ಅತಿ ಕಡಿಮೆ ದರಗಳಲ್ಲಿ ಹೀರೋ ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ಲೀಸ್ ಆಯ್ಕೆ ಲಭ್ಯ

ಕರೋನಾ ವೈರಸ್‌ನಿಂದಾಗಿ ಸ್ವಂತ ಬಳಕೆಯ ವಾಹನಗಳ ಬಳಕೆಯು ಹೆಚ್ಚುತ್ತಿದ್ದು, ಹೊಸ ವಾಹನಗಳ ಖರೀದಿಗೆ ಬದಲಾಗಿ ಸಂದರ್ಭಗಳಿಗೆ ಅನುಗುಣವಾಗಿ ಲೀಸ್ ವಾಹನಗಳು ಪ್ರಮುಖ ಆಕರ್ಷಣೆಯಾಗುತ್ತಿದೆ. ಈ ಹಿನ್ನಲೆಯಲ್ಲಿ ಹೀರೋ ಎಲೆಕ್ಟ್ರಿಕ್ ಕಂಪನಿಯು ತನ್ನ ಪ್ರಮುಖ ಇವಿ ಸ್ಕೂಟರ್ ಮೇಲೆ ಲೀಸ್ ಆಯ್ಕೆ ಆರಂಭಿಸಿದೆ.

ಹೀರೋ ಎಲೆಕ್ಟ್ರಿಕ್ ಸ್ಕೂಟರ್‌ಗಳ ಮೇಲೆ ಲೀಸ್ ಆಯ್ಕೆ ಲಭ್ಯ

ಓಟೊ ಕ್ಯಾಪಿಟಲ್ ಎನ್ನುವ ಲೀಸ್ ವಾಹನಗಳ ಪೂರೈಕೆ ಸಂಸ್ಥೆಯೊಂದಿಗೆ ಜೊತೆಗೂಡಿ ತನ್ನ ಪ್ರಮುಖ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಒದಗಿಸಲಿರುವ ಹೀರೋ ಎಲೆಕ್ಟ್ರಿಕ್ ಕಂಪನಿಯು ಅತಿ ಕಡಿಮೆ ದರದೊಂದಿಗೆ ಲೀಸ್ ದರ ವಿಧಿಸಿದ್ದು, ಕರೋನಾ ವೈರಸ್ ಹಿನ್ನಲೆಯಲ್ಲಿ ಸಾರ್ವಜನಿಕ ಬಳಕೆಯ ವಾಹನಗಳ ಬಳಕೆಗೆ ಹಿಂದೇಟು ಹಾಕುತ್ತಿರುವವರಿಗೆ ಇದೊಂದು ಉತ್ತಮ ಆಯ್ಕೆಯಾಗಿರಲಿದೆ.

ಹೀರೋ ಎಲೆಕ್ಟ್ರಿಕ್ ಸ್ಕೂಟರ್‌ಗಳ ಮೇಲೆ ಲೀಸ್ ಆಯ್ಕೆ ಲಭ್ಯ

ಹೀರೋ ಎಲೆಕ್ಟ್ರಿಕ್ ಮಾತ್ರವಲ್ಲ ಕಳೆದ ಎರಡು ತಿಂಗಳ ಅವಧಿಯಲ್ಲಿ ಹಲವಾರು ಆಟೋ ಕಂಪನಿಗಳು ವಿವಿಧ ವಾಹನ ಮಾದರಿಗಳನ್ನು ಲೀಸ್ ಆಧಾರದ ಮೇಲೆ ವಾಹನ ಪೂರೈಕೆ ಮಾಡುತ್ತಿದ್ದು, ಹೊಸ ವಾಹನ ಮಾರಾಟ ಪ್ರಕ್ರಿಯೆಗೆ ಸಮನಾಗಿ ಲೀಸ್ ವಾಹನಗಳ ಪ್ರಕ್ರಿಯೆ ಜೋರಾಗಿದೆ.

ಹೀರೋ ಎಲೆಕ್ಟ್ರಿಕ್ ಸ್ಕೂಟರ್‌ಗಳ ಮೇಲೆ ಲೀಸ್ ಆಯ್ಕೆ ಲಭ್ಯ

ಲಾಕ್‌ಡೌನ್‌ನಿಂದಾಗಿ ಆರ್ಥಿಕ ಸಂಕಷ್ಟ ಎದುರಾಗಿರುವುದರಿಂದ ಬಹುತೇಕ ಹೊಸ ವಾಹನ ಖರೀದಿದಾರರು ಹೊಸ ವಾಹನಗಳ ಮಾಲೀಕತ್ವದ ಬದಲಾಗಿ ಮುಂದಿನ ಕೆಲ ದಿನಗಳವರೆಗೆ ಲೀಸ್ ವಾಹನಗಳ ಮಾಲೀಕತ್ವಕ್ಕೆ ನಿರ್ಧರಿಸಿದ್ದು, ಹಲವಾರು ಆಟೋ ಕಂಪನಿಗಳು ಕಳೆದ ತಿಂಗಳ ಅವಧಿಯಲ್ಲಿ ಲೀಸ್ ಆಯ್ಕೆ ತೆರೆದಿವೆ.

ಹೀರೋ ಎಲೆಕ್ಟ್ರಿಕ್ ಸ್ಕೂಟರ್‌ಗಳ ಮೇಲೆ ಲೀಸ್ ಆಯ್ಕೆ ಲಭ್ಯ

ಹೀರೋ ಎಲೆಕ್ಟ್ಕಿಕ್ ಕಂಪನಿಯು ಸಹ ಗ್ರಾಹಕರ ಬೇಡಿಕೆ ಆಧಾರದ ಮೇಲೆ 12, 24, 36 ತಿಂಗಳಿಗೆ ಲೀಸ್ ಅವಧಿಯ ಆಫರ್ ನೀಡುತ್ತಿದ್ದು, ಮಾಸಿಕವಾಗಿ ಇವಿ ಸ್ಕೂಟರ್ ಮಾದರಿಗಳ ಬ್ಯಾಟರಿ ಸಾಮರ್ಥ್ಯಕ್ಕೆ ಅನುಗುಣವಾಗಿ ಆರಂಭಿಕ ರೂ.2,478 ದರ ನಿಗದಿ ಮಾಡಿದೆ.

ಹೀರೋ ಎಲೆಕ್ಟ್ರಿಕ್ ಸ್ಕೂಟರ್‌ಗಳ ಮೇಲೆ ಲೀಸ್ ಆಯ್ಕೆ ಲಭ್ಯ

ಆಸಕ್ತ ಗ್ರಾಹಕರು 1 ವರ್ಷದ ಅವಧಿಗೆ ಹೀರೋ ಎಲೆಕ್ಟ್ರಿಕ್ ಅನ್ನು ಲೀಸ್‌ಗೆ ಪಡೆದು ನಂತರ ಸ್ವಂತ ಮಾಲೀಕತ್ವವನ್ನು ಸಹ ಪಡೆದುಕೊಳ್ಳುವ ಅವಕಾಶವಿದ್ದು,ಇದಕ್ಕಾಗಿ ಓಟೊ ಕ್ಯಾಪಿಟಲ್ ಸಂಸ್ಥೆಯೇ ಇತರೆ ಬ್ಯಾಂಕ್‌ಗಳಿಂತಲೂ ಕಡಿಮೆ ಬಡ್ಡಿದರದಲ್ಲಿ ಸಾಲಸೌಲಭ್ಯಗಳನ್ನು ನೀಡಿ ಮಾಲೀಕತ್ವಕ್ಕೆ ಸಹಕರಿಸಲಿದೆ.

