ಹೋಂಡಾ ಸನ್‌ ಚೇಸರ್ಸ್ 2021: ಹೈನೆಸ್ ಸಿಬಿ350 ಬೈಕಿನೊಂದಿಗೆ ಅರುಣಾಚಲಪ್ರದೇಶದಲ್ಲಿ ಒಂದು ರೌಂಡ್!

ಹೋಂಡಾ ಮೋಟಾರ್‌ಸೈಕಲ್ಸ್ ಮತ್ತು ಸ್ಕೂಟರ್ಸ್ ಇಂಡಿಯಾ ಕಂಪನಿಯ ತನ್ನ ಮೊದಲ ಆವೃತ್ತಿಯ 'ಹೋಂಡಾ ಸನ್‌ ಚೇಸರ್ಸ್ 2021' ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು, ಅರುಣಾಚಲಪ್ರದೇಶ ಪ್ರವಾಸೋದ್ಯಮ ಇಲಾಖೆಯ ಸಹಯೋಗದಲ್ಲಿ ಸನ್‌ ಚೇಸರ್ಸ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಹೈನೆಸ್ ಸಿಬಿ350 ಬೈಕಿನೊಂದಿಗೆ ಅರುಣಾಚಲಪ್ರದೇಶದಲ್ಲಿ ಒಂದು ರೌಂಡ್!

ಹೋಂಡಾ ಮೋಟಾರ್‌ಸೈಕಲ್ಸ್ ಕಂಪನಿಯು ತನ್ನ ಹೊಚ್ಚ ಹೊಸ ಹೈನೆಸ್ ಸಿಬಿ 350 ಮಾದರಿಯ ರೈಡಿಂಗ್ ಕೌಶಲ್ಯವನ್ನು ಗ್ರಾಹಕರಿಗೆ ಪ್ರಸ್ತುತಪಡಿಸುವುದರ ಜೊತೆಗೆ ಪ್ರವಾಸೋದ್ಯಮವನ್ನು ಉತ್ತೇಜಿಸುವ ಉದ್ದೇಶದಿಂದ ಅರುಣಾಚಲಪ್ರದೇಶ ಪ್ರವಾಸೋದ್ಯಮ ಇಲಾಖೆ ಜೊತೆಗೂಡಿ ಹೊಸ ಕಾರ್ಯಾಗಾರ ಆಯೋಜಿಸಲಾಗಿದೆ.

ಅರುಣಾಚಲಪ್ರದೇಶ ವಿಧಾನಸಭೆ ಸ್ಪೀಕರ್ ಪಸಂಗ್‌ಡಾರ್ಜಿ ಸೋನಾ, ಹೋಂಡಾ ಮೋಟಾರ್‌ಸೈಕಲ್ ನಿರ್ದೇಶಕ ಯದ್ವಿಂದರ್ ಸಿಂಗ್ ಗುಲೇರಿಯಾ ಸೇರಿದಂತೆ ಹಲವಾರು ಗಣ್ಯರು ಮತ್ತು ಕಂಪನಿಯ ಹಿರಿಯ ಅಧಿಕಾರಿಗಳು ಹೋಂಡಾ ಸನ್‌ಚೇಸರ್ಸ್ 2021ರ ಆವೃತ್ತಿಗೆ ಹಸಿರು ನಿಶಾನೆ ತೋರಿದರು.

ಹೈನೆಸ್ ಸಿಬಿ350 ಬೈಕಿನೊಂದಿಗೆ ಅರುಣಾಚಲಪ್ರದೇಶದಲ್ಲಿ ಒಂದು ರೌಂಡ್!

ಒಟ್ಟು 7 ದಿನಗಳ ಕಾಲ ನಡೆಯಲಿರುವ ಹೋಂಡಾ ಸನ್‌ ಚೇಸರ್ಸ್ ಕಾರ್ಯಗಾರದಲ್ಲಿ ಒಟ್ಟು 800 ಕಿ.ಮೀ ಪ್ರಯಾಣ ಕೈಗೊಳ್ಳಲಾಗುತ್ತಿದ್ದು, 11 ಅನುಭವಿ ಬೈಕ್ ಸವಾರರು ಹೈನೆಸ್ ಸಿಬಿ 350 ಮೂಲಕ ಸನ್‌ ಚೇಸರ್ಸ್ ಮುನ್ನಡೆಸಲಿದ್ದಾರೆ.

ಹೈನೆಸ್ ಸಿಬಿ350 ಬೈಕಿನೊಂದಿಗೆ ಅರುಣಾಚಲಪ್ರದೇಶದಲ್ಲಿ ಒಂದು ರೌಂಡ್!

11 ಅನುಭವಿ ಬೈಕ್ ಸವಾರರಲ್ಲಿ ಡ್ರೈವ್‌ಸ್ಪಾರ್ಕ್ ತಂಡದ ಮುಖ್ಯಸ್ಥ ಜೊಬೊ ಕುರುವಿಲ್ಲಾ ಸಹ ಒಬ್ಬರಾಗಿದ್ದು, 800 ಕಿ.ಮೀ ಪ್ರಯಾಣದಲ್ಲಿ ಅರುಣಾಚಲಪ್ರದೇಶದ ಪ್ರಮುಖ ಪ್ರವಾಸಿತಾಣಗಳಿಗೆ ಭೇಟಿ ನೀಡಲು ಉದ್ದೇಶಿಸಲಾಗಿದೆ.

ಹೈನೆಸ್ ಸಿಬಿ350 ಬೈಕಿನೊಂದಿಗೆ ಅರುಣಾಚಲಪ್ರದೇಶದಲ್ಲಿ ಒಂದು ರೌಂಡ್!

ಹೊಸ ಕ್ಲಾಸಿಕ್ ಬೈಕ್‌ ಮಾದರಿಯೊಂದಿಗೆ ಪ್ರಮುಖ ಪ್ರವಾಸೋದ್ಯಮ ಸ್ಥಳಗಳಿಗೆ ಭೇಟಿ ನೀಡುವುದರ ಜೊತೆಗೆ ಬೈಕಿನ ಕಾರ್ಯಕ್ಷಮತೆ ಕುರಿತಾಗಿ ಗ್ರಾಹಕರನ್ನು ಆಕರ್ಷಿಸುವುದು ಹೋಂಡಾ ಮೋಟಾರ್‌ಸೈಕಲ್ಸ್ ಕಂಪನಿಯ ಉದ್ದೇಶವಾಗಿದ್ದು, ಹಿಮಾಲಯನ್ ಮೋಟಾರ್‌ರ್ಸ್ಪೋರ್ಟ್ಸ್ ಅಸೋಸಿಯೇಶನ್ ಅಧ್ಯಕ್ಷ ವಿಜಯ್ ಪರ್ಮಾರ್ ನೇತೃತ್ವದಲ್ಲಿ ಬೈಕ್ ಸವಾರಿ ಮುನ್ನಡೆಯುತ್ತಿದೆ.

ಹೈನೆಸ್ ಸಿಬಿ350 ಬೈಕಿನೊಂದಿಗೆ ಅರುಣಾಚಲಪ್ರದೇಶದಲ್ಲಿ ಒಂದು ರೌಂಡ್!

ಅರುಣಾಚಲಪ್ರದೇಶದ ಪ್ರಮುಖ ಪ್ರವಾಸಿ ಸ್ಥಳಗಳಾದ ಬೊಮ್ಜಿರ್, ಹಯುಲಿಯಾಂಗ್, ವಾಲಾಂಗ್ ಮತ್ತು ನಮ್ಸಾಯ್‌ ಮೂಲಕ ಬೈಕ್ ಸವಾರಿ ಮಾಡುವುದೇ ಒಂದು ಅದ್ಬುತ ಕ್ಷಣಗಳಾಗಲಿದ್ದು, ಒಟ್ಟು , 800 ಕಿ.ಮೀ ಪ್ರಯಾಣದಲ್ಲಿ ಅರುಣಾಚಲಪ್ರದೇಶದ ಇನ್ನು ಹಲವಾರು ಪ್ರವಾಸಿ ಸ್ಥಳಗಳು ಬೈಕ್ ರೈಡರ್‌ಗಳಿಗೆ ಹೊಸ ಅನುಭವ ನೀಡಲಿವೆ ಎನ್ನುವುದರಲ್ಲಿ ಎರಡು ಮಾತಿಲ್ಲ.

