Just In
Don't Miss!
- News
ರೈತರು 2024ರವರೆಗೂ ಪ್ರತಿಭಟನೆ ನಡೆಸಲು ಸಿದ್ಧರಿದ್ದಾರೆ:ಭಾರತೀಯ ಕಿಸಾನ್ ಯೂನಿಯನ್
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 17ರ ಚಿನ್ನ, ಬೆಳ್ಳಿ ದರ
- Sports
ಐಎಸ್ಎಲ್: ಜೆಮ್ಷೆಡ್ಪುರಕ್ಕೆ ಆಘಾತ ನೀಡಿದ ನಾರ್ಥ್ಈಸ್ಟ್
- Movies
ಹರ ಜಾತ್ರೆಯಲ್ಲಿ ಪುನೀತ್ ರಾಜ್ ಕುಮಾರ್; ಅಪ್ಪು ಹಾಡು ಕೇಳಿ ಸಂಭ್ರಮಿಸಿದ ಅಭಿಮಾನಿಗಳು
- Lifestyle
ಸಂಜೆ ಸ್ನ್ಯಾಕ್ಸ್ ಗೆ ಹೇಳಿಮಾಡಿಸಿದ್ದು ಈ ತಡ್ಕಾ ಮಸಾಲೆ ಮ್ಯಾಗಿ
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮೆತ್ತೊಮ್ಮೆ ತಮ್ಮ ಡ್ಯೂಕ್ 125 ಬೈಕಿನ ಬೆಲೆ ಹೆಚ್ಚಿಸಿದ ಕೆಟಿಎಂ
ಮಾರುಕಟ್ಟೆಯಲ್ಲಿ ಪ್ರಸ್ತುತ 125 ಸಿಸಿ ಬೈಕ್ ಮಾದರಿಗಳಲ್ಲಿ ಹೆಚ್ಚಿನ ಬೇಡಿಕೆಯನ್ನು ಪಡೆಯುತ್ತಿರುವ ಕೆಟಿಎಂ ಡ್ಯೂಕ್ 125 ಬೈಕ್ ಏಪ್ರಿಲ್‍ನಲ್ಲಿ ಮೊದಲನೆಯ ಬಾರಿ ಬೆಲೆಯಲ್ಲಿ ಹೆಚ್ಚಳವನ್ನು ಕಂಡಿತು, ಆದರೆ ಈ ಬೈಕ್‍ಗಳ ಡಿಮ್ಯಾಂಡ್ ಅಧಿಕವಾಗುತ್ತಿರುವ ಕಾರಣ ಕೆಟಿಎಂ ಸಂಸ್ಥೆಯು ಈ ಬೈಕಿನ ಬೆಲೆಯನ್ನು ಮತ್ತೊಮ್ಮೆ ಹೆಚ್ಚಿಸಲಾಗಿದೆ.

ಕೆಟಿಎಂ ಡ್ಯೂಕ್ 125 ಬಿಡುಗಡೆಗೊಂಡಾಗ ಈ ಬೈಕಿನ ಬೆಲೆಯು ರೂ. 1.18 ಲಕ್ಷ ಆಗಿದ್ದು, ಇದೇ ವರ್ಷದ ಏಪ್ರಿಲ್‍ನಲ್ಲಿ ಮೊದಲನೆಯ ಬಾರಿ ಬೆಲೆ ಏರಿಕೆಯಾದಾಗ ರೂ. 1.25 ಲಕ್ಷಕ್ಕೆ ಮಾರಾಟವಾಗುತ್ತಿತ್ತು. ಮೊದಲ ಬಾರಿಗಿನ ಬೆಲೆ ಏರಿಕೆಯ ನಂತರ ಇದೀಗ ಎರಡು ತಿಂಗಳಿಗೆ ಮತ್ತೊಮ್ಮೆ ಬೆಲೆ ಏರಿಕೆಯನ್ನು ಕಂಡಿದ್ದು, ರಶ್‍ಲೇನ್ ವರದಿ ಪ್ರಕಾರ ರೂ. 1.30 ಲಕ್ಷದ ಎಕ್ಸ್ ಶೋರುಂ ಬೆಲೆಯನ್ನು ಪಡೆದುಕೊಂಡಿದೆ.

ಆಸ್ಟ್ರೀಯಾ ಮೂಲದ ಜನಪ್ರಿಯ ಬೈಕ್ ಉತ್ಪಾದನಾ ಸಂಸ್ಥೆಯಾಗಿರುವ ಕೆಟಿಎಂ ಇಂಡಿಯಾ ಸದ್ಯ ವಿವಿಧ ಮಾದರಿಯ ಪರ್ಫಾಮೆನ್ಸ್ ಬೈಕ್ ಆವೃತ್ತಿಗಳನ್ನು ಮಾರಾಟ ಮಾಡುತ್ತಿದ್ದು, ಇದೇ ಮೊದಲ ಬಾರಿಗೆ ಮಧ್ಯಮ ವರ್ಗದ ಗ್ರಾಹಕರನ್ನು ಸೆಳೆಯುವ ಉದ್ದೇಶದಿಂದ ಡ್ಯೂಕ್ 125 ಆರಂಭಿಕ ಆವೃತ್ತಿಯನ್ನು ಬಿಡುಗಡೆ ಮಾಡಿತ್ತು.

ಇನ್ನು ಭಾರತ ಸೇರಿದಂತೆ ವಿಶ್ವದ ಪ್ರಮುಖ ರಾಷ್ಟ್ರಗಳಲ್ಲಿ ಡ್ಯೂಕ್ 125 ಆವೃತ್ತಿಯು ಮಾರಾಟಗೊಳ್ಳುತ್ತಿದ್ದು, ಬೇಬಿ ಡ್ಯೂಕ್ ಎಂದೇ ಜನಪ್ರಿಯತೆಗೊಂಡಿದೆ. ಹೀಗಾಗಿ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ನೀರಿಕ್ಷೆಗೂ ಮಿರಿ ಹೊಸ ಬೈಕಿಗೆ ಬೇಡಿಕೆ ಹರಿದುಬಂದಿದ್ದು, ಈ ಮೂಲಕ ಡ್ಯೂಕ್ 200 ಹಿಂದಿಕ್ಕಿರುವ ಡ್ಯೂಕ್ 125 ಬೈಕ್ ಮಾದರಿಯು ಕೆಟಿಎಂ ಸಂಸ್ಥೆಗೆ ಉತ್ತಮ ಆದಾಯ ತಂದುಕೊಡುತ್ತಿದೆ.

ಡ್ಯೂಕ್ 125 ತಾಂತ್ರಿಕವಾಗಿ 125ಸಿಸಿ ಆವೃತ್ತಿಯಾದ್ರು ಡ್ಯೂಕ್ 200 ಮಾದರಿಯಲ್ಲೇ ಬಹುತೇಕ ಹೊರ ಅಂಶಗಳನ್ನು ಎರವಲು ಪಡೆದುಕೊಳ್ಳಲಾಗಿದ್ದು, ಹೊಸ ಬೈಕಿನಲ್ಲಿ 43-ಎಂಎಂ ಡಬ್ಲ್ಯುಪಿ ಅಪ್‌ಸೈಡ್-ಡೌನ್ ಫೋಕ್ಸ್‌ನೊಂದಿಗೆ ಖರೀದಿ ಉತ್ತಮವಾಗಿದೆ.

ಹಾಗೆಯೇ ಡ್ಯೂಕ್ 200 ಮಾದರಿಯಲ್ಲೇ ಚಾರ್ಸಿ, ಸಸ್ಪೆಂಷನ್, ಚಕ್ರಗಳು, ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಜೊತೆಗೆ ಬಾಡಿ ಪ್ಯಾನೆಲ್ ಸಹ ಡ್ಯೂಕ್ 125ನಲ್ಲಿದ್ದು, ಬೈಕಿನ ಸ್ಪೋಟಿ ಲುಕ್ ಹೆಚ್ಚಿಸುವುದರ ಜೊತೆ ಎಂಜಿನ್ ರಕ್ಷಣೆಗಾಗಿ ಸ್ವಿಂಗ್ ಆರ್ಮ್ ಸೌಲಭ್ಯವನ್ನು ಜೋಡಿಸಲಾಗಿದೆ.
MOST READ: ಮಾರುಕಟ್ಟೆಯಿಂದ ಹೊರ ಬಂದರೂ ಸೇನೆಯಿಂದ ಭಾರೀ ಬೇಡಿಕೆ ಪಡೆಯುತ್ತಿರುವ ಮಾರುತಿ ಸುಜುಕಿ ಜಿಪ್ಸಿ

ಎಂಜಿನ್ ಮತ್ತು ಟಾಪ್ ಸ್ಪೀಡ್
125 ಡ್ಯೂಕ್ ಬೈಕ್ ಮಾದರಿಯು 124.7-ಸಿಸಿ ಲಿಕ್ವಿಡ್ ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿರಲಿದ್ದು, 6-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ 14.3-ಬಿಎಚ್‌ಪಿ ಮತ್ತು 12-ಎನ್ಎಂ ಟಾರ್ಕ್ ಉತ್ಪಾದನಾ ಗುಣ ಪಡೆದುಕೊಂಡಿದೆ.
ಹಾಗೆಯೆ ಈ ಬೈಕ್ ಗಂಟೆಗೆ 125 ಕಿಲೋಮೀಟರ್ ವೇಗದಲ್ಲಿ ಚಲಿಸಬಲ್ಲ ಟಾಪ್ ಸ್ಪೀಡ್ ಅನ್ನು ಸಹ ಪಡೆದುಕೊಂಡಿದೆ.
MOST READ: ರಾಜ್ಯದೆಲ್ಲೆಡೆ ಎಂಬತ್ತೊಂಬತ್ತು ಸಾವಿರಕ್ಕು ಹೆಚ್ಚಿನ ಡ್ರೈವಿಂಗ್ ಲೈಸೆನ್ಸ್ ರದ್ದು

ಬೈಕಿನ ವೈಶಿಷ್ಟ್ಯತೆ
ಡಿಜಿಟಲ್ ಇನ್ಟ್ರಮೆಂಟ್ ಕ್ಲಸ್ಟರ್‌ನೊಂದಿಗೆ 148 ಕೆಜಿ ತೂಕ ಹೊಂದಿರುವ ಡ್ಯೂಕ್ 125 ಬೈಕ್ ಮಾದರಿಯಲ್ಲಿ 818ಎಂಎಂ ಎತ್ತರದ ಆಸನ ಸೌಲಭ್ಯ ಹೊಂದಿದ್ದು, ಹಿಂಬದಿಯ ಸವಾರರ ಆಸನ ಇದ್ದರೂ ಸಹ ಅಷ್ಟಾಗಿ ಸ್ಥಳಾವಕಾಶ ನೀಡಿಲ್ಲ. ಹೀಗಾಗಿ ಡ್ಯೂಕ್ 125 ಬೈಕ್ ಮಾದರಿಯ ಸಿಂಗಲ್ ರೈಡ್‌ಗೆ ಅತ್ಯುತ್ತಮ ಎನ್ನಬಹುದು.
MOST READ: ವಾಹನ ಚಾಲಕರೇ ಇತ್ತ ಗಮನಿಸಿ - ಓವರ್‍ಸ್ಪೀಡಿಂಗ್ ಮಾಡುವವರನ್ನು ತಡೆಯಲು ಪೊಲೀಸರ ಕೈಗೆ ಹೊಸ ಅಸ್ತ್ರ

ಟೈರ್ ಮತ್ತು ಬ್ರೇಕಿಂಗ್ ಸೌಲಭ್ಯ
ಬೈಕಿನ ಮುಂಭಾಗದಲ್ಲಿ 110/70 ಆರ್17 ಮತ್ತು ಹಿಂಭಾಗದಲ್ಲಿ 150/60 ಆರ್17 ಎಂಆರ್‌ಎಫ್ ಗ್ರಿಪ್ ಟೈರ್‌ಗಳನ್ನು ಹೊಂದಿರುವ ಡ್ಯೂಕ್ 125 ಬೈಕಿನಲ್ಲಿ ಬ್ರೇಕಿಂಗ್ ಸೌಲಭ್ಯಗಳು ಮುಖ್ಯ ಆಕರ್ಷಣೆಯಾಗಿದೆ. 43-ಎಂಎಂ ಅಪ್ ಸೈಡ್ ಡೌನ್ ಫೋರ್ಕ್ ಮತ್ತು ಹೋಂದಾಣಿಕೆ ಮಾಡಬಲ್ಲ ಮೊನೋಶಾರ್ಕ್ ಸೌಲಭ್ಯದೊಂದಿಗೆ 300ಎಂಎಂ ಫ್ರಂಟ್ ಡಿಸ್ಕ್ ಮತ್ತು 230ಎಂಎಂ ಡಿಸ್ಕ್ ಬ್ರೇಕ್ ಪಡೆದಿದ್ದು, ಬಾಷ್ ನಿರ್ಮಾಣದ ಸಿಂಗಲ್ ಚಾನೆಲ್ ಎಬಿಎಸ್ ಯುನಿಟ್ ಇದರಲ್ಲಿದೆ.

ಬೈಕಿನ ಮೈಲೇಜ್
10.5-ಲೀಟರ್ ಸಾಮರ್ಥ್ಯದ ಫ್ಯೂಲ್ ಟ್ಯಾಂಕ್ ಜೋಡಣೆ ಹೊಂದಿರುವ ಡ್ಯೂಕ್ 125 ಬೈಕ್ ಪ್ರತಿ ಲೀಟರ್‌ಗೆ ಕೆಟಿಎಂ ಸಂಸ್ಥೆಯೇ ಹೇಳಿಕೊಂಡಂತೆ 40 ರಿಂದ 42 ಕಿ.ಮಿ ನೀಡಬಹುದು ಎಂದಿದ್ದು, ಇನ್ನು ಕೆಲವು ಹವ್ಯಾಸಿ ಕೆಟಿಎಂ ಬೈಕ್ ಸವಾರರ ಪ್ರಕಾರ ಹೊಸ ಬೈಕ್ ಅನ್ನು ಎಕಾನಮಿಕ್ ಮೊಡ್‌ನಲ್ಲಿ ಬೈಕ್ ಚಾಲನೆ ಮಾಡಿದ್ದಲ್ಲಿ ಪ್ರತಿ ಲೀಟರ್‌ಗೆ 55 ಕಿ.ಮಿ ನಿಂದ 60 ಕಿ.ಮಿ ಮೈಲೇಜ್ ಗಿಟ್ಟಿಸಿಕೊಳ್ಳಬಹುದು ಎಂದಿದ್ದಾರೆ.