ಸದ್ಯದಲ್ಲೇ ಹೀರೊದ ನಾಲ್ಕು ಜನಪ್ರಿಯ ಬೈಕ್ ಗಳ ಮಾರಾಟಕ್ಕೆ ಬ್ರೇಕ್

Written By:

ದೇಶದ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಹೀರೊ ಮೊಟೊಕಾರ್ಪ್, ಅತಿ ಶೀಘ್ರದಲ್ಲೇ ತನ್ನ ನಾಲ್ಕು ಜನಪ್ರಿಯ ಮಾದರಿಗಳ ಮಾರಾಟವನ್ನು ಸ್ಥಗಿತಗೊಳಿಸಲಿದೆ. ತನ್ನ ಮಾಜಿ ಜೊತೆಗಾರ ಜಪಾನ್ ಮೂಲದ ಹೋಂಡಾ ಮೋಟಾರ್ ಸೈಕಲ್ಸ್ ಆಂಡ್ ಟು ವೀಲರ್ಸ್ ಸಂಸ್ಥೆಯ ನಡುವಣ ದೀರ್ಘಕಾಲದ ಬಾಂಧವ್ಯವನ್ನು ಕಡಿದುಕೊಂಡಿರುವ ಹೀರೊ ಇಂತಹದೊಂದು ನಡೆ ಅನುಸರಿಸಲಿದೆ.

ಹೋಂಡಾ ಜೊತೆಗಿನ ಒಪ್ಪಂದದ ಪ್ರಕಾರ ನಿರ್ದಿಷ್ಟ ಕಾಲಾವಧಿಯ ವರೆಗೆ ಜನಪ್ರಿಯ ಮ್ಯಾಸ್ಟ್ರೋ, ಇಂಪಲ್ಸ್, ಇಗ್ನಿಟರ್ ಮತ್ತು ಪ್ಯಾಶನ್ ಎಕ್ಸ್ ಪ್ರೊಗಳ ಮಾರಾಟ ಹಕ್ಕನ್ನು ಗಿಟ್ಟಿಸಿಕೊಂಡಿತ್ತು. ಈಗ ಹಳೆಯ ಮಾದರಿಗಳ ಸ್ಥಾನವನ್ನು ಹೊಚ್ಚ ಹೊಸ ಬೈಕ್ ಗಳು ತುಂಬಲಿದೆ.

ಸದ್ಯದಲ್ಲೇ ಹೀರೊದ ನಾಲ್ಕು ಜನಪ್ರಿಯ ಬೈಕ್ ಗಳ ಮಾರಾಟಕ್ಕೆ ಬ್ರೇಕ್

ಪ್ರಸಕ್ತ ಆರ್ಥಿಕ ಸಾಲಿನ ಅಂತ್ಯದಲ್ಲಿ ಒಪ್ಪಂದ ಕೊನೆಗೊಳ್ಳುವುದರಿಂದ ನಾಲ್ಕು ಜನಪ್ರಿಯ ಮಾದರಿಗಳ ಮಾರಾಟವನ್ನು ಹೀರೊ ಹಿಂಪಡೆಯಲಿದೆ.

ಸದ್ಯದಲ್ಲೇ ಹೀರೊದ ನಾಲ್ಕು ಜನಪ್ರಿಯ ಬೈಕ್ ಗಳ ಮಾರಾಟಕ್ಕೆ ಬ್ರೇಕ್

ಈ ಎಲ್ಲ ನಾಲ್ಕು ಉತ್ಪನ್ನಗಳನ್ನು ಹೊಸ ಮಾದರಿಗಳು ಬದಲಾಯಿಸಿಕೊಳ್ಳಲಿದೆ. ಇವನ್ನೆಲ್ಲ ಹೀರೊ ತನ್ನದೇ ಆದ ಘಟಕದಲ್ಲಿ ಅಭಿವೃದ್ಧಿಪಡಿಸಲಿದೆ.

ಸದ್ಯದಲ್ಲೇ ಹೀರೊದ ನಾಲ್ಕು ಜನಪ್ರಿಯ ಬೈಕ್ ಗಳ ಮಾರಾಟಕ್ಕೆ ಬ್ರೇಕ್

ದ್ವಿಚಕ್ರ ವಾಹನ ನಿರ್ಮಾಣದಲ್ಲಿ ಸಂಪೂರ್ಣ ಸ್ವಾವಲಂಬನೆ ಪಡೆದಿರುವ ಹೀರೊ, ಇದೀಗಷ್ಟೇ ಮೇಡ್ ಇನ್ ಇಂಡಿಯಾ ಸ್ಪ್ಲೆಂಡರ್ ಐಸ್ಮಾರ್ಟ್ 110 ಸಿಸಿ ಬೈಕನ್ನು ಬಿಡುಗಡೆಗೊಳಿಸಿತ್ತು.