MOST READ: ಪ್ರತಿ ಚಾರ್ಜ್‌ಗೆ ಬರೋಬ್ಬರಿ 240ಕಿ.ಮೀ ಮೈಲೇಜ್ ನೀಡುವ ಇವಿ ಸ್ಕೂಟರ್ ಬಿಡುಗಡೆ ಮಾಡಲಿದೆ ಓಲಾ

ಹೈನೆಸ್ ಸಿಬಿ350 ಬೈಕಿನೊಂದಿಗೆ ಅರುಣಾಚಲಪ್ರದೇಶದಲ್ಲಿ ಒಂದು ರೌಂಡ್!

ಹೋಂಡಾ ಸನ್‌ಚೇಸರ್ಸ್ 2021ರ ಕಾರ್ಯಗಾರವು ಪೂರ್ವ ಸಿಯಾಂಗ್ ಜಿಲ್ಲೆಯಲ್ಲಿ ರುಕ್ಸಿನ್‌ನಿಂದ ಚಾಲನೆ ಪಡೆದುಕೊಂಡಿದ್ದು, ಒಟ್ಟು 7 ದಿನಗಳ ಕಾಲ ಪ್ರಯಾಣವು ಮುಂದುವರಿಯಲಿದೆ.

ಹೈನೆಸ್ ಸಿಬಿ350 ಬೈಕಿನೊಂದಿಗೆ ಅರುಣಾಚಲಪ್ರದೇಶದಲ್ಲಿ ಒಂದು ರೌಂಡ್!

800 ಕಿ.ಮೀ ಪ್ರಯಾಣಕ್ಕೆ ಹೈನೆಸ್ ಸಿಬಿ350 ಕ್ರೂಸರ್ ಮೋಟಾರ್‌ಸೈಕಲ್‌ ಕೂಡಾ ಸಾಕ್ಷಿಯಾಗಲಿದ್ದು, ಅರುಣಾಚಲಪ್ರದೇಶ ಸರ್ಕಾರವು ಹೋಂಡಾ ಸನ್‌ಚೇಸರ್ಸ್ ಕಾರ್ಯಕ್ರಮಕ್ಕೆ ಕೈಜೋಡಿಸಿರುವುದು ಮತ್ತಷ್ಟು ಮಹತ್ವ ಪಡೆದುಕೊಂಡಿದೆ.

MOST READ: ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಬಜೆಟ್ ಬೆಲೆಯ ಬೈಕುಗಳಿವು..!

ಹೈನೆಸ್ ಸಿಬಿ350 ಬೈಕಿನೊಂದಿಗೆ ಅರುಣಾಚಲಪ್ರದೇಶದಲ್ಲಿ ಒಂದು ರೌಂಡ್!

ಇನ್ನು ಕ್ಲಾಸಿಕ್ ಬೈಕ್ ಮಾರಾಟದಲ್ಲಿ ಸದ್ಯ ಗ್ರಾಹಕರನ್ನ ಸೆಳೆಯುತ್ತಿರುವ ಹೈನೆಸ್ ಸಿಬಿ 350 ಬೈಕ್ ಮಾದರಿಯು ರಾಂಗ್ ರೈಡ್ ಉದ್ದೇಶಗಳಿಗೆ ಸೂಕ್ತವಾದ ಕ್ಲಾಸಿಕ್ ಬೈಕ್ ಮಾದರಿಯಾಗಿದ್ದು, ಹೊಸ ಬೈಕಿನಲ್ಲಿ ಅರುಣಾಚಲಪ್ರದೇಶದ ರೈಡಿಂಗ್ ಅನುಭವಗಳನ್ನು ಡ್ರೈವ್‌ಸ್ಪಾರ್ಕ್ ತಂಡವು ಶೀಘ್ರದಲ್ಲೇ ಹಂಚಿಕೊಳ್ಳಲಿದೆ.

Most Read Articles

Kannada
English summary
Honda Motorcycles & Scooters India (HMSI) has flagged off its first edition of their 'Honda SunChasers 2021. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X