MOST READ: ಬಜಾಜ್ ಅವೆಂಜರ್‌ಗೆ ಪೈಪೋಟಿಯಾಗಿ ಟಿವಿಎಸ್ ರೊನಿನ್ ಬಿಡುಗಡೆಗೆ ಸಿದ್ದತೆ

ಹೀರೋ ಎಲೆಕ್ಟ್ರಿಕ್ ಸ್ಕೂಟರ್‌ಗಳ ಮೇಲೆ ಲೀಸ್ ಆಯ್ಕೆ ಲಭ್ಯ

ಇಲ್ಲವಾದಲ್ಲಿ ಗ್ರಾಹಕರು ತಮ್ಮ ಅವಶ್ಯಕತೆಗೆ ಅನುಗುಣವಾಗಿ ಲೀಸ್ ಆಯ್ಕೆಯನ್ನೆಷ್ಟೇ ಹೊಂದಬಹುದಾಗಿದ್ದು, ಕನಿಷ್ಠ 12 ತಿಂಗಳಿಗೆ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಲೀಸ್ ಪಡೆದುಕೊಳ್ಳಬೇಕು. ಲೀಸ್ ದರದಲ್ಲೇ ಆ ವಾಹನದ ನೋಂದಣಿ, ರೋಡ್ ಟ್ಯಾಕ್ಸ್ ಮತ್ತು ನಿರ್ವಹಣಾ ವೆಚ್ಚವನ್ನು ಒಳಗೊಂಡಿದೆ.

ಹೀರೋ ಎಲೆಕ್ಟ್ರಿಕ್ ಸ್ಕೂಟರ್‌ಗಳ ಮೇಲೆ ಲೀಸ್ ಆಯ್ಕೆ ಲಭ್ಯ

ಲೀಸ್ ಆಯ್ಕೆ ಮೇಲೆ ಆಫರ್

ಹೌದು, ಓಟೊ ಕ್ಯಾಪಿಟಲ್ ಕಂಪನಿಯು ಗಣೇಶ ಚತುರ್ಥಿ ಅಂಗವಾಗಿ ಸೀಮಿತ ಅವಧಿಯೊಳಗೆ ಹೀರೋ ಎಲೆಕ್ಟ್ರಿಕ್ ಲೀಸ್‌ಗೆ ಪಡೆಯುವ ಗ್ರಾಹಕರಿಗೆ ಆಕರ್ಷಕ ಆಫರ್ ನೀಡಿದ್ದು, ಲಕ್ಕಿ ಡ್ರಾ ಮೂಲಕ ಆಯ್ದ ಗ್ರಾಹಕರಿಗೆ ಮೂರು ತಿಂಗಳ ಉಚಿತ ಲೀಸ್ ಸೌಲಭ್ಯವನ್ನು ನೀಡಲಿದೆ.

MOST READ: ದ್ವಿಚಕ್ರ ವಾಹನಗಳ ಖರೀದಿ ಮೇಲೆ ಹೊಸ ಲೋನ್ ಆಫರ್ ಘೋಷಿಸಿದ ಹೋಂಡಾ

ಹೀರೋ ಎಲೆಕ್ಟ್ರಿಕ್ ಸ್ಕೂಟರ್‌ಗಳ ಮೇಲೆ ಲೀಸ್ ಆಯ್ಕೆ ಲಭ್ಯ

ಓಟೊ ಕ್ಯಾಪಿಟಲ್ ಸದ್ಯ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ಮೆಟ್ರೋ ನಗರಗಳಲ್ಲಿ ಮಾತ್ರವೇ ಕಾರ್ಯವ್ಯಾಪ್ತಿಯನ್ನು ಹೊಂದಿದ್ದು, ಮುಂಬರುವ ಒಂದು ವರ್ಷದ ಅವಧಿಯಲ್ಲಿ ಎರಡನೇ ದರ್ಜೆಯ ಮಾಹಾನಗರಗಳಿಗೂ ವಿಸ್ತರಣೆ ಮಾಡುವ ಗುರಿಹೊಂದಿದೆ.

Most Read Articles

Kannada
English summary
Hero Electric Partners With OTO Capital To Provide Affordable Leasing Option. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X