ಅತೀ ಶೀಘ್ರದಲ್ಲೇ ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೆ ಸಜ್ಜಾಗಿರುವ 'ಟಾಪ್ 3' 4x4 SUVಗಳು

ಭಾರತದಲ್ಲಿ 4x4 SUVಗಳ ಜನಪ್ರಿಯತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಪ್ರತಿಯೊಬ್ಬರು ಇಂತಹ ವಾಹನಗಳನ್ನು ಖರೀದಿ ಮಾಡಲು ಇಚ್ಚಿಸುತ್ತಿದ್ದಾರೆ. ಬೇಡಿಕೆಯು ದ್ವಿಗುಣಗೊಳ್ಳುತ್ತಿದ್ದು, 2023ರಲ್ಲಿ ಮೂರು ಪ್ರಮುಖ ಕಂಪನಿಗಳು ತಮ್ಮ ಹೊಸ SUVಗಳನ್ನು ಬಿಡುಗಡೆ ಮಾಡಲು ರೆಡಿಯಾಗುತ್ತಿವೆ. ದೇಶೀಯ ಮಾರುಕಟ್ಟೆಯಲ್ಲಿ ಮುಂಬರುವ 4x4 SUVಗಳು ಯಾವುವು ಎಂದು ತಿಳಿದುಕೊಳ್ಳೋಣ.

1. ಮಾರುತಿ ಸುಜುಕಿ ಜಿಮ್ನಿ
ಮಾರುತಿ ಸುಜುಕಿ ಕಂಪನಿಯು ಈಗಾಗಲೇ 5-ಡೋರ್ ಜಿಮ್ನಿ SUVಯನ್ನು ಹಲವು ಬಾರಿ ಪರೀಕ್ಷೆ ಮಾಡಿದೆ. ಇತ್ತೀಚೆಗೆ ಇದು ಲೇಹ್‌ನಲ್ಲಿ ಪರೀಕ್ಷೆ ನಡೆಸುತ್ತಿದ್ದಾಗ ಕಾಣಿಸಿತ್ತು. ಮಾರುತಿ ಸುಜುಕಿ ಜಿಮ್ನಿ, ಮಹೀಂದ್ರಾ ಥಾರ್ ಮತ್ತು ಫೋರ್ಸ್ ಗೂರ್ಖಾದೊಂದಿಗೆ ಮಾರುಕಟ್ಟೆಯಲ್ಲಿ ಸ್ಪರ್ಧಿಸಲಿದೆ. 5-ಡೋರ್ ಜಿಮ್ನಿ SUV, 3-ಡೋರ್ ಆವೃತ್ತಿಯಂತೆ ಸ್ಟೈಲಿಶ್ ಆಗಿ ಕಾಣುತ್ತದೆ. ಇಷ್ಟೇ ಅಲ್ಲದೆ, 5-ಡೋರ್ ಜಿಮ್ನಿ, ಐದು ಟ್ವಿನ್-ಸ್ಪೋಕ್ ಅಲಾಯ್ ವೀಲ್‌ಗಳು, ದೊಡ್ಡದಾದ ಬಂಪರ್, ಎರಡು ತುದಿಗಳಲ್ಲಿ ಫಾಗ್ ಲ್ಯಾಂಪ್ ಮತ್ತು ಟೈಲ್‌ಗೇಟ್-ಮೌಂಟೆಡ್ ಸ್ಪೇರ್ ವೀಲ್ ಅನ್ನು ಹೊಂದಿದೆ.

ಅತೀ ಶೀಘ್ರದಲ್ಲೇ ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೆ ಸಜ್ಜಾಗಿರುವ ಟಾಪ್ 3 4x4 SUVಗಳು

ಯಾಂತ್ರಿಕವಾಗಿ ಹೇಳುವುದಾರೆ, ಮಾರುತಿ ಜಿಮ್ನಿ ಹಿಂದಿನ ಆವೃತ್ತಿಯಂತೆ 1.5-ಲೀಟರ್, 4-ಸಿಲ್, NA ಪೆಟ್ರೋಲ್ ಎಂಜಿನ್ ಅನ್ನು ಉಳಿಸಿಕೊಳ್ಳುವ ನಿರೀಕ್ಷೆಯಿದ್ದು, ಇದು ಹೊಸದಾಗಿ ಬಿಡುಗಡೆಯಾದ ಗ್ರ್ಯಾಂಡ್ ವಿಟಾರಾ ಮತ್ತು ಬ್ರೆಜ್ಜಾಗಳಿಗೆ ಹೋಲಿಕೆ ಮಾಡಿದರೆ ಈ ಎಂಜಿನ್ 100 bhp ಮತ್ತು 130 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಜಾಗತಿಕವಾಗಿ, ಜಿಮ್ನಿಗೆ 4X4 ವ್ಯವಸ್ಥೆಯನ್ನು ನೀಡಲಾಗಿದ್ದು, ಇದು ಲೊ-ರೇಂಜ್ ಟ್ರಾನ್ಸ್‌ಪರ್ ಜೊತೆ ಬರಲಿದೆ ಎಂದು ಹೇಳಲಾಗುತ್ತಿದೆ.

