ಒಂದು ವಾರದಲ್ಲಿ ಏಳು ನೂತನ ಕಾರುಗಳ ಬಿಡುಗಡೆ

Posted By:

ವಿದೇಶಿ ವಿನಿಮಯ ಕೇಂದ್ರ ಫಾರೆಕ್ಸ್‌ನಲ್ಲಿ ಡಾಲರ್ ಎದುರಿಗೆ ರುಪಾಯಿ ಮೌಲ್ಯ ಭಾರಿ ಇಳಿಕೆ ಕಂಡಿರಬಹುದು. ದೇಶದ ಹಣಕಾಸು ವ್ಯವಸ್ಥೆಯಲ್ಲಿ ಭಾರತ ತುಂಬಾನೇ ಹಿಂದೆ ಬಿದ್ದಿರಬಹುದು. ಆದರೆ ಈ ಎಲ್ಲ ಘಟನಾವಳಿಗಳು ಕಾರು ಮಾರುಕಟ್ಟೆ ಮೇಲೆ ಕಿಂಚಿತ್ತು ಪ್ರಭಾವ ಬೀರಿಲ್ಲ ಎಂದೇ ವಿಶ್ಲೇಷಿಸಬಹುದು.

ಯಾಕೆಂದರೆ ಕಳೆದ ಒಂದು ವಾರದ ಅವಧಿಯಲ್ಲಿ ದೇಶದಲ್ಲಿ ಏಳು ನೂತನ ಕಾರುಗಳು ಬಿಡುಗಡೆಯಾಗಿವೆ ಎಂದು ಹೇಳಿದರೆ ನಿಮ್ಮಿಂದ ನಂಬಲು ಸಾಧ್ಯವೇ? ಹೌದು, ಅಧಿಕೃತ ಮಾಹಿತಿಗಳ ಪ್ರಕಾರ ಕಳೆದ ಒಂದು ವಾರದ ಅವಧಿಯಲ್ಲಿ ಏಳು ನೂತನ ಕಾರುಗಳ ಆಗಮನವಾಗಿವೆ. ಅಂದರೆ ದಿನಕ್ಕೊಂದರಂತೆ ರೀತಿಯಲ್ಲಿ ಕಾರುಗಳ ಎಂಟ್ರಿಯಾಗಿವೆ. ಈ ಎಲ್ಲ ಕಾರುಗಳ ಮಾಹಿತಿಗಳನ್ನು ಸ್ಲೈಡರ್‌ನಲ್ಲಿ ಕೊಡಲಾಗಿದೆ.

ಫೋಕ್ಸ್‌ವ್ಯಾಗನ್ ಕ್ರಾಸ್ ಪೊಲೊ

ಫೋಕ್ಸ್‌ವ್ಯಾಗನ್ ಕ್ರಾಸ್ ಪೊಲೊ

ಯುರೋಪ್ ಖಂಡದ ಅತಿದೊಡ್ಡ ಕಾರು ತಯಾರಕ ಸಂಸ್ಥೆಯಾಗಿರುವ ಫೋಕ್ಸ್‌ವ್ಯಾಗನ್, ಭಾರತೀಯ ಮಾರುಕಟ್ಟೆಗಾಗಿ ಅತಿ ನೂತನ ಕ್ರಾಸ್ ಪೊಲೊ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರನ್ನು ಕಳೆದ ವಾರ ಪರಿಚಯಿಸಿತ್ತು.

ದೆಹಲಿ ಎಕ್ಸ್‌ ಶೋ ರೂಂ ದರ: 7.75 ಲಕ್ಷ ರು.

ಮಾರುತಿ ವ್ಯಾಗನಾರ್ ಸ್ಟಿಂಗ್ರೇ

ಮಾರುತಿ ವ್ಯಾಗನಾರ್ ಸ್ಟಿಂಗ್ರೇ

ವಾಹನ ಪ್ರಿಯರು ಭಾರಿ ಕುತೂಹಲದಿಂದ ಎದುರು ನೋಡುತ್ತಿದ್ದ ಬಹುನಿರೀಕ್ಷಿತ ಮಾರುತಿ ಸುಜುಕಿ ವ್ಯಾಗನಾರ್ ಸ್ಟಿಂಗ್ರೇ ಆವೃತ್ತಿ ಕೂಡಾ ಕಳೆದ ವಾರವೇ ಮಾರುಕಟ್ಟೆಗೆ ಲಗ್ಗೆಯಿಟ್ಟಿತ್ತು.

ದರ ಮಾಹಿತಿ: 4.09 ಲಕ್ಷ ರು.ಗಳಿಂದ 4.67 ಲಕ್ಷ ರು.

ಟಾಟಾ ಸಫಾರಿ ಸ್ಟ್ರೋಮ್ ಎಕ್ಸ್‌ಪ್ಲೋರರ್ ಎಡಿಷನ್

ಟಾಟಾ ಸಫಾರಿ ಸ್ಟ್ರೋಮ್ ಎಕ್ಸ್‌ಪ್ಲೋರರ್ ಎಡಿಷನ್

ದೇಶದ ಅತಿದೊಡ್ಡ ವಾಹನ ತಯಾರಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್, ಅತಿ ವಿಶೇಷವಾದ ಸಫಾರಿ ಸ್ಟ್ರೋಮ್ ಎಕ್ಸ್‌ಪ್ಲೋರರ್ (ಶೋಧಿಸು) ವಿಶೇಷ ಎಡಿಷನ್ ಕಳೆದ ವಾರದಲ್ಲೇ ಲಾಂಚ್ ಆಗಿತ್ತು.

ದರ: 10.86 ಲಕ್ಷ ರು. (ದೆಹಲಿ ಎಕ್ಸ್‌ ಶೋ ರೂಂ)

ನಿಸ್ಸಾನ್ ಟೆರನೊ

ನಿಸ್ಸಾನ್ ಟೆರನೊ

ಮುಂಬೈನಲ್ಲಿ ನಡೆದ ಆದ್ಧೂರಿ ಸಮಾರಂಭದಲ್ಲಿ ಬಹುನಿರೀಕ್ಷಿತ ನಿಸ್ಸಾನ್ ಟೆರನೊ ಕಾಂಪಾಕ್ಟ್ ಎಸ್‌ಯುವಿ ಕಾರು ಭರ್ಜರಿ ಅನಾವರಣಗೊಂಡಿದೆ. ಪ್ರಸ್ತುತ ಕಾರು ಅಕ್ಟೋಬರ್ ತಿಂಗಳಲ್ಲಿ ಮಾರುಕಟ್ಟೆ ಪ್ರವೇಶಿಸಲಿದ್ದು, ಮುಂಗಡ ಬುಕ್ಕಿಂಗ್ ಸೆಪ್ಟೆಂಬರ್ 1ರಿಂದ ಆರಂಭವಾಗಲಿದೆ.

ದರ ಮಾಹಿತಿ: 10 ಲಕ್ಷ ರು. ಪರಿಧಿಯೊಳಗೆ

ಆಡಿ ಕ್ಯೂ3 ಎಸ್

ಆಡಿ ಕ್ಯೂ3 ಎಸ್

ಜರ್ಮನಿಯ ಐಷಾರಾಮಿ ಕಾರು ತಯಾರಕ ಸಂಸ್ಥೆಯಾಗಿರುವ ಆಡಿ, ವಿಶೇಷವಾಗಿಯೂ ಭಾರತ ಮಾರುಕಟ್ಟೆಗಾಗಿ ಅಗ್ಗದ ಐಷಾರಾಮಿ ಕ್ಯೂ3 ಸ್ಪೋರ್ಟ್ ಕಾರನ್ನು ಬಿಡುಗಡೆಗೊಳಿಸಿದೆ.

ಆಡಿ ಕ್ಯೂ3 ಎಸ್ ದೆಹಲಿ ಎಕ್ಸ್ ಶೋ ರೂಂ ದರ 24.99 ಲಕ್ಷ ರು.

ರೋಲ್ಸ್ ರಾಯ್ಸ್ ವ್ರೈತ್

ರೋಲ್ಸ್ ರಾಯ್ಸ್ ವ್ರೈತ್

ಜಗತ್ತಿನ ಅತಿ ದುಬಾರಿ ಕಾರುಗಳಲ್ಲಿ ಒಂದಾಗಿರುವ ರೋಲ್ಸ್ ರಾಯ್ಸ್ ವ್ರೈತ್ ಭಾರತಕ್ಕೆ ಭರ್ಜರಿ ಎಂಟ್ರಿ ಕೊಟ್ಟಿದೆ. ಲಗ್ಷುರಿ ಕಾರುಗಳ ಪಟ್ಟಿಗೆ ಸೇರಿರುವ ರೋಲ್ಸ್ ರಾಯ್ಸ್‌ನ ದುಬಾರಿ ವ್ರೈತ್, ಅತ್ಯಂತ ಶಕ್ತಿಶಾಲಿ ಕಾರಾಗಿದೆ.

ದರ: 4.4 ಕೋಟಿ ರು. (ಎಕ್ಸ್‌ ಶೋ ರೂಂ)

ಲ್ಯಾಂಡ್ ರೋವರ್ ಫ್ರೀಲ್ಯಾಂಡರ್ 2

ಲ್ಯಾಂಡ್ ರೋವರ್ ಫ್ರೀಲ್ಯಾಂಡರ್ 2

ನಿಮ್ಮ ಮಾಹಿತಿಗಾಗಿ ಲ್ಯಾಂಡ್ ರೋವರ್ ಫ್ರೀಲ್ಯಾಂಡರ್ 2 ವಾಣಿಜ್ಯ ಎಡಿಷನ್ ಕಳೆದ ವಾರದಲ್ಲೇ ಲಾಂಚ್ ಆಗಿತ್ತು. ಇದರಲ್ಲಿ 2.2 ಲೀಟರ್ ಟಿಡಿ4 ಮತ್ತು ಎಸ್‌ಡಿ4 ಎಂಜಿನ್ ಆಳವಡಿಸಲಾಗಿದೆ. ಇದು 6 ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಹೊಂದಿದೆ.

ದರ ಮಾಹಿತಿ: 37.63 ಲಕ್ಷ ರು. (ದೆಹಲಿ ಎಕ್ಸ್‌ ಶೋ ರೂಂ)

English summary
Despite the economic recession prevailing in the country, carmakers seems to give no cease to their investments, Last week has seen the entry of as many as seven vehicles in the Indian market.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark