ವಿಮಾನಗಳಿಗೆ ಎಡಭಾಗದಲ್ಲಿ ಬಾಗಿಲುಗಳನ್ನು ಏಕೆ ನೀಡಲಾಗಿದೆ ಗೊತ್ತೆ ?

By Girish

ನಮ್ಮಲ್ಲಿ ಕೆಲವರಿಗೆ ವಿಮಾನಯಾನವು ಈಗಲೂ ಸಹ ಆಕರ್ಷಕವಾದ ಅಂಶವೆನ್ನಬಹುದು. ಮೊದಲ ಬಾರಿಗೆ ವಿಮಾನ ಪ್ರಯಾಣ ಮಾಡುವವರಿಗೆ ಒಂದು ಕಡೆ ಭಯ... ಮತ್ತೊಂದು ಕಡೆ ಖುಷಿಯ ವಿಚಾರವಾಗಿದೆ.

ವಿಮಾನಗಳಿಗೆ ಎಡಭಾಗದಲ್ಲಿ ಬಾಗಿಲುಗಳನ್ನು ಏಕೆ ನೀಡಲಾಗಿದೆ ಗೊತ್ತೆ ?

ಮೊದಲ ಬಾರಿ ಪ್ರಯಾಣಕ್ಕೆ ಹೊರಟಾಗ ವಿಮಾನದ ಮೂತಿ, ರೆಕ್ಕೆಗಳು, ವಿಮಾನದ ಒಳಭಾಗ, ಸೀಟು ಹಾಗು ಇತ್ಯಾದಿ ಅಂಶಗಳನ್ನು ಖಂಡಿತ ಗಮನಿಸಿರುತ್ತೇವೆ. ಆದ್ರೆ, ಸಾಕಷ್ಟು ಬಾರಿ ಪ್ರಯಾಣ ಮಾಡಿದರೂ ಸಹ ಕೆಲವೊಂದು ವಿಚಾರಗಳನ್ನು ನಾವು ಗಮನಿಸದೆ ಹಾಗೆಯೇ ಇದ್ದು ಬಿಡುತ್ತೇವೆ. ಅಂತಹ ಒಂದು ವಿಚಾರದ ಬಗ್ಗೆ ನಾವು ಇಂದು ತಿಳಿಸಲಿದ್ದೇವೆ. ಮುಂದೆ ಓದಿ.

ವಿಮಾನಗಳಿಗೆ ಎಡಭಾಗದಲ್ಲಿ ಬಾಗಿಲುಗಳನ್ನು ಏಕೆ ನೀಡಲಾಗಿದೆ ಗೊತ್ತೆ ?

ಸಾಮಾನ್ಯವಾಗಿ ನಾವೆಲ್ಲರೂ ಎಡಭಾಗದಿಂದ ವಿಮಾನ ಹತ್ತುತ್ತೇವೆ. ಆದ್ರೆ, ಏಕೆ ಎಲ್ಲಾ ವಿಮಾನಗಳು ಎಡಭಾಗದಲ್ಲೇ ಬಾಗಿಲು ಹೊಂದಿವೆ ಎಂಬುದನ್ನು ಯಾರೂ ಸಹ ಖಂಡಿತ ಯೋಚನೆ ಮಾಡಿರುವುದಿಲ್ಲ. ಇದಕ್ಕೂ ಸಹ ಒಂದು ಕಾರಣವಿದೆ.

Recommended Video - Watch Now!
[Kannada] TVS Jupiter Classic Launched In India - DriveSpark
ವಿಮಾನಗಳಿಗೆ ಎಡಭಾಗದಲ್ಲಿ ಬಾಗಿಲುಗಳನ್ನು ಏಕೆ ನೀಡಲಾಗಿದೆ ಗೊತ್ತೆ ?

ಹಳೆ ಕಾಲದಲ್ಲಿ ಪ್ರಯಾಣಿಕರನ್ನು, ಅವರ ಸಾಮಗ್ರಿಗಳನ್ನು ಮತ್ತು ಸಿಬ್ಬಂದಿಗಳನ್ನು ಲೋಡ್ ಮತ್ತು ಅನ್‌ಲೋಡ್ ಮಾಡುವ ಸಲುವಾಗಿ ಟ್ಯಾಕ್ಸಿಗಳನ್ನು ಬಳಸುತ್ತಿದ್ದರು. ಆ ಸಮಯದಲ್ಲಿ ಯಾವುದೇ ಪ್ರತ್ಯೇಕ ವಿಮಾನ ಟ್ಯಾಕ್ಸಿಗಳು ಇರಲಿಲ್ಲ.

ವಿಮಾನಗಳಿಗೆ ಎಡಭಾಗದಲ್ಲಿ ಬಾಗಿಲುಗಳನ್ನು ಏಕೆ ನೀಡಲಾಗಿದೆ ಗೊತ್ತೆ ?

ಸಾಂಪ್ರದಾಯಿಕವಾಗಿ, ರೆಕ್ಕೆಗಳನ್ನು ಗಮನಿಸಲು ಮತ್ತು ನಿರ್ಣಾಯಕ ಕೆಲಸಗಳನ್ನು ನೋಡಿಕೊಳ್ಳಲು ಯಾವಾಗಲೂ ಸಹ ಎಡಭಾಗದಲ್ಲಿ ಪೈಲಟ್ ಕುಳಿತಿರುತ್ತಾನೆ. ಇದರಿಂದಾಗಿ ಪೈಲಟ್‌ಗೆ ಕೂಡ ಎಡಭಾಗದಲ್ಲಿ ಬಾಗಿಲು ನೀಡಲಾಗಿದೆ.

ವಿಮಾನಗಳಿಗೆ ಎಡಭಾಗದಲ್ಲಿ ಬಾಗಿಲುಗಳನ್ನು ಏಕೆ ನೀಡಲಾಗಿದೆ ಗೊತ್ತೆ ?

ಆದ್ದರಿಂದ, ಪ್ರಯಾಣಿಕರಿಗೆ ಹಾಗು ಪೈಲಟ್‌ಗಳಿಗೆ ವಿಮಾನದೊಳಗೆ ಪ್ರವೇಶಿಸಲು ಎಡಭಾಗದ ಬಾಗಿಲು ಹೆಚ್ಚು ಅನುಕೂಲಕರವೆಂದು ಸಾಬೀತಾಗಿದೆ. ವಿಮಾನದ ಸುತ್ತಲೂ ಬಾಗಿಲು ಇರುವ ಬದಲು ಒಂದು ಕಡೆ ಇರುವುದು ಲೇಸು ಎಂಬ ನಿರ್ಧಾರಕ್ಕೆ ಬರಲಾಗಿದೆ.

ವಿಮಾನಗಳಿಗೆ ಎಡಭಾಗದಲ್ಲಿ ಬಾಗಿಲುಗಳನ್ನು ಏಕೆ ನೀಡಲಾಗಿದೆ ಗೊತ್ತೆ ?

ಏವಿಯೇಷನ್ ವಿಭಾಗಳು ಕೆಲವು ತತ್ವಗಳನ್ನು ಅನುಸರಿಸಲಿದ್ದು, ಇದರ ಪ್ರಕಾರ ವಿಮಾನದಲ್ಲಿ ಪ್ರಯಾಣಿಕರ ಎಡಭಾಗದಿಂದ ಪ್ರವೇಶ ಮಾಡಬೇಕು ಎಂಬ ಉಲ್ಲೇಖವಿದೆ. ಪ್ರಾಚೀನ ಕಾಲದಲ್ಲಿ, ಹಡಗುಗಳು ಸಹ ಎಡಭಾಗದಲ್ಲಿ ಬಾಗಿಲುಗಳನ್ನು ಹೊಂದಿದ್ದವು. ಈ ಸಂಪ್ರದಾಯವು ಇಲ್ಲಿಯೂ ಸಹ ಮುಂದುವರೆಯಿತು.

ವಿಮಾನಗಳಿಗೆ ಎಡಭಾಗದಲ್ಲಿ ಬಾಗಿಲುಗಳನ್ನು ಏಕೆ ನೀಡಲಾಗಿದೆ ಗೊತ್ತೆ ?

ನಮ್ಮ ದಿನಚರಿಯಲ್ಲಿ ನಾವು ಎಷ್ಟೋ ವಿಚಾರಗಳ ಬಗ್ಗೆ ನಿಜಾಂಶವನ್ನು ತಿಳಿದುಕೊಳ್ಳುವುದೇ ಇಲ್ಲ. ಕೆಲವೊಂದು ವಿಚಾರಗಳನ್ನು ನಾವು ನೋಡಿದರೂ ಸಹ ಗಮನ ಕೊಡದೆ ಹಾಗೆಯೇ ಇದ್ದು ಬಿಡುತ್ತೇವೆ. ಇನ್ನು ಮುಂದಾದರೂ ಸಹ ಈ ಬಗ್ಗೆ ಹೆಚ್ಚು ಗಮನಹರಿಸೋಣ...

Trending on DriveSparkKannada

ಮುಕೇಶ್ ಅಂಬಾನಿ ಡ್ರೈವರ್ ಸಂಬಳ ಕೇಳಿದ್ರೆ ಬೆಚ್ಚಿ ಬೀಳ್ತೀರಾ !!

ಮಾಡಿದ ತಪ್ಪಿಗೆ ರೂ.1.61 ಲಕ್ಷ ದಂಡ ಪಾವತಿ ಮಾಡಿದ ಮಾರುತಿ ಸುಜುಕಿ

ಬೆಂಗಳೂರಿನ ಪ್ರತಿಷ್ಠಿತ ಮಾರುತಿ ಸರ್ವಿಸ್ ಸ್ಟೇಷನ್ ಕರ್ಮಕಾಂಡ ಬಯಲು ಮಾಡಿದ ಗ್ರಾಹಕ !! ವಿಡಿಯೋ

Kannada
Read more on plane ವಿಮಾನ
English summary
Why Do We Enter A Plane From The Left Side?
ಭಾರತದ ಅತೀದೊಡ್ಡ ರಾಜಕೀಯ ಸಮೀಕ್ಷೆ. ನೀವು ಭಾಗವಹಿಸಿದ್ದೀರಾ?
X

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more