2. ಫೋರ್ಸ್ ಗೂರ್ಖಾ 5-ಡೋರ್
ಫೋರ್ಸ್ ಗೂರ್ಖಾ 5-ಡೋರ್ ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲು ಸಜ್ಜಾಗುತ್ತಿದ್ದು, SUV ಪ್ರಿಯರು ಕಾಯುತ್ತಿದ್ದಾರೆ. ಇತ್ತೀಚೆಗೆ ಡೀಲರ್‌ಶಿಪ್‌ಗಳಿಂದ ಈ ಮಾಹಿತಿ ಬಹಿರಂಗವಾಗಿದೆ. ಗೂರ್ಖಾ 5-ಡೋರ್ SUVಯನ್ನು ಹೊರಗಿನಿಂದ ನೋಡಿದರೆ 3-ಡೋರ್ ಆವೃತ್ತಿಯಂತೆ ಕಾಣುತ್ತದೆ. ಇದರ ಮುಂಭಾಗದಲ್ಲಿ ಹೆಡ್‌ಲೈಟ್‌ಗಳು, ಸ್ನೊರ್ಕೆಲ್, ಬಂಪರ್‌ಗಳು ಮತ್ತು ಟೈಲ್ ಲ್ಯಾಂಪ್‌ಗಳು ಹಿಂದಿನ ಮಾದರಿಯಂತೆ ಇದ್ದು, ಈ SUV, A/T ಟೈರ್‌ಗಳೊಂದಿಗೆ ಹೊಸದಾಗಿ ವಿನ್ಯಾಸಗೊಳಿಸಲಾದ ಅಲಾಯ್ ವೀಲ್‌ಗಳು, ಉದ್ದದಾದ ವೀಲ್‌ಬೇಸ್ ಅನ್ನು ಹೊಂದಿದೆ.

ಲಾಂಚ್ ಆಗಲಿರುವ ಫೋರ್ಸ್ ಗೂರ್ಖಾ 5-ಡೋರ್ ವಾಹನದ ಪವರ್‌ಟ್ರೇನ್ ಬಗ್ಗೆ ಹೇಳುವುದಾದರೆ ಈ ವಾಹನವು 2.6-ಲೀಟರ್ ಕಾಮನ್ ರೈಲ್ ಟರ್ಬೊ ಡೀಸೆಲ್‌ನಿಂದ ಚಾಲಿತವಾಗಲಿದ್ದು, ಇದು 90 bhp ಪವರ್ ಮತ್ತು 250 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. 5-ಸ್ಪೀಡ್ ಮ್ಯಾನ್ಯುವಲ್‌ ಗೇರ್‌ಬಾಕ್ಸ್‌ನೊಂದಿಗೆ ಕಾರ್ಯನಿವಹಿಸಲಿದೆ. ಆಫ್ ರೋಡ್ ವಾಹನವನ್ನು ಓಡಿಸಲು ಹೇಳಿ ಮಾಡಿದಂತೆ ಇದೆ. ಸದ್ಯ, 2023ರ ಆರಂಭದಲ್ಲಿ ಈ SUV ಮಾರುಕಟ್ಟೆ ಪ್ರವೇಶಿಸುವ ನಿರೀಕ್ಷೆ ಇದೆ.

3. ಮಹೀಂದ್ರಾ ಥಾರ್ 5-ಡೋರ್
ಮಹೀಂದ್ರಾ ಕಂಪನಿ ಪ್ರಸ್ತುತ ಭಾರತದ ಮಾರುಕಟ್ಟೆಯಲ್ಲಿ ತನ್ನ SUV ವಾಹನಗಳ ಮಾರಾಟವನ್ನು ಬಲಪಡಿಸಲು ಸಾಕಷ್ಟು ಪ್ರಯತ್ನ ಮಾಡುತ್ತಿದೆ ಎಂದು ಹೇಳಬಹುದು. ಮೂರು ವರ್ಷಗಳಲ್ಲಿ ಮಹೀಂದ್ರಾ ಬಿಡುಗಡೆ ಮಾಡಿದ ಎಲ್ಲಾ ಮೂರು SUVಗಳು ಅತ್ಯುತ್ತಮವಾಗಿ ಗ್ರಾಹಕರನ್ನು ಸೆಳೆದಿವೆ (ಥಾರ್, XUV 700 ಮತ್ತು ಸ್ಕಾರ್ಪಿಯೋ-ಎನ್). ಮಹೀಂದ್ರಾ ಕಂಪನಿಯು ಇತ್ತೀಚೆಗೆ ಹೊಸ ಸ್ಕಾರ್ಪಿಯೊ-ಎನ್ ಮಾದರಿಯನ್ನು ಬಿಡುಗಡೆ ಮಾಡಿದ್ದು, ಈಗ ಥಾರ್‌ನ 5-ಡೋರ್ ಆವೃತ್ತಿಯನ್ನು ಜನವರಿ 2023ರಲ್ಲಿ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಲು ಸಿದ್ಧವಾಗುತ್ತಿದೆ.

5-ಡೋರ್ ಮಹೀಂದ್ರಾ ಥಾರ್ ಹೊಸ ಸ್ಕಾರ್ಪಿಯೋ-ಎನ್‌ನ ಅದೇ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ ಎಂದು ಹೇಳಲಾಗಿದೆ. ಥಾರ್ ಹಿಂಭಾಗದಲ್ಲಿ ವ್ಯಾಟ್‌ನ ಲಿಂಕೇಜ್‌ನೊಂದಿಗೆ ಮಹೀಂದ್ರಾದ ಪೆಂಟಾಲಿಂಕ್ ಸಸ್ಪೆನ್ಷನ್ ವ್ಯವಸ್ಥೆಯನ್ನು ಹೊಂದಿದೆ. ಇದು ಉತ್ತಮ ನಿರ್ವಹಣೆ ಮತ್ತು ಸೌಕರ್ಯವನ್ನು ಒದಗಿಸುತ್ತದೆ. ಪವರ್‌ಟ್ರೇನ್ ಕುರಿತು ಹೇಳುವುದಾದರೆ ಮುಂಬರುವ ಮಹೀಂದ್ರಾ ಥಾರ್ 5-ಡೋರ್ ಮಾದರಿಯು 3-ಡೋರ್ ಥಾರ್‌ನಂತೆಯೇ ಅದೇ ಎಂಜಿನ್ ಅನ್ನು ಪಡೆಯಲಿದೆ. ಇದು 150 bhp ಪವರ್ 2.0-ಲೀಟರ್ ಟರ್ಬೊ ಪೆಟ್ರೋಲ್ ಮೋಟಾರ್ ಮತ್ತು 130 bhp ಪವರ್ 2.2-ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಆಯ್ಕೆಗಳನ್ನು ಒಳಗೊಂಡಿರಲಿದೆ.

ಈ ಮಹೀಂದ್ರಾ ಥಾರ್ 5-ಡೋರ್, 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಜೊತೆಗೆ 4-ವೀಲ್-ಡ್ರೈವ್ ಆಯ್ಕೆಯನ್ನು ಹೊಂದಿದೆ. ಜೊತೆಗೆ ಸ್ಮಾರ್ಟ್‌ಫೋನ್ ಸಂಪರ್ಕದೊಂದಿಗೆ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ನ್ಯಾವಿಗೇಷನ್, ಕ್ರೂಸ್ ಕಂಟ್ರೋಲ್, ಫಾಲೋ-ಮಿ-ಹೋಮ್ ಹೆಡ್‌ಲ್ಯಾಂಪ್‌ಗಳು, ಟೈರ್ ಡೈರೆಕ್ಷನ್ ಮಾನಿಟರಿಂಗ್ ಸಿಸ್ಟಮ್, EBD ಜೊತೆಗೆ ABS, ರಿವರ್ಸ್ ಪಾರ್ಕಿಂಗ್ ಸೆನ್ಸಾರ್, ಡ್ಯುಯಲ್ ಏರ್‌ಬ್ಯಾಗ್‌ಗಳಂತಹ ವೈಶಿಷ್ಟ್ಯಗಳನ್ನು ಹೊಂದಿದ್ದು, ಫೋರ್ಸ್ ಗೂರ್ಖಾ 5-ಡೋರ್ ಮತ್ತು ಮಾರುತಿ ಸುಜುಕಿ ಜಿಮ್ನಿ 5-ಡೋರ್ ಮಾದರಿಗಳೊಂದಿಗೆ ತೀವ್ರ ಪೈಪೋಟಿ ನೀಡಲಿದೆ.

Most Read Articles

Kannada
English summary
Top 3 4x4 suv set to launch in the domestic market very soon
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X