ಟೆಸ್ಟ್ ರೈಡ್: ಆಫ್ ರೋಡ್ ಬೈಕ್ ಪ್ರೇಮಿಗಳ ಹೊಸ ಆಯ್ಕೆಯಾದ ಬಿಎಂಡಬ್ಲ್ಯು ಜಿ 310 ಜಿಎಸ್

ಬಿಎಂಡಬ್ಲ್ಯು ಸಂಸ್ಥೆಯ ಬೈಕ್ ಉತ್ಪಾದನಾ ವಿಭಾಗವಾದ ಬಿಎಂಡಬ್ಲ್ಯು ಮೊಟೊರಾಡ್ ಸಂಸ್ಥೆಯು ಭಾರತದಲ್ಲಿ ವಿವಿಧ ಮಾದರಿಯ ಪ್ರೀಮಿಯಂ ಬೈಕ್ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದು, ಕಳೆದ ತಿಂಗಳ ಹಿಂದಷ್ಟೆ ಬಿಡುಗಡೆ ಮಾಡಿರುವ ಅಗ್ಗದ ಬೆಲೆಯ ಜಿ 310 ಜಿಎಸ್ ಮತ್ತು ಜಿ 310 ಆರ್ ಬೈಕ್‌ಗಳು ಭಾರೀ ಸದ್ದು ಮಾಡುತ್ತಿವೆ. ಸೂಪರ್ ಬೈಕ್‌ ವಿಭಾಗದಲ್ಲಿ ಇದೇ ಮೊದಲ ಬಾರಿಗೆ ಅತಿ ಕಡಿಮೆ ಬೆಲೆಯಲ್ಲಿ ಹೊರತರಲಾಗಿರುವ ಬಿಎಂಡಬ್ಲ್ಯು ಹೊಸ ಬೈಕ್‌ಗಳು ಹಲವು ವಿಶೇಷತೆಗಳಿಗೆ ಕಾರಣವಾಗಿದ್ದು, ಡ್ರೈವ್‌ಸ್ಪಾರ್ಕ್ ತಂಡ ನಡೆಸಿದ ಟೆಸ್ಟ್ ರೈಡ್‌ನಲ್ಲಿ ಹೊಸ ಬೈಕ್‌ಗಳ ಎಂಜಿನ್ ದಕ್ಷತೆ ಮತ್ತು ಆಪ್ ರೋಡ್ ಕೌಶಲ್ಯಗಳು ಹೇಗಿರಲಿವೆ ಎನ್ನುವ ಬಗೆಗೆ ಇಲ್ಲಿ ಸಂಪೂರ್ಣವಾಗಿ ಚರ್ಚಿಸಲಾಗಿದೆ.

ಟೆಸ್ಟ್ ರೈಡ್: ಆಪ್ ರೋಡ್ ಬೈಕ್ ಪ್ರೇಮಿಗಳ ಹೊಸ ಆಯ್ಕೆಯಾದ ಬಿಎಂಡಬ್ಲ್ಯು ಜಿ 310 ಜಿಎಸ್

ಬಿಎಂಡಬ್ಲ್ಯು ಪರಿಚಯಿಸಿರುವ ಜಿ 310 ಜಿಎಸ್ ಮತ್ತು ಜಿ 310 ಆರ್ ಬೈಕ್‌ಗಳು ಗ್ರಾಹಕರ ಆದ್ಯತೆ ಮೇರೆಗೆ ಸಿದ್ದಗೊಂಡಿದ್ದು, ಜಿ 310 ಜಿಎಸ್ ಬೈಕ್ ಆಪ್ ರೋಡ್ ಮತ್ತು ಜಿ 310 ಆರ್ ಬೈಕ್ ಮಾದರಿಯು ದಿನನಿತ್ಯದ ಸವಾರಿಗೆ ಅನುಕೂಲಕರವಾಗುವಂತೆ ಸಿದ್ದಗೊಳಿಸಿದೆ. ಇದರಲ್ಲಿ ಡ್ರೈವ್‌ಸ್ಪಾರ್ಕ್ ತಂಡವು ಸದ್ಯ ಜಿ 310 ಜಿಎಸ್ ಬೈಕ್ ಕುರಿತು ಟೆಸ್ಟ್ ರೈಡ್ ನಡೆಸಿದ್ದು, ಅಡ್ವೆಂಚರ್ ವಿಭಾಗದಲ್ಲಿ ಹೊಸ ಬೈಕ್ ಭವಿಷ್ಯದ ಬಗೆಗೆ ವಿವಿಧ ಆಯಾಮದಲ್ಲಿ ನಡೆಸಲಾದ ಟೆಸ್ಟ್ ರೈಡ್ ಗ್ರಾಹಕರ ವಿಶ್ವಾಸಗಳಿಸುವಲ್ಲಿ ಹೇಗೆ ಸಹಕಾರಿಯಾಗಿವೆ ಎನ್ನುವುದರ ಜೊತೆಗೆ ಹೊಸ ಬೈಕ್ ಖರೀದಿಯ ಲಾಭ-ನಷ್ಟ ಕುರಿತಾಗಿ ಇಲ್ಲಿ ವಿವರಣೆ ನೀಡಲಾಗಿದೆ.

