ನಟ ಅಕ್ಷಯ್ ಕುಮಾರ್ ಮೋಡಿ ಮಾಡಿದ ಆ ಹೊಸ ಕಾರು ಯಾವುದು ಗೊತ್ತಾ?

Written By:

ಬಾಲಿವುಡ್ ಅಂಗಳದಲ್ಲಿ ತಮ್ಮದೇ ಆದ ನಟನಾ ಶೈಲಿಯೊಂದಿಗೆ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ನಟ ಅಕ್ಷಯ್ ಕುಮಾರ್ ಕೇವಲ ನಟನೆಯಲ್ಲಿ ಅಷ್ಟೇ ಅಲ್ಲದೇ ಮೋಟಾರ್ ಸ್ಪೋರ್ಟ್ ಕುರಿತು ಸಾಕಷ್ಟು ಕ್ರೇಜ್ ಹೊಂದಿದ್ದಾರೆ. ಹೀಗಾಗಿಯೇ ಅವರ ಬಳಿ ಕೋಟಿ ಬೆಲೆಬಾಳುವ ಹತ್ತಾರು ಕಾರುಗಳ ಸಂಗ್ರಹವೇ ಇದ್ದು, ಇದೀಗ ಮತ್ತೊಂದು ಹೊಸ ಕಾರು ಖರೀದಿಸಿ ಸುದ್ದಿಯಾಗಿದ್ದಾರೆ.

ನಟ ಅಕ್ಷಯ್ ಕುಮಾರ್ ಮೋಡಿ ಮಾಡಿದ ಆ ಹೊಸ ಕಾರು ಯಾವುದು ಗೊತ್ತಾ?

ನಿಮಗೆಲ್ಲಾ ಗೊತ್ತಿರುವ ಹಾಗೆ ನಟ ಅಕ್ಷಯ್ ಕುಮಾರ್ ಬಳಿ ಈಗಾಗಲೇ ಪೊರ್ಷೆ ಕಯೆನ್, ರೇಂಜ್ ರೋವರ್, ಮರ್ಸಿಡಿಸ್ ಬೆಂಝ್, ಹೋಂಡಾ ಸಿಆರ್-ವಿ ಸೇರಿದಂತೆ ಹತ್ತಾರು ದುಬಾರಿ ಕಾರುಗಳನ್ನು ಹೊಂದಿದ್ದು, ಈ ಬಾರಿ ಭಾರತದಲ್ಲೇ ಪ್ರಥಮವಾಗಿ ಸಿದ್ದವಾಗಿರುವ ಮೆಡ್ ಇನ್ ಇಂಡಿಯಾ ವೈಶಿಷ್ಟ್ಯತೆಯ ಜೀಪ್ ಕಂಪಾಸ್‌ಗೆ ಫಿದಾ ಆಗಿದ್ದಾರೆ.

ನಟ ಅಕ್ಷಯ್ ಕುಮಾರ್ ಮೋಡಿ ಮಾಡಿದ ಆ ಹೊಸ ಕಾರು ಯಾವುದು ಗೊತ್ತಾ?

ಹೌದು, ನಟ ಅಕ್ಷಮ್ ಕುಮಾರ್ ಈ ಬಾರಿ ಖರೀದಿಸಿದ್ದು ಮೆಡ್ ಇನ್ ಇಂಡಿಯಾ ಖ್ಯಾತಿಯ ಹೊಸ ಜೀಪ್ ಕಂಪಾಸ್ ಎಸ್‌ಯುವಿ ಕಾರನ್ನು. ಅಕ್ಷಯ್ ಕುಮಾರ್ ಅವರೇ ಹೇಳಿರುವ ಪ್ರಕಾರ ಇದು ನಾನು ಇಷ್ಟ ಪಟ್ಟು ಖರೀದಿಸಿದ ಕೆಲವೇ ಕಾರುಗಳಲ್ಲಿ ಇದು ಕೂಡಾ ಒಂದು ಎಂದಿದ್ದಾರೆ.

ನಟ ಅಕ್ಷಯ್ ಕುಮಾರ್ ಮೋಡಿ ಮಾಡಿದ ಆ ಹೊಸ ಕಾರು ಯಾವುದು ಗೊತ್ತಾ?

ಇನ್ನೊಂದು ವಿಶೇಷ ಅಂದ್ರೆ ಇದು ಯಾವುದೇ ರೀತಿ ಕಾರು ಮಾರಾಟ ಗಿಮಿಕ್ ಅಲ್ಲವೇ ಅಲ್ಲ ಎನ್ನಲಾಗಿದ್ದು, ಮಧ್ಯಮ ಗಾತ್ರದ ಎಸ್‌ಯುವಿಗಳಲ್ಲಿ ಭಾರೀ ಸದ್ದು ಮಾಡುತ್ತಿರುವ ಜೀಪ್ ಕಂಪಾಸ್‌ಗೆ ಖರೀದಿ ಬಗೆಗೆ ನಟ ಅಕ್ಷಯ್ ಕುಮಾರ್ ಖುಷಿ ವ್ಯಕ್ತಪಡಿಸಿದ್ದಾರೆ.

ನಟ ಅಕ್ಷಯ್ ಕುಮಾರ್ ಮೋಡಿ ಮಾಡಿದ ಆ ಹೊಸ ಕಾರು ಯಾವುದು ಗೊತ್ತಾ?

ಆದ್ರೆ, ಅಕ್ಷಯ್ ಕುಮಾರ್ ಖರೀದಿಸಿದ ಜೀಪ್ ಕಂಪಾಸ್ ಯಾವ ಮಾಡೆಲ್ ಖರೀದಿ ಮಾಡಿದ್ದಾರೆ ಎಂಬ ನಿಖರ ಮಾಹಿತಿ ಲಭ್ಯವಾಗಿಲ್ಲವಾದರೂ ಟಾಪ್ ಸ್ಪೆಕ್ ಹೊಂದಿರುವ ಪೆಟ್ರೋಲ್ ಆವೃತ್ತಿಯನ್ನು ಖರೀದಿ ಮಾಡಿರಬಹುದು ಎಂದು ಹೇಳಲಾಗಿದೆ.

ನಟ ಅಕ್ಷಯ್ ಕುಮಾರ್ ಮೋಡಿ ಮಾಡಿದ ಆ ಹೊಸ ಕಾರು ಯಾವುದು ಗೊತ್ತಾ?

ಸದ್ಯ ಮಾರುಕಟ್ಟೆಯಲ್ಲಿ ವಿವಿಧ ಮಾದರಿಗಳಿಗೆ ಅನುಗುಣವಾಗಿ ರೂ.16 ಲಕ್ಷದಿಂದ ರೂ.22 ಲಕ್ಷ ಬೆಲೆ ಹೊಂದಿರುವ ಜೀಪ್ ಕಂಪಾಸ್ ಕಾರುಗಳು ಮೆಡ್ ಇನ್ ಇಂಡಿಯಾ ಖ್ಯಾತಿಯೊಂದಿಗೆ ಪೂರ್ಣ ಪ್ರಮಾಣದಲ್ಲಿ ಭಾರತದಲ್ಲೇ ನಿರ್ಮಾಣವಾದ ಜೀಪ್ ಸಂಸ್ಥೆಯ ಮೊದಲ ಕಾರು ಆವೃತ್ತಿಯಾಗಿದೆ.

ನಟ ಅಕ್ಷಯ್ ಕುಮಾರ್ ಮೋಡಿ ಮಾಡಿದ ಆ ಹೊಸ ಕಾರು ಯಾವುದು ಗೊತ್ತಾ?

ಡೀಸೆಲ್ ಮತ್ತು ಪೆಟ್ರೋಲ್ ಎರಡು ಆವೃತ್ತಿಯಲ್ಲಿ ಲಭ್ಯವಿರುವ ಜೀಪ್ ಕಂಪಾಸ್, ಡೀಸೇಲ್ ಆವೃತ್ತಿಯಲ್ಲಿ 2.0-ಲೀಟರ್ ಟರ್ಬೋ ಮತ್ತು ಪೆಟ್ರೋಲ್ ಆವೃತ್ತಿಯಲ್ಲಿ 1.4-ಲೀಟರ್ ಟರ್ಬೋ ಎಂಜಿನ್ ಪಡೆದುಕೊಂಡಿದೆ.

ನಟ ಅಕ್ಷಯ್ ಕುಮಾರ್ ಮೋಡಿ ಮಾಡಿದ ಆ ಹೊಸ ಕಾರು ಯಾವುದು ಗೊತ್ತಾ?

ಹಿಂದೆಂದಿಗಿಂತಲೂ ಉತ್ತಮ ವಿನ್ಯಾಸಗಳನ್ನು ಹೊಚ್ಚ ಹೊಸ ಜೀಪ್ ಕಂಪಾಸ್ ಪಡೆದುಕೊಂಡಿದ್ದು, ಎಲ್ಇಡಿ ಟೈಲ್ ಲ್ಯಾಂಪ್‌ಗಳ ಮೇಲೆ ದೊಡ್ಡದಾದ ಜೀಪ್ ಬ್ಯಾಡ್ಜ್‌ಗಳನ್ನು ಪಡೆದುಕೊಂಡಿರುವುದು ಮತ್ತಷ್ಟು ಆಕರ್ಷಣೆಗೆ ಕಾರಣವಾಗಿದೆ.

ನಟ ಅಕ್ಷಯ್ ಕುಮಾರ್ ಮೋಡಿ ಮಾಡಿದ ಆ ಹೊಸ ಕಾರು ಯಾವುದು ಗೊತ್ತಾ?

ಕಪ್ಪು ಬಣ್ಣದ ಡ್ಯಾಶ್‌ಬೋರ್ಡ್, ಆಫ್ ವೈಟ್ ಬಣ್ಣದೊಂದಿಗೆ ಕೂಡಿದ ಸೀಟುಗಳು ಮತ್ತು ಮೇಲ್ಛಾವಣೆ, ಅತ್ಯುತ್ತಮ ಆಸನ ವ್ಯವಸ್ಥೆ, ಹಿಂಭಾಗದ ಸೀಟಿನ ಮಧ್ಯದ ಆರ್ಮ್ ರೆಸ್ಟ್, 5-ಇಂಚಿನ ಟಚ್ ಸ್ಕ್ರಿನ್ ಇನ್ಪೋಟೈನ್‌ಮೆಂಟ್ ಸಿಸ್ಟಂ, ಕಾರ್ ಪ್ಲೇ, ಆಂಡ್ರಾಯಿಡ್ ಆಟೋ, ಯುಎಸ್‌ಬಿ ಸೇರಿದಂತೆ ಪ್ರಸ್ತುತ ಸೌಲಭ್ಯಗಳನ್ನು ಹೊಂದಿದೆ.

ನಟ ಅಕ್ಷಯ್ ಕುಮಾರ್ ಮೋಡಿ ಮಾಡಿದ ಆ ಹೊಸ ಕಾರು ಯಾವುದು ಗೊತ್ತಾ?

ಇದರೊಂದಿಗೆ ಜೀಪ್ ಕಂಪಾಸ್ ಮಾದರಿಗಳಲ್ಲಿ ಸುರಕ್ಷತೆಗೂ ಹೆಚ್ಚಿನ ಆದ್ಯತೆ ನೀಡಲಾಗಿದ್ದು, 6 ಏರ್‌ಬ್ಯಾಗ್, ಡ್ಯುಯಲ್ ಸ್ಟೇಜ್ ಆಕ್ಟಿವೇಷನ್, ಟಿಸಿಎಸ್, ಇಬಿಡಿ, ಇಎಸ್‌ಪಿ ಮತ್ತು ಎಬಿಎಸ್ ತಂತ್ರಜ್ಞಾನಗಳ ಜೋಡಣೆ ಮಾಡಲಾಗಿದೆ.

ನಟ ಅಕ್ಷಯ್ ಕುಮಾರ್ ಮೋಡಿ ಮಾಡಿದ ಆ ಹೊಸ ಕಾರು ಯಾವುದು ಗೊತ್ತಾ?

ಹೀಗಾಗಿಯೇ ಕೇವಲ ಅಕ್ಷಯ್ ಕುಮಾರ್ ಅಷ್ಟೇ ಅಲ್ಲದೇ ಕಳೆದ ತಿಂಗಳ ಹಿಂದಷ್ಟೇ ನಟರಾದ ಸುದೀಪ್, ಸೈಫ್ ಅಲಿಖಾನ್ ಮತ್ತು ನಟಿ ಜಾಕ್ವೆಲಿನ್ ಫರ್ನಾಂಡಿಸ್ ಕೂಡಾ ಹೊಸ ಜೀಪ್ ಕಂಪಾಸ್ ಕಾರುಗಳನ್ನು ಖರೀದಿಸಿದ್ದು, ಎಸ್‌ಯುವಿ ವಿಭಾಗದಲ್ಲಿ ಸದ್ಯ ಜೀಪ್ ಕಂಪಾಸ್ ಹೊಸ ಡಿಮ್ಯಾಂಡ್ ಹುಟ್ಟುಹಾಕುತ್ತಿದೆ ಎನ್ನಬಹುದು.

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

ನಟ ಸುದೀಪ್ ಹೊಸ ಜೀಪ್ ಕಂಪಾಸ್ ಖರೀದಿಸಿದ್ದು ಯಾರಿಗಾಗಿ ಗೊತ್ತಾ?

ಟರ್ಬನ್ ಬಣ್ಣಕ್ಕೆ ತಕ್ಕಂತೆ ಬದಲಾಗುತ್ತೆ ಈ ಉದ್ಯಮಿಯ ರೋಲ್ಸ್ ರಾಯ್ಸ್ ಕಾರುಗಳ ಗಮ್ಮತ್ತು....

ರೀ ಸೇಲ್ ಮೌಲ್ಯವಿಲ್ಲದ ಈ ಕಾರುಗಳನ್ನು ಖರೀದಿ ಮಾಡುವ ಮುನ್ನ 10 ಬಾರಿ ಯೋಚಿಸಿ...

ಯಾಕ್ರಿ ಲಂಚ ಕೊಡ್ತಿರಾ? ಇನ್ಮುಂದೆ ಸುಲಭದಲ್ಲೇ ಸಿಗಲಿದೆ ಡ್ರೈವಿಂಗ್ ಲೈಸೆನ್ಸ್..!!

ಬೆಂಗಳೂರಿನ ಪ್ರತಿಷ್ಠಿತ ಮಾರುತಿ ಸರ್ವಿಸ್ ಸ್ಟೇಷನ್ ಕರ್ಮಕಾಂಡ ಬಯಲು ಮಾಡಿದ ಗ್ರಾಹಕ !! ವಿಡಿಯೋ

Read more on celebrity cars jeep
English summary
Bollywood Star Akshay Kumar’s New Ride Is A Jeep Compass SUV.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark