ಚೀನಾದೊಂದಿಗಿನ ಬೃಹತ್ ಡೀಲ್ ರದ್ದುಗೊಳಿಸಿದ ಹೀರೋ ಸೈಕಲ್ಸ್

ಹೀರೋ ಸೈಕಲ್ಸ್ ಕಂಪನಿಯು ಚೀನಾ ದೇಶದೊಂದಿಗಿನ ರೂ.900 ಕೋಟಿಗಳ ವ್ಯವಹಾರವನ್ನು ರದ್ದುಗೊಳಿಸುವ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಹೀರೋ ಸೈಕಲ್ಸ್ ಕಂಪನಿಯು ತನ್ನ ಸೈಕಲ್‌ಗಳಿಗೆ ಅಗತ್ಯವಿರುವ ಬಿಡಿಭಾಗಗಳನ್ನು ಚೀನಾದಿಂದ ಆಮದು ಮಾಡಿಕೊಳ್ಳುತ್ತದೆ.

ಚೀನಾದೊಂದಿಗಿನ ಬೃಹತ್ ಡೀಲ್ ರದ್ದುಗೊಳಿಸಿದ ಹೀರೋ ಸೈಕಲ್ಸ್

ಇನ್ನು ಮುಂದೆ ಈ ಬಿಡಿ ಭಾಗಗಳನ್ನು ಜರ್ಮನ್ ಮಾರುಕಟ್ಟೆಯಿಂದ ಆಮದು ಮಾಡಿಕೊಳ್ಳಲಾಗುವುದು. ಇದು ಸ್ವಾವಲಂಬನೆಯತ್ತ ಮೊದಲ ಹೆಜ್ಜೆ ಎಂದು ಹೀರೋ ಸೈಕಲ್ಸ್ ಕಂಪನಿ ಹೇಳಿದೆ. ಈ ಬಗ್ಗೆ ಮಾತನಾಡಿರುವ ಹೀರೋ ಸೈಕಲ್ಸ್ ಲಿಮಿಟೆಡ್ ಗ್ರೂಪ್‌ನ ಎಂಡಿ ಪಂಕಜ್ ಮುಂಜಾಲ್ ರವರು ನಾವು ಸಣ್ಣ ಉಪಕರಣಗಳಿಗಾಗಿ ಪಂಜಾಬ್‌ನ ಲುಧಿಯಾನ ನಗರದಲ್ಲಿರುವ ತಯಾರಕರನ್ನು ಸಂಪರ್ಕಿಸಿದ್ದೇವೆ.

ಚೀನಾದೊಂದಿಗಿನ ಬೃಹತ್ ಡೀಲ್ ರದ್ದುಗೊಳಿಸಿದ ಹೀರೋ ಸೈಕಲ್ಸ್

ಇವರಿಗೆ ಎಲ್ಲಾ ರೀತಿಯ ನೆರವನ್ನು ನೀಡಲಾಗುವುದು ಎಂದು ಹೇಳಿದ್ದಾರೆ. ಚೀನಾದೊಂದಿಗಿನ ಒಪ್ಪಂದವನ್ನು ರದ್ದುಗೊಳಿಸಿದ ನಂತರ, ಕಂಪನಿಯು ಜರ್ಮನಿಯಲ್ಲಿರುವ ತನ್ನ ಆರ್ ಅಂಡ್ ಡಿ ಕೇಂದ್ರದಿಂದ ಉನ್ನತ ಮಟ್ಟದ ಸೈಕಲ್‌ಗಳಿಗೆ ಅಗತ್ಯವಿರುವ ಉಪಕರಣಗಳನ್ನು ಆಮದು ಮಾಡಿಕೊಳ್ಳಲಿದೆ.

MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಚೀನಾದೊಂದಿಗಿನ ಬೃಹತ್ ಡೀಲ್ ರದ್ದುಗೊಳಿಸಿದ ಹೀರೋ ಸೈಕಲ್ಸ್

ಇದರ ಜೊತೆಗೆ ಫ್ರೇಮ್ ಹಾಗೂ ಇನ್ನಿತರ ಬಿಡಿಭಾಗಗಳನ್ನು ಭಾರತದಲ್ಲಿಯೇ ತಯಾರಿಸಲಾಗುವುದು. ಕಂಪನಿಯು ಚೀನಾದ ಮೇಲಿನ ಅವಲಂಬನೆಯನ್ನು ನೀತಿಯ ರೀತಿಯಲ್ಲಿ ಕೊನೆಗೊಳಿಸಲಿದೆ ಎಂದು ಅವರು ಹೇಳಿದರು.

ಚೀನಾದೊಂದಿಗಿನ ಬೃಹತ್ ಡೀಲ್ ರದ್ದುಗೊಳಿಸಿದ ಹೀರೋ ಸೈಕಲ್ಸ್

ಕಂಪನಿಯು ಸ್ಥಳೀಯ ಬಿಡಿಭಾಗಗಳ ತಯಾರಕ ಕಂಪನಿಗಳೊಂದಿಗೆ ಹೆಚ್ಚಿನ ಒಪ್ಪಂದ ಮಾಡಿಕೊಂಡಿದೆ. ಮುಂಬರುವ ದಿನಗಳಲ್ಲಿ ಸೈಕಲ್ ಗಳ ಎಲ್ಲಾ ಬಿಡಿಭಾಗಗಳನ್ನು ಭಾರತದಲ್ಲಿಯೇ ತಯಾರಿಸಲಾಗುವುದು.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಚೀನಾದೊಂದಿಗಿನ ಬೃಹತ್ ಡೀಲ್ ರದ್ದುಗೊಳಿಸಿದ ಹೀರೋ ಸೈಕಲ್ಸ್

ಪ್ರತಿ ಬಿಕ್ಕಟ್ಟಿನ ಹಿಂದೆ ಹೊಸ ಅವಕಾಶವಿರಲಿದೆ. ಲಾಕ್ ಡೌನ್ ಮುಗಿದ ನಂತರ ಸೈಕಲ್ ಗಳಿಗೆ ಬೇಡಿಕೆ ಹೆಚ್ಚಾಗಿದೆ. ಮನೆಗೆ ವಾಪಸ್ ಆದ ಕಾರ್ಮಿಕರು ಮತ್ತೆ ಕೆಲಸಕ್ಕೆ ಮರಳಲು ಹೆಚ್ಚು ಸಮಯ ತೆಗೆದುಕೊಳ್ಳುತ್ತಾರೆ. ಇದರಿಂದಾಗಿ ಸೈಕಲ್ ಗಳಿಗೆ ಬೇಡಿಕೆ ಹೆಚ್ಚಾಗಿದೆ ಎಂದು ಅವರು ತಿಳಿಸಿದರು.

ಚೀನಾದೊಂದಿಗಿನ ಬೃಹತ್ ಡೀಲ್ ರದ್ದುಗೊಳಿಸಿದ ಹೀರೋ ಸೈಕಲ್ಸ್

ಲಾಕ್ ಡೌನ್ ನಂತರ ಜನರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಜಾಗೃತರಾಗಿದ್ದು, ಪಾರ್ಕ್ ಅಥವಾ ಜಿಮ್‌ಗಳಿಗೆ ತೆರಳುವ ಬದಲು ಸೈಕಲ್ ಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಭಾರತದಲ್ಲಿ ಈಗ ಸೈಕಲ್ ಗಳು ಫಿಟ್ನೆಸ್ ನ ಸಂಕೇತವಾಗಿದೆ ಎಂದು ಮುಂಜಾಲ್ ರವರು ಹೇಳಿದರು.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಚೀನಾದೊಂದಿಗಿನ ಬೃಹತ್ ಡೀಲ್ ರದ್ದುಗೊಳಿಸಿದ ಹೀರೋ ಸೈಕಲ್ಸ್

ಭಾರತದಲ್ಲಿ ಮಕ್ಕಳ ಸೈಸಿಕಲ್ ಮಾರುಕಟ್ಟೆಯು ಸಾಕಷ್ಟು ದೊಡ್ಡದಾಗಿದೆ. ಈ ಸೆಗ್ ಮೆಂಟಿನಲ್ಲಿ ಬೇಡಿಕೆ ಕೂಡ ಹೆಚ್ಚಾಗಿದೆ. ಭಾರತದ ಮಾರುಕಟ್ಟೆಯಲ್ಲಿ ಹೀರೋ ಸೈಕಲ್ಸ್ ಪಾಲು 44%ನಷ್ಟಿದ್ದು, ವರ್ಷಾಂತ್ಯದ ವೇಳೆಗೆ 50%ಗೆ ಹೆಚ್ಚಿಸಲು ಬಯಸಿದ್ದೇವೆ ಎಂದು ಅವರು ಹೇಳಿದರು.

Most Read Articles

Kannada
English summary
Hero cycles cancels Rs 900 crore deal with china. Read in Kannada.
Story first published: Monday, July 6, 2020, 19:47 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X