ಪೆರಾಕ್ ಬೈಕಿನ ವಿತರಣೆ ಆರಂಭಿಸಿದ ಜಾವಾ ಮೋಟಾರ್‌ಸೈಕಲ್

ಜಾವಾ ಮೋಟಾರ್‌ಸೈಕಲ್ ಈ ವರ್ಷದ ಆರಂಭದಲ್ಲಿ ಪೆರಾಕ್ ಬೈಕ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ಈ ಬೈಕಿನ ಬೆಲೆ ಭಾರತದ ಎಕ್ಸ್ ಶೋರೂಂ ದರದಂತೆ ರೂ.1.94 ಲಕ್ಷಗಳಾಗಿದೆ. ಪೆರಾಕ್, ಜಾವಾ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುತ್ತಿರುವ ಮೂರನೇ ಮಾದರಿಯ ಬೈಕ್ ಆಗಿದೆ.

ಪೆರಾಕ್ ಬೈಕಿನ ವಿತರಣೆ ಆರಂಭಿಸಿದ ಜಾವಾ ಮೋಟಾರ್‌ಸೈಕಲ್

ಜಾವಾ ಪೆರಾಕ್ ಬೈಕಿನ ವಿತರಣೆಯನ್ನು ಇಂದಿನಿಂದ ಆರಂಭಿಸಲಾಗಿದೆ. ಕಂಪನಿಯು ಏಪ್ರಿಲ್ 2ರಂದು ಈ ಬೈಕಿನ ವಿತರಣೆಯನ್ನು ಆರಂಭಿಸಲು ನಿರ್ಧರಿಸಿತ್ತು. ಆದರೆ ಕರೋನಾ ವೈರಸ್ ಕಾರಣಕ್ಕೆ ಲಾಕ್‌ಡೌನ್ ಜಾರಿಗೊಳಿಸಿದ ಕಾರಣಕ್ಕೆ ವಿತರಣೆಯನ್ನು ಮುಂದೂಡಲಾಗಿತ್ತು. ಕಂಪನಿಯು ಕೆಲ ದಿನಗಳ ಹಿಂದಷ್ಟೇ ಈ ಬೈಕಿನ ವಿತರಣೆಯ ಬಗ್ಗೆ ಮಾಹಿತಿ ನೀಡಿತ್ತು. ಜಾವಾ ಕಂಪನಿಯು ಕರೋನಾ ವೈರಸ್ ಕಾರಣದಿಂದಾಗಿ ತನ್ನ ಉತ್ಪಾದನಾ ಘಟಕ ಹಾಗೂ ಶೋರೂಂಗಳನ್ನು ಮುಚ್ಚಿತ್ತು.

ಪೆರಾಕ್ ಬೈಕಿನ ವಿತರಣೆ ಆರಂಭಿಸಿದ ಜಾವಾ ಮೋಟಾರ್‌ಸೈಕಲ್

ಸರ್ಕಾರವು ಲಾಕ್ ಡೌನ್ ನಲ್ಲಿ ವಿನಾಯಿತಿ ನೀಡಿದ ನಂತರ ಉತ್ಪಾದನಾ ಘಟಕ ಹಾಗೂ ಶೋರೂಂಗಳನ್ನು ಮತ್ತೆ ತೆರೆಯಿತು. ಜಾವಾ ಪೆರಾಕ್ ಬೈಕ್ ಅನ್ನು ಕಳೆದ ತಿಂಗಳು ಸ್ಪಾಟ್ ಟೆಸ್ಟ್ ನಡೆಸಲಾಗಿತ್ತು. ಈ ಬೈಕ್ ಅನ್ನು ಡೀಲರ್ ಗಳಿಗೆ ಕಳುಹಿಸಲಾಗಿದೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಪೆರಾಕ್ ಬೈಕಿನ ವಿತರಣೆ ಆರಂಭಿಸಿದ ಜಾವಾ ಮೋಟಾರ್‌ಸೈಕಲ್

ರೂ.10,000 ಪಾವತಿಸಿ ಪೆರಾಕ್ ಬೈಕ್ ಅನ್ನು ಬುಕ್ಕಿಂಗ್ ಮಾಡಬಹುದು. ಜಾವಾ ಕಂಪನಿಯು ಈ ಬೈಕಿಗಾಗಿ ಸೀಮಿತ ಸಂಖ್ಯೆಯ ಬುಕ್ಕಿಂಗ್ ಗಳನ್ನು ಪಡೆದಿದೆ. ಜಾವಾ ಹಾಗೂ 42 ಬೈಕುಗಳ ರೀತಿಯಲ್ಲಿ ಹೆಚ್ಚಿನ ಸಂಖ್ಯೆಯ ಬುಕ್ಕಿಂಗ್ ಗಳನ್ನು ತೆಗೆದುಕೊಳ್ಳುತ್ತಿಲ್ಲ. ಪೆರಾಕ್ ಬೈಕ್ ಅನ್ನು ಜೀರೋ ಡೌನ್ ಪೇಮೆಂಟ್ ನೊಂದಿಗೆ ರೂ.6,666 ಇಎಂಐ ಯೋಜನೆಯಲ್ಲಿ ಮಾರಾಟ ಮಾಡಲಾಗುತ್ತದೆ.

ಪೆರಾಕ್ ಬೈಕಿನ ವಿತರಣೆ ಆರಂಭಿಸಿದ ಜಾವಾ ಮೋಟಾರ್‌ಸೈಕಲ್

ಈ ಬೈಕಿನಲ್ಲಿ 334 ಸಿಸಿಯ ಸಿಂಗಲ್ ಸಿಲಿಂಡರ್ ಬಿಎಸ್ -6 ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 30 ಬಿಹೆಚ್‌ಪಿ ಪವರ್ ಹಾಗೂ 31 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 6 ಸ್ಪೀಡಿನ ಗೇರ್‌ಬಾಕ್ಸ್ ಜೋಡಿಸಲಾಗಿದೆ. ಪೆರಾಕ್ ಬೈಕ್ ಡ್ಯುಯಲ್ ಚಾನೆಲ್ ಎಬಿಎಸ್, ಎರಡೂ ವ್ಹೀಲ್ ಗಳಲ್ಲಿ ಡಿಸ್ಕ್ ಬ್ರೇಕ್, ಲೆದರ್ ಸೀಟುಗಳನ್ನು ಹೊಂದಿದೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಪೆರಾಕ್ ಬೈಕಿನ ವಿತರಣೆ ಆರಂಭಿಸಿದ ಜಾವಾ ಮೋಟಾರ್‌ಸೈಕಲ್

ಪೆರಾಕ್ ಬೈಕಿನ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್, ಹಿಂಭಾಗದಲ್ಲಿ ಮೊನೊಶಾಕ್ ಸಸ್ಪೆಂಷನ್ ಗಳನ್ನು ಅಳವಡಿಸಲಾಗಿದೆ. ಪೆರಾಕ್ ಬೈಕ್ ಮ್ಯಾಟ್ ಬ್ಲಾಕ್-ಗ್ರೇ ಬಣ್ಣದೊಂದಿಗೆ ತಿಳಿ ಗೋಲ್ಡನ್ ಹೈಲೈಟ್ ಫಿನಿಶ್‌ನಲ್ಲಿ ಲಭ್ಯವಿರಲಿದೆ. ಈ ಬೈಕ್ ಫ್ಲೋಟಿಂಗ್ ಸೀಟ್, ಬಾರ್-ಎಂಡ್ ಮಿರರ್, ಬಾಬರ್ ಫೆಂಡರ್ ಮುಂತಾದ ಫೀಚರ್ ಗಳನ್ನು ಹೊಂದಿದೆ.

ಪೆರಾಕ್ ಬೈಕಿನ ವಿತರಣೆ ಆರಂಭಿಸಿದ ಜಾವಾ ಮೋಟಾರ್‌ಸೈಕಲ್

ಜಾವಾ ಪೆರಾಕ್ ಬೈಕ್ ದೇಶಿಯ ಮಾರುಕಟ್ಟೆಯಲ್ಲಿ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಹಾಗೂ ಬೆನೆಲ್ಲಿ ಇಂಪೀರಿಯಲ್ 400 ಬೈಕುಗಳಿಗೆ ಪೈಪೋಟಿ ನೀಡಲಿದೆ. ಈ ರೆಟ್ರೊ ಶೈಲಿಯ ಬೈಕ್ ಭಾರತದಲ್ಲಿ ಹೆಚ್ಚು ಜನಪ್ರಿಯತೆಯನ್ನು ಪಡೆದಿದೆ. ಈ ಕಾರಣಕ್ಕೆ ಬುಕ್ಕಿಂಗ್ ಆರಂಭವಾದ ಕೆಲಕ್ಷಣದಲ್ಲಿಯೇ ವೆಬ್‌ಸೈಟ್ ಕ್ರ್ಯಾಶ್ ಆಗಿತ್ತು.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಪೆರಾಕ್ ಬೈಕಿನ ವಿತರಣೆ ಆರಂಭಿಸಿದ ಜಾವಾ ಮೋಟಾರ್‌ಸೈಕಲ್

ಜಾವಾ ಸ್ಟ್ಯಾಂಡರ್ಡ್ ಬಿಎಸ್ 6 ಹಾಗೂ ಜಾವಾ 42 ಬಿಎಸ್ 6 ಬೈಕುಗಳ ವಿತರಣೆಯನ್ನು ಇತ್ತೀಚೆಗೆ ಆರಂಭಿಸಲಾಗಿದೆ. ಜಾವಾ ಹಾಗೂ ಜಾವಾ 42 ಬಿಎಸ್ 6 ಬೈಕುಗಳನ್ನು ಸಿಂಗಲ್ ಚಾನೆಲ್ ಎಬಿಎಸ್ ಹಾಗೂ ಡ್ಯುಯಲ್ ಚಾನೆಲ್ ಎಬಿಎಸ್ ಮಾದರಿಗಳಲ್ಲಿ ಮಾರಾಟ ಮಾಡಲಾಗುವುದು.

Most Read Articles

Kannada
English summary
Jawa starts Perak motorcycle delivery in India. Read in Kannada.
Story first published: Monday, July 20, 2020, 19:49 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X