ಇದು ವಿಚಿತ್ರವಾದ್ರು ಸತ್ಯ- ಚಾಲಕನಿಲ್ಲದೇ 13 ಕಿ.ಮೀ. ಚಲಿಸಿದ ರೈಲು

Written By:

ಈ ಘಟನೆ ಸ್ವಲ್ಪ ವಿಚಿತ್ರವಾದ್ರು ನಿರ್ಲಕ್ಷ್ಯ ಮಾಡುವಂತ ವಿಚಾರ ಅಲ್ಲವೇ ಅಲ್ಲ. ಯಾಕೇಂದ್ರೆ ಚಾಲಕನಿಲ್ಲದೇ ಎಲೆಕ್ಟ್ರಿಕ್ ರೈಲು ಇಂಜಿನ್ ಒಂದು ಬರೋಬ್ಬರಿ 13 ಕಿಲೋಮೀಟರ್ ದೂರ ಚಲಿಸಿ ಎಲ್ಲರ ಅಚ್ಚರಿಗೆ ಕಾರಣವಾಗಿದೆ.

ಇದು ವಿಚಿತ್ರವಾದ್ರು ಸತ್ಯ- ಚಾಲಕನಿಲ್ಲದೇ 13 ಕಿ.ಮೀ. ಚಲಿಸಿದ ರೈಲು

ಅಂದಹಾಗೆ ಈ ಘಟನೆಯು ನಮ್ಮದೇ ರಾಜ್ಯದ ಕಲಬುರಗಿ ಜಿಲ್ಲೆಯಲ್ಲಿ ನಡೆದಿದ್ದು, ಚಿತ್ತಾಪುರ ತಾಲೂಕಿನ ವಾಡಿ ನಿಲ್ದಾಣದಲ್ಲಿ ನಿಲ್ಲಿಸಿಲಾಗಿದ್ದ ಚೆನ್ನೈ ಎಕ್ಸ್‌ಪ್ರೆಸ್ ರೈಲು ಬರೋಬ್ಬರಿ 13 ಕಿ.ಮಿ ಚಾಲಕನಿಲ್ಲದೇ ಮುಂದೆ ಸಾಗಿದೆ.

ಇದು ವಿಚಿತ್ರವಾದ್ರು ಸತ್ಯ- ಚಾಲಕನಿಲ್ಲದೇ 13 ಕಿ.ಮೀ. ಚಲಿಸಿದ ರೈಲು

ವಾಡಿಯಿಂದ 13 ಕಿಲೋ ಮೀಟರ್ ದೂರದಲ್ಲಿರುವ ನಾಲತವಾಡ ತನಕ ಸಿಬ್ಬಂದಿ ಇಲ್ಲದೇ ರೈಲು ಸಾಗಿದ್ದು, ಈ ವೇಳೆ ಹರಸಾಹಸ ಪಟ್ಟ ರೈಲ್ವೆ ಸಿಬ್ಬಂದಿಯು ಚಾಲನೆಯಲ್ಲಿದ್ದ ರೈಲುನ್ನು ತಡೆಹಿಡಿದ್ದಾರೆ.

Recommended Video - Watch Now!
[Kannada] Mahindra KUV 100 NXT Launched In India - DriveSpark
ಇದು ವಿಚಿತ್ರವಾದ್ರು ಸತ್ಯ- ಚಾಲಕನಿಲ್ಲದೇ 13 ಕಿ.ಮೀ. ಚಲಿಸಿದ ರೈಲು

ಇದಕ್ಕೂ ಮುನ್ನ ರೈಲ್ವೆ ಸಿಬ್ಬಂದಿಯು ರಸ್ತೆ ಮೂಲಕ ವಾಹನದಲ್ಲಿ ಬೆನ್ನತ್ತಿ ನಾಲವಾರ ಹತ್ತಿರ ಕಲ್ಲು, ಕಬ್ಬಿಣದಿಂದ ತಡೆಗೋಡೆ ನಿರ್ಮಿಸಿ ಹರಸಾಹಸಪಟ್ಟು ಕಡೆಗೂ ರೈಲು ಇಂಜಿನನ್ನು ನಿಲ್ಲಿಸಿದ್ದಾರೆ.

ಇದು ವಿಚಿತ್ರವಾದ್ರು ಸತ್ಯ- ಚಾಲಕನಿಲ್ಲದೇ 13 ಕಿ.ಮೀ. ಚಲಿಸಿದ ರೈಲು

ಘಟನೆಗೆ ಕಾರಣ?

