ಬೆಂಗಳೂರು ನಗರದಲ್ಲಿ ಆಟೋ ರಿಕ್ಷಾ ಪ್ರಯಾಣ ದರ ಹೆಚ್ಚಳ

ಹೋಟೆಲ್‌ಗಳ ಎಲ್ಲಾ ತಿಂಡಿ-ತಿನಿಸುಗಳ ಬೆಲೆ ಹೆಚ್ಚಳವಾದ ಬೆನ್ನಲ್ಲೇ ಆಟೋ ದರ ಹೆಚ್ಚಿಸಿ ಬೆಂಗಳೂರಿನ ಜನತೆಗೆ ಶಾಕ್ ಮೇಲೆ ಶಾಕ್ ನೀಡುತ್ತಿದೆ. ಬೆಂಗಳೂರು ನಗರದಲ್ಲಿ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಆಟೋರಿಕ್ಷಾ ಪ್ರಯಾಣ ದರ ಏರಿಕೆ ಮಾಡಲಾಗಿದೆ.

ಬೆಂಗಳೂರು ನಗರದಲ್ಲಿ ಆಟೋ ರಿಕ್ಷಾ ಪ್ರಯಾಣ ದರ ಹೆಚ್ಚಳ

ಡಿಸೆಂಬರ್ 1ರಿಂದ ಹೊಸ ದರ ಅನ್ವಯವಾಗಲಿದೆ. ಕೊರೊನಾ ಹಿನ್ನೆಲೆ ಬಹುತೇಕ ಆಟೋ ಚಾಲಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು. ಹಾಗಾಗಿ ಕಳೆದ ತಿಂಗಳುಗಳಿಂದ ಪ್ರಯಾಣ ದರ ಏರಿಕೆ ಮಾಡಬೇಕು ಎಂದು ಆಟೋ ಚಾಲಕರು ಹೋರಾಟ ನಡೆಸುತ್ತಿದ್ದರು. ಬೆಂಗಳೂರು ನಗರ ಜಿಲ್ಲೆ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಈ ಕುರಿತು ಅಧಿಕೃತ ಆದೇಶ ಹೊರಡಿಸಿದೆ. ಆಟೋ ದರ ಪರಿಷ್ಕರಣೆ ಕುರಿತು ಕೂಲಂಕುಷವಾಗಿ ಪರಿಶೀಲಿಸಿ ದರಗಳನ್ನು ಪರಿಷ್ಕರಣೆ ಮಾಡಲಾಗಿದೆ. ಹಲವು ದಿನಗಳಿಂದ ಆಟೋ ದರ ಏರಿಕೆ ಕುರಿತು ಚರ್ಚೆ ನಡೆಯುತ್ತಿತ್ತು. ಇದೀಗ ಅಂತಿಮವಾಗಿ ದರ ಏರಿಕೆ ಮಾಡಲಾಗಿದೆ.

ಬೆಂಗಳೂರು ನಗರದಲ್ಲಿ ಆಟೋ ರಿಕ್ಷಾ ಪ್ರಯಾಣ ದರ ಹೆಚ್ಚಳ

ಪರಿಷ್ಕೃತ ದರ

ಆಟೋ ರಿಕ್ಷಾದಲ್ಲಿ ಇದುವರೆಗೆ ಮೊದಲ 2 ಕಿಲೋ ಮೀಟರ್‌ ವರೆಗೆ ಪ್ರಯಾಣ ಮಾಡಲು ರೂ.25 ರೂಪಾಯಿ ದರ ನಿಗದಿಯಾಗಿತ್ತು. ಇದೀಗ ಐದು ರೂಪಾಯಿ ಹೆಚ್ಚಳ ಮಾಡಲಾಗಿದೆ. ಕನಿಷ್ಠ ದರ ಮೊದಲ 2 ಕಿಲೋ ಮೀಟರ್‌ಗೆ ರೂ.30 ನೀಡಬೇಕಿದೆ. ನಂತರದ ಪ್ರತಿ ಕಿಲೋ ಮೀಟರ್‌ಗೆ ರೂ.15 ರೂಪಾಯಿ ದರ ನಿಗದಿ ಪಡಿಸಲಾಗಿದೆ.

ಬೆಂಗಳೂರು ನಗರದಲ್ಲಿ ಆಟೋ ರಿಕ್ಷಾ ಪ್ರಯಾಣ ದರ ಹೆಚ್ಚಳ

ವೈಟಿಂಗ್ ಚಾರ್ಜ್

ಆಟೋಗಳ ಕನಿಷ್ಠ ಪ್ರಯಾಣದರ ಮಾತ್ರವಲ್ಲ ವೈಟಿಂಗ್ ಚಾರ್ಜ್(ಕಾಯುವಿಕೆ ದರ) ಸಹ ಹೆಚ್ಚಳ ಮಾಡಲಾಗಿದೆ. ವೈಟಿಂಗ್ ಚಾರ್ಜ್‌ ಮೊದಲ ಐದು ನಿಮಿಷ ಉಚಿತವಾಗಿದ್ದು ಐದು ನಿಮಿಷನದ ನಂತರ ಪ್ರತಿ ಹದಿನೈದು ನಿಮಿಷಕ್ಕೆ ರೂ.5 ದರ ನಿಗದಿ ಪಡಿಸಲಾಗಿದೆ.

ಬೆಂಗಳೂರು ನಗರದಲ್ಲಿ ಆಟೋ ರಿಕ್ಷಾ ಪ್ರಯಾಣ ದರ ಹೆಚ್ಚಳ

ಲಗೇಜು ದರ

ಪ್ರಯಾಣಿಕರ ಲಗೇಜು ಸಾಗಣಗೆ ಮೊದಲ 20 ಕೆ. ಜಿ.ಉಚಿತವಾಗಿತ್ತು. ಪ್ರಯಾಣಿಕರ ಲಗೇಜು 20 ಕೆಜಿ ಇದ್ದರೆ 5 ರೂಪಾಯಿ ನಿಗದಿ ಮಾಡಲಾಗಿದೆ. ಗರಿಷ್ಠ ಪ್ರಯಾಣಿಕರ ಲಗೇಜುಗಳು 50 ಕೆ.ಜಿಯಾಗಿದೆ.

ಬೆಂಗಳೂರು ನಗರದಲ್ಲಿ ಆಟೋ ರಿಕ್ಷಾ ಪ್ರಯಾಣ ದರ ಹೆಚ್ಚಳ

ರಾತ್ರಿ ವೇಳೆಯ ದರ

ಇನ್ನು ರಾತ್ರಿ 10 ರಿಂದ ಬೆಳಗ್ಗೆ 5 ಗಂಟೆಯ ವರೆಗೆ ಸಾಮಾನ್ಯ ದರಕ್ಕಿಂದ ಅರ್ಧಪಟ್ಟು ಹೆಚ್ಚಳ ಮಾಡಲು ಅವಕಾಶ ಕೊಡಲಾಗಿದೆ. ಇದು ಸಾಮಾನ್ಯ ದರದ ಅರ್ಧಪಟ್ಟು ಹೆಚ್ಚು ದರವನ್ನು ಪಾವತಿ ಮಾಡಬೇಕು.

ಬೆಂಗಳೂರು ನಗರದಲ್ಲಿ ಆಟೋ ರಿಕ್ಷಾ ಪ್ರಯಾಣ ದರ ಹೆಚ್ಚಳ

ಅಗತ್ಯ ವಸ್ತುಗಳ, ಆಟೋ ಗ್ಯಾಸ್‌ ಮತ್ತು ಬಿಡಿ ಭಾಗಗಳ ದರ ಹೆಚ್ಚಳವಾಗಿದೆ. ನಿರ್ವಹಣೆ ವೆಚ್ಚವೂ ಅಧಿಕವಾಗಿದೆ. ಆದ್ದರಿಂದ ಆಟೋಗಳ ಪ್ರಯಾಣ ದರ ಏರಿಕೆ ಮಾಡಬೇಕು ಎಂದು ಆಟೋ ಚಾಲಕರು ಹಲವು ದಿನಗಳಿಮ್ದ ಹೋರಾಟ ನಡೆಸುತ್ತಿದ್ದರು. ಆಟೋ ದರಗಳನ್ನು ಪರಿಷ್ಕರಣೆ ಮಾಡಬೇಕು ಎಂದು ಬೇಡಿಕೆ ಇಡಲಾಗಿತ್ತು. ಆಟೋ ಚಾಲಕರ ಸಂಘ ಈ ಕುರಿತು ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಈ ಹಿನ್ನಲೆಯಲ್ಲಿ ದರ ಪರಿಷ್ಕರಣೆ ಮಾಡಲಾಗಿದೆ. ಈ ಹೊಸ ದರ ಡಿಸೆಂಬರ್ 1 ರಿಂದ ಜಾರಿಗೆ ಬರಲಿದೆ.

ಬೆಂಗಳೂರು ನಗರದಲ್ಲಿ ಆಟೋ ರಿಕ್ಷಾ ಪ್ರಯಾಣ ದರ ಹೆಚ್ಚಳ

ಪರಿಷ್ಕೃತ ದರಗಳು ಮೀಟರ್‌ನಲ್ಲಿ ಪ್ರದರ್ಶಿತವಾಗುವಂತೆ ಮೀಟರ್‌ಗಳನ್ನು ದಿನಾಂಕ 28/2/2022 ರೊಳಗೆ ಪುನಃ ಸತ್ಯಾಪನೆ ಮಾಡಿ ಮುದ್ರೆ ಹಾಕಿಸಿಕೊಳ್ಳಬೇಕು ಎಂದು ಆಟೋ ಚಾಲಕರಿಗೆ ಸೂಚನೆ ನೀಡಲಾಗಿದೆ. ಸಾರಿಗೆ ಪ್ರಾಧಿಕಾರದಿಂದ ಅನುಮೋದಿಸ್ಪಟ್ಟ ನಿಗದಿತ ಪರಿಸ್ಕೃತ ದರ ಪಟ್ಟಿಯನ್ನು ಪ್ರತಿಯೊಂದು ಆಟೋದಲ್ಲಿಯೂ ಪ್ರದರ್ಶಿಸಬೇಕು ಸೂಚನೆ ನೀಡಲಾಗಿದೆ.

ಬೆಂಗಳೂರು ನಗರದಲ್ಲಿ ಆಟೋ ರಿಕ್ಷಾ ಪ್ರಯಾಣ ದರ ಹೆಚ್ಚಳ

ಇನ್ನು ಆಟೋ ದರ ಹೆಚ್ಚಳದ ಬಗ್ಗೆ ಮಾತನಾಡಿ, ಆದರ್ಶ ಆಟೋ ಯೂನಿಯನ್ ಅಧ್ಯಕ್ಷ ಮಂಜುನಾಥ್, "ಆಟೋ ಮೀಟರ್‌ಗಳ ಬದಲಾವಣೆಗೆ ಕಾಲಾವಕಾಶ ನೀಡಿದ್ದಾರೆ. ಸರ್ಕಾರದ ನಿರ್ಧಾರವನ್ನು ಸ್ವಾಗತಿಸುತ್ತೇವೆ. ಪ್ರಾದೇಶಿಕ ಸಾರಿಗೆ ಪ್ರಾಧಿಕಾರಕ್ಕೂ ಅಭಿನಂದನೆ ಸಲ್ಲಿಸುತ್ತೇನೆ" ಎಂದು ಹೇಳಿದ್ದಾರೆ.

ಬೆಂಗಳೂರು ನಗರದಲ್ಲಿ ಆಟೋ ರಿಕ್ಷಾ ಪ್ರಯಾಣ ದರ ಹೆಚ್ಚಳ

ಇಂದು ಹೋಟೆಲ್ ಫುಡ್ ಬೆಲೆ ಏರಿಕೆ ಎಂಬ ಬೆನ್ನೇಲೆ ಈಗ ಆಟೋ ದರದಲ್ಲಿ ಏರಿಕೆಯಾಗಿದೆ. ಶೇ.5 ರಿಂದ ಶೇ.10ವರೆಗೆ ಬೆಲೆ ಏರಿಕೆ ಮಾಡಲು ಹೋಟೆಲ್ ಉದ್ಯಮಿಗಳು ನಿರ್ಧರಿಸಿದ್ದಾರೆ. ಈ ಎಲ್ಲಾ ಬೆಲೆ ಏರಿಕೆ ಹೊಡೆತಗಳು ಬೀಳುತ್ತಿವೆ. ಆದರೆ ನಮ್ಮ ಸಂಬಳ ಮಾತ್ರ ಏರಿಕೆಯಾಗುತ್ತಿಲ್ಲ, ಮಧ್ಯಮ ವರ್ಗ ಈ ಬೆಲೆ ಏರಿಕೆಯಿಂದ ಸಂಕಷ್ಟದಲ್ಲಿ ಸಿಲುಕಿದೆ ಎಂದು ಸಾರ್ವಜನಿಕರು ಆಕ್ರೋಶ ಹೊರ ಹಾಕುತಿದ್ದಾರೆ. ಈಗಾಗಲೇ ಜನಸಾಮಾನ್ಯರು ಬೆಲೆ ಏರಿಕೆಯಿಂದ ತತ್ತರಿಸಿಹೋಗಿದ್ದಾರೆ. ಈ ಬೆಲೆ ಏರಿಕೆಗಳು ಜನರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಬೆಂಗಳೂರು ನಗರದಲ್ಲಿ ಆಟೋ ರಿಕ್ಷಾ ಪ್ರಯಾಣ ದರ ಹೆಚ್ಚಳ

ಕೇಂದ್ರ ಸರಕಾರ ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ಅಬಕಾರಿ ಸುಂಕವನ್ನು ಇಳಿಕೆ ಮಾಡಿದ ಬೆನ್ನಿಗೆ ರಾಜ್ಯ ಸರಕಾರವೂ ಇಂಧನದ ಬೆಲೆ ಇಳಿಕೆ ಮಾಡಿ ವಾಹನ ಸವಾರರಿಗಂತೂ ದೀಪಾವಳಿ ಸಮಯದಲ್ಲಿ ಸ್ವಲ್ಪ ಮಟ್ಟಿಗೆ ಖುಷಿ ಸಿಕ್ಕಂತಾಗಿತ್ತು. ಕೇಂದ್ರ ಸರಕಾರ ಪೆಟ್ರೋಲ್‌ ಮೇಲಿನ ಅಬಕಾರಿ ಸುಂಕವನ್ನು ರೂ.5 ಹಾಗೂ ಡೀಸೆಲ್‌ ಮೇಲಿನ ಅಬಕಾರಿ ಸುಂಕವನ್ನು ರೂ.10 ಇಳಿಕೆ ಮಾಡಿದ್ರೆ, ರಾಜ್ಯ ಸರಕಾರವೂ ಡೀಸೆಲ್‌ ಮತ್ತು ಪೆಟ್ರೋಲ್ ದರವನ್ನು ತಲಾ ರೂ.7 ಕಡಿತಗೊಳಿಸಿತ್ತು.

ಬೆಂಗಳೂರು ನಗರದಲ್ಲಿ ಆಟೋ ರಿಕ್ಷಾ ಪ್ರಯಾಣ ದರ ಹೆಚ್ಚಳ

ಆದರೆ ಇದಕ್ಕೂ ಮೊದಲು ಕಳೆದ ಕೆಲವು ತಿಂಗಳುಗಳಿಂದ ನಿತ್ಯ ನಿರಂತರವಾಗಿ ಪೆಟ್ರೋಲ್‌ ಡೀಸೆಲ್‌ ಬೆಲೆ ಏರಿಕೆಯಾಗುತ್ತಲೇ ಬಂದಿತ್ತು. ಪ್ರತಿದಿನ ಬೆಲೆ ಏರಿಕೆಯಿಂದ ರೋಸಿ ಹೋಗಿದ್ದ ವಾಹನ ಸವಾರರು ಸೋಷಿಯಲ್ ಮೀಡಿಯಾಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಆಕ್ರೋಶ ಹೊರಹಾಕಿದ್ದರು. ನಂತರ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ದೀಪಾವಳಿ ಹಬ್ಬದ ಸಮಯದಲ್ಲಿ ತೈಲ ಬೆಲೆ ಇಳಿಕೆಗೆ ನಿರ್ಧರಿಸಿತ್ತು. ಏರಿಕೆಯಾದ ಬೆಲೆಯನ್ನೇ ಸ್ವಲ್ಪ ಮಟ್ಟಿಗೆ ಇಳಿಕೆ ಮಾಡಿದ್ದಾರೆ.

Most Read Articles

Kannada
English summary
Auto rickshaw fare price increased in bengaluru details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X