ಈಶಾನ್ಯ ಭಾರತದಲ್ಲಿ ತನ್ನ ಮೊದಲ ಹುರಾಕನ್ ಇವೊ ಆರ್‌ಡಬ್ಲ್ಯುಡಿ ಡೆಲಿವರಿ ನೀಡಿದ ಲ್ಯಾಂಬೋರ್ಗಿನಿ

ಇಟಲಿಯ ಐಷಾರಾಮಿ ಕಾರು ತಯಾರಕ ಕಂಪನಿಯಾದ ಲ್ಯಾಂಬೋರ್ಗಿನಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಹಳ ಪ್ರಾಮುಖ್ಯತೆ ಪಡೆದುಕೊಂಡಿದೆ. ಭಾರತದಲ್ಲೂ ಇದಕ್ಕೆ ಭಾರೀ ಬೇಡಿಕೆಯಿದ್ದು, ಲ್ಯಾಂಬೋರ್ಗಿನಿ ಇಂಡಿಯಾವು ತನ್ನ ಹುರಾಕನ್ ಇವೊ ಆರ್‌ಡಬ್ಲ್ಯುಡಿ ಸೂಪರ್ ಕಾರನ್ನು ಮೇಘಾಲಯದ ಗ್ರಾಹಕರೊಬ್ಬರಿಗೆ ಇತ್ತೀಚೆಗೆ ಡೆಲಿವರಿ ನೀಡಿದೆ.

ಈಶಾನ್ಯ ಭಾರತದಲ್ಲಿ ತನ್ನ ಮೊದಲ ಹುರಾಕನ್ ಇವೊ ಆರ್‌ಡಬ್ಲ್ಯುಡಿ ಡೆಲಿವರಿ ನೀಡಿದ ಲ್ಯಾಂಬೊರ್ಗಿನಿ

ಇದು ಭಾರತದ ಈಶಾನ್ಯ ವಲಯದಲ್ಲಿ ವಿತರಿಸಲಾದ ಮೊದಲ ಲ್ಯಾಂಬೋರ್ಗಿನಿ ಹುರಾಕನ್ ಇವೊ ಆರ್‌ಡಬ್ಲ್ಯುಡಿ ಸೂಪರ್ ಕಾರು ಎಂದು ವರದಿಯಾಗಿದೆ. ಈಶಾನ್ಯ ಭಾಗದಲ್ಲಿ ಮೊದಲ ಬಾರಿಗೆ ವಿತರಿಸಲಾದ ಲ್ಯಾಂಬೋರ್ಗಿನಿ ಹುರಾಕನ್ ಇವೊ ಆರ್‌ಡಬ್ಲ್ಯುಡಿ ಕೆಂಪು ಬಣ್ಣದ್ದಾಗಿದ್ದು, ಇದನ್ನು 'ರೋಸಾ ಎಫೆಸ್ಟೊ' ಎಂದು ಸಹ ಕರೆಯಲಾಗುತ್ತದೆ. ಈ ವಾಹನ ರಸ್ತೆಯಲ್ಲಿ ಸಂಚರಿಸಬೇಕಾದರೆ ಇದರ ಬಣ್ಣವು ಎಲ್ಲರನ್ನೂ ಹಿಂತಿರುಗಿ ನೋಡುವಂತೆ ಮಾಡಲು ನಿರ್ಮಿಸಲಾಗಿದೆ.

ಈಶಾನ್ಯ ಭಾರತದಲ್ಲಿ ತನ್ನ ಮೊದಲ ಹುರಾಕನ್ ಇವೊ ಆರ್‌ಡಬ್ಲ್ಯುಡಿ ಡೆಲಿವರಿ ನೀಡಿದ ಲ್ಯಾಂಬೊರ್ಗಿನಿ

ಭಾರತದ ಈಶಾನ್ಯ ವಲಯದಲ್ಲಿ ಮೊದಲ ಲ್ಯಾಂಬೋರ್ಗಿನಿ ಹುರಾಕನ್ ಇವೊ ಆರ್‌ಡಬ್ಲ್ಯುಡಿ ವಿತರಣೆ ಮಾಡಿರುವುದು ಬಹಳ ಸಂತೋಷವಾಗಿದೆ. ಕಾರನ್ನು ಮೇಘಾಲಯ ರಾಜ್ಯದ ಶಿಲ್ಲಾಂಗ್ ಪಟ್ಟಣಕ್ಕೆ ತಲುಪಿಸಲಾಗಿದೆ ಎಂದು ಲ್ಯಾಂಬೋರ್ಗಿನಿ ಇಂಡಿಯಾದ ಮುಖ್ಯ ಕಾರ್ಯನಿರ್ವಾಹಕ ಶರತ್ ಅಗರ್ವಾಲ್ ತಿಳಿಸಿದ್ದಾರೆ.

ಈಶಾನ್ಯ ಭಾರತದಲ್ಲಿ ತನ್ನ ಮೊದಲ ಹುರಾಕನ್ ಇವೊ ಆರ್‌ಡಬ್ಲ್ಯುಡಿ ಡೆಲಿವರಿ ನೀಡಿದ ಲ್ಯಾಂಬೊರ್ಗಿನಿ

ಲ್ಯಾಂಬೋರ್ಗಿನಿ ಹುರಾಕನ್ ಇವೊ ಆರ್‌ಡಬ್ಲ್ಯುಡಿ ಸ್ವಾಭಾವಿಕವಾಗಿ ಆಸ್ಪೆರೇಟೆಡ್ ವಿ10 ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 8000 ಆರ್‌ಪಿಎಂನಲ್ಲಿ ಗರಿಷ್ಠ 610 ಪಿಎಸ್ ಶಕ್ತಿಯನ್ನು ಹೊಂದಿದೆ. 6500 ಆರ್‌ಪಿಎಂನಲ್ಲಿ 560 ಎನ್‌ಎಮ್ ಟಾರ್ಕ್ ಅನ್ನು ಹೊಂದಿದೆ. ಎಂಜಿನ್ 7-ಸ್ಪೀಡ್ ಡ್ಯುಯಲ್-ಕ್ಲಚ್ ಸ್ವಯಂಚಾಲಿತ ಟ್ರಾನ್ಸ್‌ಮಿಷನ್ ಅನ್ನು ಹೊಂದಿದೆ.

ಈಶಾನ್ಯ ಭಾರತದಲ್ಲಿ ತನ್ನ ಮೊದಲ ಹುರಾಕನ್ ಇವೊ ಆರ್‌ಡಬ್ಲ್ಯುಡಿ ಡೆಲಿವರಿ ನೀಡಿದ ಲ್ಯಾಂಬೊರ್ಗಿನಿ

ಇದು ಹಿಂಭಾಗದ ಚಕ್ರಗಳಿಗೆ ಮಾತ್ರ ಪವರ್ ನೀಡುತ್ತದೆ. ಇದು ರಿಯರ್ ವೀಲ್ ಡ್ರೈವ್ ವಾಹನವಾಗಿದ್ದರೂ, ಲ್ಯಾಂಬೋರ್ಗಿನಿ ಹುರಾಕನ್ ಇವೊ ಆರ್‌ಡಬ್ಲ್ಯುಡಿ ಕೇವಲ 3.3 ಸೆಕೆಂಡುಗಳಲ್ಲಿ 100 ಕಿ.ಮೀ ವೇಗವನ್ನು ತಲುಪುತ್ತದೆ. ಅಲ್ಲದೇ ಕೇವಲ 9.3 ಸೆಕೆಂಡುಗಳಲ್ಲಿ 200 ಕಿ.ಮೀ ವೇಗವನ್ನು ತಲುಪುವ ಸಾಮರ್ಥ್ಯವನ್ನು ಹೊಂದಿದೆ.

ಈಶಾನ್ಯ ಭಾರತದಲ್ಲಿ ತನ್ನ ಮೊದಲ ಹುರಾಕನ್ ಇವೊ ಆರ್‌ಡಬ್ಲ್ಯುಡಿ ಡೆಲಿವರಿ ನೀಡಿದ ಲ್ಯಾಂಬೊರ್ಗಿನಿ

ಲ್ಯಾಂಬೋರ್ಗಿನಿ ಹುರಾಕನ್ ಇವೊ ಆರ್‌ಡಬ್ಲ್ಯುಡಿ ಸೂಪರ್ ಕಾರಿನ ಉನ್ನತ ವೇಗವು ಗಂಟೆಗೆ 325 ಕಿ.ಮೀ ಆಗಿದೆ. ಈ ವೇಗದಿಂದಲೇ ಕಾರಿನ ಅದ್ಭುತ ಕಾರ್ಯಕ್ಷಮತೆಯನ್ನು ನಾವು ಅರ್ಥಮಾಡಿಕೊಳ್ಳಬಹುದು. ಈ ಲ್ಯಾಂಬೋರ್ಗಿನಿ ಹುರಾಕನ್ ಇವೊ ಆರ್‌ಡಬ್ಲ್ಯುಡಿ ಕಾರಿಗೆ ಮುಂಭಾಗ ಮತ್ತು ಹಿಂಭಾಗದಲ್ಲಿ ಡಿಸ್ಕ್‌ ಬ್ರೇಕ್ ನೀಡಲಾಗಿದೆ.

ಈಶಾನ್ಯ ಭಾರತದಲ್ಲಿ ತನ್ನ ಮೊದಲ ಹುರಾಕನ್ ಇವೊ ಆರ್‌ಡಬ್ಲ್ಯುಡಿ ಡೆಲಿವರಿ ನೀಡಿದ ಲ್ಯಾಂಬೊರ್ಗಿನಿ

ಮುಂಭಾಗದಲ್ಲಿ 8 ಪಿಸ್ಟನ್ ಕ್ಯಾಲಿಬರ್‌ಗಳು ಮತ್ತು ಹಿಂಭಾಗದಲ್ಲಿ 4 ಪಿಸ್ಟನ್ ಕ್ಯಾಲಿಬರ್‌ಗಳನ್ನು ಹೊಂದಿದೆ. ಲ್ಯಾಂಬೋರ್ಗಿನಿ ಹುರಾಕನ್ ಇವೊ ಆರ್‌ಡಬ್ಲ್ಯುಡಿ ಸೂಪರ್ ಕಾರು ಬಿಝೀರೋ ಟೈರ್‌ಗಳಿಂದ ಮಾಡಲಾದ 19-ಇಂಚಿನ ಚಕ್ರಗಳನ್ನು ಹೊಂದಿದೆ.

ಈಶಾನ್ಯ ಭಾರತದಲ್ಲಿ ತನ್ನ ಮೊದಲ ಹುರಾಕನ್ ಇವೊ ಆರ್‌ಡಬ್ಲ್ಯುಡಿ ಡೆಲಿವರಿ ನೀಡಿದ ಲ್ಯಾಂಬೊರ್ಗಿನಿ

ಲ್ಯಾಂಬೋರ್ಗಿನಿ ಹುರಾಕನ್ ಇವೊ ಆರ್‌ಡಬ್ಲ್ಯುಡಿ ಟ್ರಾಕ್ಸನ್ ನಿಯಂತ್ರಣ, ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಂ, ಎಲೆಕ್ಟ್ರಾನಿಕ್ ಸ್ಥಿರತೆ ನಿಯಂತ್ರಣ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಹೊಂದಿದೆ. ಇದಲ್ಲದೆ, ಈ ಕಾರು ವೆಬ್ ರೇಡಿಯೋ, ಟಚ್ ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ, ಆಪಲ್ ಕಾರ್‌ಪ್ಲೇ, ಆಂಡ್ರಾಯ್ಡ್‌ ಆಟೋ ಮತ್ತು ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.

ಈಶಾನ್ಯ ಭಾರತದಲ್ಲಿ ತನ್ನ ಮೊದಲ ಹುರಾಕನ್ ಇವೊ ಆರ್‌ಡಬ್ಲ್ಯುಡಿ ಡೆಲಿವರಿ ನೀಡಿದ ಲ್ಯಾಂಬೊರ್ಗಿನಿ

ಹುರಾಕನ್‌ನ ಇವೊ ಆವೃತ್ತಿಯು ಸಾಮಾನ್ಯ ಲ್ಯಾಂಬೋರ್ಗಿನಿ ಹುರಾಕನ್‌ಗಿಂತ ಉತ್ತಮವಾಗಿತ್ತು. ಏರೋಡೈನಾಮಿಕ್ಸ್‌ ವಿಷಯದಲ್ಲಿ ಲ್ಯಾಂಬೋರ್ಗಿನಿ ಹಲವಾರು ಬದಲಾವಣೆಗಳನ್ನು ಪಡೆದುಕೊಂಡಿದೆ. ಈ ಎಲ್ಲಾ ವಿಶೇಷತೆಗಳಿಂದಲೇ ದುಬಾರಿ ಕಾರೆಂದು ಕರೆಸಿಕೊಂಡಿದ್ದು, ಇದರ ಎಕ್ಸ್‌ ಶೋರೂಂ ಬೆಲೆ ರೂ. 3.21 ಕೋಟಿ ಇದೆ.

ಈಶಾನ್ಯ ಭಾರತದಲ್ಲಿ ತನ್ನ ಮೊದಲ ಹುರಾಕನ್ ಇವೊ ಆರ್‌ಡಬ್ಲ್ಯುಡಿ ಡೆಲಿವರಿ ನೀಡಿದ ಲ್ಯಾಂಬೊರ್ಗಿನಿ

ಆನ್-ರೋಡ್ ಬೆಲೆ ಇನ್ನೂ ಹೆಚ್ಚಾಗಲಿದೆ. ಆದರೆ ಭಾರತದ ಈಶಾನ್ಯ ಭಾಗದಲ್ಲಿ ವಿತರಿಸಲಾದ ಮೊದಲ ಲ್ಯಾಂಬೋರ್ಗಿನಿ ಹುರಾಕನ್ ಇವೊ ಆರ್‌ಡಬ್ಲ್ಯುಡಿ ಸೂಪರ್ ಕಾರಿನ ಮಾಲೀಕರ ವಿವರಗಳನ್ನು ಕಂಪನಿ ಬಹಿರಂಗಪಡಿಸಿಲ್ಲ. ಈ ಕಾರನ್ನು ಖರೀದಿಸಿದ ಈ ಪ್ರದೇಶದ ಮೊದಲ ಮತ್ತು ಏಕೈಕ ವ್ಯಕ್ತಿಯಾಗಿರುವುದರಿಂದ, ಹಲವರು ಮಾಲೀಕನ ಬಗ್ಗೆ ತಿಳಿದುಕೊಳ್ಳಲು ಉತ್ಸುಕರಾಗಿದ್ದಾರೆ.

ಈಶಾನ್ಯ ಭಾರತದಲ್ಲಿ ತನ್ನ ಮೊದಲ ಹುರಾಕನ್ ಇವೊ ಆರ್‌ಡಬ್ಲ್ಯುಡಿ ಡೆಲಿವರಿ ನೀಡಿದ ಲ್ಯಾಂಬೊರ್ಗಿನಿ

ಅವರ ಬಗೆಗಿನ ಮಾಹಿತಿ ಶೀಘ್ರದಲ್ಲೇ ತಿಳಿದುಬರಲಿದೆ. ಇತ್ತೀಚಿನ ದಿನಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಲ್ಯಾಂಬೋರ್ಗಿನಿ ಕಾರುಗಳು ಉತ್ತಮ ಪ್ರತಿಕ್ರಿಯೆಯನ್ನು ಪಡೆಯುತ್ತಿವೆ. ಲ್ಯಾಂಬೋರ್ಗಿನಿ ಉರುಸ್ ವಿಶೇಷವಾಗಿ ಜನಪ್ರಿಯವಾಗಿದೆ. ಅನೇಕ ಭಾರತೀಯ ನಟರು ಮತ್ತು ಕೈಗಾರಿಕೋದ್ಯಮಿಗಳು ಲ್ಯಾಂಬೋರ್ಗಿನಿ ಉರುಸ್ ಕಾರನ್ನು ಹೊಂದಿದ್ದಾರೆ.

Most Read Articles

Kannada
English summary
North east india s first lamborghini huracan evo rwd delivered in meghalaya
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X