-ಸೀಟ್ ಎರ್ಟಿಗಾವನ್ನು ಆಧರಿಸಿ, ಮಾರುತಿ ಸುಜುಕಿ XL6 ಅನ್ನು ಪ್ರೀಮಿಯಂ 6-ಸೀಟ್ ಕಾರು ಆಗಿ ಪರಿಚಯಿಸಲಾಯಿತು. ಇದನ್ನು ಮಾರುತಿ ಸುಜುಕಿಯ ನೆಕ್ಸಾ ಡೀಲರ್‌ಶಿಪ್‌ಗಳ ಮೂಲಕ ಗ್ರಾಹಕರಿಗೆ ಮಾರಾಟ ಮಾಡಲಾಗುತ್ತದೆ.

ಭಾರತದಲ್ಲಿ ಕ್ಯಾಪ್ಟನ್ ಸೀಟ್‌ ಜೊತೆ ಕೈಗೆಟುಕುವ ಬೆಲೆಯಲ್ಲಿ ಸಿಗಲಿರುವ ಕಾರುಗಳು: ಇನ್ನೋವಾ ಕ್ರಿಸ್ಟಾವರೆಗೆ...

ಮಾರುತಿ ಸುಜುಕಿ XL6 ಬೆಲೆ ದೇಶೀಯ ಮಾರುಕಟ್ಟೆಯಲ್ಲಿ ಪ್ರಸ್ತುತ ರೂ.11.29 ಲಕ್ಷದಿಂದ ಪ್ರಾರಂಭವಾಗುತ್ತದೆ (ಎಕ್ಸ್ ಶೋ ರೂಂ). ಅಲ್ಲದೇ ಕಾರಿನ ಎಂಜಿನ್ ಸಾಮರ್ಥ್ಯದ ಬಗ್ಗೆ ಮಾತನಾಡುವುದಾದರೇ, ಇದು ಎರ್ಟಿಗಾದಂತೆಯೇ ಅದೇ 1.5-ಲೀಟರ್ NA ಪೆಟ್ರೋಲ್ ಎಂಜಿನ್ ಅನ್ನು ಹೊಂದಿದ್ದು, 103 PS ಪವರ್ ಮತ್ತು 137 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದು 5-ಸ್ಪೀಡ್ MT ಅಥವಾ 6-ಸ್ಪೀಡ್ AT ಪ್ಯಾಡಲ್ ಶಿಫ್ಟರ್‌ಗಳೊಂದಿಗೆ ಗ್ರಾಹಕರಿಗೆ ಖರೀದಿಗೆ ಲಭ್ಯವಿದೆ.

ಹ್ಯುಂಡೈ ಅಲ್ಕಾಜರ್:
ಮೂರು-ರೋ ಹ್ಯುಂಡೈ ಅಲ್ಕಾಜರ್, ಭಾರತದಲ್ಲಿ 6- ಮತ್ತು 7-ಸೀಟ್ ಕಾನ್ಫಿಗರೇಶನ್‌ಗಳೊಂದಿಗೆ ಖರೀದಿಗೆ ಲಭ್ಯವಿದೆ ಎಂದು ಹೇಳಬಹುದು. ಆದಾಗ್ಯೂ, ನೀವು ಖರೀದಿಸಬಹುದಾದ ಕ್ಯಾಪ್ಟನ್ ಸೀಟ್‌ನೊಂದಿಗೆ ಅತ್ಯಂತ ಉತ್ತಮವಾಗಿರುವ 6-ಸೀಟ್ ಆವೃತ್ತಿಯಾಗಿದೆ. ಇದರ ಬೆಲೆ ರೂ.16.30 ಲಕ್ಷ (ಎಕ್ಸ್ ಶೋ ರೂಂ) ಇದ್ದು. ಅಲ್ಕಾಜರ್, 2.0-ಲೀಟರ್ NA ಪೆಟ್ರೋಲ್ ಎಂಜಿನ್ 159 PS ಪವರ್ ಹಾಗೂ 191 Nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. 1.5-ಲೀಟರ್ ಡೀಸೆಲ್ ಮೋಟರ್ 115 PS ಗರಿಷ್ಠ ಪವರ್ ಮತ್ತು 250 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ.

ಕಿಯಾ ಕ್ಯಾರೆನ್ಸ್:
3-ರೋ ಕಾರುಗಳ ಹೆಚ್ಚುತ್ತಿರುವ ಜನಪ್ರಿಯತೆಯ ಲಾಭ ಪಡೆಯಲು ಕಿಯಾ ಕ್ಯಾರೆನ್ಸ್ ಅನ್ನು ಕೇವಲ ಒಂದು ವರ್ಷದ ಹಿಂದೆ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಯಿತು. ಪ್ರತಿಸ್ಪರ್ಧಿ ಕಾರುಗಳಾದ ಮಾರುತಿ ಸುಜುಕಿ XL6, ಮಹೀಂದ್ರಾ ಮರಾಝೊ MPVಗಳಂತೆ 7-ಸೀಟ್ ಲೇಔಟ್‌ ಅಥವಾ ಮಿಡಲ್ ರೋನಲ್ಲಿ ಕ್ಯಾಪ್ಟನ್ ಸೀಟ್ ಜೊತೆ 6-ಸೀಟ್ ಸೆಟಪ್ ಅನ್ನು ಹೊಂದಿದೆ. 1.4-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ (140 PS/242 Nm), ಅಥವಾ 1.5-ಲೀಟರ್ ಡೀಸೆಲ್ ಎಂಜಿನ್ (115 PS/250 Nm) ಅನ್ನು ಹೊಂದಿದ್ದು, ಬೆಲೆ ರೂ.16.75 ಲಕ್ಷದಿಂದ ಪ್ರಾರಂಭವಾಗುತ್ತದೆ.

