ಅನಾವರಣವಾಯ್ತು ಹೊಸ ಕೆಟಿಎಂ 890 ಅಡ್ವೆಂಚರ್ ಬೈಕ್

ಕೆಟಿಎಂ ಕಂಪನಿಯು ತನ್ನ ಬಹುನಿರೀಕ್ಷಿತ ಕೆಟಿಎಂ 890 ಅಡ್ವೆಂಚರ್ ಬೈಕನ್ನು ಅನಾವರಣಗೊಳಿಸಿದೆ. ಈ ಹೊಸ ಕೆಟಿಎಂ 890 ಅಡ್ವೆಂಚರ್ ಬೈಕ್ ಅಗ್ರೇಸಿವ್ ಲುಕ್ ನೊಂದಿಗೆ ಆಕರ್ಷಕ ವಿನ್ಯಾಸವನ್ನು ಹೊಂದಿದೆ.

ಅನಾವರಣವಾಯ್ತು ಹೊಸ ಕೆಟಿಎಂ 890 ಅಡ್ವೆಂಚರ್ ಬೈಕ್

ಈ ಹೊಸ ಕೆಟಿಎಂ 890 ಅಡ್ವೆಂಚರ್ ಬೈಕ್ ಈ ವರ್ಷದ ಡಿಸೆಂಬರ್ ತಿಂಗಳಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಇನ್ನು ಈ ಹೊಸ ಅಡ್ವೆಂಚರ್ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಮುಂದಿನ ವರ್ಷ ಬಿಡುಗದೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ. ಹೊಸ ಕೆಟಿಎಂ 890 ಅಡ್ವೆಂಚರ್ ಬೈಕಿನಲ್ಲಿ ಇತರ ಕೆಟಿಎಂ 890 ಮಾದರಿಗಳಲ್ಲಿರುವಂತಹ 889ಸಿಸಿ ಪ್ಯಾರೆಲಲ್-ಟ್ವಿನ್ ಎಂಜಿನ್ ಅನ್ನು ಹೊಂದಿರುತ್ತದೆ.

ಅನಾವರಣವಾಯ್ತು ಹೊಸ ಕೆಟಿಎಂ 890 ಅಡ್ವೆಂಚರ್ ಬೈಕ್

ಯುರೋ 5 ಪ್ರೇರಿತ ಎಂಜಿನ್ 8,000 ಆರ್‌ಪಿಎಂನಲ್ಲಿ 103 ಬಿಹೆಚ್‌ಪಿ ಮತ್ತು 6,500 ಆರ್‌ಪಿಎಂನಲ್ಲಿ 100 ಎನ್‌ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಎಂಜಿನ್‌ನ ಸುತ್ತಲಿನ ಎಂಜಿನಿಯರಿಂಗ್‌ನ ಒಟ್ಟಾರೆ ಪರಿಣಾಮವು ಹೆಚ್ಚು ಸ್ಥಿರವಾದ ಉತ್ಪಾದನೆಯನ್ನು ನಡೆಸುತ್ತದೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಅನಾವರಣವಾಯ್ತು ಹೊಸ ಕೆಟಿಎಂ 890 ಅಡ್ವೆಂಚರ್ ಬೈಕ್

ಲೋ ರೆವ್‌ಗಳಲ್ಲಿ ಲಭ್ಯವಿರುವ ಟಾರ್ಕ್ ನೊಂದಿಗೆ ಇದು ಗಮನಾರ್ಹವಾಗಿದೆ ಎಂದು ಕೆಟಿಎಂ ಹೇಳುತ್ತದೆ. ಕಠಿಣ ಭೂಪ್ರದೇಶವನ್ನು ಚಲಿಸಲು 890 ಅಡ್ವೆಂಚರ್ ಡಕಾರ್ ಶೈಲಿಯ ರೈಡಿಂಗ್ ತಂತ್ರಜ್ಙಾನವನ್ನು ಒಳಗೊಂಡಿರಲಿದೆ

ಅನಾವರಣವಾಯ್ತು ಹೊಸ ಕೆಟಿಎಂ 890 ಅಡ್ವೆಂಚರ್ ಬೈಕ್

ಈ ಹೊಸ ಅಡ್ವೆಂಚರ್ ಬೈಕಿನಲ್ಲಿ 20-ಲೀಟರ್ ಫ್ಯೂಯಲ್ ಟ್ಯಾಂಕ್ ಮತ್ತು 200ಎಂಎಂ ಸಸ್ಪೆಂಕ್ಷನ್ ಅನ್ನು ಹೊಂದಿದೆ. ಇನ್ನು ಈ ಬೈಕಿನ ಹಿಂಭಾಗ ಡಬ್ಲ್ಯುಪಿ ಅಪೆಕ್ಸ್ ಮೊನೊಶಾಕ್ ಸೆಟಪ್ ಅನ್ನು ಅಳವಡಿಸಿದೆ. ಕೆಟಿಎಂ ಅಡ್ವೆಂಚರ್ ಮಾದರಿಗಳು ಯಾವಾಗಲೂ ಉತ್ಸಾಹಭರಿತ, ಉತ್ತಮ ಸುಸಜ್ಜಿತ ಮಾದರಿಗಳಾಗಿವೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಅನಾವರಣವಾಯ್ತು ಹೊಸ ಕೆಟಿಎಂ 890 ಅಡ್ವೆಂಚರ್ ಬೈಕ್

ಇನ್ನು ಎಲೆಕ್ಟ್ರಾನಿಕ್ಸ್ ವಿಷಯದಲ್ಲಿ, ಹೊಸ ಕೆಟಿಎಂ 890 ಅಡ್ವೆಂಚರ್ ಬೈಕಿನಲ್ಲಿ ಎಬಿಎಸ್, ಮೋಟಾರ್ ಸ್ಲಿಪ್ ಕಂಟ್ರೋಲ್, ಟ್ರ್ಯಾಕ್ಷನ್ ಕಂಟ್ರೋಲ್ ಗಳನ್ನು ಸ್ಟ್ಯಾಂಡರ್ಡ್ ಆಗಿ ಅಳವಡಿಸಲಾಗುತ್ತದೆ,

ಅನಾವರಣವಾಯ್ತು ಹೊಸ ಕೆಟಿಎಂ 890 ಅಡ್ವೆಂಚರ್ ಬೈಕ್

ಈ ಹೊಸ ಕೆಟಿಎಂ 890 ಅಡ್ವೆಂಚರ್ ಬೈಕಿನಲ್ಲಿ ಪೂರ್ಣ ಪ್ರಮಾಣದ ಗಾತ್ರದ ಟಿಎಫ್‌ಟಿ ಕಲರ್ ಮತ್ತು ಕ್ರೂಸ್ ಕಂಟ್ರೋಲ್, ಕ್ವಿಕ್-ಶಿಫ್ಟರ್, ಹಿಟಡ್ ಗ್ರಿಪ್ಸ್ ಮತ್ತು ವಿಭಿನ್ನ ಲಗೇಜ್ ಆಯ್ಕೆಗಳ ಸಾಧನಗಳನ್ನು ಒಳಗೊಂಡಿವೆ.

MOST READ: ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಯಮಹಾ ಎಂಟಿ-15 ಬೈಕ್

ಅನಾವರಣವಾಯ್ತು ಹೊಸ ಕೆಟಿಎಂ 890 ಅಡ್ವೆಂಚರ್ ಬೈಕ್

ಆಸಕ್ತ ಗ್ರಾಹಕರು ಟರ್ನ್-ಬೈ-ಟರ್ನ್ ನ್ಯಾವಿಗೇಷನ್ ಮತ್ತು ಫೋನ್ ಕಾಲ್, ಮ್ಯೂಸಿಕ್ ಇತ್ಯಾದಿಗಳಿಗಾಗಿ ಸ್ಮಾರ್ಟ್ ಫೋನ್ ಕನೆಕ್ಟಿವಿಟಿ ಮತ್ತು ಕೆಟಿಎಂ ಮೈ ರೈಡ್ ಇಟರ್ಗೆಷನ್ ಸಹ ಆರಿಸಿಕೊಳ್ಳಬಹುದು.

ಅನಾವರಣವಾಯ್ತು ಹೊಸ ಕೆಟಿಎಂ 890 ಅಡ್ವೆಂಚರ್ ಬೈಕ್

ಹೊಸ ಕೆಟಿಎಂ 890 ಅಡ್ವೆಂಚರ್ ಪೌಡರ್ ಕೂಟಡ್ ಯುನಿಟ್ ಬದಲಾಗಿ ಆನೊಡೈಸ್ಡ್ ವೀಲ್ ಹಬ್‌ಗಳನ್ನು ಪಡೆಯುತ್ತದೆ. ಜೊತೆಗೆ ಉತ್ತಮ ಕಾರ್ಯಕ್ಷಮತೆ ಮತ್ತು ಎಂಜಿನ್ ನಾಕ್ ಕಂಟ್ರೋಲ್ ಸಿಸ್ಟಂಗಾಗಿ ಬೈಕ್ ಸ್ಟಾರ್ಗರ್ ಕ್ಲಚ್ ಅನ್ನು ಪಡೆಯುತ್ತದೆ. ಈ ಹೊಸ ಕೆಟಿಎಂ 890 ಅಡ್ವೆಂಚರ್ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಮುಂದಿನ ವರ್ಷ ಬಿಡುಗಡೆಯಾಗಲಿದೆ.

Most Read Articles

Kannada
Read more on ಕೆಟಿಎಂ ktm
English summary
2021 KTM 890 Adventure Revealed. Read In Kannada.
Story first published: Tuesday, October 20, 2020, 17:54 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X