75ನೇ ವರ್ಷದ ಸಂಭ್ರಮಾಚರಣೆ: 19 ಮಿಲಿಯನ್ ಸ್ಕೂಟರ್ ಉತ್ಪಾದನಾ ಗುರಿತಲುಪಿದ ವೆಸ್ಪಾ

ಇಟಾಲಿಯನ್ ವಾಹನ ಉತ್ಪಾದನಾ ಕಂಪನಿಯಾಗಿರುವ ಪಿಯಾಜಿಯೊ ತನ್ನ ಸಹ ಬ್ರಾಂಡ್ ವೆಸ್ಪಾ ದ್ವಿಚಕ್ರ ವಾಹನಗಳ ಉತ್ಪಾದನೆಯಲ್ಲಿ ಯಶಸ್ವಿ 75 ವರ್ಷಗಳನ್ನು ಪೂರೈಸಿದ್ದು, ಕಂಪನಿಯು ಇದುವರೆಗೆ 19 ಮಿಲಿಯನ್(1.90 ಕೋಟಿ) ಸ್ಕೂಟರ್‌ಗಳ ಉತ್ಪಾದನಾ ಗುರಿತಲುಪಿದೆ.

19 ಮಿಲಿಯನ್ ಸ್ಕೂಟರ್ ಉತ್ಪಾದನಾ ಗುರಿತಲುಪಿದ ವೆಸ್ಪಾ

1946ರಲ್ಲಿ ಇಟಾಲಿಯ ಪ್ಯಾಂಟೆಡೊರಾ ಎನ್ನುವಲ್ಲಿ ಮೊದಲ ಸ್ಕೂಟರ್ ನಿರ್ಮಾಣದೊಂದಿಗೆ ಜಾಗತಿಕ ಆಟೋ ಉದ್ಯಮಕ್ಕೆ ಅಧಿಕೃತವಾಗಿ ಪ್ರವೇಶಿಸಿದ ವೆಸ್ಪಾ ಕಂಪನಿಯು ಸದ್ಯ ಭಾರತ ಸೇರಿದಂತೆ ವಿಶ್ವದ ಪ್ರಮುಖ 83 ರಾಷ್ಟ್ರಗಳಲ್ಲಿ ಮಾರಾಟ ಜಾಲ ಹೊಂದಿದ್ದು, ವಿಶ್ವಾದ್ಯಂತ ಮೂರು ಉತ್ಪಾದನಾ ಘಟಕಗಳ ಮೂಲಕ ಇದುವರೆಗೆ 1.90 ಕೋಟಿ ಯುನಿಟ್ ಉತ್ಪಾದನೆ ಪೂರ್ಣಗೊಳಿಸುವ ಮೂಲಕ ಹೊಸ ಸಂಚಲನಕ್ಕೆ ಕಾರಣವಾಗಿದೆ.

19 ಮಿಲಿಯನ್ ಸ್ಕೂಟರ್ ಉತ್ಪಾದನಾ ಗುರಿತಲುಪಿದ ವೆಸ್ಪಾ

ಪ್ರೀಮಿಯಂ ಸ್ಕೂಟರ್ ಮಾದರಿಯಾಗಿರುವ ವೆಸ್ಪಾ ಆವೃತ್ತಿಗಳು ಇತರೆ ಸ್ಕೂಟರ್ ಮಾದರಿಗಳಿಂತಲೂ ತುಸು ದುಬಾರಿ ಎನ್ನಿಸಿದರೂ ತನ್ನದೆ ಬ್ರಾಂಡ್ ಜನಪ್ರಿಯತೆ, ಗುಣಮಟ್ಟದೊಂದಿಗೆ ವಿಶ್ವಾದ್ಯಂತ ಬೇಡಿಕೆ ಹೊಂದಿದೆ.

