ಹಯಾಬುಸಾ ಪ್ರಿಯರಿಗೆ ನಿರಾಸೆ- ಹೊಸತನವಿಲ್ಲದ 2018 ಮಾಡೆಲ್ ಬಿಡುಗಡೆ ಮಾಡಲಿದೆ ಸುಜುಕಿ

Written By:

ಸೂಪರ್ ಬೈಕ್ ಮಾದರಿಗಳಲ್ಲಿ ಅತಿಹೆಚ್ಚು ಬೇಡಿಕೆ ಹೊಂದಿರುವ ಸುಜುಕಿ ನಿರ್ಮಾಣದ ಹಯಾಬುಸಾ 2018ರ ಮಾಡೆಲ್ ಯಾವುದೇ ಹೊಸತನದೊಂದಿಗೆ ಬಿಡುಗಡೆಯಾಗುತ್ತಿಲ್ಲ ಎಂಬ ಮಾಹಿತಿ ಹೊರಬಿದ್ದಿದ್ದು, ಹಯಾಬುಸಾ ಪ್ರಿಯರಿಗೆ ನಿರಾಸೆ ಉಂಟುಮಾಡಿದೆ.

ಹಯಾಬುಸಾ ಪ್ರಿಯರಿಗೆ ನಿರಾಸೆ- ಹೊಸತನವಿಲ್ಲದ 2018 ಮಾಡೆಲ್ ಬಿಡುಗಡೆ ಮಾಡಲಿದೆ ಸುಜುಕಿ

ಕಳೆದ ಹತ್ತು ವರ್ಷಗಳಿಂದ ವಿದೇಶಿ ಮಾರುಕಟ್ಟೆ ಸೇರಿದಂತೆ ದೇಶಿಯ ಮಾರುಕಟ್ಟೆಯಲ್ಲೂ ತನ್ನದೇ ಆದ ಬೇಡಿಕೆ ಹೊಂದಿರುವ ಸುಜುಕಿ ಹಯಾಬುಸಾ ಬೈಕ್, ಹಳೆಯ ವಿನ್ಯಾಸಗಳೊಂದಿಯೇ ಲಭ್ಯವಾಗುವ ಬಗ್ಗೆ ಸುಜುಕಿ ಸುಳಿವು ನೀಡಿದೆ.

ಹಯಾಬುಸಾ ಪ್ರಿಯರಿಗೆ ನಿರಾಸೆ- ಹೊಸತನವಿಲ್ಲದ 2018 ಮಾಡೆಲ್ ಬಿಡುಗಡೆ ಮಾಡಲಿದೆ ಸುಜುಕಿ

2017ರ ವೈಶಿಷ್ಟ್ಯತೆಗಳನ್ನೇ 2018ರ ಹಯಾಬುಸಾ ಮಾದರಿಯಲ್ಲೂ ಸುಜುಕಿ ಸಂಸ್ಥೆಯು ಮುಂದುವರಿಸಿದ್ದು, ಮಾಲಿನ್ಯ ಹೊರಸೂಸುವಿಕೆಗೆ ಸಂಬಂಧಿಸಿದಂತೆ ನಡೆದ ಕ್ಯಾಲಿಫೋರ್ನಿಯಾ ಏರ್ ರಿಸೋರ್ಸ್ ಬೋರ್ಡ್ ಪರೀಕ್ಷೆಯಲ್ಲಿ ಈ ಬಗ್ಗೆ ಮಾಹಿತಿ ಬಹಿರಂಗವಾಗಿದೆ.

ಹಯಾಬುಸಾ ಪ್ರಿಯರಿಗೆ ನಿರಾಸೆ- ಹೊಸತನವಿಲ್ಲದ 2018 ಮಾಡೆಲ್ ಬಿಡುಗಡೆ ಮಾಡಲಿದೆ ಸುಜುಕಿ

ಹೀಗಾಗಿ 2018ಕ್ಕೆ ಬಿಡುಗಡೆಯಾಗಲಿರುವ ಸುಜುಕಿ ಹಯಾಬುಸಾ ಬೈಕ್ ಮಾದರಿಯೂ 1340-ಸಿಸಿ ಇನ್ ಲೈನ್ ಫೋರ್ ಸಿಲಿಂಡರ್ ಪವರ್ ಹೊಂದಿದ್ದು, 197-ಬಿಎಚ್‌ಪಿ ಮತ್ತು 155-ಎನ್‌ಎಂ ಟಾರ್ಕ್ ಉತ್ಪಾದನಾ ಶಕ್ತಿಯನ್ನು ಹೊಂದಿದೆ.

Recommended Video - Watch Now!
Ducati Scrambler Cafe Racer Launched In India - DriveSpark
ಹಯಾಬುಸಾ ಪ್ರಿಯರಿಗೆ ನಿರಾಸೆ- ಹೊಸತನವಿಲ್ಲದ 2018 ಮಾಡೆಲ್ ಬಿಡುಗಡೆ ಮಾಡಲಿದೆ ಸುಜುಕಿ

6 ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು ಪ್ರತಿ ಲೀಟರ್‌ಗೆ 10 ಕಿಮಿ ಮೈಲೇಜ್ ಹೊಂದಿದ್ದು, 260 ಕೆಜಿ ಭಾರ ಪಡೆದಿದೆ. ಜೊತೆಗೆ ಗರಿಷ್ಠ ವೇಗ ಪ್ರತಿಗಂಟೆಗೆ 300 ಕಿಮಿ ಕ್ರಮಿಸುವ ಸಾಮರ್ಥ್ಯವಿದ್ದು, ಸದ್ಯದ ಮಾರುಕಟ್ಟೆಯ ಅನುಗುಣವಾಗಿ ಅಂದಾಜು 15 ಲಕ್ಷಕ್ಕೆ ಲಭ್ಯವಾಗುವ ಸಾಧ್ಯತೆಗಳಿವೆ.

ಹಯಾಬುಸಾ ಪ್ರಿಯರಿಗೆ ನಿರಾಸೆ- ಹೊಸತನವಿಲ್ಲದ 2018 ಮಾಡೆಲ್ ಬಿಡುಗಡೆ ಮಾಡಲಿದೆ ಸುಜುಕಿ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಸುಧಾರಿತ ತಂತ್ರಜ್ಞಾನಗಳೊಂದಿಗೆ 2018ರ ಹಯಾಬುಸಾ ಮಾದರಿ ಬಿಡುಗಡೆಯಾಗುತ್ತೆ ಎಂದು ಕಾಯ್ದು ಕುಳಿತಿದ್ದ ಸೂಪರ್ ಬೈಕ್ ಪ್ರಿಯರಿಗೆ ನಿರಾಶೆ ಆಗಿದ್ದು, 2019ಕ್ಕೆ ನ್ಯೂ ಮಾಡೆಲ್ ಬಿಡುಗಡೆಗೆ ಸುಜುಕಿ ಯೋಜನೆ ರೂಪಿಸಿದೆ.

English summary
Read in Kannada about The Suzuki Hayabusa has a massive fan following around the world. The once-fastest motorcycle has almost remained unchanged for ten years and will remain so in its eleventh year as well.
Story first published: Tuesday, August 8, 2017, 11:38 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark