ಮುಂದಿನ ತಿಂಗಳಿನಿಂದ ಹೋಂಡಾ ಆಫ್ರಿಕಾ ಟ್ವಿನ್ 2018 ಬೈಕ್ ಖರೀದಿಗೆ ಬುಕ್ಕಿಂಗ್ ಶುರು..

ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಹೋಂಡಾ ಈ ಹಿಂದೆಯೆ ತಮ್ಮ ಆಫ್ರಿಕಾ ಟ್ವಿನ್ ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು.

By Rahul Ts

ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಹೋಂಡಾ ಈ ಹಿಂದೆಯೆ ತಮ್ಮ ಆಫ್ರಿಕಾ ಟ್ವಿನ್ ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದ್ದು, ಇದೀಗ ಮತ್ತೊಮ್ಮೆ ಮುಂದಿನ ತಲೆಮಾರಿನ ವಿನ್ಯಾಸ ಮತ್ತು ವೈಶಿಷ್ಟ್ಯತೆಗಳೊಂದಿಗೆ ಇದೇ ವರ್ಷದ ಜುಲೈ ತಿಂಗಳಿನಲ್ಲಿ ಬಿಡುಗಡೆಗೊಳ್ಳಲ್ಲಿದೆ.

ಮುಂದಿನ ತಿಂಗಳಿನಿಂದ ಹೋಂಡಾ ಆಫ್ರಿಕಾ ಟ್ವಿನ್ 2018 ಬೈಕ್ ಖರೀದಿಗೆ ಬುಕ್ಕಿಂಗ್ ಶುರು..

ಜುಲೈ ತಿಂಗಳಿನಲ್ಲಿ ಬಿಡುಗಡೆಗೊಳ್ಳಲಿರುವ ಹೋಂಡಾ ಆಫ್ರಿಕಾ ಟ್ವಿನ್ ಬೈಕ್‍‍ಗಳ ಖರೀದಿಗಾಗಿ ಇದೇ ಜೂನ್ 1ರಿಂದ ಬುಕ್ಕಿಂಗ್ ಪ್ರಕ್ರಿಯೆಯು ಪ್ರಾರಂಭಗೊಳ್ಳಲ್ಲಿದ್ದು, ಈ ಹಿಂದೆ ಬಿಡುಗಡೆಗೊಂಡ ಪ್ರಸ್ಥುತ ತಲೆಮಾರಿನ ಆಫ್ರಿಕಾ ಬೈಕ್‍‍ಣಂತೆಯೆ ಸೀಮಿತ ಸಂಖ್ಯೆಯಲ್ಲಿ ಭಾರತದಲ್ಲಿ ಮಾರಾಟಗೊಳ್ಳಲ್ಲಿದೆ.

ಮುಂದಿನ ತಿಂಗಳಿನಿಂದ ಹೋಂಡಾ ಆಫ್ರಿಕಾ ಟ್ವಿನ್ 2018 ಬೈಕ್ ಖರೀದಿಗೆ ಬುಕ್ಕಿಂಗ್ ಶುರು..

ಹೊಸ ಹೋಂಡಾ ಆಫ್ರಿಕಾ ಟ್ವಿನ್ ಬೈಕ್‍‍ಗಳು ಭಾರತಕ್ಕೆ ಕಂಪ್ಲೀಟ್ಲಿ ನೇಕ್ಡ್ ಡೌನ್ ಯೂನಿಟ್ ಮುಖಾಂತರ ಬರಲಿದ್ದು, ನಂತರ ಭಾರತದಲ್ಲಿನ ಪ್ಲಾಂಟ್‍‍ನಲ್ಲಿ ತಯಾರಿಸಲಾಗುತ್ತದೆ. ಆದರೆ ಭಾರತಕ್ಕೆ ಎಷ್ಟು ಸೀಮಿತ ಬೈಕ್‍‍ಗಳು ಬರಲಿದೆ ಎಂಬ ಮಾಹಿತಿಯು ತಿಳಿದುಬಂದಿಲ್ಲ.

ಮುಂದಿನ ತಿಂಗಳಿನಿಂದ ಹೋಂಡಾ ಆಫ್ರಿಕಾ ಟ್ವಿನ್ 2018 ಬೈಕ್ ಖರೀದಿಗೆ ಬುಕ್ಕಿಂಗ್ ಶುರು..

ಮುಂದಿನ ತಲೆಮಾರಿನ ಹೋಂಡಾ ಆಫ್ರಿಕಾ ಟ್ವಿನ್ ಬೈಕ್ ಹಳೆಯ ಮಾದರಿಗಿಂತ ಕೊಂಚ ಬದಲಾವಣೆಗಳನ್ನು ಕಂಡಿದೆ. ಹೊಸ ಇನ್ಸ್ಟ್ರೂಮೆಂಟ್ ಕ್ಲಸ್ಟರ್, ಇನ್ಸ್ಟ್ರೂಮೆಂಟ್ ಡಿಸ್ಪ್ಲೇ‍‍ಯ ಸ್ಥಾನವನ್ನು ಬದಲಾಯಿಸಲಾಗಿದ್ದು, ಇದು ಫುಟ್ ಪೆಗ್‍‍ನ ಮೇಲೆ ನಿಂತಿರುವಾಗ ಉತ್ತಮವಾದ ನೋಟವನ್ನು ನೀಡಲು ಸಹಕರಿಸುತ್ತವೆ.

ಮುಂದಿನ ತಿಂಗಳಿನಿಂದ ಹೋಂಡಾ ಆಫ್ರಿಕಾ ಟ್ವಿನ್ 2018 ಬೈಕ್ ಖರೀದಿಗೆ ಬುಕ್ಕಿಂಗ್ ಶುರು..

ಪ್ರಸ್ಥುತ ತಲೆಮಾರಿನ ಆಫ್ರಿಕಾ ಬೈಕ್‍‍ನಂತೆಯೆ ಹೊಸ ಹೋಂಡಾ ಅಫ್ರಿಕಾ ಟ್ವಿನ್ ಬೈಕ್ 998ಸಿಸಿ ಪ್ಯಾರಲಲ್ ಟ್ವಿನ್ ಏಂಜಿನ್ ಅನ್ನು ಪಡೆದುಕೊಂಡಿದೆ. ಆದರೆ ಹೊಸ ಬೈಕ್ ಉದ್ದವಾದ ಏರ್‍‍ಬಾಕ್ಸ್ ಪಡೆದುಕೊಂಡಿದ್ದು, ಜೊತೆಗೆ ಹಗುರವಾದ ಬ್ಯಾಲೆನ್ಸರ್ ಶಾಫ್ಟ್ ಅನ್ನು ಪಡೆದಿದೆ.

ಮುಂದಿನ ತಿಂಗಳಿನಿಂದ ಹೋಂಡಾ ಆಫ್ರಿಕಾ ಟ್ವಿನ್ 2018 ಬೈಕ್ ಖರೀದಿಗೆ ಬುಕ್ಕಿಂಗ್ ಶುರು..

ಪ್ರಸ್ಥುತ ತಲೆಮಾರಿನ ಹೋಂಡಾ ಆಫ್ರಿಕಾ ಟ್ವಿನ್ ಬೈಕ್‍‍ಗಳು 998ಸಿಸಿ ಪ್ಯಾರಲಲ್ ಟ್ವಿನ್ ಎಂಜಿನ್ ಸಹಾಯದಿಂದ 81ಬಿಹೆಚ್‍ಪಿ ಮತ್ತು 92ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಡ್ಯುಯಲ್ ಕ್ಲಚ್ ಟ್ರಾನ್ಸ್ ಮಿಷನ್‍‍ನೊಂದಿಗೆ ಜೋಡಿಸಲಾಗಿದೆ.

ಮುಂದಿನ ತಿಂಗಳಿನಿಂದ ಹೋಂಡಾ ಆಫ್ರಿಕಾ ಟ್ವಿನ್ 2018 ಬೈಕ್ ಖರೀದಿಗೆ ಬುಕ್ಕಿಂಗ್ ಶುರು..

ಹೋಂಡಾ ಆಫ್ರಿಕಾ ಟ್ವಿನ್ ಬೈಕ್ 4 ರೈಡಿಂಗ್ ಮೋಡ್ ಮತ್ತು ಏಳು ಹಂತದ ಟ್ರಾಕ್ಷನ್ ಕಂಟ್ರೋಲ್ ಸಿಸ್ಟಂ ಅನ್ನು ಪಡೆದಿದ್ದು, ಬ್ರಿಡ್ಜ್ ಸ್ಟೋನ್ ಟೈರ್ಸ್, ಮುಂಭಾಗದಲ್ಲಿ 310ಎಂಎಂ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ ಸಿಂಗಲ್ 256ಎಂಎಂ ಬ್ರೇಕಿಂಗ್ ಸಿಸ್ಟಂ ಅನ್ನು ಪಡೆದುಕೊಂಡಿವೆ.

ಮುಂದಿನ ತಿಂಗಳಿನಿಂದ ಹೋಂಡಾ ಆಫ್ರಿಕಾ ಟ್ವಿನ್ 2018 ಬೈಕ್ ಖರೀದಿಗೆ ಬುಕ್ಕಿಂಗ್ ಶುರು..

ಇದು ಮಾತ್ರವಲ್ಲದೆ ಎಲ್ಇಡಿ ಹೆಡ್‍‍ಲ್ಯಾಂಪ್ಸ್, ಟೈಲ್ ಗೇಟ್ಸ್ ಮತ್ತು ಟರ್ನ್ ಇಂಡಿಕೇಟರ್‍‍ಗಳನ್ನು ಪಡೆದಿದ್ದು, ಜೊತೆಗೆ ಪ್ರಯಾಣಿಕರ ಸುರಕ್ಷತೆಗಾಗಿ ಹೋಂಡಾದ ಸೆಲೆಕ್ಟಿಬಲ್ ಟಾರ್ಕ್ ಕಂಟ್ರೋಲ್, ಎಬಿಎಸ್, ಯೂನಿಕ್ ಇನ್ಕ್ಲೈನ್ ಡಿಟೆಕ್ಷನ್ ಫೀಚರ್ ಮತ್ತು ಟ್ರಾಕ್ಷನ್ ಅನ್ನು ಅಭಿವೃದ್ದಿಗೊಳಿಸಲು 'ಜಿ-ಸ್ವಿಚ್' ಅನ್ನು ಅಳವಡಿಸಲಾಗಿದೆ.

ಮುಂದಿನ ತಿಂಗಳಿನಿಂದ ಹೋಂಡಾ ಆಫ್ರಿಕಾ ಟ್ವಿನ್ 2018 ಬೈಕ್ ಖರೀದಿಗೆ ಬುಕ್ಕಿಂಗ್ ಶುರು..

ಹೋಂಡಾ ಸಂಸ್ಥೆಯು ಭಾರತದಲ್ಲಿ ಬಿಡುಗಡೆಗೊಂಡ ಎರಡು ತಿಂಗಳಿನಲ್ಲಿ 50 ಯೂನಿಟ್ ಬೈಕ್‍‍ಗಳನ್ನು ಮಾರಾಟ ಮಾಡಿದ್ದು, ಗ್ರಾಹಕರಿಂದ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿದೆ. ಪ್ರಸ್ಥುತ ತಲೆಮಾರಿನ ಆಫ್ರಿಕಾ ಟ್ವಿನ್ ಬೈಕ್‍‍ಗಳು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ 13.06 ಲಕ್ಷಕ್ಕೆ ಮಾರಾಟಗೊಳ್ಳುತಿದ್ದು, ಹೊಸ ತಲೆಮಾರಿನ ಬೈಕ್‍‍ಗಳು ಹಳೇಯ ತಲೆ ಮಾರಿನ ಬೈಕ್‍‍ಗಳಿಗಿಂತ ಕೊಂಚ ಅಧಿಕವಾಗಿರಲಿದೆ ಎನ್ನಲಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

ಹೈವೇಯಲ್ಲಿ ಡ್ರೈವಿಂಗ್ ಮಾಡಲು 11 ಬಹುಮೂಲ್ಯ ಟಿಪ್ಸ್

ವಿಡಿಯೋ- ಟೊಯೊಟಾ ಇನೋವಾ ಗುದ್ದಿದ ರಭಸಕ್ಕೆ 30 ಅಡಿ ದೂರ ಹೋಗಿ ಬಿದ್ದ ಯುವಕ...

ಕಾರು ಚಾಲನೆ ವೇಳೆ ಗಂಡ-ಹೆಂಡತಿ ಜಗಳದಿಂದಾಗಿ ನಾಲ್ವರು ದುರ್ಮರಣ

ಕರ್ಕಶ ಸೈಲೆನ್ಸರ್‌ ಹಾಕಿದ್ರೆ 3 ತಿಂಗಳು ಕಾಲ ಆರ್‌ಸಿ ಸಸ್ಪೆಂಡ್‌ ಅಂತೆ..

ಕಾರಿನ ಎಂಜಿನ್ ಕಾರ್ಯಕ್ಷಮತೆಯನ್ನು ಹೆಚ್ಚಿಸುವುದು ಹೇಗೆ?

Most Read Articles

Kannada
Read more on honda super bike
English summary
New Honda Africa Twin 2018 India Launch Confirmed.
Story first published: Thursday, May 10, 2018, 10:22 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X