19 ಮಿಲಿಯನ್ ಸ್ಕೂಟರ್ ಉತ್ಪಾದನಾ ಗುರಿತಲುಪಿದ ವೆಸ್ಪಾ

1960ರಲ್ಲಿ ಭಾರತದಲ್ಲಿ ಮೊದಲ ಬಾರಿಗೆ ಸ್ಕೂಟರ್ ಮಾರಾಟ ಆರಂಭಿಸಿದ ವೆಸ್ಪಾ ಕಂಪನಿಯು ಬಜಾಜ್ ಆಟೋ ಕಂಪನಿಯ ಜೊತೆಗೂಡಿ ದೇಶಿಯ ಮಾರುಕಟ್ಟೆಯಲ್ಲಿ ಮೊದಲ ಬಾರಿಗೆ ಸಹಭಾಗಿತ್ವದಲ್ಲಿ ಬಜಾಜ್ ಚೇತಕ್ ಉತ್ಪಾದನೆ ಕೈಗೊಂಡಿತು.

19 ಮಿಲಿಯನ್ ಸ್ಕೂಟರ್ ಉತ್ಪಾದನಾ ಗುರಿತಲುಪಿದ ವೆಸ್ಪಾ

ಭಾರತದಲ್ಲಿ ಸ್ಕೂಟರ್ ಆರಂಭವಾದ ಕೆಲವೇ ವರ್ಷಗಳಲ್ಲಿ ಬಜಾಜ್ ಆಟೋ ಜೊತೆಗಿನ ಸಹಭಾಗಿತ್ವ ಸ್ಥಗಿತಗೊಳಿಸಿದ ವೆಸ್ಪಾ ಕಂಪನಿಯು 1980ರಲ್ಲಿ ಪಿಯಾಜಿಯೊ ಜೊತೆಗೆ ವೀಲಿನಗೊಳ್ಳುವ ಮೂಲಕ ಭಾರತದಲ್ಲಿ ಎಲ್ಎಂಎಲ್ ಮೋಟಾರ್ಸ್ ಜೊತೆಗೂಡಿ ಸ್ಕೂಟರ್ ಮಾರಾಟವನ್ನು ಆರಂಭಿಸಿತು. ಆದರೆ ಎಲ್ಎಂಎಲ್ ಮೋಟಾರ್ಸ್ ಜೊತೆಗಿನ ಸಹಭಾಗಿತ್ವ ಯೋಜನೆಯನ್ನು ಕೆಲವೇ ವರ್ಷಗಳಲ್ಲಿ ಕೈಬಿಟ್ಟ ವೆಸ್ಪಾ ಕಂಪನಿಯು 1999ರಲ್ಲಿ ಭಾರತದಲ್ಲಿನ ಕಾರ್ಯಾಚರಣೆಯನ್ನೇ ಸ್ಥಗಿತಗೊಳಿಸಿತ್ತು.

19 ಮಿಲಿಯನ್ ಸ್ಕೂಟರ್ ಉತ್ಪಾದನಾ ಗುರಿತಲುಪಿದ ವೆಸ್ಪಾ

ಭಾರತದಲ್ಲಿ ವಾಹನ ಉತ್ಪಾದನೆ ಸ್ಥಗಿತಗೊಳಿಸಿ 11 ವರ್ಷಗಳ ನಂತರ 2012ರಲ್ಲಿ ಮತ್ತೆ ಭಾರತದಲ್ಲಿ ಮತ್ತೆ ಉದ್ಯಮ ವ್ಯವಹಾರಕ್ಕೆ ಆಸಕ್ತಿ ತೊರಿದ ವೆಸ್ಪಾ ಕಂಪನಿಯು ಬಾರಾಮತಿಯಲ್ಲಿ ಹೊಸ ವಾಹನ ಉತ್ಪಾದನಾ ಘಟಕ ನಿರ್ಮಾಣದೊಂದಿಗೆ ಸ್ವತಂತ್ರ ಕಾರ್ಯಾಚರಣೆ ನಡೆಸುತ್ತಿದೆ.

19 ಮಿಲಿಯನ್ ಸ್ಕೂಟರ್ ಉತ್ಪಾದನಾ ಗುರಿತಲುಪಿದ ವೆಸ್ಪಾ

ವಿಶ್ವಾದ್ಯಂತ ಮೂರು ವಾಹನ ಉತ್ಪಾದನಾ ಘಟಕ ಹೊಂದಿರುವ ವೆಸ್ಪಾ ಕಂಪನಿಯು ಯುರೋಪಿನ್ ಮಾರುಕಟ್ಟೆಗಳಿಗೆ ಸ್ಕೂಟರ್ ಒದಗಿಸಲು ಇಟಾಲಿಯಲ್ಲಿನ ಮುಖ್ಯ ಘಟಕದಿಂದ ಪೂರೈಕೆ ಹೊಂದಿದ್ದರೆ ಪೂರ್ವ ರಾಷ್ಟ್ರಗಳಿಗೆ ವಾಹನ ಪೂರೈಕೆ ಮಾಡಲು ವಿಯೆಟ್ನಾಂನಲ್ಲಿ ಎರಡನೇ ಘಟಕವನ್ನು ಮತ್ತು ಭಾರತ ಮತ್ತು ನೇಪಾಳ ಮಾರುಕಟ್ಟೆಯಲ್ಲಿನ ಬೇಡಿಕೆ ಪೂರೈಕೆಗಾಗಿ ಬಾರಾಮತಿ ಘಟಕವನ್ನು ಹೊಂದಿದೆ.

19 ಮಿಲಿಯನ್ ಸ್ಕೂಟರ್ ಉತ್ಪಾದನಾ ಗುರಿತಲುಪಿದ ವೆಸ್ಪಾ

ಇಟಾಲಿಯನ್ ಶೈಲಿಯೊಂದಿಗೆ ಸ್ಕೂಟರ್ ಉತ್ಪಾದನೆಯಲ್ಲಿ ತನ್ನದೆ ಆದ ಜನಪ್ರಿಯತೆ ಹೊಂದಿರುವ ವೆಸ್ಪಾ ಮಾದರಿಯು 75 ವರ್ಷ ಪೂರೈಸಿದ ಸಂಭ್ರಮಕ್ಕಾಗಿ ತನ್ನ ಹೈ ಎಂಡ್ ಸ್ಕೂಟರ್ ಮಾದರಿಗಳಾದ ಜಿಟಿಎಸ್ ಮತ್ತು ಪ್ರಿಮಾವೆರಾ ಆವೃತ್ತಿಗಳಲ್ಲಿ ಆ್ಯನಿವರ್ಸರಿ ಮಾದರಿಗಳನ್ನು ಬಿಡುಗಡೆ ಮಾಡಿದೆ.

MOST READ: ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಬಜೆಟ್ ಬೆಲೆಯ ಬೈಕುಗಳಿವು..!

19 ಮಿಲಿಯನ್ ಸ್ಕೂಟರ್ ಉತ್ಪಾದನಾ ಗುರಿತಲುಪಿದ ವೆಸ್ಪಾ

ದುಬಾರಿ ಬೆಲೆ ಹೊಂದಿರುವ ಜಿಟಿಎಸ್ ಮತ್ತು ಪ್ರಿಮಾವೆರಾ ಸ್ಕೂಟರ್‌ಗಳು ಸದ್ಯ ಯುರೋಪಿನ ಪ್ರಮುಖ ರಾಷ್ಟ್ರಗಳಲ್ಲಿ ಮಾತ್ರ ಲಭ್ಯವಿದ್ದು, ಈ ಎರಡು ಸ್ಕೂಟರ್‌ಗಳಲ್ಲಿ ಕಂಪನಿಯು ಆರಂಭಿಕವಾಗಿ 75ನೇ ಸಂಭ್ರಮಾಚರಣೆಯ ಮಾದರಿಗಳನ್ನು ಪರಿಚಯಿಸಿದೆ.

19 ಮಿಲಿಯನ್ ಸ್ಕೂಟರ್ ಉತ್ಪಾದನಾ ಗುರಿತಲುಪಿದ ವೆಸ್ಪಾ

75 ನೇ ವಾರ್ಷಿಕೋತ್ಸವದ ಆವೃತ್ತಿಗಳು ಈ ವರ್ಷದ ಕೊನೆಯಲ್ಲಿ ಭಾರತದಲ್ಲೂ ಮಾರಾಟಗೊಳ್ಳುವ ನಿರೀಕ್ಷೆಗಳಿದ್ದು, ಭಾರತದಲ್ಲಿ ಮಾರಾಟವಾಗುತ್ತಿರುವ ಎಲೆಗಂಟ್ 150, ಎಸ್ಎಕ್ಸ್ಎಲ್ ಮತ್ತು ನೊಟ್ಟೆ ಸ್ಕೂಟರ್ ಮಾದರಿಗಳಲ್ಲಿ ಹೊಸ ಆವೃತ್ತಿ ನೀಡುವ ಸಾಧ್ಯತೆಗಳಿವೆ. ಹೊಸ ಸ್ಪೆಷಲ್ ಎಡಿಷನ್‌ಗಳಲ್ಲಿ ಸ್ಟ್ಯಾಂಡರ್ಡ್ ಮಾದರಿಗಿಂತಲೂ ತುಸು ಹೆಚ್ಚುವರಿ ಪ್ರೀಮಿಯಂ ಫೀಚರ್ಸ್‌ಗಳನ್ನು ಅಳವಡಿಸಲಾಗುತ್ತಿದ್ದು, ಹೊಸ ಸ್ಕೂಟರ್‌ಗಳು ಸೀಮಿತ ಅವಧಿಗಾಗಿ ಮಾತ್ರ ಖರೀದಿಗೆ ಲಭ್ಯವಿರಲಿವೆ.

MOST READ: ಪ್ರತಿ ಚಾರ್ಜ್‌ಗೆ ಬರೋಬ್ಬರಿ 240ಕಿ.ಮೀ ಮೈಲೇಜ್ ನೀಡುವ ಇವಿ ಸ್ಕೂಟರ್ ಬಿಡುಗಡೆ ಮಾಡಲಿದೆ ಓಲಾ

19 ಮಿಲಿಯನ್ ಸ್ಕೂಟರ್ ಉತ್ಪಾದನಾ ಗುರಿತಲುಪಿದ ವೆಸ್ಪಾ

ಹೊಸ ಸ್ಪೆಷಲ್ ಎಡಿಷನ್ ಸ್ಕೂಟರ್‌ಗಳಲ್ಲಿ 75ನೇ ವರ್ಷದ ಸಂಭ್ರಮಾಚರಣೆಯ ಬ್ಯಾಡ್ಜ್ ಜೊತೆಗೆ ವಿವಿಧ ಸ್ಕೂಟರ್‌ಗಳಿಗೆ ಅನುಗುಣವಾಗಿ ವಿವಿಧ ಬಣ್ಣಗಳ ಆಯ್ಕೆ, ಕ್ರೋಮ್ ಫಿನಿಶಿಂಗ್‌ಗಳು, ಸೈಡ್ ಪ್ಯಾನಲ್ ಸೇರಿದಂತೆ ಇಟಾಲಿಯನ್ ಬ್ರಾಂಡ್ ಮೌಲ್ಯವನ್ನು ಹೆಚ್ಚಿಸುವ ಆಕ್ಸೆಸರಿಸ್ ಕಿಟ್ ಹೊಂದಿರಲಿವೆ.

Most Read Articles

Kannada
Read more on ವೆಸ್ಪಾ vespa
English summary
Vespa Celebrates 75 Years Anniversary; Manufactures 19 Million Scooters. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X