ಟೆಸ್ಟ್ ರೈಡ್: ಆಪ್ ರೋಡ್ ಬೈಕ್ ಪ್ರೇಮಿಗಳ ಹೊಸ ಆಯ್ಕೆಯಾದ ಬಿಎಂಡಬ್ಲ್ಯು ಜಿ 310 ಜಿಎಸ್

ಮೊದಲಿಗೆ ಹೇಳುವುದಾದರೇ, ಬಿಎಂಡಬ್ಲ್ಯು ಸಂಸ್ಥೆಯು ಹೊಸದಾಗಿ ಬಿಡುಗಡೆ ಮಾಡಲಾಗಿರುವ ಜಿ 310 ಜಿಎಸ್ ಬೈಕ್ ಮಾದರಿಯ ದೇಶದಲ್ಲಿ ಲಭ್ಯವಾಗಿರುವ ಅತಿ ಕಡಿಮೆ ಬೆಲೆಯ ಅತ್ಯುತ್ತಮ ಬ್ರಾಂಡ್ ಬೈಕ್ ಮಾದರಿಯಾಗಿದ್ದು, 1980ರಲ್ಲಿ ಬಿಡುಗಡೆಯಾಗಿದ್ದ ಆರ್‌ಎಸ್80 ಜಿಎಸ್ ಪ್ರೇರಣೆಯೊಂದಿಗೆ ಈ ಹೊಸ ಬೈಕ್ ಸಿದ್ದಗೊಂಡಿದೆ.

ಟೆಸ್ಟ್ ರೈಡ್: ಆಪ್ ರೋಡ್ ಬೈಕ್ ಪ್ರೇಮಿಗಳ ಹೊಸ ಆಯ್ಕೆಯಾದ ಬಿಎಂಡಬ್ಲ್ಯು ಜಿ 310 ಜಿಎಸ್

ಜಿಎಸ್ ಅಂದ್ರೆ ಜರ್ಮನ್ ಭಾಷೆಯಲ್ಲಿ Gelände/Straße(ರೋಡ್ ಮತ್ತು ಆಪ್ ರೋಡ್) ಎಂಬುವುದಾಗಿದ್ದು, ಹೊಸದಾಗಿ ಭಾರತದಲ್ಲಿ ಬಿಡುಗಡೆಗೊಂಡಿರುವ ಜಿ 310 ಜಿಎಸ್ ಬೈಕ್ ಸಹ ಆಧಾರದ ಮೇಲೆ ಸಿದ್ದವಾಗಿದ್ದು, ಭಾರತೀಯ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹೊಸ ಬೈಕ್ ನಿರ್ಮಾಣ ಮಾಡಲಾಗಿದೆ.