ಸದ್ಯದಲ್ಲೇ ಹೀರೊದ ನಾಲ್ಕು ಜನಪ್ರಿಯ ಬೈಕ್ ಗಳ ಮಾರಾಟಕ್ಕೆ ಬ್ರೇಕ್

ಈ ಸಂಬಂಧ ಪ್ರತಿಕ್ರಿಯಿಸಿರುವ ಹೀರೊ ಮೊಟೊಕಾರ್ಪ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪವನ್ ಮುಂಜಾಲ್, ಈಗಿರುವ ಮಾದರಿಗಳನ್ನು ಸಂಪೂರ್ಣ ಇನ್ ಹೌಸ್ ತಂತ್ರಜ್ಞಾನದೊಂದಿಗೆ ಬದಲಾಯಿಸಲಿದ್ದೇವೆ ಎಂದಿದ್ದಾರೆ.

ಸದ್ಯದಲ್ಲೇ ಹೀರೊದ ನಾಲ್ಕು ಜನಪ್ರಿಯ ಬೈಕ್ ಗಳ ಮಾರಾಟಕ್ಕೆ ಬ್ರೇಕ್

ಸ್ಪ್ಲೆಂಡರ್ ಐಸ್ಮಾರ್ಟ್ 110 ಸಿಸಿ ಬೈಕ್ ಬಿಡುಗಡೆ ಮಾಡುವ ಮೂಲಕ ಹೀರೊ ಮಗದೊಂದು ಮೈಲುಗಲ್ಲು ಸ್ಥಾಪಿಸಿತ್ತು. ಇದನ್ನು ಸಂಪೂರ್ಣವಾಗಿಯೂ ಜೈಪುರದಲ್ಲಿರುವ ಸಂಸ್ಥೆಯ ಸೆಂಟರ್ ಆಫ್ ಇನ್ನೋವೇಷನ್ ಘಟಕದಲ್ಲೇ ವಿನ್ಯಾಸ ಹಾಗೂ ಅಭಿವೃದ್ಧಿಗೊಳಿಸಲಾಗಿತ್ತು.

ಸದ್ಯದಲ್ಲೇ ಹೀರೊದ ನಾಲ್ಕು ಜನಪ್ರಿಯ ಬೈಕ್ ಗಳ ಮಾರಾಟಕ್ಕೆ ಬ್ರೇಕ್

ಹೀರೊ ಈಗಾಗಲೇ ಮ್ಯಾಸ್ಟ್ರೊ ಎಡ್ಜ್ ಮಾರುಕಟ್ಟೆಗೆ ಬಿಟ್ಟಿದ್ದು, ಇದು ನಿಧಾನವಾಗಿ ಮ್ಯಾಸ್ಟ್ರೋ ಸ್ಥಾನವನ್ನು ತುಂಬಲಿದೆ.

ಸದ್ಯದಲ್ಲೇ ಹೀರೊದ ನಾಲ್ಕು ಜನಪ್ರಿಯ ಬೈಕ್ ಗಳ ಮಾರಾಟಕ್ಕೆ ಬ್ರೇಕ್

ಇನ್ನೊಂದೆಡೆ ಇಂಪಲ್ಸ್, ಇಗ್ನಿಟೊ ಮತ್ತು ಪ್ಯಾಶನ್ ಎಕ್ಸ್ ಪ್ರೊ ಅಷ್ಟೇನು ಮಾರಾಟವನ್ನು ಗಿಟ್ಟಿಸಿಕೊಂಡಿಲ್ಲ. ನಿಕಟ ಭವಿಷ್ಯದಲ್ಲಿ ಇವುಗಳ ಸ್ಥಾನದಲ್ಲೂ ಹೊಸ ಬೈಕ್ ಗಳನ್ನು ಕಾಣಬಹುದಾಗಿದೆ.

ಸದ್ಯದಲ್ಲೇ ಹೀರೊದ ನಾಲ್ಕು ಜನಪ್ರಿಯ ಬೈಕ್ ಗಳ ಮಾರಾಟಕ್ಕೆ ಬ್ರೇಕ್

ಜಾಗತಿಕವಾಗಿ ಅತಿ ದೊಡ್ಡ ಗುರಿಯನ್ನಿಟ್ಟುಕೊಂಡಿರುವ ಹೀರೊ, 2020ರ ವೇಳೆಯಾಗುವಾಗ 50 ಹೊಸ ಮಾರುಕಟ್ಟೆಗೆ ಪ್ರವೇಶಿಸಲಿದೆ. ಅಲ್ಲದೆ ಜಾಗತಿಕವಾಗಿ 20 ತಯಾರಿಕಾ ಘಟಕಗಳ ಮುಖಾಂತರ 60,000 ಕೋಟಿ ರುಪಾಯಿಗಳ ವಹಿವಾಟನ್ನು ಗುರಿಯಿರಿಸಿಕೊಂಡಿದೆ.

English summary
Four Models From Hero MotoCorp To Be Phased Out Soon

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark