Just In
Don't Miss!
- Sports
ನೆಟ್ಸ್ನಲ್ಲಿ ಬೌಲಿಂಗ್ ಆರಂಭಿಸಿದ ಬುಮ್ರಾ : ಟೆಸ್ಟ್ ಸರಣಿಯ ಕೊನೆಯ ಎರಡು ಪಂದ್ಯಗಳಿಗೆ ಆಯ್ಕೆ?
- Movies
ಅಭಿಷೇಕ್ ಅಂಬರೀಶ್ ಮದ್ದೂರಿನಿಂದ ಸ್ಪರ್ಧೆ ಮಾಡೋದು ನಿಜವೇ? ಏನಂದ್ರು ಮರಿ ರೆಬೆಲ್?
- News
ಮಕ್ಕಳಾಗಲು ಮಾನವನ ಮೂಳೆ ಪೌಡರ್ ತಿನ್ನುವಂತೆ ಒತ್ತಾಯ, ಪ್ರಕರಣ ದಾಖಲು
- Lifestyle
ಮಗುವಿಗೆ ಗ್ಯಾಸ್ ಪ್ರಾಬ್ಲಂ ಆದಾಗ ಹೀಗೆ ಮಾಡಿ
- Finance
NRI PAN Card: ಎನ್ಆರ್ಐ ಪ್ಯಾನ್ ಕಾರ್ಡ್ಗೆ ಆನ್ಲೈನ್ ಅರ್ಜಿ ಸಲ್ಲಿಸುವುದು ಹೇಗೆ?
- Technology
2023ರಲ್ಲಿ ಸ್ಮಾರ್ಟ್ಫೋನ್ ಖರೀದಿಸುವ ಮುನ್ನ ನೀವು ಗಮನಿಸಲೇಬೇಕಾದ ವಿಚಾರಗಳು!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಮುಂಬರಲಿರುವ ಟಾಪ್ 5 ಟಾಟಾ ಕಾರುಗಳು: ಎಂತಹ ವೈಶಿಷ್ಟ್ಯಗಳಿವೆ ಗೊತ್ತಾ?
ಭಾರತದ ಅತಿದೊಡ್ಡ ವಾಹನ ತಯಾರಕ ಕಂಪನಿ ಟಾಟಾ ಮೋಟಾರ್ಸ್, ಈ ವರ್ಷ ಹಲವು ಹೊಸ ಕಾರುಗಳನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಿದೆ. 2022ರಲ್ಲಿ ಟಾಟಾ ಲಾಂಚ್ ಮಾಡಿದ ಟಿಯಾಗೊ, ಟಿಗೊರ್ ಸಿಎನ್‌ಜಿ, ಟಿಯಾಗೊ ಇವಿ ಮತ್ತು ನೆಕ್ಸಾನ್ ಇವಿ ಮ್ಯಾಕ್ಸ್ ಮಾರಾಟದಲ್ಲಿ ಉತ್ತಮ ಪ್ರಗತಿಯನ್ನು ಕಂಡಿದ್ದವು. ಮುಂಬರಲಿರುವ ಟಾಪ್ 5 ಟಾಟಾ ಕಾರುಗಳು ಇಲ್ಲಿವೆ.
ಟಾಟಾ ಪಂಚ್ ಸಿಎನ್‌ಜಿ:
ಟಾಟಾ ಮೋಟಾರ್ಸ್ ಆಟೋ ಎಕ್ಸ್‌ಪೋದಲ್ಲಿ ಪಂಚ್‌ನ ಸಿಎನ್‌ಜಿ ಆವೃತ್ತಿಯನ್ನು ಅನಾವರಣ ಮಾಡಿತು. ಇದರ ಎಂಜಿನ್ ಕಾರ್ಯಕ್ಷಮತೆಯ ಬಗ್ಗೆ ಹೇಳುವುದಾದರೆ, 1.2-ಲೀಟರ್, 3-ಸಿಲಿಂಡರ್, ಎನ್‌ಎ ಪೆಟ್ರೋಲ್ ಎಂಜಿನ್ ಹೊಂದಿದ್ದು, ಇದು 86 bhp ಗರಿಷ್ಠ ಪವರ್ ಮತ್ತು 113 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಸಿಎನ್‌ಜಿ ಮೋಡ್‌ನಲ್ಲಿ 72 bhp ಪವರ್ ಮತ್ತು 95 Nm ಪಿಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆಯನ್ನು ಪಡೆದಿರಲಿದ್ದು, ಟಾಟಾ ಸಿಎನ್‌ಜಿ ಆವೃತ್ತಿಯೊಂದಿಗೆ ಎಎಮ್‌ಟಿ ಟ್ರಾನ್ಸ್‌ಮಿಷನ್ ಅನ್ನು ನೀಡಬಹುದು.
ಟಾಟಾ ಪಂಚ್ ಸಿಎನ್‌ಜಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು, ಎಲ್‌ಇಡಿ ಡಿಆರ್‌ಎಲ್‌ಗಳು, ಎಲ್‌ಇಡಿ ಟೈಲ್‌ಲೈಟ್‌ಗಳು, 16-ಇಂಚಿನ ಡ್ಯುಯಲ್-ಟೋನ್ ಅಲಾಯ್ ವೀಲ್‌ಗಳು, ಆಟೋಮೆಟಿಕ್ ಹೆಡ್‌ಲ್ಯಾಂಪ್‌ಗಳು, ರೈನ್-ಸೆನ್ಸಿಂಗ್ ವೈಪರ್‌ಗಳು, ಸೆಮಿ-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಪುಶ್-ಬಟನ್ ಸ್ಟಾರ್ಟ್/ಸ್ಟಾಪ್, ಸುರಕ್ಷತಾ ದೃಷ್ಟಿಯಿಂದ ಡ್ಯುಯಲ್ ಏರ್‌ಬ್ಯಾಗ್‌ಗಳು, ABS, ರೇರ್ ಪಾರ್ಕಿಂಗ್ ಕ್ಯಾಮೆರಾವನ್ನು ಹೊಂದಿದೆ. ಟಾಟಾ ಮೋಟಾರ್ಸ್ ಫೆಬ್ರವರಿ 2022ರಲ್ಲಿ ಟಿಯಾಗೊ ಮತ್ತು ಟಿಗೊರ್ ಸಿಎನ್‌ಜಿಯನ್ನು ಬಿಡುಗಡೆ ಮಾಡುವ ಮೂಲಕ ಸಿಎನ್‌ಜಿ ಮಾರುಕಟ್ಟೆ ವಿಭಾಗವನ್ನು ಪ್ರವೇಶಿಸಿತು.
ಟಾಟಾ ಪಂಚ್ ಇವಿ:
ಟಾಟಾ ಮೋಟಾರ್ಸ್ ಆಟೋ ಎಕ್ಸ್‌ಪೋದಲ್ಲಿ ಪಂಚ್ ಇವಿಯಲ್ಲಿ ಅನಾವರಣ ಮಾಡಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ, ಕಂಪನಿಯು ಸಿಎನ್‌ಜಿ ರೂಪಾಂತರವನ್ನು ಪ್ರದರ್ಶಿಸಿತು. ಪಂಚ್ ಇವಿ, ಆಲ್ಟ್ರೊಜ್ ಹ್ಯಾಚ್‌ಬ್ಯಾಕ್ ಹೊಂದಿರುವ ಆಲ್ಫಾ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದ್ದು, ಜಿಪ್ಟ್ರಾನ್ ಎಲೆಕ್ಟ್ರಿಕ್ ಮೋಟರ್‌ನಿಂದ ಚಾಲಿತವಾಗಲಿದೆ. ಸುಮಾರು 90-100 hp ಗರಿಷ್ಠ ಪವರ್ ಮತ್ತು 170-200 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿರಬಹುದು ಎಂದು ನಿರೀಕ್ಷಿಸಲಾಗಿದೆ.
ಟಾಟಾ ಪಂಚ್ ಇವಿ ಬ್ಯಾಟರಿ ಬಗ್ಗೆ ಮಾತನಾಡುವುದಾದರೆ, ಇದು ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳನ್ನು ಹೊಂದಿರಬಹುದು. ಅವುಗಳೆಂದರೆ, ಮೀಡಿಯಂ ರೇಂಜ್ ಮತ್ತು ಲಾಂಗ್ ರೇಂಜ್. ಇದು ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿರುವ ICE ಆವೃತ್ತಿಗಿಂತ ಬೇರೆಯಾಗಿ ಕಾಣಲು ಬಾಹ್ಯ ಮತ್ತು ಆಂತರಿಕದಲ್ಲಿ ವಿನ್ಯಾಸದಲ್ಲಿ ಕೆಲವೊಂದು ಪ್ರಮುಖ ಬದಲಾವಣೆಗಳನ್ನು ಪಡೆದಿರಲಿದೆ. ಇತರೆ ಟಾಟಾ ಇವಿಗಳಿಗೆ ಹೋಲುವ 'ಹ್ಯುಮಾನಿಟಿ' ಲೈನ್ ಗ್ರಿಲ್ ಅನ್ನು ಹೊಂದಿರಲಿದೆ.
ಟಾಟಾ ಆಲ್ಟ್ರೋಜ್ ಸಿಎನ್‌ಜಿ:
ಪಂಚ್ ಸಿಎನ್‌ಜಿ ಜೊತೆಗೆ, ಟಾಟಾ ಮೋಟಾರ್ಸ್ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಆಲ್ಟ್ರೋಜ್ ಸಿಎನ್‌ಜಿ ಕಾರನ್ನು ಸಹ ಪ್ರದರ್ಶಿಸಿತು. ಆಲ್ಟ್ರೊಜ್ ಸಿಎನ್‌ಜಿ ಹಲವಾರು ಬಾರಿ ರಸ್ತೆಗಳಲ್ಲಿ ಪರೀಕ್ಷಾರ್ಥ ಸಂಚಾರ ನಡೆಸುವಾಗ ಕಂಡುಬಂದಿತ್ತು. ಸಿಎನ್‌ಜಿ ಮೋಡ್‌ನಲ್ಲಿ ಇದರ ಎಂಜಿನ್ 72 bhp ಪವರ್, 95 Nm ಪೀಕ್ ಟಾರ್ಕ್ ಉತ್ಪಾದಿಸಲಿದೆ. ಸುರಕ್ಷತೆಯ ದೃಷ್ಟಿಯಿಂದ ಆಲ್ಟ್ರೋಜ್ ಸಿಎನ್‌ಜಿ ISOFIX ಚೈಲ್ಡ್ ಸೀಟ್ ಆಂಕರ್‌ಗಳು, ಫ್ರಂಟ್ ಡ್ಯುಯಲ್ ಏರ್‌ಬ್ಯಾಗ್‌ಗಳು ಮತ್ತು ಕ್ಯಾಮೆರಾ, ಎಬಿಎಸ್ ಮತ್ತು ಇಬಿಡಿಯೊಂದಿಗೆ ರೇರ್ ಪಾರ್ಕಿಂಗ್ ಸೆನ್ಸರ್ಸ್ ಅನ್ನು ಹೊಂದಿರಲಿದೆ.
ಟಾಟಾ ಹ್ಯಾರಿಯರ್ & ಸಫಾರಿ ರೆಡ್ ಡಾರ್ಕ್ ಎಡಿಷನ್ಸ್:
ಟಾಟಾ ಮೋಟಾರ್ಸ್ ಹ್ಯಾರಿಯರ್ ಮತ್ತು ಸಫಾರಿ ಎಸ್‌ಯುವಿಗಳ ರೆಡ್ ಡಾರ್ಕ್ ಎಡಿಷನ್ಸ್ ಅನ್ನು ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಿತು. ಹ್ಯಾರಿಯರ್ ಹಾಗೂ ಸಫಾರಿ ಎಲ್ಲಾ ಪ್ರಮುಖ ADAS ವೈಶಿಷ್ಟ್ಯಗಳು, ರೆಡ್-ಸೀಟ್ ಅಪ್ಹೋಲ್ಸ್ಟರಿ, ಹೊಸ 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್,ನೂತನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು 360-ಡಿಗ್ರಿ ಕ್ಯಾಮೆರಾವನ್ನು ಹೊಂದಿದೆ. ಫಿಯೆಟ್-ಸೌರ್ಸ್ಡ್ 2.0-ಲೀಟರ್ ಡೀಸೆಲ್ ಎಂಜಿನ್ ಹೊಂದಿದ್ದು, ಇದು 170 bhp ಪವರ್ ಮತ್ತು 350 Nm ಟಾರ್ಕ್ ಉತ್ಪಾದಿಸುತ್ತದೆ.
ಟಾಟಾ ಆಲ್ಟ್ರೋಜ್ ರೇಸರ್:
ಟಾಟಾ ಮೋಟಾರ್ಸ್ ದೆಹಲಿಯ ಆಟೋ ಎಕ್ಸ್‌ಪೋದಲ್ಲಿ 'ಆಲ್ಟ್ರೋಜ್ ರೇಸರ್' ಸ್ಪೋರ್ಟಿಯರ್ ಆವೃತ್ತಿಯನ್ನು ಅನಾವರಣಗೊಳಿತು. ಆಲ್ಟ್ರೊಜ್ ರೇಸರ್ ಕೆಲವೊದು ಕಾಸ್ಮೆಟಿಕ್ ಬದಲಾವಣೆಳನ್ನು ಪಡೆದಿದ್ದು, ಬ್ಲ್ಯಾಕ್ಡ್-ಔಟ್ ಬಾನೆಟ್, ರೂಫ್, ಸೈಡ್ ಸ್ಕರ್ಟ್ ಮತ್ತು ಬ್ಲ್ಯಾಕ್ಡ್-ಔಟ್ ಅಲಾಯ್ ವೀಲ್‌ಗಳನ್ನು ಹೊಂದಿದೆ. ಟಾಟಾ ನೆಕ್ಸಾನ್‌ನಂತೆಯೇ 1.2-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಹೊಂದಿದ್ದು, 120 bhp ಗರಿಷ್ಠ ಪವರ್ ಉತ್ಪಾದಿಸಲಿದ್ದು, ಎಲೆಕ್ಟ್ರಿಕ್ ಸನ್‌ರೂಫ್, ಅಪ್ಡೇಟ್ಡ್ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, 10.25-ಇಂಚಿನ ಇನ್ಫೋಟೈನ್‌ಮೆಂಟ್ ಸ್ಕ್ರೀನ್ ಹೊಂದಿದೆ.