ಟೆಸ್ಟ್ ರೈಡ್: ಆಪ್ ರೋಡ್ ಬೈಕ್ ಪ್ರೇಮಿಗಳ ಹೊಸ ಆಯ್ಕೆಯಾದ ಬಿಎಂಡಬ್ಲ್ಯು ಜಿ 310 ಜಿಎಸ್

ಜಾಗತಿಕವಾಗಿ ಮಾರಾಟವಾಗುತ್ತಿರುವ ಆರ್‌ಎಸ್80 ಜಿಎಸ್ ಬೈಕ್‌ಗಳು 800ಸಿಸಿ ಎಂಜಿನ್ ಪ್ರೇರಣೆ ಹೊಂದಿದ್ದು, ಭಾರತದಲ್ಲಿ ಆಪ್ ರೋಡ್ ಬೈಕ್ ಮಾರಾಟ ವಿಭಾಗದಲ್ಲಿ ಹೊಸ ಬದಲಾವಣೆ ತರುವ ಉದ್ದೇಶದಿಂದ ಜಿ 310 ಜಿಎಸ್ ಬೈಕ್‌ಗಳನ್ನು 313ಸಿಸಿ ಎಂಜಿನ್ ಮಾದರಿಯೊಂದಿಗೆ ನಿರ್ಮಾಣ ಮಾಡಲಾಗಿದೆ.

ಟೆಸ್ಟ್ ರೈಡ್: ಆಪ್ ರೋಡ್ ಬೈಕ್ ಪ್ರೇಮಿಗಳ ಹೊಸ ಆಯ್ಕೆಯಾದ ಬಿಎಂಡಬ್ಲ್ಯು ಜಿ 310 ಜಿಎಸ್

ಇದೇ ಕಾರಣಕ್ಕೆ ಬೈಕ್ ಬೆಲೆಗಳಲ್ಲಿ ಭಾರೀ ಬದಲಾವಣೆಯಾಗಿದ್ದು, ಮಧ್ಯಮ ವರ್ಗದ ಗ್ರಾಹಕರು ಸಹ ಖರೀದಿಗೆ ಸಾಧ್ಯವಾಗುವಂತೆ ಬೆಲೆಗಳನ್ನು ನಿಗದಿಗೊಳಿಸಲಾಗಿದೆ. ದೆಹಲಿ ಎಕ್ಸ್‌ಶೋರೂಂ ಪ್ರಕಾರ ಜಿ 310 ಜಿಎಸ್ ಬೈಕ್ ಮಾದರಿಯು ರೂ.3.49 ಲಕ್ಷಕ್ಕೆ ಖರೀದಿಗೆ ಲಭ್ಯವಿದ್ದು, ಬಿಎಂಡಬ್ಲ್ಯು ಫ್ಯಾಗ್‌ಶಿಫ್ ಬೈಕ್ ಮಾದರಿಯಾದ ಆರ್ 1200 ಜಿಎಸ್ ಬೈಕ್ ಮಾದರಿಯಲ್ಲಿ ಹಲವು ವಿನ್ಯಾಸಗಳನ್ನು ಎರವಲು ಪಡೆಯಲಾಗಿದೆ.

ಟೆಸ್ಟ್ ರೈಡ್: ಆಪ್ ರೋಡ್ ಬೈಕ್ ಪ್ರೇಮಿಗಳ ಹೊಸ ಆಯ್ಕೆಯಾದ ಬಿಎಂಡಬ್ಲ್ಯು ಜಿ 310 ಜಿಎಸ್

ಡಿಸೈನ್ ಮತ್ತು ಸ್ಟೈಲಿಷ್

ಮೊದಲ ನೋಟದಲ್ಲೇ ಆಪ್ ರೋಡ್ ಬೈಕ್ ಸವಾರರನ್ನು ಸೆಳೆಯಬಲ್ಲ ಗುಣಹೊಂದಿರುವ ಜಿ 310 ಜಿಎಸ್ ಬೈಕ್‌ಗಳನ್ನು ಬೆಬಿ ಜಿಎಸ್ ಎಂದೇ ಜನಪ್ರಿಯವಾಗುತ್ತಿದ್ದು, ಮೇಲೆ ಹೇಳಿದ ಹಾಗೆ ಫ್ಯಾಗ್‌ಶಿಫ್ ಬೈಕ್ ಮಾದರಿಯಾದ ಆರ್ 1200 ಜಿಎಸ್ ಬೈಕ್‌ನಂತೆ ಸಿದ್ದವಾಗಿರುವುದು ಬೈಕ್ ಸವಾರರ ಆಯ್ಕೆಯ ಮೌಲ್ಯವನ್ನು ಹೆಚ್ಚಿಸಿದೆ.

