ಹೊಸ ಟಿವಿಎಸ್ ಅಪಾಚೆ ಆರ್‍‍ಟಿಆರ್ ಬೈಕ್ ಬಗ್ಗೆ ನಿಮಗೆಷ್ಟು ಗೊತ್ತು.?

ದೇಶಿಯ ಮಾರುಕಟ್ಟೆಯಲ್ಲಿ ತಮ್ಮ ದ್ವಿಚಕ್ರ ವಾಹನಗಳಿಂದ ಜನಪ್ರಿಯತೆಯನ್ನು ಕಂಡ ಟಿವಿಎಸ್ ಸಂಸ್ಥೆಯು ಇತ್ತೀಚೆಗೆ 2018ರ ಅಪಾಚೆ ಆರ್‍‍ಟಿಆರ್ 160 4ವಿ ಬೈಕನ್ನು ಬಿಡುಗಡೆಗೊಳಿಸಿದೆ.

By Rahul Ts

ದೇಶಿಯ ಮಾರುಕಟ್ಟೆಯಲ್ಲಿ ತಮ್ಮ ದ್ವಿಚಕ್ರ ವಾಹನಗಳಿಂದ ಜನಪ್ರಿಯತೆಯನ್ನು ಕಂಡ ಟಿವಿಎಸ್ ಸಂಸ್ಥೆಯು ಇತ್ತೀಚೆಗೆ 2018ರ ಅಪಾಚೆ ಆರ್‍‍ಟಿಆರ್ 160 4ವಿ ಬೈಕನ್ನು ಬಿಡುಗಡೆಗೊಳಿಸಿದ್ದು, ಬೈಕ್ ಬೆಲೆಯು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ 81,490 ಸಾವಿರಕ್ಕೆ ನಿಗದಿಪಡಿಸಲಾಗಿದೆ.

ಹೊಸ ಟಿವಿಎಸ್ ಅಪಾಚೆ ಆರ್‍‍ಟಿಆರ್ ಬೈಕ್ ಬಗ್ಗೆ ನಿಮಗೆಷ್ಟು ಗೊತ್ತು.?

ಅಪಾಚೆ ಆರ್‍‍ಟಿಆರ್ 160 4ವಿ ಬೈಕ್ 160ಸಿಸಿ ಬೈಕ್‌ಗಳ ಸರಣಿಯಲ್ಲಿ ಪವರ್‍‍ಫುಲ್ ಬೈಕ್ ಆಗಿದ್ದು, ನೀವೇನಾದರೂ ಈ ಬೈಕನ್ನು ಖರೀದಿಸುವ ಯೋಚನೆಯಲ್ಲಿದ್ದರೆ ಈ ಬೈಕಿನ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಾವಿಂದು ನಿಮಗೆ ನೀಡಲಿದ್ದೇವೆ.

ಹೊಸ ಟಿವಿಎಸ್ ಅಪಾಚೆ ಆರ್‍‍ಟಿಆರ್ ಬೈಕ್ ಬಗ್ಗೆ ನಿಮಗೆಷ್ಟು ಗೊತ್ತು.?

ಸ್ಪೋರ್ಟಿ ಲುಕ್ ಮತ್ತು ಹೊಸ ತಂತ್ರಜ್ಞಾನ ಪ್ರೇರಣೆ ಹಿನ್ನೆಲೆ ಅಪಾಚೆ ಆರ್‌ಟಿಆರ್ 160 4ವಿ ಬೈಕ್‌ಗಳು ಈ ಹಿಂದಿಗಿಂತಲೂ ಹೆಚ್ಚು ಆಕರ್ಷಣೆ ಹೊಂದಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಮೂರು ವಿವಿಧ ಮಾದರಿಯಲ್ಲಿ ಅಪಾಚೆ ಆರ್‌ಟಿಆರ್ 160 4ವಿ ಬೈಕ್‌ಗಳನ್ನು ಅಭಿವೃದ್ಧಿ ಮಾಡಲಾಗಿದೆ.

ಹೊಸ ಟಿವಿಎಸ್ ಅಪಾಚೆ ಆರ್‍‍ಟಿಆರ್ ಬೈಕ್ ಬಗ್ಗೆ ನಿಮಗೆಷ್ಟು ಗೊತ್ತು.?

ಕ್ರಾಬ್ ಫ್ರಂಟ್ ಡಿಸ್ಕ್ ಬ್ರೇಕ್, ಕ್ರಾಬ್ ರಿರ್ ಡಿಸ್ಕ್ ಬ್ರೇಕ್ ಮತ್ತು ಫ್ಯೂಲ್ ಇಂಜೆಕ್ಷೆಡ್ ರಿರ್ ಡಿಸ್ಕ್ ಬ್ರೇಕ್ ಎಂಬ ಮೂರು ವಿಧಗಳಲ್ಲಿ ಆರ್‌ಟಿಆರ್ 160 4ವಿ ಬೈಕ್‌ಗಳು ದೊರೆಯಲಿದೆ.

ಹೊಸ ಟಿವಿಎಸ್ ಅಪಾಚೆ ಆರ್‍‍ಟಿಆರ್ ಬೈಕ್ ಬಗ್ಗೆ ನಿಮಗೆಷ್ಟು ಗೊತ್ತು.?

ಅಪಾಚೆ ಆರ್‌ಟಿಆರ್ 160 4ವಿ ಬೈಕ್‌ಗಳು ಕಮ್ಯುಟರ್ ಬೈಕ್ ಸವಾರಿಗೆ ಹೊಸ ಚಾಲನಾ ಅನುಭವ ನೀಡಲಿದ್ದು, ಕ್ರಾಬ್ ಫ್ರಂಟ್ ಡಿಸ್ಕ್ ಬ್ರೇಕ್ ಮಾದರಿಯು ರೂ. 81.490 ಬಿಡುಗಡೆಯಾದರೇ ಕ್ರಾಬ್ ರಿರ್ ಡಿಸ್ಕ್ ಬ್ರೇಕ್ ಮಾದರಿಯು ರೂ. 84,490ಕ್ಕೆ ಮತ್ತು ಫ್ಯೂಲ್ ಇಂಜೆಕ್ಷೆಡ್ ರಿರ್ ಡಿಸ್ಕ್ ಬ್ರೇಕ್ ಮಾದರಿಯು ರೂ. 89,990ಕ್ಕೆ ಖರೀದಿಗೆ ಲಭ್ಯವಾಗಿವೆ.

ಹೊಸ ಟಿವಿಎಸ್ ಅಪಾಚೆ ಆರ್‍‍ಟಿಆರ್ ಬೈಕ್ ಬಗ್ಗೆ ನಿಮಗೆಷ್ಟು ಗೊತ್ತು.?

ಎಂಜಿನ್ ವೈಶಿಷ್ಟ್ಯತೆ

ನ್ಯೂ ಜನರೇಷನ್ ವಿನ್ಯಾಸಗಳನ್ನು ಹೊಂದಿರುವ ಅಪಾಚೆ ಆರ್‌ಟಿಆರ್ 160 4ವಿ ಬೈಕ್‌ಗಳು 159.7 ಸಿಸಿ ಸಿಂಗಲ್ ಸಿಲಿಂಡರ್ 4 ವಾಲ್ವೆ ಏರ್ ಕೂಲ್ಡ್ ಎಂಜಿನ್‌ ಜೋಡಣೆ ಪಡೆದಿದ್ದು, ಫ್ಯುಯಲ್ ಇಂಜೆಕ್ಟೆಡ್ ವೇರಿಯಂಟ್‍ಗಳು 16.56-ಬಿಹೆಚ್‍ಪಿ ಮತ್ತು ಕಾರ್ಬ್ಯುರೇಟೆಡ್ ವೇರಿಯಂಟ್‍ಗಳು 16.28-ಬಿಹೆಚ್‍ಪಿ ಹಾಗು 14.8-ಎನ್ಎಂ ಟಾರ್ಕ್ ಉತ್ಪಾದಿಸಬಲ್ಲ ಈ ಎಂಜಿನ್‍ಗಳನ್ನು 5 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಹೊಸ ಟಿವಿಎಸ್ ಅಪಾಚೆ ಆರ್‍‍ಟಿಆರ್ ಬೈಕ್ ಬಗ್ಗೆ ನಿಮಗೆಷ್ಟು ಗೊತ್ತು.?

ಇದಲ್ಲದೆ ಅಪಾಚೆ ಆರ್‌ಟಿಆರ್ 160 4ವಿ ಬೈಕ್ ಗಂಟೆಗೆ 114 ಕಿಲೋಮೀಟರ್ ಚಲಿಸಬಲ್ಲ ಟಾಪ್ ಸ್ಪೀಡ್ ಹೊಂದಿದ್ದು, ಇಎಫ್ಐ ವೇರಿಯಂಟ್ ಬೈಕುಗಳು ಗಂಟೆಗೆ 113 ಕಿಲೋಮೀಟರ್ ಚಲಿಸಬಲ್ಲ ಸಾಮರ್ಥ್ಯವನ್ನು ಪಡೆದಿರಲಿದೆ. ಹಾಗೆಯೇ ಈ ಬೈಕ್ 4.8 ಸೆಕೆಂಡಿಗೆ 0-60 ಕಿಲೋಮೀಟರ್ ಮತ್ತು 16 ಸೆಕೆಂಡುಗಳಿಗೆ 0-100 ಕಿಲೋಮೀಟರ್ ಆಕ್ಸಿಲರೇಟ್ ಮಾಡಬಹುದಾದ ಶಕ್ತಿಯನ್ನು ಪಡೆದಿದೆ.

