ಬೆಂಗಳೂರಿನಲ್ಲಿ ಬಿಡುಗಡೆಗೊಂಡ ಟ್ರಯಂಪ್ ಸ್ಟ್ರೀಟ್ ಟ್ರಿಪಲ್ ಎಸ್ ಬೈಕ್

Written By:

ಬ್ರಿಟಿಷ್ ಮೋಟಾರು ಸೈಕಲ್ ತಯಾರಕ ಸಂಸ್ಥೆ ಟ್ರಯಂಪ್ ತನ್ನ ಹೊಚ್ಚ ಹೊಸ ಸ್ಟ್ರೀಟ್ ಟ್ರಿಪಲ್ ಎಸ್ ಬೈಕನ್ನು ಬೆಂಗಳೂರಿನಲ್ಲಿ ಬಿಡುಗಡೆಗೊಳಿಸಿದ್ದು, ಹೊಸ ಬೈಕಿನ ಸಂಪೂರ್ಣ ಮಾಹಿತಿ ಇಲ್ಲಿದೆ.

ಬೆಂಗಳೂರಿನಲ್ಲಿ ಬಿಡುಗಡೆಗೊಂಡ ಟ್ರಯಂಪ್ ಸ್ಟ್ರೀಟ್ ಟ್ರಿಪಲ್ ಎಸ್ ಬೈಕ್

ಕೆಲ ದಿನಗಳ ಹಿಂದಷ್ಟೇ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡಿದ್ದ 2017ರ ಟ್ರಯಂಪ್ ಸ್ಟ್ರೀಟ್ ಟ್ರಿಪಲ್ ಎಸ್ ಬೈಕ್, ಇದೀಗ ಬೆಂಗಳೂರು ಮಾರುಕಟ್ಟೆಗೂ ಲಗ್ಗೆಯಿಟ್ಟಿದೆ.

ಬೆಂಗಳೂರಿನಲ್ಲಿ ಬಿಡುಗಡೆಗೊಂಡ ಟ್ರಯಂಪ್ ಸ್ಟ್ರೀಟ್ ಟ್ರಿಪಲ್ ಎಸ್ ಬೈಕ್

ಹಿಂದಿನ ಮಾದರಿಗಿಂತಲೂ ಹೆಚ್ಚು ನವೀಕರಣಗೊಂಡಿರುವ ಸ್ಟ್ರೀಟ್ ಟ್ರಿಪಲ್ ಸಖತ್ ಸ್ಟೈಲಿಶ್ ಹೊಂದಿದ್ದು, ಹೊಸ ಬೈಕ್ ಬೆಲೆ ರೂ.8.50 ಲಕ್ಷಕ್ಕೆ ಲಭ್ಯವಿದೆ.

ಬೆಂಗಳೂರಿನಲ್ಲಿ ಬಿಡುಗಡೆಗೊಂಡ ಟ್ರಯಂಪ್ ಸ್ಟ್ರೀಟ್ ಟ್ರಿಪಲ್ ಎಸ್ ಬೈಕ್

ಟ್ರಯಂಪ್‌ನ ಪುನರಾವರ್ತನೆ ವಿನ್ಯಾಸ ಹೊಂದಿರುವ ನೇಕೆಡ್ ಮಿಡಲ್ 2017ರ ಕ್ರೀಡಾ ಆವೃತಿ ಬೈಕ್ ಇದಾಗಿದ್ದು, ಹಳೆಯ ಆವೃತಿಗೆ ಹೋಲಿಸಿದರೆ ಸ್ಟ್ರೀಟ್ ಟ್ರಿಪಲ್ ಎಸ್ ಸೈಕಲ್ ಹೆಚ್ಚು ಶಾರ್ಪ್ ಆಗಿದೆ.

ಬೆಂಗಳೂರಿನಲ್ಲಿ ಬಿಡುಗಡೆಗೊಂಡ ಟ್ರಯಂಪ್ ಸ್ಟ್ರೀಟ್ ಟ್ರಿಪಲ್ ಎಸ್ ಬೈಕ್

ಹೊಸ 2017 ಸ್ಟ್ರೀಟ್ ಟ್ರಿಪಲ್ ಎಸ್ ಬೈಕ್ ಹೊಸ ರೇಡಿಯೇಟರ್ ಕೋಲ್‌ಗಳನ್ನು ಮತ್ತು ಮಾಡಿಫೈ ಮಾಡಲಾದ ಮುಂಭಾಗ ಮತ್ತು ಹಿಂಭಾಗದ ಮಡ್‌ಗಾರ್ಡ್‌ಗಳನ್ನು ಹೊಂದಿದೆ. ಡೈಯಬಲ್ ರೆಡ್ ಮತ್ತು ಫ್ಯಾಂಟಮ್ ಬ್ಲಾಕ್ ಎಂಬ ಎರಡು ಬಣ್ಣಗಳಲ್ಲಿ ಬಿಡುಗಡೆಗೊಂಡಿದೆ.

