ಫೆ.5ಕ್ಕೆ ಬಿಡುಗಡೆಯಾಗಲಿರುವ ಟಿವಿಎಸ್ ಹೊಸ ಸ್ಕೂಟರ್ ಎನ್‌ಟಾರ್ಕ್ 125

ಟಿವಿಎಸ್ 125 ಸಿಸಿ ಹೊಸ ಸ್ಕೂಟರ್ ಒಂದು ಹಲವು ವಿಶೇಷತೆಗಳನ್ನು ಹೊತ್ತು ಮಾರುಕಟ್ಟೆಗೆ ಲಗ್ಗೆಯಿಡುತ್ತಿದ್ದು, ಎನ್‌ಟಾರ್ಕ್ 125 ಹೆಸರಿನಲ್ಲಿ ಫೆಬ್ರುವರಿ 5ಕ್ಕೆ ಮಾರುಕಟ್ಟೆಗೆ ಪ್ರವೇಶ ಪಡೆಯಲಿದೆ.

By Praveen

Recommended Video

Ducati 959 Panigale Crashes Into Buffalo - DriveSpark

ಮುಂಬರುವ ದಿನಗಳಲ್ಲಿ ಬಿಡುಗಡೆಯಾಗಲಿರುವ ಪ್ರಮುಖ ಸ್ಕೂಟರ್ ಮಾದರಿಗಳಲ್ಲೇ ಅತಿಹೆಚ್ಚು ನೀರಿಕ್ಷೆ ಹೊಂದಿರುವ ಟಿವಿಎಸ್ 125 ಸಿಸಿ ಹೊಸ ಸ್ಕೂಟರ್ ಒಂದು ಹಲವು ವಿಶೇಷತೆಗಳನ್ನು ಹೊತ್ತು ಮಾರುಕಟ್ಟೆಗೆ ಲಗ್ಗೆಯಿಡುತ್ತಿದ್ದು, ಎನ್‌ಟಾರ್ಕ್ 125 ಹೆಸರಿನಲ್ಲಿ ಫೆಬ್ರುವರಿ 5ಕ್ಕೆ ಮಾರುಕಟ್ಟೆಗೆ ಪ್ರವೇಶ ಪಡೆಯಲಿದೆ.

ಫೆ.5ಕ್ಕೆ ಬಿಡುಗಡೆಯಾಗಲಿರುವ ಟಿವಿಎಸ್ ಹೊಸ ಸ್ಕೂಟರ್ ಎನ್‌ಟಾರ್ಕ್ 125

ಈ ಹಿಂದೆ 2014ರ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಗ್ರಾಫೈಟ್ ಸ್ಪೋರ್ಟಿ ಸ್ಕೂಟರ್ ಕಾನ್ಸೆಪ್ಟ್ ಪ್ರದರ್ಶನ ಮಾಡಿದ್ದ ಟಿವಿಎಸ್ ಸಂಸ್ಥೆಯು ಇದೀಗ ಅದೇ ಮಾದರಿಯನ್ನು ಎನ್‌ಟಾರ್ಕ್ 125 ಹೆಸರಿನಲ್ಲಿ ಬಿಡುಗಡೆಗೊಳಿಸುತ್ತಿದ್ದು, ಅವಧಿಗೂ ಮುನ್ನವೇ ಹೊಸ ಸ್ಕೂಟರ್ ಅನ್ನು ಅನಾವರಣಗೊಳಿಸುತ್ತಿದೆ.

ಫೆ.5ಕ್ಕೆ ಬಿಡುಗಡೆಯಾಗಲಿರುವ ಟಿವಿಎಸ್ ಹೊಸ ಸ್ಕೂಟರ್ ಎನ್‌ಟಾರ್ಕ್ 125

ಹೆಸರಲ್ಲೇ ಸೂಚಿಸಿರುವ ಟಿವಿಎಸ್ ಎನ್‌ಟಾರ್ಕ್ 125 ಸ್ಕೂಟರ್‌ಗಳು ಆಕ್ರಮಣಕಾರಿ ಕ್ರೀಡಾ ವಿನ್ಯಾಸ ಪಡೆದುಕೊಂಡಿದೆ. ಇದರ ವಿನ್ಯಾಸವನ್ನು ಯುದ್ಧ ವಿಮಾನಗಳಿಂದ ಸ್ಫೂರ್ತಿ ಪಡೆದು ಹಾಗೂ ಟಿವಿಎಸ್ ರೇಸಿಂಗ್ ತಂಡದ ನೆರವಿನೊಂದಿಗೆ ರಚಿಸಲಾಗಿದೆ.

ಫೆ.5ಕ್ಕೆ ಬಿಡುಗಡೆಯಾಗಲಿರುವ ಟಿವಿಎಸ್ ಹೊಸ ಸ್ಕೂಟರ್ ಎನ್‌ಟಾರ್ಕ್ 125

ಟಿವಿಎಸ್ ಎನ್‌ಟಾರ್ಕ್ 125 ಸ್ಕೂಟರಿನ ಪ್ರಮುಖ ಆಕರ್ಷಣೆಯೆಂದರೆ ಇದರ ಆಟೋಮ್ಯಾಟೆಡ್ ಮ್ಯಾನುವಲ್ ಗೇರ್ ಬಾಕ್ಸ್ (ಕ್ಲಚ್ ರಹಿತ ಮ್ಯಾನುವಲ್ ಟ್ರಾನ್ಸ್‌ಮಿಷನ್) ಇದು ಪ್ಯಾಡಲ್ ಶಿಫ್ಟರ್‌ನಿಂದ ನಿರ್ವಹಿಸಲಿದೆ.

ಫೆ.5ಕ್ಕೆ ಬಿಡುಗಡೆಯಾಗಲಿರುವ ಟಿವಿಎಸ್ ಹೊಸ ಸ್ಕೂಟರ್ ಎನ್‌ಟಾರ್ಕ್ 125

ಇನ್ನು ಮುಂದುಗಡೆ 30 ಎಂಎಂ ಟೆಲಿಸ್ಕಾಪಿಕ್ ಸಸ್ಷೆಷನ್ ಹಾಗೆಯೇ ಹಿಂಭಾಗದಲ್ಲಿ ಗ್ಯಾಸ್ ಚಾರ್ಜ್ಡ್ ಡ್ಯಾಂಪರ್ ಇರಲಿದೆ. ಅಂದ ಹಾಗೆ ಟಿವಿಎಸ್ ಎನ್‌ಟಾರ್ಕ್ 125 ಸ್ಕೂಟರ್ ಮಾದರಿಯು 125 ಸಿಸಿ ಎಂಜಿನ್ ಹೊಂದಿದ್ದು, 11.5 ಬಿಎಚ್‌ಪಿ ಉತ್ಪಾದಿಸಬಲ್ಲವು.

Trending On DriveSpark Kannada:

ಮೈಲೇಜ್ ವಿಚಾರದಲ್ಲಿ ಸುಳ್ಳು ಜಾಹೀರಾತು- ಹೀರೋ ಡೀಲರ್ಸ್‌ಗೆ ಸರಿಯಾಗಿಯೇ ಬುದ್ದಿ ಕಲಿಸಿದ ಬೆಂಗಳೂರು ಯುವಕ..!!

ಟರ್ಬನ್ ಬಣ್ಣಕ್ಕೆ ತಕ್ಕಂತೆ ಬದಲಾಗುತ್ತೆ ಈ ಉದ್ಯಮಿಯ ರೋಲ್ಸ್ ರಾಯ್ಸ್ ಕಾರುಗಳ ಗಮ್ಮತ್ತು..

ವೇಗದ ಚಾಲನೆಯಲ್ಲಿದ್ದಾಗ ಪಂಚರ್- ಮೂರು ಬಾರಿ ಪಲ್ಟಿ ಹೊಡೆದ ಟಾಟಾ ನೆಕ್ಸಾನ್

ಫೆ.5ಕ್ಕೆ ಬಿಡುಗಡೆಯಾಗಲಿರುವ ಟಿವಿಎಸ್ ಹೊಸ ಸ್ಕೂಟರ್ ಎನ್‌ಟಾರ್ಕ್ 125

ಇದಲ್ಲದೆ ಮುಂದುವರಿದ ಎಲ್‌ಇಡಿ ಪರದೆ ಕೂಡಾ ಹೊಂದಿದ್ದು, ಇದು ವಾಹನ, ಎಂಜಿನ್ ಹಾಗೂ ಚಾಲನೆ ಬಗ್ಗೆ ತಾಜಾ ಮಾಹಿತಿ ನೀಡಲಿದೆ. ಪ್ರಸ್ತುತ ಎಲ್‌ಇಡಿ ವ್ಯವಸ್ಥೆಯು ಇತರ ಡಿವೈಸ್‌ಗಳಿಗೆ ಸಂಪರ್ಕ ಸೇವೆಯನ್ನು ಒದಗಿಸಲಿದೆ.

ಈ ಕುರಿತು ಟೀಸರ್ ಒಂದನ್ನು ಬಿಡುಗಡೆ ಮಾಡಿರುವ ಟಿವಿಎಸ್, ಬಿಡುಗಡೆಗೆ ಮುನ್ನವೇ ಹೊಸ ಸ್ಕೂಟರ್ ಬಗ್ಗೆ ಕುತೂಹಲ ಮೂಡಿಸಿದೆ.

ಫೆ.5ಕ್ಕೆ ಬಿಡುಗಡೆಯಾಗಲಿರುವ ಟಿವಿಎಸ್ ಹೊಸ ಸ್ಕೂಟರ್ ಎನ್‌ಟಾರ್ಕ್ 125

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಸದ್ಯ ಭಾರತೀಯ ಆಟೋ ಮಾರುಕಟ್ಟೆಯಲ್ಲಿ ಹೊಸ ಹೊಸ ಬೈಕ್ ಆವೃತ್ತಿಗಳು ಪ್ರದರ್ಶನಗೊಳ್ಳುತ್ತಿದ್ದು, ಈ ಹಿನ್ನೆಲೆ ಜನಪ್ರಿಯ ಸ್ಕೂಟರ್ ಮಾದರಿಗಳಿಗೆ ಸೆಡ್ಡು ಹೊಡೆಯುವ ನಿಟ್ಟಿನಲ್ಲಿ ಟಿವಿಎಸ್ ಕೂಡಾ ಎನ್‌ಟಾರ್ಕ್ 125 ಹೊಸ ಆವೃತ್ತಿಯನ್ನು ಪರಿಚಯಿಸಲು ಸಿದ್ಧವಾಗುತ್ತಿದೆ.

Trending DriveSpark YouTube Videos

Subscribe To DriveSpark Kannada YouTube Channel - Click Here

Most Read Articles

Kannada
English summary
TVS 125cc Scooter (Graphite) Likely To Be Called 'Ntorq 125'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X