ಹೊಸ ಟಿವಿಎಸ್ ಅಪಾಚೆ ಆರ್‍‍ಟಿಆರ್ ಬೈಕ್ ಬಗ್ಗೆ ನಿಮಗೆಷ್ಟು ಗೊತ್ತು.?

ಇನ್ನು ಅಪಾಚೆ ಆರ್‌ಟಿಆರ್ 160 4ವಿ ಬೈಕ್ 160ಸಿಸಿ ಬೈಕ್ ಆಗಿದ್ದು, ಪ್ರತೀ ಲೀಟರ್‍‍ಗೆ 40 ರಿಂದ 45 ಕಿಲೋಮೀಟರ್ ಮೈಲೇಜ್ ಅನ್ನು ನೀಡಲಿದೆ. ಹಾಗೆಯೇ 12 ಲೀಟರ್ ಫ್ಯುಯಲ್ ಟ್ಯಾಂಕ್ ಅನ್ನು ಪಡೆದುಕೊಂಡಿದೆ.

ಹೊಸ ಟಿವಿಎಸ್ ಅಪಾಚೆ ಆರ್‍‍ಟಿಆರ್ ಬೈಕ್ ಬಗ್ಗೆ ನಿಮಗೆಷ್ಟು ಗೊತ್ತು.?

ಪೆರೆಲ್ಲಿ ಟೈರ್ಸ್

ಹೊಸ ಆರ್‌ಟಿಆರ್ 160 4ವಿ ಬೈಕ್‌ಗಳಲ್ಲಿ ಅತ್ಯುತ್ತಮ ಶ್ರೇಣಿಯ ಪೆರೆಲ್ಲಿ ಟೈರ್‌ಗಳನ್ನು ಬಳಕೆ ಮಾಡಲಾಗಿದ್ದು, 90/90 ಮತ್ತು 130/70 ರಬ್ಬರ್ ಮಾದರಿಯೊಂದಿಗೆ 17 ಇಂಚಿನ ಅಲಾಯ್ ಚಕ್ರಗಳನ್ನು ಒದಗಿಸಲಾಗಿದೆ.

ಹೊಸ ಟಿವಿಎಸ್ ಅಪಾಚೆ ಆರ್‍‍ಟಿಆರ್ ಬೈಕ್ ಬಗ್ಗೆ ನಿಮಗೆಷ್ಟು ಗೊತ್ತು.?

ಬ್ರೇಕಿಂಗ್ ಸಿಸ್ಟಂ

ಅಪಾಚೆ ಆರ್‌ಟಿಆರ್ 160 4ವಿ ಬೈಕ್ ಮುಂಭಾಗದ ಚಕ್ರಗಳಲ್ಲಿ ಟೆಲೆಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂಭಾಗದ ಚಕ್ರಗಳಲ್ಲಿ ಮೊನೊ ಸಸ್ಷೆಷನ್ ಹೊಂದಿದ್ದು, 270ಎಂಎಂ ಪೆಟಲ್ ಡಿಸ್ಕ್ ಬ್ರೇಕ್ ಮತ್ತು 200ಎಂಎಂ ರಿರ್ ಡಿಸ್ಕ್ ಬ್ರೇಕ್‌ ಅಳವಡಿಕೆಯೊಂದಿಗೆ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದೆ.

ಹೊಸ ಟಿವಿಎಸ್ ಅಪಾಚೆ ಆರ್‍‍ಟಿಆರ್ ಬೈಕ್ ಬಗ್ಗೆ ನಿಮಗೆಷ್ಟು ಗೊತ್ತು.?

ಬೈಕಿನ ವೈಶಿಷ್ಟ್ಯತೆಗಳು

ಹೊಸದಾಗಿ ಬಿಡುಗಡೆಗೊಂಡ ಅಪಾಚೆ ಆರ್‌ಟಿಆರ್ 160 4ವಿ ಬೈಕ್ ಡಿಜಿಟಲ್ ಇನ್ಸ್ಟೂಮೆಂಟ್ ಕ್ಲಸ್ಟರ್, ಎಂಜಿನ್ ಬೆಲ್ಲಿ ಪ್ಯಾನ್, ಎಲ್ಇಡಿ ಡಿಆರ್‍ಎಲ್, ಎಲ್ಇಡಿ ಟೈಲ್ ಲೈಟ್, ರ್‍ಯಾಮ್ ಎರ್ ಇಂಟೇಕ್ ಮತ್ತು ಹೊಸ ಸಿಂಗಲ್ ಪೀಸ್ ಹ್ಯಾಂಡಲ್‍ಬಾರ್‍ ಅನ್ನು ಅಳವಡಿಸಲಾಗಿದೆ.

ಹೊಸ ಟಿವಿಎಸ್ ಅಪಾಚೆ ಆರ್‍‍ಟಿಆರ್ ಬೈಕ್ ಬಗ್ಗೆ ನಿಮಗೆಷ್ಟು ಗೊತ್ತು.?

ಲಭ್ಯವಿರುವ ಬಣ್ಣಗಳು

ರೆಡ್ ರೇಸಿಂಗ್, ಮೆಟಾಲಿಕ್ ಬ್ಲೂ ಮತ್ತು ನೈಟ್ ಬ್ಲಾಕ್ ಬಣ್ಣಗಳಲ್ಲಿ ಅಪಾಚೆ ಆರ್‌ಟಿಆರ್ 160 4ವಿ ಬೈಕ್‌ಗಳು ಖರೀದಿಗೆ ಲಭ್ಯವಿವೆ.

ಹೊಸ ಟಿವಿಎಸ್ ಅಪಾಚೆ ಆರ್‍‍ಟಿಆರ್ ಬೈಕ್ ಬಗ್ಗೆ ನಿಮಗೆಷ್ಟು ಗೊತ್ತು.?

ಟಿವಿಎಸ್ ಅಪಾಚೆ ಆರ್‌ಟಿಆರ್ 160 4ವಿ ಬೈಕ್‍ಗಳು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ 81,490 ಸಾವಿರಕ್ಕೆ ನಿಗದಿಪಡಿಸಲಾಗಿದ್ದು, ಬೈಕಿನ ಖರೀದಿಗಾಗಿ ಮುಂಗಡವಾಗಿ ರೂ 10,000 ಸಾವಿರವನ್ನು ನಿಮ್ಮ ಹತ್ತಿರದ ಟಿವಿಎಸ್ ಡೀಲರ್‍‍ಗಳ ಹತ್ತಿರ ಪಾವತಿ ಮಾಡಿದಲ್ಲಿ, ಬುಕ್ಕಿಂಗ್ ಮಾಡಿದ ಎರಡು ದಿನಗಳಲ್ಲಿ ನಿಮಗೆ ಡೆಲಿವರಿ ನೀಡಲಾಗುತ್ತದೆ.

ಹೊಸ ಟಿವಿಎಸ್ ಅಪಾಚೆ ಆರ್‍‍ಟಿಆರ್ ಬೈಕ್ ಬಗ್ಗೆ ನಿಮಗೆಷ್ಟು ಗೊತ್ತು.?

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

1. ಸೇಕೆಂಡ್ ಹ್ಯಾಂಡ್ ಕಾರು ಖರೀದಿಸುವಾಗ ಈ ವಿಚಾರಗಳನ್ನು ತಪ್ಪದೇ ತಿಳಿಯಿರಿ..

2. ನಟ ಅಕ್ಷಯ್ ಕುಮಾರ್ ಮೋಡಿ ಮಾಡಿದ ಆ ಹೊಸ ಕಾರು ಯಾವುದು ಗೊತ್ತಾ?

3. ಹೊಸ ಕಾರುಗಳ ಉತ್ಪಾದನೆಗಾಗಿ ಒಂದಾದ ಟೊಯೊಟಾ ಮತ್ತು ಸುಜುಕಿ ಮೋಟಾರ್ಸ್

4. ಇನ್ಮುಂದೆ ರಾಂಗ್ ರೂಟ್‌ನಲ್ಲಿ ಹೋದ್ರೆ ನಿಮ್ಮ ವಾಹನಗಳ ಕಥೆ ಅಷ್ಟೇ..

5. ಗ್ರಾಹಕರೇ ಎಚ್ಚರ- ಬೈಕ್ ಖರೀದಿಸುವ ಪ್ಲ್ಯಾನ್ ಇದ್ರೆ ಇತ್ತ ಗಮನಹರಿಸಿ..

Most Read Articles

Kannada
Read more on apache
English summary
2018 TVS Apache RTR 160 4V: All You Need To Know About India’s Track-Ready Commuter Bike.
Story first published: Saturday, March 31, 2018, 10:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X