ತಪಾಸಣೆ ವೇಳೆ ಹಿಂಬದಿ ಬೈಕ್ ಸವಾರರ ಹೆಲ್ಮೆಟ್ ಒಡೆದು ಹಾಕಿದ ಟ್ರಾಫಿಕ್ ಪೊಲೀಸ್..!

ಬೈಕ್ ಸವಾರಿ ವೇಳೆ ಉತ್ತಮ ಗುಣಮಟ್ಟದ ಹೆಲ್ಮೆಟ್ ಬಳಕೆಯ ಬಗೆಗೆ ಎಷ್ಟೇ ಜಾಗೃತಿ ಅಭಿಯಾನಗಳನ್ನು ಕೈಗೊಂಡರು ಸಹ ಕೆಲವರು ಮಾತ್ರ ಟ್ರಾಫಿಕ್ ಪೊಲೀಸರಿಂದ ತಪ್ಪಿಸಿಕೊಳ್ಳಲು ರಸ್ತೆ ಬದಿ ಸಿಗುವ ರೂ.100 ಗೆ ಸಿಗುವ ಕಳಪೆ ಹೆಲ್ಮೆಟ್‌ಗಳನ್ನೆ ಬಳಕೆ ಮಾಡುತ್ತಿದ್ದಾರೆ. ಇದರಿಂದ ಅಭಿಯಾನಗಳನ್ನು ಮಾಡಿದ್ರೆ ಬದಲಾವಣೆ ಆಗದು ಎಂದು ಅರಿತಿರುವ ಪೊಲೀಸರು ಇದೀಗ ಹೊಸ ರೀತಿಯ ಪ್ರಯೋಗಕ್ಕೆ ಮುಂದಾಗಿದ್ದಾರೆ.

ತಪಾಸಣೆ ವೇಳೆ ಹಿಂಬದಿ ಬೈಕ್ ಸವಾರರ ಹೆಲ್ಮೆಟ್ ಒಡೆದು ಹಾಕಿದ ಟ್ರಾಫಿಕ್ ಪೊಲೀಸ್..!

ಹೆಲ್ಮೆಟ್ ಬಳಕೆ ಮಾಡುವುದು ಯಾಕೆ ಹೇಳಿ? ಅದು ನಮ್ಮ ರಕ್ಷಣೆಗಾಗಿಯೇ ಇದೆಯೇ ಹೊರತು ಬೇರೆಯವರಿಗಲ್ಲ. ಕೇವಲ ದಂಡದಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ಹೆಲ್ಮೆಟ್ ಬಳಕೆ ಮಾಡಿದರೂ ಸಹ ಅದು ಆಗಬಹುದಾದ ದುರಂತಗಳಿಂದ ನಮ್ಮನ್ನು ಪಾರು ಮಾಡಬಲ್ಲದು. ಹೀಗಾಗಿ ಕಳಪೆ ಗುಣಮಟ್ಟದ ಹೆಲ್ಮೆಟ್‌ಗಳನ್ನು ಬಿಟ್ಟು ಗುಣಮಟ್ಟದ ಹೆಲ್ಮೆಟ್‌ಗಳನ್ನು ಬಳಕೆ ಮಾಡುವಂತೆ ಹೊಸದೊಂದು ಅಭಿಯಾನ ಕೈಗೊಂಡಿರುವ ದೆಹಲಿ ಪೊಲೀಸರು ದ್ವಿಚಕ್ರ ವಾಹನ ಸವಾರರಿಗೆ ಶಾಕಿಂಗ್ ಜೊತೆ ಸರ್ಫೈಸ್ ಗಿಫ್ಟ್ ಕೂಡಾ ಕೊಡುತ್ತಿದ್ದಾರೆ.

ತಪಾಸಣೆ ವೇಳೆ ಹಿಂಬದಿ ಬೈಕ್ ಸವಾರರ ಹೆಲ್ಮೆಟ್ ಒಡೆದು ಹಾಕಿದ ಟ್ರಾಫಿಕ್ ಪೊಲೀಸ್..!

ಅಪಘಾತಗಳ ಸಂದರ್ಭದದಲ್ಲಿ ಬೈಕ್ ಸವಾರರಿಗೆ ಸುರಕ್ಷತೆ ಸಿಗಲಿ ಎನ್ನುವ ಉದ್ದೇಶದಿಂದ ಕಡ್ಡಾಯವಾಗಿ ಹೆಲ್ಮೆಟ್ ಬಳಕೆ ಮಾಡುವಂತೆ ದೇಶದ ಪ್ರತಿ ನಗರದಲ್ಲೂ ಸೂಕ್ತ ಕ್ರಮ ಕೈಗೊಳ್ಳುತ್ತಿರುವ ಟ್ರಾಫಿಕ್ ಪೊಲೀಸರು, ಹೆಲ್ಮೆಟ್ ಬಳಕೆ ಮಾಡದ ಸವಾರರನ್ನು ಹಿಡಿದು ದಂಡ ವಸೂಲಿ ಮಾಡುತ್ತಿದ್ದಾರೆ.

ತಪಾಸಣೆ ವೇಳೆ ಹಿಂಬದಿ ಬೈಕ್ ಸವಾರರ ಹೆಲ್ಮೆಟ್ ಒಡೆದು ಹಾಕಿದ ಟ್ರಾಫಿಕ್ ಪೊಲೀಸ್..!

ಇದಲ್ಲದೇ ಕಳಪೆ ಗುಣಮಟ್ಟದ ಹೆಲ್ಮೆಟ್‌ಗಳ ಉತ್ಪಾದನೆ ಮತ್ತು ಮಾರಾಟವನ್ನು ಸಂಪೂರ್ಣವಾಗಿ ತಡೆಯುವ ಉದ್ದೇಶದಿಂದ ತಳಮಟ್ಟದಿಂದಲೇ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿರುವ ಕೇಂದ್ರ ಸರ್ಕಾರವು ಮೊದಲು ನಕಲಿ ಐಎಸ್ಐ ಹೆಲ್ಮೆಟ್‌ಗಳನ್ನು ಉತ್ಪಾದನೆ ಮಾಡುವವರ ವಿರುದ್ಧ ಕಠಿಣ ಕ್ರಮ ಜಾರಿಗೆ ತರುತ್ತಿದೆ.

ತಪಾಸಣೆ ವೇಳೆ ಹಿಂಬದಿ ಬೈಕ್ ಸವಾರರ ಹೆಲ್ಮೆಟ್ ಒಡೆದು ಹಾಕಿದ ಟ್ರಾಫಿಕ್ ಪೊಲೀಸ್..!

ಸದ್ಯ ದೇಶಾದ್ಯಂತ ನಕಲಿ ಐಎಸ್ಐ ಹೆಲ್ಮೆಟ್ ಹಾವಳಿ ಹೆಚ್ಚಿದ್ದು, ರಸ್ತೆ ಬದಿಯಲ್ಲಿ ಅಗ್ಗದ ಬೆಲೆಗೆ ಲಭ್ಯವಿರುವ ಹೆಲ್ಮೆಟ್‌ಗಳು ಬೈಕ್ ಸವಾರರನ್ನು ರಕ್ಷಣೆ ಮಾಡವುದಕ್ಕಿಂತ ಅವುಗಳ ಬಳಕೆಯಿಂದ ಅಪಾಯವೇ ಹೆಚ್ಚಾಗುತ್ತಿದೆ.

ತಪಾಸಣೆ ವೇಳೆ ಹಿಂಬದಿ ಬೈಕ್ ಸವಾರರ ಹೆಲ್ಮೆಟ್ ಒಡೆದು ಹಾಕಿದ ಟ್ರಾಫಿಕ್ ಪೊಲೀಸ್..!

ಹೀಗಾಗಿಯೇ ನಕಲಿ ಹೆಲ್ಮೆಟ್ ಬಳಸಬೇಡಿ ಎಂದು ಎಷ್ಟೇ ಮನವಿ ಮಾಡಿದ್ರು ಬಹುತೇಕ ಬೈಕ್ ಸವಾರರು ಮಾತ್ರ ಟ್ರಾಫಿಕ್ ಪೊಲೀಸರಿಂದ ದಂಡ ತಪ್ಪಿಸಿಕೊಳ್ಳಲು ಅಗ್ಗದ ಬೆಲೆಗೆ ಲಭ್ಯವಿರುವ ಹೆಲ್ಮೆಟ್‌ಗಳನ್ನೇ ಬಳಕೆ ಮಾಡುತ್ತಿರುವುದರಿಂದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತಿದೆ.

ತಪಾಸಣೆ ವೇಳೆ ಹಿಂಬದಿ ಬೈಕ್ ಸವಾರರ ಹೆಲ್ಮೆಟ್ ಒಡೆದು ಹಾಕಿದ ಟ್ರಾಫಿಕ್ ಪೊಲೀಸ್..!

ಇದರಿಂದ ವಿಭಿನ್ನ ರೀತಿಯಲ್ಲಿ ಕಾರ್ಯಾಚರಣೆ ಕೈಗೊಂಡಿರುವ ದೆಹಲಿ ಪೊಲೀಸರು ನಕಲಿ ಹೆಲ್ಮೆಟ್ ಧರಿಸುವ ಬೈಕ್ ಸವಾರರಿಗೆ ಸ್ಥಳದಲ್ಲೇ ದಂಡ ವಿಧಿಸಿ ಐಎಸ್ಐನಿಂದ ಅನುಮೋದನೆಗೊಂಡಿರುವ ಹೆಲ್ಮೆಟ್‌ಗಳನ್ನು ವಿತರಣೆ ಮಾಡುತ್ತಿದ್ದು, ಈ ವೇಳೆ ಬೈಕ್ ಹಿಂಬದಿಯಲ್ಲಿ ಕುಳಿತಿದ್ದ ಮಹಿಳೆಯೊಬ್ಬರ ಹೆಲ್ಮೆಟ್ ಅನ್ನು ಒಡೆದು ಹಾಕಿದ್ದಾರೆ.

ತಪಾಸಣೆ ವೇಳೆ ಹಿಂಬದಿ ಬೈಕ್ ಸವಾರರ ಹೆಲ್ಮೆಟ್ ಒಡೆದು ಹಾಕಿದ ಟ್ರಾಫಿಕ್ ಪೊಲೀಸ್..!

ಅಷ್ಟಕ್ಕೂ ಟ್ರಾಫಿಕ್ ಪೊಲೀಸರು ಹೆಲ್ಮೆಟ್ ಒಡೆದು ಹಾಕಿದ್ದಕ್ಕೆ ಒಂದು ಕಾರಣ ಕೂಡಾ ಇದೆ. ನಕಲಿ ಐಎಸ್ಐ ಹೆಲ್ಮೆಟ್ ಹಾಕಿದ್ದ ಆ ಮಹಿಳೆಗೆ ದಂಡ ಹಾಕಲು ಮುಂದಾದಾಗ ಪೊಲೀಸರ ಕ್ರಮವನ್ನು ಪ್ರಶ್ನಿಸಿದ್ದು, ಇದರಿಂದ ಅದೇ ಸ್ಥಳದಲ್ಲೇ ಹೆಲ್ಮೆಟ್ ಒಡೆದು ಹಾಕಿದ ಪೊಲೀಸರು ಹೆಲ್ಮೆಟ್‌ನ ಅಸಲಿ ಸತ್ಯವನ್ನು ಬಹಿರಂಗ ಮಾಡಿದ್ರು.

ತಪಾಸಣೆ ವೇಳೆ ಹಿಂಬದಿ ಬೈಕ್ ಸವಾರರ ಹೆಲ್ಮೆಟ್ ಒಡೆದು ಹಾಕಿದ ಟ್ರಾಫಿಕ್ ಪೊಲೀಸ್..!

ಯಾಕೆಂದ್ರೆ ಟ್ರಾಫಿಕ್ ಪೊಲೀಸರಿಂದ ದಂಡ ತಪ್ಪಿಸಿಕೊಳ್ಳುವ ಆ ಮಹಿಳೆ ರಸ್ತೆ ಬದಿ ಸಿಗುವ ಹೆಲ್ಮೆಟ್ ಧರಿಸಿದ್ದಳು. ಹೀಗಾಗಿ ಹೆಲ್ಮೆಟ್ ಅನ್ನು ನೆಲಕ್ಕೆ ಬಿಳಿಸಿ ಒಡೆದು ಹಾಕಿದ ಪೊಲೀಸರು ಇನ್ಮುಂದೆ ಇಂಥಹ ಹೆಲ್ಮೆಟ್‌ಗಳನ್ನು ಯಾವುದೇ ಕಾರಣಕ್ಕೂ ಬಳಸಬೇಡಿ ಮನವಿ ಮಾಡಿದ್ರು.

ತಪಾಸಣೆ ವೇಳೆ ಹಿಂಬದಿ ಬೈಕ್ ಸವಾರರ ಹೆಲ್ಮೆಟ್ ಒಡೆದು ಹಾಕಿದ ಟ್ರಾಫಿಕ್ ಪೊಲೀಸ್..!

ಮಹಿಳೆಗೆ ಸಿಕ್ತು ಸರ್ಫೈಸ್ ಗಿಫ್ಟ್

ಕಳಪೆ ಗುಣಮಟ್ಟದ ಹೆಲ್ಮೆಟ್ ವಿರುದ್ಧ ಜಾಗೃತಿ ಅಭಿಯಾನ ಕೈಗೊಂಡಿರುವ ದೆಹಲಿ ಪೊಲೀಸರು ಜನರಿಗೆ ಅರಿವು ಮೂಡಿಸುವುದಷ್ಟೇ ಅಲ್ಲ, ಉಚಿತವಾಗಿ ಐಎಸ್ಐ ಮುದ್ರಿತ ಹೆಲ್ಮೆಟ್‌ಗಳನ್ನು ವಿತರಣೆ ಮಾಡಿದ್ದು ವಿಶೇಷವಾಗಿತ್ತು.

MOST READ: ಕಾರು ಖರೀದಿಸಲು ಬಂದ ಮಹಿಳೆ ಮಾಡಿದ ಎಡವಟ್ಟಿನಿಂದ ಡೀಲರ್ಸ್ ಕಕ್ಕಾಬಿಕ್ಕಿ

ತಪಾಸಣೆ ವೇಳೆ ಹಿಂಬದಿ ಬೈಕ್ ಸವಾರರ ಹೆಲ್ಮೆಟ್ ಒಡೆದು ಹಾಕಿದ ಟ್ರಾಫಿಕ್ ಪೊಲೀಸ್..!

ಬೈಕ್ ಸವಾರರ ತಪಾಸಣೆಗೆ ನಿಂತಿದ್ದ ಪೊಲೀಸರ ಕ್ರಮವನ್ನು ಕಂಡು ಮೊದಮೊದಲು ಹೆದರಿಕೊಂಡಿದ್ದ ಮಹಿಳೆಗೆ ಪೊಲೀಸರ ನೀಡಿದ ಗಿಫ್ಟ್ ಕಂಡು ಅಚ್ಚರಿಗೊಂಡಿದ್ದಾರೆ. ಹೀಗಾಗಿ ಪ್ರತಿಯೊಬ್ಬರು ಕೂಡಾ ಪ್ರಾಣಕ್ಕೆ ಹಾನಿ ಉಂಟು ಮಾಡುವ ನಕಲಿ ಹೆಲ್ಮೆಟ್‌ಗಳನ್ನು ಬಿಟ್ಟು ತಲೆ ಕಾಯುವ ಐಎಸ್ಐ ಪ್ರಮಾಣಿಕೃತ ಹೆಲ್ಮೆಟ್‌ಗಳನ್ನೇ ಬಳಸಬೇಕಾಗಿದೆ.

ತಪಾಸಣೆ ವೇಳೆ ಹಿಂಬದಿ ಬೈಕ್ ಸವಾರರ ಹೆಲ್ಮೆಟ್ ಒಡೆದು ಹಾಕಿದ ಟ್ರಾಫಿಕ್ ಪೊಲೀಸ್..!

ಬದಲಾಗಲಿದೆ ಐಎಸ್ಐ ಹೆಲ್ಮೆಟ್ ವಿನ್ಯಾಸ.!

ಕೆಲವರಿಗೆ ಹೆಲ್ಮೆಟ್ ಹಾಕಿ ಬೈಕ್ ಓಡಿಸುವುದು ಅಂದ್ರೆ ತುಂಬಾನೇ ಅಲರ್ಜಿ ಅಂತಾ ಕಾಣುತ್ತೆ. ಇದಕ್ಕೆ ಹಲವಾರು ಕಾರಣಗಳನ್ನು ಕೊಡುವ ಕೆಲವು ಬೈಕ್ ಸವಾರರು ಕೆಜಿಗಟ್ಟಲೇ ತೂಕವಿರುವ ಹೆಲ್ಮೆಟ್‌ಗಳಿಂದ ಕೂದಲು ಉದುರುವಿಕೆ ಸೇರಿದಂತೆ ಹಲವು ಕಾರಣಗಳನ್ನು ನೀಡ್ತಾರೆ. ಆದ್ರೆ ಇದಕ್ಕೆಲ್ಲಾ ಇನ್ಮುಂದೆ ಚಿಂತಿಸಬೇಕಿಲ್ಲಾ.

MOST READ: ಹೋಂಡಾ ಆಕ್ಟೀವಾ ಸ್ಕೂಟರ್‌ಗಿಂತಲೂ ದುಬಾರಿ ಈ ಹೆಲ್ಮೆಟ್ ಬೆಲೆ..!

ತಪಾಸಣೆ ವೇಳೆ ಹಿಂಬದಿ ಬೈಕ್ ಸವಾರರ ಹೆಲ್ಮೆಟ್ ಒಡೆದು ಹಾಕಿದ ಟ್ರಾಫಿಕ್ ಪೊಲೀಸ್..!

ಕಳೆದ ಕೆಲ ತಿಂಗಳಿನಿಂದ ಐಎಸ್ಐ ಮಾನ್ಯತೆಯಿಲ್ಲದ ಹೆಲ್ಮೆಟ್ ಮಾರಾಟಕ್ಕೆ ಸಾಕಷ್ಟು ನಿರ್ಬಂಧಗಳನ್ನು ಹೇರುತ್ತಿದ್ದು, ಇದರ ಬೆನ್ನಲ್ಲೇ ಬೈಕ್ ಸವಾರರಿಗೆ ಅನೂಕಲಕರವಾಗುವ ಹೊಸ ನಮೂನೆಯ ಫುಲ್ ಫೇಸ್ ಹೆಲ್ಮೆಟ್‌ಗಳನ್ನು ಪರಿಚಯಿಸಲು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್(ಬಿಎಸ್ಐ) ಸಂಸ್ಥೆಯು ಒಪ್ಪಿಗೆ ಸೂಚಿಸಿದೆ.

ತಪಾಸಣೆ ವೇಳೆ ಹಿಂಬದಿ ಬೈಕ್ ಸವಾರರ ಹೆಲ್ಮೆಟ್ ಒಡೆದು ಹಾಕಿದ ಟ್ರಾಫಿಕ್ ಪೊಲೀಸ್..!

ಸದ್ಯ ಮೋಟಾರ್ ಕಾಯ್ದೆ ಸುರಕ್ಷಾ ನೀತಿ ಅನ್ವಯ ಐಎಸ್ಐ ಮುದ್ರಿತ ಹೆಲ್ಮೆಟ್‌ಗಳು 1.5 ಕೆ.ಜಿ ಸ್ಟ್ಯಾಂಡರ್ಡ್ ತೂಕವನ್ನು ಪಡೆದುಕೊಂಡಿದ್ದು, ಇದರಿಂದ ಕೆಲವು ಬೈಕ್ ಸವಾರರು ನಿಗದಿತ ಮಟ್ಟದಲ್ಲಿ ಹೆಲ್ಮೆಟ್ ಬಳಕೆ ಮಾಡುತ್ತಿಲ್ಲ ಎನ್ನುವ ಆರೋಪಗಳಿವೆ.

ತಪಾಸಣೆ ವೇಳೆ ಹಿಂಬದಿ ಬೈಕ್ ಸವಾರರ ಹೆಲ್ಮೆಟ್ ಒಡೆದು ಹಾಕಿದ ಟ್ರಾಫಿಕ್ ಪೊಲೀಸ್..!

ಇದರಿಂದ ಬೈಕ್ ಸವಾರರು ಹೆಲ್ಮೆಟ್ ಧರಿಸಲು ಅನುಕೂಲಕರವಾಗುವಂತೆ ಹೆಲ್ಮೆಟ್ ತೂಕವನ್ನು 1.2 ಕೆ.ಜಿಗೆ ಇಳಿಕೆ ಮಾಡಿದ್ದು, ಇದರಿಂದ ಬೈಕ್ ಸವಾರರು ಹೆಲ್ಮೆಟ್ ಧರಿಸಲು ಅನುಕೂಲಕರವಾಗುವುದಲ್ಲದೇ ಹೆಲ್ಮೆಟ್ ಗುಣಮಟ್ಟವನ್ನು ಕಾಯ್ದುಕೊಳ್ಳಲು ಸಹಕಾರಿಯಾಗಲಿದೆ ಎನ್ನಲಾಗಿದೆ.

Most Read Articles

Kannada
English summary
Delhi Police Constable Break Woman Pillion Rider's Helmet At A Traffic Signal-Video. Read in Kannada.
Story first published: Thursday, March 7, 2019, 15:36 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X