ಬೆಂಗಳೂರಿನಲ್ಲಿ ಬಿಡುಗಡೆಗೊಂಡ ಟ್ರಯಂಪ್ ಸ್ಟ್ರೀಟ್ ಟ್ರಿಪಲ್ ಎಸ್ ಬೈಕ್

ಕಳೆದ ಆವೃತಿಯಲ್ಲಿ ಇದ್ದಂತಹ ಬಗ್ ಆಕಾರದ ಡಯಲ್ ಹೆಡ್ ಲ್ಯಾಂಪ್ ಬದಲಾಗದೆ ಉಳಿದಿದೆ ಮತ್ತು ಅತಿ ಹೆಚ್ಚು ಹಗುರವಾಗಿರುವ ಈ ಬೈಕ್ ಕೇವಲ 166 ಕೆ.ಜಿ ತೂಕ ಇರಲಿದೆ.

ಬೆಂಗಳೂರಿನಲ್ಲಿ ಬಿಡುಗಡೆಗೊಂಡ ಟ್ರಯಂಪ್ ಸ್ಟ್ರೀಟ್ ಟ್ರಿಪಲ್ ಎಸ್ ಬೈಕ್

ಹೊಸ ಸ್ಟ್ರೀಟ್ ಟ್ರಿಪಲ್ ಎಸ್ ಬೈಕ್ 765 ಸಿಸಿ ಇನ್‌ಲೈನ್ ತ್ರಿವಳಿ ಎಂಜಿನ್ ಪಡೆದುಕೊಂಡಿದೆ. ಎಂಜಿನ್ 73 ಏನ್ಎಂ ತಿರುಗುಬಲದಲ್ಲಿ 111ರಷ್ಟು ಗರಿಷ್ಠ ಟಾರ್ಕ್ ಉತ್ಪಾದಿಸುತ್ತದೆ.

ಬೆಂಗಳೂರಿನಲ್ಲಿ ಬಿಡುಗಡೆಗೊಂಡ ಟ್ರಯಂಪ್ ಸ್ಟ್ರೀಟ್ ಟ್ರಿಪಲ್ ಎಸ್ ಬೈಕ್

ಪ್ರಸ್ತುತ, ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಬೈಕ್ ಪ್ರವೇಶ ಮಟ್ಟದ ಎಸ್ ರೂಪಾಂತರವನ್ನು ಮಾತ್ರ ಬಿಡುಗಡೆಗೊಳಿಸಿದ್ದು, ಈ ವರ್ಷದ ನಂತರ ಆರ್‌ಎಸ್ ರೂಪಾಂತರವನ್ನು ಪರಿಚಯಿಸಲಾಗುವುದು ಎಂದು ಕಂಪನಿ ತಿಳಿಸಿದೆ.

ಬೆಂಗಳೂರಿನಲ್ಲಿ ಬಿಡುಗಡೆಗೊಂಡ ಟ್ರಯಂಪ್ ಸ್ಟ್ರೀಟ್ ಟ್ರಿಪಲ್ ಎಸ್ ಬೈಕ್

ಹೊಸ ಸ್ಟ್ರೀಟ್ ಟ್ರಿಪಲ್ ಎಸ್ ಬೈಕ್ ತನ್ನ ಸಮಾನ ಬೈಕುಗಳಾದ ಕವಸಾಕಿ Z900, ಡುಕಾಟಿ ಮೊನಾಸ್ಟರ್ 821 ಮತ್ತು ಏಪ್ರಿಲಿಯಾ ಶಿವರ್ 900 ಬೈಕುಗಳೊಂದಿಗೆ ಸ್ಪರ್ಧೆ ನಡೆಸಲಿದೆ.

English summary
Read in Kannada about Triumph's Street triple S motorcycle launched in Benglure.
Please Wait while comments are loading...

Latest Photos