ಅಂದಹಾಗೆ ಈ ಘಟನೆ ಹಿಂದೆ ಯಾವುದೋ ಪವಾಡ ಇದ್ದಿರಬಹುದು ಎಂದು ಭಾವಿಸಿದ್ರೆ ತಪ್ಪು. ಏಕೆಂದರೇ ಇದು ಆಗಿದ್ದು ಅಧಿಕಾರಿಗಳ ನಿರ್ಲಕ್ಷ್ಯದಿಂದ. ಆದ್ರೆ ಅದೃಷ್ಟವಶಾತ್ ಯಾವುದೇ ದುರಂತ ಸಂಭವಿಸದಿರುವುದು ಸಮಾಧಾನಕರ ಸಂಗತಿ ಎನ್ನಬಹುದು.

ತಪ್ಪದೇ ಓದಿ-ಸ್ಪ್ಲೆಂಡರ್ ಪ್ಲಸ್ ಬೈಕಿಗೆ 10,800 ರೂ ದಂಡ ಹಾಕಿದ್ರು !! ನಗರದಲ್ಲಿ ನಡೀತಿದೆ 'ಆಪರೇಷನ್‌ ಚೀತಾ'

ಇದು ವಿಚಿತ್ರವಾದ್ರು ಸತ್ಯ- ಚಾಲಕನಿಲ್ಲದೇ 13 ಕಿ.ಮೀ. ಚಲಿಸಿದ ರೈಲು

ಇದಲ್ಲದೇ ಚಾಲಕನ ನಿಲ್ಲದೇ ರೈಲು ಚಲಿಸುತ್ತಿದ್ದಾಗ ಆ ಮಾರ್ಗದಲ್ಲಿ ಯಾವುದೇ ರೈಲುಗಳು ಸಂಚಾರ ಇಲ್ಲದ ಹಿನ್ನೆಲೆ ಸಂಭವಿಸಬಹುದಾಗಿದ್ದ ಭಾರೀ ದುರಂತವೊಂದು ತಪ್ಪಿದಂತಾಗಿದೆ. ಹೀಗಾಗಿ ರೈಲ್ವೆ ಸಿಬ್ಬಂದಿ ಘಟನೆಯಿಂದ ನಿಟ್ಟುಸಿರು ಬಿಟ್ಟದ್ದಾರೆ.

ಇದು ವಿಚಿತ್ರವಾದ್ರು ಸತ್ಯ- ಚಾಲಕನಿಲ್ಲದೇ 13 ಕಿ.ಮೀ. ಚಲಿಸಿದ ರೈಲು

ಇನ್ನು ಚೆನ್ನೈನಿಂದ ಮುಂಬೈಗೆ ತೆರಳಬೇಕಿದ್ದ ಚೆನ್ನೈ ರೈಲು ವಾಡಿ ನಿಲ್ದಾಣಕ್ಕೆ ಆಗಮಿಸಿತ್ತು. ಆದ್ರೆ ವಾಡಿಯಿಂದ ಮುಂಬೈಗೆ ಎಲೆಕ್ಟ್ರಿಕ್ ಮಾರ್ಗವಿಲ್ಲದ ಕಾರಣ ಡೀಸೆಲ್ ಇಂಜಿನ್ ಗೆ ಬೋಗಿಗಳನ್ನು ಜೋಡಿಸುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.

Trending On DriveSpark Kannada:

ಯಾಕ್ರಿ ಲಂಚ ಕೊಡ್ತಿರಾ? ಇನ್ಮುಂದೆ ಸುಲಭದಲ್ಲೇ ಸಿಗಲಿದೆ ಡ್ರೈವಿಂಗ್ ಲೈಸೆನ್ಸ್..!!

ರಸ್ತೆ ಬದಿ ಇದ್ದ ಹೆಲ್ಮೆಟ್‌ಗಳನ್ನು ಟ್ರಾಫಿಕ್ ಪೊಲೀಸರು ಒಡೆದು ಹಾಕಿದ್ದೇಕೆ?

ಜೈಲು ಸೇರಿದ ಐಷಾರಾಮಿ ಕಾರುಗಳ ಒಡೆಯ ಸೌದಿ ಅರೇಬಿಯ ದೊರೆ ಸಲ್ಮಾನ್

Read more on train ರೈಲು
English summary
Read in Kannada about Engine cruises 13km minus pilot, staffer chases it down on bike.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark