ತನ್ನ ತಾಯಿಯನ್ನು ಬಿಟ್ಟು ಬರಲು ಹೋಗಿ ಮಸಣ ಸೇರಿದ !! ಮೃತ್ಯುಕೂಪವಾದ ಯಮುನಾ ಎಕ್ಸ್‌ಪ್ರೆಸ್‌ವೇ

Written By:

ನೊಯ್ಡಾ ಮತ್ತು ಆಗ್ರಾ ನಡುವಿನ ಸಂಪರ್ಕ ಸೇತುವೆಯಾದ ಯಮುನಾ ಎಕ್ಸ್‌ಪ್ರೆಸ್ ವೇ ಹೆದ್ದಾರಿಯು ಪ್ರಖ್ಯಾತಿಗಿಂದ ಕುಖ್ಯಾತಿ ಗಳಿಸಿದ್ದೆ ಹೆಚ್ಚು. ಯಾಕಪ್ಪ ಹೀಗೆ ಹೇಳ್ತ ಇದ್ದಾರೆ ಅನ್ಕೊಂಡ್ರಾ ? ಮುಂದೆ ಓದಿ ನಿಮಗೇ ಎಲ್ಲಾ ತಿಳಿಯುತ್ತೆ !!

ತನ್ನ ತಾಯಿಯನ್ನು ಬಿಟ್ಟು ಬರಲು ಹೋಗಿ ಮಸಣ ಸೇರಿದ !! ಮೃತ್ಯುಕೂಪವಾದ ಯಮುನಾ ಎಕ್ಸ್‌ಪ್ರೆಸ್‌ವೇ

ಹೌದು, ದೇಶದುದ್ದಕ್ಕೂ ನೂರಾರು ಕಿಲೋಮೀಟರ್ ಉದ್ದದ ರಸ್ತೆಗಳನ್ನು ನೀವು ಕಾಣುತ್ತೀರಿ. ಅದೇ ರೀತಿ ರಸ್ತೆಗಳು ಎಂದ ಮೇಲೆ ವಾಹನಗಳ ಸಂಚಾರ ಸರ್ವೇಸಾಮಾನ್ಯ ಎನ್ನಬಹುದು, ವಾಹನಗಳು ಸಂಚರಿಸಿದ ಮೇಲೆ ಸಾಮಾನ್ಯವಾಗಿ ಅಲ್ಲೋ ಇಲ್ಲೋ ಒಂದೆರಡು ಅಪಘಾತಗಳನ್ನು ಸಂಭವಿಸುತ್ತಿರುತ್ತವೆ.

ತನ್ನ ತಾಯಿಯನ್ನು ಬಿಟ್ಟು ಬರಲು ಹೋಗಿ ಮಸಣ ಸೇರಿದ !! ಮೃತ್ಯುಕೂಪವಾದ ಯಮುನಾ ಎಕ್ಸ್‌ಪ್ರೆಸ್‌ವೇ

ಅಲ್ಲೋ ಇಲ್ಲೋ ಒಂದೆರಡು ಅಪಘಾತಗಳು ಸಂಭವಿಸುತ್ತಿದ್ದರೆ ಯಾವುದೇ ರೀತಿಯ ತೊಂದರೆ ಇಲ್ಲ ಎನ್ನಬಹುದು. ಆದ್ರೆ ಭಾರತದ ಹೆದ್ದಾರಿಯೊಂದರಲ್ಲಿ ಅಪಘಾತಗಳು ಸಂಭವಿಸುವುದೇ ಒಂದು ದೊಡ್ಡ ಕಾಯಕವಾಗಿದೆ ಎಂದರೆ ನೀವು ನಂಬಲೇ ಬೇಕು.

ತನ್ನ ತಾಯಿಯನ್ನು ಬಿಟ್ಟು ಬರಲು ಹೋಗಿ ಮಸಣ ಸೇರಿದ !! ಮೃತ್ಯುಕೂಪವಾದ ಯಮುನಾ ಎಕ್ಸ್‌ಪ್ರೆಸ್‌ವೇ

ನೊಯ್ಡಾ ಮತ್ತು ಆಗ್ರಾ ನಗರಗಳನ್ನು ಒಂದುಗೂಡಿಸುವ ಯಮುನಾ ಎಕ್ಸ್‌ಪ್ರೆಸ್ ವೇ ರಸ್ತೆಯು ಹೆಚ್ಚಿನ ಸಂಖ್ಯೆಯ ಅಪಘಾತಗಳನ್ನು ನೋಡುತ್ತದೆ ಎಂಬ ಮಾಹಿತಿ ಹೊರ ಬಿದಿದ್ದು, ಇಂದು ಸಂಭವಿಸಿದ ಟೊಯೊಟಾ ಇನ್ನೋವಾ ಕಾರಿನ ಅಪಘಾತ ಈ ಮಾತನ್ನು ಪುಷ್ಟಿಕರಿಸುತ್ತದೆ.

ತನ್ನ ತಾಯಿಯನ್ನು ಬಿಟ್ಟು ಬರಲು ಹೋಗಿ ಮಸಣ ಸೇರಿದ !! ಮೃತ್ಯುಕೂಪವಾದ ಯಮುನಾ ಎಕ್ಸ್‌ಪ್ರೆಸ್‌ವೇ

ಘಟನೆಯ ವಿವರ :

ಖಂಡೌಲಿ ಟೋಲ್ ಪ್ಲಾಜಾ ಬಳಿ ಬೆಳಗ್ಗೆ 10:30ರ ಆಸುಪಾಸಿನಲ್ಲಿ ಟ್ರಕ್ ಮತ್ತು ಟೊಯೊಟಾ ಇನ್ನೋವಾ ನಡುವೆ ಅಪಘಾತ ಸಂಭವಿಸಿದೆ. ಟೊಯೊಟಾ ಇನ್ನೋವಾ ಕಾರಿನ ಅರ್ಧಕ್ಕೂ ಹೆಚ್ಚಿನ ಭಾಗವು ಟ್ರಕ್ ಕೆಳಗೆ ತೂರಿದ್ದು, ಅಪಘಾತದ ಮಟ್ಟವು ತೀವ್ರವಾಗಿದೆ ಎನ್ನವುದನ್ನು ನೀವು ಈ ಚಿತ್ರಗಳಿಂದ ತಿಳಿಯಬಹುದಾಗಿದೆ.

ತನ್ನ ತಾಯಿಯನ್ನು ಬಿಟ್ಟು ಬರಲು ಹೋಗಿ ಮಸಣ ಸೇರಿದ !! ಮೃತ್ಯುಕೂಪವಾದ ಯಮುನಾ ಎಕ್ಸ್‌ಪ್ರೆಸ್‌ವೇ

ಪೊಲೀಸರ ಪ್ರಕಾರ, ಈ ಘಟನೆಯಲ್ಲಿ ಉಟ್ಸಾವ್ ಡಾಂಗ್ ಮತ್ತು ಮೊಹಮ್ಮದ್ ಶರೀಫ್ ಎಂಬ ಹೆಸರಿನ ಇಬ್ಬರು ಸ್ನೇಹಿತರು ಮೃತರಾಗಿದ್ದು, ದೆಹಲಿ ವಿಮಾನ ನಿಲ್ದಾಣದಿಂದ ಮನೆಗೆ ತೆರಳುತ್ತಿರುವ ವೇಳೆಯಲ್ಲಿ ಈ ಘಟನೆ ಸಂಭವಿಸಿದೆ ಎಂಬ ಮಾಹಿತಿ ಹೊರಬಂದಿದೆ.

ತನ್ನ ತಾಯಿಯನ್ನು ಬಿಟ್ಟು ಬರಲು ಹೋಗಿ ಮಸಣ ಸೇರಿದ !! ಮೃತ್ಯುಕೂಪವಾದ ಯಮುನಾ ಎಕ್ಸ್‌ಪ್ರೆಸ್‌ವೇ

ಉಟ್ಸಾವ್ ಡಾಂಗ್ ಅವರ ತಾಯಿಯನ್ನು ದೆಹಲಿ ವಿಮಾನ ನಿಲ್ದಾಣಕ್ಕೆ ಬಿಟ್ಟು ಆಗ್ರಾಗೆ ಹಿಂದಿರುಗುತ್ತಿರುವ ಸಂದರ್ಭದಲ್ಲಿ ರಸ್ತೆಯ ಬದಿಯಲ್ಲಿ ನಿಂತಿದ್ದ ಟ್ರಕ್‌ಗೆ ಅಪ್ಪಳಿಸಿದೆ. ತೀವ್ರವಾಗಿ ಗಾಯಗೊಂಡಿದ್ದ ಇಬ್ಬರನ್ನು ಆಸ್ಪತ್ರೆಗೆ ಕರೆದೊಯ್ಯುವ ಸಂದರ್ಭದಲ್ಲಿ ಸಾವನಪ್ಪಿದ್ದಾರೆ ಎಂದು ಘೋಷಿಸಲಾಗಿದೆ.

ತನ್ನ ತಾಯಿಯನ್ನು ಬಿಟ್ಟು ಬರಲು ಹೋಗಿ ಮಸಣ ಸೇರಿದ !! ಮೃತ್ಯುಕೂಪವಾದ ಯಮುನಾ ಎಕ್ಸ್‌ಪ್ರೆಸ್‌ವೇ

ಘಟನೆಯ ಹೇಗೆ ಸಂಭವಿಸಿತು ಎಂಬುದರ ಬಗ್ಗೆ ಯಾವುದೇ ರೀತಿಯ ಮಾಹಿತಿಗಳಿಲ್ಲ ಎನ್ನಬಹುದು. ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಹೆದ್ದಾರಿಯು ಖಾಲಿಯಾಗಿತ್ತು ಮತ್ತು ಟೈಯರ್ ಸ್ಪೋಟಗೊಡಿರುವುದರ ಬಗ್ಗೆ ಯಾವುದೇ ರೀತಿಯ ಕುರುಹು ಇಲ್ಲ ಎನ್ನಲಾಗಿದೆ.

Trending On DriveSpark Kannada:

ಬೆಂಗಳೂರಿನ ಪ್ರತಿಷ್ಠಿತ ಮಾರುತಿ ಸರ್ವಿಸ್ ಸ್ಟೇಷನ್ ಕರ್ಮಕಾಂಡ ಬಯಲು ಮಾಡಿದ ಗ್ರಾಹಕ !! ವಿಡಿಯೋ

ಡಿಸೆಂಬರ್ 1ರ ನಂತರ ಟೋಲ್‌ಗಳಲ್ಲಿ ಕಾರುಗಳು ಕಾಯುವ ಹಾಗಿಲ್ಲ !!

ಯಾಕ್ರಿ ಲಂಚ ಕೊಡ್ತಿರಾ? ಇನ್ಮುಂದೆ ಸುಲಭದಲ್ಲೇ ಸಿಗಲಿದೆ ಡ್ರೈವಿಂಗ್ ಲೈಸೆನ್ಸ್..!!

ಮುಕೇಶ್ ಅಂಬಾನಿ ಡ್ರೈವರ್ ಸಂಬಳ ಕೇಳಿದ್ರೆ ಬೆಚ್ಚಿ ಬೀಳ್ತೀರಾ !!

ತನ್ನ ತಾಯಿಯನ್ನು ಬಿಟ್ಟು ಬರಲು ಹೋಗಿ ಮಸಣ ಸೇರಿದ !! ಮೃತ್ಯುಕೂಪವಾದ ಯಮುನಾ ಎಕ್ಸ್‌ಪ್ರೆಸ್‌ವೇ

ತಾಯಿಯನ್ನು ಪಿಕ್ ಅಪ್ ಮತ್ತೆ ಡ್ರಾಪ್ ಮಾಡಲು ರಾತ್ರಿಯಿಡಿ ಚಾಲನೆ ಮಾಡಿ ಮುಂಜಾನೆಯ ವೇಳೆ ನಿದ್ದೆಗಣ್ಣಿನಲ್ಲಿ ಕಾರು ಚಾಲನೆ ಮಾಡಿರುವುದು ಮುಖ್ಯ ಕಾರಣವೇ ಎಂಬ ಅನುಮಾನಗಳು ಕಾಡುತ್ತಿವೆ. ಆದರೆ, ಇಲ್ಲಿಯವರೆಗೆ ಯಾವುದೇ ರೀತಿಯ ಮಾಹಿತಿಯನ್ನು ಪೊಲೀಸರು ನೀಡಿಲ್ಲ.

ತನ್ನ ತಾಯಿಯನ್ನು ಬಿಟ್ಟು ಬರಲು ಹೋಗಿ ಮಸಣ ಸೇರಿದ !! ಮೃತ್ಯುಕೂಪವಾದ ಯಮುನಾ ಎಕ್ಸ್‌ಪ್ರೆಸ್‌ವೇ

ಕಳೆದ ಐದು ವರ್ಷಗಳ ಹಿಂದೆ ಈ ರಸ್ತೆ ಉದ್ಘಾಟನೆಗೊಂಡಿದ್ದು ಇಲ್ಲಿಯವರೆಗೆ ಸರಿ ಸುಮಾರು 4,505 ಅಪಘಾತಗಳು ಸಂಭವಿಸಿದ್ದು, ಐದು ವರ್ಷಗಳಲ್ಲಿ 626 ಸಾವುಗಳನ್ನು ಕಂಡಿದೆ ಹಾಗು 2016ರಲ್ಲಿ ಈ ಹೆದ್ದಾರಿ ಅತಿ ಹೆಚ್ಚು ಅಪಘಾತ ಕಂಡಿದೆ.

ತನ್ನ ತಾಯಿಯನ್ನು ಬಿಟ್ಟು ಬರಲು ಹೋಗಿ ಮಸಣ ಸೇರಿದ !! ಮೃತ್ಯುಕೂಪವಾದ ಯಮುನಾ ಎಕ್ಸ್‌ಪ್ರೆಸ್‌ವೇ

ಕಳೆದ ಆರು ತಿಂಗಳ ಅವಧಿಯಲ್ಲಿ ಯಮುನಾ ಎಕ್ಸ್‌ಪ್ರೆಸ್ ವೇ ರಸ್ತೆಯಲ್ಲಿ ಅಪಘಾತದ ಕಾರಣದಿಂದಾಗಿ 78 ಜನರು ಮೃತಪಟ್ಟಿದ್ದಾರೆ. ಜನವರಿ 1 ರಿಂದ ಜೂನ್ 30, 2017 ರವರೆಗೆ ಒಟ್ಟು 196 ಕಿ.ಮೀ ಅಂತರದಲ್ಲಿ ಒಟ್ಟು 432 ಅಪಘಾತಗಳನ್ನು ಈ ರಸ್ತೆ ಕಂಡಿದೆ.

Trending On DriveSpark Kannada:

ರಸ್ತೆ ಬದಿ ಇದ್ದ ಹೆಲ್ಮೆಟ್‌ಗಳನ್ನು ಟ್ರಾಫಿಕ್ ಪೊಲೀಸರು ಒಡೆದು ಹಾಕಿದ್ದೇಕೆ?

ಡಿಸೆಂಬರ್ 1ರ ನಂತರ ಟೋಲ್‌ಗಳಲ್ಲಿ ಕಾರುಗಳು ಕಾಯುವ ಹಾಗಿಲ್ಲ !!

Read more on accident ಅಪಘಾತ
English summary
Yamuna Expressway is a hotspot for accidents. The high-speed expressway that connects Noida to Agra sees a high number of accidents. Here is a Toyota Innova that rammed into a truck, leaving its driver and the co-passenger dead.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark