ಅನಾವರಣಗೊಂಡ ಬಿಎಸ್6 ಎಂಜಿನ್ ಆಧಾರಿತ ಹೋಂಡಾ ಆಕ್ಟೀವಾ 125

ರಾಷ್ಟ್ರದಲ್ಲಿ ಏಪ್ರಿಲ್ 2020ರ ನಂತರ ಮಾರಾಟವಾಗುವ ಎಲ್ಲಾ ವಾಹನಗಳು ಬಿಎಸ್6 ಎಂಜಿನ್ ಅನ್ನು ಹೊಂದಿರ ಬೇಕು ಎಂಬ ಆದೇಶವನ್ನು ಕೇಂದ್ರ ಸರ್ಕಾರವು ಆದೇಶಿಸಲಾಗಿದ್ದು, ವಾಹನ ತಾಯರಕ ಸಂಸ್ಥೆಗಳು ತಮ್ಮ ಜನಪ್ರಿಯ ವಾಹನಗಳಲ್ಲಿರುವ ಎಂಜಿನ್‍‍ಗಳನ್ನು ಮಾರ್ಪಾಡು ಮಾಡುವ ಕಾರ್ಯದಲ್ಲಿದೆ.

ಅನಾವರಣಗೊಂಡ ಬಿಎಸ್6 ಎಂಜಿನ್ ಆಧಾರಿತ ಹೋಂಡಾ ಆಕ್ಟೀವಾ 125

ಇತ್ತೀಚೆಗೆ ಹೀರೋ ಮೋಟೊಕಾರ್ಪ್ ಸಂಸ್ಥೆಯು ತಮ್ಮ ಜನಪ್ರಿಯ ಹೀರೋ ಸ್ಪ್ಲೆಂಡರ್ ಬೈಕಿಗೆ ಬಿಎಸ್-6 ಎಂಜಿನ್ ಅನ್ನು ಅಳವಡಿಸಿ, ದೇಶದಲ್ಲಿ ಬಿಎಸ್-6 ಎಂಜಿನ್ ಪಡೆದ ಮೊದಲ ದ್ವಿಚಕ್ರ ವಾಹನವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಹೀರೋ ಮೋಟೊಕಾರ್ಪ್ ಸಂಸ್ಥೆಗಿಂತಲೂ ಮುಂದೇಯೆ ಹೋಂಡಾ ಟೂ ವ್ಹೀಲರ್ ಸಂಸ್ಥೆಯು ಬಿಎಸ್-6 ಎಂಜಿನ್ ಆಧಾರಿತ ವಾಹನವನು ಬಿಡುಗಡೆಗೊಳಿಸುವುದಾಗಿ ಹೇಳಿಕೊಂಡಿತ್ತು.

ಅನಾವರಣಗೊಂಡ ಬಿಎಸ್6 ಎಂಜಿನ್ ಆಧಾರಿತ ಹೋಂಡಾ ಆಕ್ಟೀವಾ 125

ಇಂದು ಹೋಂಡಾ ಟೂ ವ್ಹೀಲರ್ ಸಂಸ್ಥೆಯು ತಮ್ಮ ಮೊದಲನೆಯ ಬಿಎಸ್-6 ಎಂಜಿನ್ ಆಧಾರಿತ ಸ್ಕೂಟರ್ ಅನ್ನು ಅನಾವಾರಣ ಮಾಡಿದ್ದು, ಹೋಂಡಾ ಆಕ್ಟೀವಾ 125 ಸಂಸ್ಥೆಯಲ್ಲಿನ ಮೊದಲ ಬಿಎಸ್-6 ಎಂಜಿನ್ ಅನ್ನು ಪಡೆದ ಸ್ಕೂಟರ್ ಆಗಿರಲಿದೆ. ಈ ಸ್ಕೂಟರ್ ಅನ್ನು ಯಾವಾಗ ಬಿಡುಗಡೆ ಮಾಡಲಿದೆ ಎಂದು ಇನ್ನು ಸರಿಯಾದ ಮಾಹಿತಿ ಲಭ್ಯವಾಗಿಲ್ಲ.

ಅನಾವರಣಗೊಂಡ ಬಿಎಸ್6 ಎಂಜಿನ್ ಆಧಾರಿತ ಹೋಂಡಾ ಆಕ್ಟೀವಾ 125

ಅನಾವರಣಗೊಂಡ ಬಿಎಸ್‍-6 ಎಂಜಿನ್ ಆಧಾರಿತ ಹೋಂಡಾ ಆಕ್ಟೀವಾ 125 ಸ್ಕೂಟರ್‍‍ನಲ್ಲಿ ಈ ಬಾರಿ ಇಂಧನವನ್ನು ಉಳಿಸಲು ಹೊಸ ಪದ್ದತಿಯನ್ನು ಅಳವಡಿಸಲಾಗಿದ್ದು, ಇದರಲ್ಲಿ ಹೊಸದಾಗಿ ನೀಡಿದ ಐಡಲಿಂಗ್ ಸ್ಟಾಪ್ ಸಿಟಂ ಟ್ರಾಫಿಕ್ ಸಮಯದಲ್ಲಿ ನಿಮ್ಮ ಇಂಧನವನ್ನು ಉಳಿಸುವಲ್ಲಿ ಸಹಕರಿಸುತ್ತದೆ.

ಅನಾವರಣಗೊಂಡ ಬಿಎಸ್6 ಎಂಜಿನ್ ಆಧಾರಿತ ಹೋಂಡಾ ಆಕ್ಟೀವಾ 125

ಹೊಸ ಹೋಂಡಾ 125 ಸ್ಕೂಟರ್‍‍ನ ಅಂದವನ್ನು ಹೆಚ್ಚಿಸಲು ಸ್ಕೂಟರ್‍‍ನ ಬಹುತೇಕ ಭಾಗಗಳಲ್ಲಿ ಕ್ರೋಮ್ ಅನ್ನು ನೀಡಲಾಗಿದ್ದು, ಎಲ್ಇಡಿ ಹೈಡ್‍ಲೈಟ್ ಹಾಗು ರಿಫ್ಲೆಕ್ಟರ್, ಟಾರ್ಕ್ ರಿಸೀವರ್, ಏಕ್ಸ್ಟರ್ನಲ್ ಫ್ಯುಯೆಲ್ ಲಿಡ್, ಮರು ವಿನ್ಯಾಸ ಮಾಡಲಾದ ರಿಯರ್ ಡಿಸೈನ್, ರಿಫ್ಲೆಕ್ಟರ್ ಫೆಂಡರ್, ಹೈ ಎಫಿಶಿಯೆನ್ಸಿ ಇಂಟೇಕ್ ಸ್ಟ್ರಕ್ಚರ್ ಒಳಗೊಂಡಂತೆ ಇನ್ನು ಹಲವಾರು ಗುರುತರ ಬದಲಾವಣೆಗಳನ್ನು ಕಾಣಬಹುದಾಗಿದೆ.

ಅನಾವರಣಗೊಂಡ ಬಿಎಸ್6 ಎಂಜಿನ್ ಆಧಾರಿತ ಹೋಂಡಾ ಆಕ್ಟೀವಾ 125

ಹಾಗೆಯೆ ಇವುಗಳ ಜೊತೆಗೆ ಈ ಸ್ಕೂಟರ್‍‍ನಲ್ಲಿ ಈ ಬಾರಿ ಸೈಡ್ ಸ್ಟ್ಯಾಂಡ್ ಇಂಡಿಕೇಟರ್, ಎಂಜಿನ್ ಇನ್‍ಹಿಬಿಟರ್, ರಿಯಲ್ ಟೈಮ್ ಮಾಹಿತಿ, ಫ್ಯುಯೆಲ್ ಎಕಾನಮಿ ಮತ್ತು ಎಷ್ಟು ದೂರ ಚಲಿಸಿದ್ದೀರ ಎಂದು ತೋರಿಸುವ ಹೊಸ ಸೆಮಿ ಡಿಜಿಟನ್ ಇಸ್ಟ್ರೂಮೆಂಟ್ ಕಂಸೋಲ್ ಅನ್ನು ನೀಡಲಾಗಿದೆ.

MOST READ: ಹೇಗಿರಲಿದೆ ನೋಡಿ ಬಿಡುಗಡೆಯಾಗಲಿರುವ ಹೊಸ ಮಾರುತಿ ಸುಜುಕಿ ಎರ್ಟಿಗಾ ಸ್ಪೋರ್ಟ್

ಅನಾವರಣಗೊಂಡ ಬಿಎಸ್6 ಎಂಜಿನ್ ಆಧಾರಿತ ಹೋಂಡಾ ಆಕ್ಟೀವಾ 125

ಎಂಜಿನ್ ಸಾಮರ್ಥ್ಯ

ಮಾಹಿತಿಗಳ ಪ್ರಕಾರ ಅನಾವರಣಗೊಂದ ಬಿಎಸ್-6 ಎಂಜಿನ್ ಆಧಾರಿತ ಹೋಂಡಾ ಅಕ್ಟೀವಾ ಫ್ಯುಯೆಲ್ ಇಂಜೆಕ್ಟೆಡ್ 125 ಸ್ಕೂಟರ್ 125ಸಿಸಿ ಸಿಂಗಲ್ ಸಿಲೆಂಡರ್, ಏರ್ ಕೂಲ್ಡ್ ಎಂಜಿನ್ ಸಹಾಯದಿಂದ 8.4 ಬಿಹೆಚ್‍ಪಿ ಮತ್ತು 10.54 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, ಎಂಜಿನ್ ಅನ್ನು ಸಿವಿಟಿ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

MOST READ: ಆಟೋ ಉದ್ಯಮದಲ್ಲಿ ಹೊಸ ಅವಿಷ್ಕಾರ- ಕಾರಿನ ಹೊರಭಾಗದಲ್ಲೂ ಏರ್‌ಬ್ಯಾಗ್ ಸೌಲಭ್ಯ..!

ಅನಾವರಣಗೊಂಡ ಬಿಎಸ್6 ಎಂಜಿನ್ ಆಧಾರಿತ ಹೋಂಡಾ ಆಕ್ಟೀವಾ 125

ಲಭ್ಯವಿರುವ ಬಣ್ಣಗಳು

ಹೊಸ ಹೋಂಡಾ ಆಕ್ಟೀವಾ 125 ಸ್ಕೂಟರ್‍‍‍ಗಳು ಈ ಬಾರಿ ರೆಬೆಲ್ ರೆಡ್ ಮೆಟಾಲಿಕ್, ಬ್ಲಾಕ್, ಹೆವಿ ಗ್ರೇ ಮೆಟಾಲಿಕ್, ಮಿಡ್‍ನೈಟ್ ಬ್ಲೂ ಮೆಟಾಲಿಕ್, ಪರ್ಲ್ ಪ್ರೀಶಿಯಸ್ ವೈಟ್ ಮತ್ತು ಮೆಜೆಸ್ಟಿಕ್ ಬ್ರೌನ್ ಮೆಟಾಲಿಕ್ ಎಂಬ ಒಟ್ಟು ಆರು ಬಣ್ಣಗಳಲ್ಲಿ ಖರೀದಿಗೆ ಲಭ್ಯವಿರಲಿದೆ.

MOST READ: ಟ್ಯೂಬ್‍‍ಲೆಸ್ ಟಯರ್ ಟ್ರೆಂಡ್ ಮುಗಿತು, ಇನ್ನು ಏರ್‍‍ಲೆಸ್ ಟಯರ್ ಸದ್ದು ಶುರು

ಅನಾವರಣಗೊಂಡ ಬಿಎಸ್6 ಎಂಜಿನ್ ಆಧಾರಿತ ಹೋಂಡಾ ಆಕ್ಟೀವಾ 125

ಬೆಲೆ ಮತ್ತು ಬಿಡುಗಡೆಯ ಅವಧಿ

ಅನಾವರಣಗೊಂಡ ಹೋಂಡಾ ಅಕ್ಟೀವಾ 125 ಸ್ಕೂಟರ್‍‍ನ ಬೆಲೆಯು, ಪ್ರಸ್ತುತ ಮಾರಾಟವಾಗುತ್ತಿರುವ ಸ್ಕೂಟರ್‍‍ಗಳ ಬೆಲೆಗಿಂತಲೂ ಶೇಕಡವಾರು 10ರಷ್ಟು ಅಧಿಕವಾಗಿರಲಿದೆ ಎಂದು ಮಾಹಿತಿ ಲಭ್ಯವಾಗಿದೆ. ಅಂದರೆ ಹೊಸ ಸ್ಕೂಟರ್‍‍ಗಳು ಎಕ್ಸ್ ಶೋರುಂ ಪ್ರಕಾರ ರೂ. 60,000 ರಿಂದ ರೂ. 64,000 ಇರಬಹುದೆಂದು ಅಂದಾಜಿಸಲಾಗಿದೆ. ಮತ್ತು ಈ ಸ್ಕೂಟರ್ ಅನ್ನು 2019-20 ಇದೇ ಹಣಕಾಸು ವರ್ಷದ ಸಮಯದಲ್ಲಿ ಬಿಡುಗಡೆ ಮಾಡಲಿದೆ.

ಅನಾವರಣಗೊಂಡ ಬಿಎಸ್6 ಎಂಜಿನ್ ಆಧಾರಿತ ಹೋಂಡಾ ಆಕ್ಟೀವಾ 125

ಕನ್ನಡ ಡ್ರೈವ್‍ಸ್ಪಾರ್ಕ್ ಅಭಿಪ್ರಾಯ

ಬಿಎಸ್-6 ಎಂಜಿನ್ ಅನ್ನು ಹೊತ್ತು ಬರಲಿರುವ ಹೋಂಡಾ ಅಕ್ಟೀವಾ 125 ಸ್ಕೂಟರ್ ಮಾರುಕಟ್ಟೆಯಲ್ಲಿ ಹೊಸ ಸಂಚಲನವನ್ನು ಸೃಷ್ಠಿಸುವುದರಲ್ಲಿ ಯಾವುದೇ ರೀತಿಯ ಅನುಮಾನವಿಲ್ಲ. ಒಮ್ಮೆ ಈ ಸ್ಕೂಟರ್ ಮಾರುಕಟ್ಟೆಗೆ ಲಗೆಯಿಟ್ಟಲ್ಲಿ ಮಾರಾಟವಾಗುತ್ತಿರುವ ಟಿವಿಎಸ್ ಎನ್‍ಟಾರ್ಕ್ 125, ಎಪ್ರಿಲಿಯಾ ಎಸ್ಆರ್ 125, ಹೀರೋ ಮಾಯೆಸ್ಟ್ರೋ ಮತ್ತು ಸುಜುಕಿ ಬರ್ಗ್‍ಮನ್ ಸ್ಟ್ರೀಟ್ ಸ್ಕೂಟರ್‍‍ಗಳಿಗೆ ಪೈಪೋಟಿ ನೀಡಲಿದೆ.

Most Read Articles

Kannada
English summary
Honda Activa 125 BS-6 Unveiled. Read In Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X