ಟೆಸ್ಟ್ ರೈಡ್: ಆಪ್ ರೋಡ್ ಬೈಕ್ ಪ್ರೇಮಿಗಳ ಹೊಸ ಆಯ್ಕೆಯಾದ ಬಿಎಂಡಬ್ಲ್ಯು ಜಿ 310 ಜಿಎಸ್

ಬೈಕಿನ ತ್ರಿಕೋನಾಕಾರದ ಹೆಡ್ಲ್ಯಾಂಪ್ ಶೈಲಿಯು ಆರ್ ಮಾದರಿಯಲ್ಲಿ ಸಿದ್ದವಾಗಿದ್ದು, ಇನ್ನೊಂದು ಬೈಕ್ ಮಾದರಿಯಾದ ಜಿ 310 ಆರ್ ಬೈಕ್ ಮಾದರಿಯಲ್ಲಿನ ಎಂಜಿನ್, ಚಾರ್ಸಿ, ಚಕ್ರಗಳು ಮತ್ತು ಬ್ರೇಕ್‌ಗಳನ್ನು ಹಂಚಿಕೊಂಡರೂ ಜಿ 310 ಜಿಎಸ್ ಮಾತ್ರ ಹೆಚ್ಚು ದೊಡ್ಡದಾಗಿ ಕಾಣುತ್ತದೆ.

ಟೆಸ್ಟ್ ರೈಡ್: ಆಪ್ ರೋಡ್ ಬೈಕ್ ಪ್ರೇಮಿಗಳ ಹೊಸ ಆಯ್ಕೆಯಾದ ಬಿಎಂಡಬ್ಲ್ಯು ಜಿ 310 ಜಿಎಸ್

ಬೈಕಿನ ಮುಂಭಾಗದಲ್ಲಿ ಜೋಡಣೆ ಮಾಡಲಾಗಿರುವ ಸಣ್ಣಗಾತ್ರದ ವಿಂಡ್ ಸ್ಕ್ರೀನ್ ಸೌಲಭ್ಯವು ಅತಿಯಾದ ಗಾಳಿಯನ್ನು ತಡೆಯುವಲ್ಲಿ ಸಹಕಾರಿಯಾಗಲಿದ್ದು, ಗೋಲ್ಡ್ ಕಲರ್ ಬೈಕಿನ ಫ್ರಂಟ್ ಫೋಕ್ಸ್ ಹಾಗೂ ಟ್ಯಾಂಕ್ ಬದಿಗಳಲ್ಲಿರುವ ಪ್ಲ್ಯಾಸ್ಟಿಕ್ ಮೋಲ್ಡಿಂಗ್‌ಗಳು ಬೈಕ್ ದೊಡ್ಡದಾಗಿ ಕಾಣುವಂತೆ ಮಾಡುತ್ತವೆ.

ಟೆಸ್ಟ್ ರೈಡ್: ಆಪ್ ರೋಡ್ ಬೈಕ್ ಪ್ರೇಮಿಗಳ ಹೊಸ ಆಯ್ಕೆಯಾದ ಬಿಎಂಡಬ್ಲ್ಯು ಜಿ 310 ಜಿಎಸ್

ಹೀಗಾಗಿ ಮೊಟೊರಾಡ್ ಸಂಸ್ಥೆಯು ಹೊಸ ಬೈಕಿನಲ್ಲಿ ಗರಿಷ್ಠ ಪ್ರಮಾಣದ ಗುಣಮಟ್ಟವನ್ನು ಖಾತ್ರಿಪಡಿಸುವುದಲ್ಲದೇ ಆಪ್ ರೋಡ್ ಕೌಶಲ್ಯ ಪ್ರದರ್ಶನ ವೇಳೆ ಬೈಕ್ ಸವಾರರ ಬೇಡಿಕೆಗೆ ಅನುಗುಣವಾಗಿ ಹಲವು ಸೌಲಭ್ಯಗಳನ್ನು ಇದರಲ್ಲಿ ಇರಿಸಲಾಗಿದೆ.

ಟೆಸ್ಟ್ ರೈಡ್: ಆಪ್ ರೋಡ್ ಬೈಕ್ ಪ್ರೇಮಿಗಳ ಹೊಸ ಆಯ್ಕೆಯಾದ ಬಿಎಂಡಬ್ಲ್ಯು ಜಿ 310 ಜಿಎಸ್

ಇದರೊಂದಿಗೆ ಹೊಸ ಬೈಕಿನಲ್ಲಿ ಎಲ್ಇಡಿ ಟೈಲ್ ಲ್ಯಾಂಪ್ ಮತ್ತು ಡಬಲ್-ಲಿಟ್ ಇಂಡಿಕೇಟರ್‌ಗಳನ್ನು ಜೋಡಿಸಿರುವ ಬಿಎಂಡಬ್ಲ್ಯು ಸಂಸ್ಥೆಯು ಅತಿ ಕಡಿಮೆ ಬೆಲೆಯಲ್ಲಿ ಗರಿಷ್ಠ ಪ್ರಮಾಣದ ಸೌಲಭ್ಯಗಳನ್ನು ನೀಡಲು ಪ್ರಯತ್ನಿಸಿದೆ ಎನ್ನಬಹುದು.

ಟೆಸ್ಟ್ ರೈಡ್: ಆಪ್ ರೋಡ್ ಬೈಕ್ ಪ್ರೇಮಿಗಳ ಹೊಸ ಆಯ್ಕೆಯಾದ ಬಿಎಂಡಬ್ಲ್ಯು ಜಿ 310 ಜಿಎಸ್

ಎಂಜಿನ್ ಸಾಮರ್ಥ್ಯ

ಜಿ 310 ಜಿಎಸ್ ಬೈಕ್ ಮಾದರಿಯು ಲಿಕ್ವಿಡ್ ಕೂಲ್ಡ್ 313 ಸಿಸಿ, ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, ಇದು ಜಿ 310 ಆರ್ ಬೈಕಿಗೆ ಸಮನಾಗಿರಲಿದೆ. ಇದೇ ಎಂಜಿನ್ ಸದ್ಯ ಟಿವಿಎಸ್ ಅಪಾಚೆ ಆರ್‌ಆರ್ 310 ಬೈಕಿನಲ್ಲೂ ಸಹ ಇದ್ದು, ಜಿ 310 ಜಿಎಸ್ ಬೈಕ್‌ಗಳು ಗರಿಷ್ಠ ಎಂಜಿನ್ ದಕ್ಷತೆ ಪಡೆದುಕೊಂಡಿವೆ.

ಟೆಸ್ಟ್ ರೈಡ್: ಆಪ್ ರೋಡ್ ಬೈಕ್ ಪ್ರೇಮಿಗಳ ಹೊಸ ಆಯ್ಕೆಯಾದ ಬಿಎಂಡಬ್ಲ್ಯು ಜಿ 310 ಜಿಎಸ್

ಈ ಮೂಲಕ 33.6-ಬಿಎಚ್‌ಪಿ ಮತ್ತು 28-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿರುವ ಹೊಸ ಜಿ 310 ಜಿಎಸ್ ಬೈಕ್‌ಗಳು ಕೇವಲ 4 ಸೇಕೆಂಡುಗಳಲ್ಲಿ ಸೊನ್ನೆಯಿಂದ 60 ಕಿ.ಮಿ ವೇಗವನ್ನು ಹೊಂದುವ ಸಾಮರ್ಥ್ಯ ಹೊಂದಿವೆ.

ಟೆಸ್ಟ್ ರೈಡ್: ಆಪ್ ರೋಡ್ ಬೈಕ್ ಪ್ರೇಮಿಗಳ ಹೊಸ ಆಯ್ಕೆಯಾದ ಬಿಎಂಡಬ್ಲ್ಯು ಜಿ 310 ಜಿಎಸ್

ಟೆಸ್ಟ್ ರೈಡ್ ವೇಳೆ ಹೊಸ ಜಿ 310 ಜಿಎಸ್ ಬೈಕ್ ಮಾದರಿಯು ಪ್ರತಿ ಗಂಟೆಗೆ 140ಕಿ.ಮೀ ಟಾಪ್ ಸ್ಪೀಡ್ ಪಡೆದುಕೊಳ್ಳುವ ಮೂಲಕ ಕಠಿಣ ಭೂಪ್ರದೇಶಗಳಲ್ಲೂ ಸರಾಗವಾಗಿ ಚಲಿಸಬಲ್ಲ ಕೌಶಲ್ಯ ಪ್ರದರ್ಶಿಸಿದ್ದು, ರೋಡ್ ಮತ್ತು ಆಪ್ ರೋಡ್ ಎರಡು ಬಗೆಯಲ್ಲೂ ಇದು ಉತ್ತಮ ಬೈಕ್ ಮಾದರಿಯಾಗಿರುವುದು ಸಾಬೀತಾಗಿದೆ.

ಟೆಸ್ಟ್ ರೈಡ್: ಆಪ್ ರೋಡ್ ಬೈಕ್ ಪ್ರೇಮಿಗಳ ಹೊಸ ಆಯ್ಕೆಯಾದ ಬಿಎಂಡಬ್ಲ್ಯು ಜಿ 310 ಜಿಎಸ್

ಹೀಗಾಗಿ ಸಾಮಾನ್ಯ ರಸ್ತೆಗಳಲ್ಲಿ ಅಷ್ಟೇ ಅಲ್ಲದೇ ಪ್ರತಿಕೂಲಕರ ರಸ್ತೆಗಳಲ್ಲೂ ಸಲೀಸಾಗಿ ಸವಾರಿ ಮಾಡಬಹುದಾದ ಸೌಲಭ್ಯಗಳನ್ನು ಹೊಂದಿದ್ದು, ಕಡಿದಾದ ಇಳಿಜಾರುಗಳಲ್ಲಿ ಕೆಲವೊಮ್ಮೆ ಕಡಿಮೆ ಟಾರ್ಕ್ ಉತ್ಪಾದನೆಯಿಂದಾಗಿ ಬೈಕ್ ಸವಾರಿಗೆ ತುಸು ಹಿನ್ನೆಡೆಯಾಗುವ ಸಾಧ್ಯತೆಗಳಿರುವುದು ಟೆಸ್ಟಿಂಗ್ ವೇಳೆ ಕಂಡುಬಂತು.

ಟೆಸ್ಟ್ ರೈಡ್: ಆಪ್ ರೋಡ್ ಬೈಕ್ ಪ್ರೇಮಿಗಳ ಹೊಸ ಆಯ್ಕೆಯಾದ ಬಿಎಂಡಬ್ಲ್ಯು ಜಿ 310 ಜಿಎಸ್

ಇನ್ನು ಹೊಸ ಬೈಕ್ ಮಾದರಿಯು ಬರೋಬ್ಬರಿ 169.5 ಕೆ.ಜಿ ತೂಕ ಹೊಂದಿದ್ದು, ಡ್ಯುಯಲ್ ಚಾನೆಲ್ ಎಬಿಎಸ್, 140ಎಂಎಂ ಫ್ರಂಟ್ ಸಸ್ಷೆಷನ್, 131ಎಂಎಂ ರಿಯರ್ ಸಸ್ಷೆಷನ್, 300ಎಂಎಂ ಫ್ರಂಟ್ ಡಿಸ್ಕ್ ಮತ್ತು 200ಎಂಎಂ ರಿಯರ್ ಡಿಸ್ಕ್ ಬ್ರೇಕ್ ಸೌಲಭ್ಯವನ್ನು ಅಳವಡಿಸಲಾಗಿದೆ.