MG ಹೆಕ್ಟರ್ ಪ್ಲಸ್:
ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿರುವ MG ಹೆಕ್ಟರ್ ಪ್ಲಸ್ ಸಹ ಹೆಕ್ಟರ್ ಎಸ್‌ಯುವಿಯಂತೆ 3-ರೋ ಆವೃತ್ತಿಯಾಗಿದೆ. ಇದು 7-ಸೀಟ್ ಸೆಟಪ್ ಅಥವಾ ಕ್ಯಾಪ್ಟನ್ ಸೀಟ್‌ಗಳೊಂದಿಗೆ 6-ಸೀಟ್ ಲೇಔಟ್‌ನೊಂದಿಗೆ ಲಭ್ಯವಿದೆ ಎಂದು ಹೇಳಬಹುದು. ಅತ್ಯಂತ ಕೈಗೆಟುಕುವ 6-ಸೀಟ್ ರೂಪಾಂತರವು ನೋಡಲು ಆಕರ್ಷಕ ವಿನ್ಯಾಸ ಜೊತೆಗೆ ಉತ್ತಮ ವೈಶಿಷ್ಟ್ಯಗಳನ್ನು ಹೊಂದುವ ಮೂಲಕ ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿದೆ. ಪ್ರಸ್ತುತ ಬೆಲೆ ರೂ 17.73 ಲಕ್ಷ (ಎಕ್ಸ್ ಶೋ ರೂಂ) ಇದೆ.

ಈ ಕಾರಿನ ಎಂಜಿನ್ ಕಾರ್ಯಕ್ಷಮತೆಯ ಬಗ್ಗೆ ಹೇಳುವುದಾದರೆ, MG ಹೆಕ್ಟರ್ ಪ್ಲಸ್ ಎರಡು ಎಂಜಿನ್ ಆಯ್ಕೆಗಳಲ್ಲಿ ಖರೀದಿಗೆ ಸಿಗಲಿದೆ. 1.5-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್‌ 143 PS ಪವರ್ ಮತ್ತು 250 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. FCA- ಮೂಲದ 2-ಲೀಟರ್ ಡೀಸೆಲ್ ಎಂಜಿನ್ 170 PS ಪವರ್ ಮತ್ತು 350 Nm ಟಾರ್ಕ್ ಉತ್ಪಾದಿಸುತ್ತದೆ. ಎರಡರಲ್ಲೂ 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ನೀಡಲಾಗಿದೆ. ಆದರೆ, ಪೆಟ್ರೋಲ್ ಎಂಜಿನ್ ಐಚ್ಛಿಕ CVT ಗೇರ್‌ಬಾಕ್ಸ್‌ನೊಂದಿಗೆ ಸಿಗಲಿದೆ.

ಟೊಯೊಟಾ ಇನ್ನೋವಾ ಕ್ರಿಸ್ಟಾ:
ಏಳು-ಸೀಟ್ ಆವೃತ್ತಿಯಲ್ಲಿ ಕ್ಯಾಪ್ಟನ್ ಸೀಟ್‌ ಹೊಂದಿರುವ ಕಾರು ಟೊಯೋಟಾ ಇನ್ನೋವಾ ಕ್ರಿಸ್ಟಾ ಆಗಿದೆ. ಇನ್ನೋವಾ ಕ್ರಿಸ್ಟಾದ ಎಂಟ್ರಿ ಲೆವೆಲ್ GX ರೂಪಾಂತರದ ಬೆಲೆ ರೂ.18.09 ಲಕ್ಷ (ಎಕ್ಸ್-ಶೋರೂಮ್) ಆಗಿದೆ. ಇದರ 2.7-ಲೀಟರ್ ನಾಲ್ಕು ಸಿಲಿಂಡರ್ ಪೆಟ್ರೋಲ್ ಎಂಜಿನ್ 166 PS ಪವರ್ ಮತ್ತು 245 Nm ಟಾರ್ಕ್ ಉತ್ಪಾದಿಸುತ್ತದೆ. 2.4-ಲೀಟರ್ ಡೀಸೆಲ್ ಎಂಜಿನ್ 150 PS ಮತ್ತು 360 Nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿತ್ತು. ಆದಾಗ್ಯೂ, ಹೆಚ್ಚಿನ ಸಂಖ್ಯೆಯ ಆರ್ಡರ್‌ಗಳಿಂದಾಗಿ ಇನ್ನೋವಾ ಕ್ರಿಸ್ಟಾದ ಡೀಸೆಲ್ ರೂಪಾಂತರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಶೀಘ್ರದಲ್ಲೇ ಬುಕಿಂಗ್‌ಗೆ ಲಭ್ಯವಾಗಲಿದೆ.

Most Read Articles

Kannada
English summary
Affordable cars with captain seats in India
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X