ಟೆಸ್ಟ್ ರೈಡ್: ಆಪ್ ರೋಡ್ ಬೈಕ್ ಪ್ರೇಮಿಗಳ ಹೊಸ ಆಯ್ಕೆಯಾದ ಬಿಎಂಡಬ್ಲ್ಯು ಜಿ 310 ಜಿಎಸ್

ಬಿಎಂಡಬ್ಲ್ಯು ಸಂಸ್ಥೆಯು ಬಿಡುಗಡೆಗೊಳಿಸಿರುವ ಜಿ 310 ಜಿಎಸ್ ಬೈಕ್‌ಗಳು ಸಿಂಗಲ್ ಸಿಲಿಂಡರ್ ಅಡ್ವೆಂಚರ್ ಪ್ರಿಮಿಯಂ ಬೈಕ್ ಮಾದರಿಗಳಲ್ಲೇ ಅತಿ ಕಡಿಮೆ ಬೆಲೆಗಳಲ್ಲಿ ಬಿಡುಗಡೆಯಾಗಿರುವ ಬೈಕ್ ಆವೃತ್ತಿಯಾಗಿದ್ದು, ಆಪ್ ರೋಡ್ ಮೋಟಾರ್ ಸೈಕಲ್ ಪ್ರೇಮಿಗಳಿಗೆ ಇದೊಂದು ಹಬ್ಬ ಅಂದ್ರೆ ತಪ್ಪಾಗುವುದಿಲ್ಲ.

ಟೆಸ್ಟ್ ರೈಡ್: ಆಪ್ ರೋಡ್ ಬೈಕ್ ಪ್ರೇಮಿಗಳ ಹೊಸ ಆಯ್ಕೆಯಾದ ಬಿಎಂಡಬ್ಲ್ಯು ಜಿ 310 ಜಿಎಸ್

ಮುಂಭಾಗದಲ್ಲಿ 19 ಇಂಚಿನ ವೀಲ್ಹ್‌ಗಳನ್ನ ಬಳಕೆ ಮಾಡಿದ್ದಲ್ಲಿ ಹಿಂಭಾಗ ಚಕ್ರಗಳು 17 ಇಂಚು ಗಾತ್ರ ಹೊಂದಿದ್ದು, ಸುರಕ್ಷತೆಯಲ್ಲೂ ಜಿ 310 ಜಿಎಸ್ ಬೈಕಿನಲ್ಲಿ ಹೆಚ್ಚಿನ ಗಮನಹರಿಸಲಾಗಿದೆ. ಜಿ 310 ಆರ್ ಬೈಕಿನಂತೆಯೇ ಹಲವು ವಿಭಿನ್ನ ಸೌಲಭ್ಯ ಇದರಲ್ಲಿವೆ.

ಟೆಸ್ಟ್ ರೈಡ್: ಆಪ್ ರೋಡ್ ಬೈಕ್ ಪ್ರೇಮಿಗಳ ಹೊಸ ಆಯ್ಕೆಯಾದ ಬಿಎಂಡಬ್ಲ್ಯು ಜಿ 310 ಜಿಎಸ್

ಲಭ್ಯವಿರುವ ಬಣ್ಣಗಳು- ಪ್ರಮುಖ ಮೂರು ಬಣ್ಣಗಳಲ್ಲಿ ಲಭ್ಯವಿರುವ ಜಿ 310 ಜಿಎಸ್ ಬೈಕ್‌ಗಳು ರೇಸಿಂಗ್ ರೆಡ್, ಪರ್ಲ್ ವೈಟ್ ಮೆಟಾಲಿಕ್ ಮತ್ತು ಕಾಸ್ಮಿಕ್ ಬ್ಲ್ಯಾಕ್ ಬಣ್ಣಗಳಲ್ಲಿ ಖರೀದಿಸಬಹುದು.

ಟೆಸ್ಟ್ ರೈಡ್: ಆಪ್ ರೋಡ್ ಬೈಕ್ ಪ್ರೇಮಿಗಳ ಹೊಸ ಆಯ್ಕೆಯಾದ ಬಿಎಂಡಬ್ಲ್ಯು ಜಿ 310 ಜಿಎಸ್

ಯಾಕೆ ಜಿ 310 ಜಿಎಸ್ ಖರೀದಿ ಮಾಡ್ಬೇಕು?

ಸದ್ಯ ಕಡಿಮೆ ಬೆಲೆಯಲ್ಲಿ ಜಿ 310 ಜಿಎಸ್ ಬೈಕಿನಲ್ಲಿ ಲಭ್ಯವಿರುವ ಸೌಲಭ್ಯಗಳನ್ನೇ ಹೊಂದಿರುವ ಪ್ರಮುಖ ಬೈಕ್‌ಗಳು ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿದ್ರು ಅವುಗಳಿಂತಲೂ ಭಿನ್ನ ಎನ್ನಿಸುವ ಜಿ 310 ಜಿಎಸ್ ಬೈಕ್‌ಗಳು ಆಪ್ ರೋಡ್ ಕೌಶಲ್ಯ ಪ್ರದರ್ಶನಕ್ಕೆ ಹೆಚ್ಚಿನ ಆದ್ಯತೆ ನೀಡಿದೆ.

ಟೆಸ್ಟ್ ರೈಡ್: ಆಪ್ ರೋಡ್ ಬೈಕ್ ಪ್ರೇಮಿಗಳ ಹೊಸ ಆಯ್ಕೆಯಾದ ಬಿಎಂಡಬ್ಲ್ಯು ಜಿ 310 ಜಿಎಸ್

ಹೀಗಾಗಿ ಟಿವಿಎಸ್ ಅಪಾಚೆ 310 ಆರ್‌ಆರ್ ಮತ್ತು ಕವಾಸಕಿ ನಿಂಜಾ 300 ಬೈಕಿಗೆ ಸಮನಾದ ಎಂಜಿನ್ ಹೊಂದಿದ್ದರೂ ಪ್ರೀಮಿಯಂ ವೈಶಿಷ್ಟ್ಯತೆಗಳಲ್ಲಿ ವಿಶೇಷ ಎನ್ನಿಸುವ ಜಿ 310 ಜಿಎಸ್ ಬೈಕ್‌ಗಳು ಬ್ರಾಂಡ್ ಆಧರಿತವಾಗಿ ಲೆಕ್ಕಾಚಾರ ಹಾಕಿದಾಗ ಬೆಲೆಗೆ ತಕ್ಕ ಬೈಕ್ ಮಾದರಿಯಾಗಿರುವುದನ್ನು ನಾವು ಗಮನಿಸಬಹುದಾಗಿದೆ.

ಟೆಸ್ಟ್ ರೈಡ್: ಆಪ್ ರೋಡ್ ಬೈಕ್ ಪ್ರೇಮಿಗಳ ಹೊಸ ಆಯ್ಕೆಯಾದ ಬಿಎಂಡಬ್ಲ್ಯು ಜಿ 310 ಜಿಎಸ್

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಬಿಎಂಡಬ್ಲ್ಯು ಸಂಸ್ಥೆಯು ಭಾರತದಲ್ಲಿ ಮೊದಲ ಬಾರಿಗೆ ಟಿವಿಎಸ್ ಜೊತೆಗೂಡಿ ಅಗ್ಗದ ಬೆಲೆಯಲ್ಲಿ ಜಿ 310 ಜಿಎಸ್ ಮತ್ತು ಜಿ 310 ಆರ್ ಬೈಕ್‌ಗಳನ್ನು ಅಭಿವೃದ್ಧಿಗೊಳಿಸುವ ಮೂಲಕ ಹಲವು ವಿಶೇಷತೆಗಳಿಗೆ ಕಾರಣವಾಗಿದ್ದು, ಮುಂಬರುವ ದಿನಗಳಲ್ಲಿ ಹೊಸ ಬೈಕ್ ಮಾದರಿಗಳು ಎಷ್ಟರ ಮಟ್ಟಿಗೆ ಬೇಡಿಕೆ ಪಡೆಯಲಿವೆ ಎನ್ನುವುದನ್ನ ಕಾಯ್ದುನೋಡಬೇಕಾಗಿದೆ.

Most Read Articles

ಬಿಎಂಡಬ್ಲ್ಯು ಮೊಟೊರಾಡ್ ಸಂಸ್ಥೆಯ ಜಿ 310 ಜಿಎಸ್ ಬೈಕಿನ ಫೋಟೋ ಗ್ಯಾಲರಿ..!

Kannada
Read more on bmw motorrad bike review
English summary
BMW G 310 GS Review — Comfort And Fun; Irrespective Of The Terrain.

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more