ರೋಡ್ ಟೆಸ್ಟ್ ರಿವ್ಯೂ-ಕ್ಲಾಸಿಕ್ ಶೈಲಿಯಲ್ಲಿ ಮಿಂಚಿದ ಟ್ರಯಂಫ್ ಬೋನೆವಿಲ್ಲೆ ಸ್ಪೀಡ್‍ಮಾಸ್ಟರ್..

ಟ್ರಯಂಫ್ ಬೋನ್ವಿಲ್ಲೆ ಸ್ಪೀಡ್‍‍ಮಾಸ್ಟರ್ ಬೋನ್ವಿಲ್ಲೆ ಸ್ಪೀಡ್‍ಮಾಸ್ಟರ್ ಫೋರ್ಟ್‍‍ಫೋಲಿಯೊಗೆ ಸೇರಿದ ಮತ್ತೊಂದು ಬೈಕ್ ಆಗಿದ್ದು, ಇದು ಬೋನ್ವಿಲ್ಲೆ ಬೈಕ್‍‍ಗಳ ಸರಣಿಯಲ್ಲಿ ಆರನೆಯ ಸ್ಥಾನವನ್ನು ಪದೆದುಕೊಂಡಿದೆ. ಟ್ರಯಂಫ್ ಸಂಸ್ಥೆಯು ತಮ್ಮ ಬೋನ್ವ

By Rahul Ts

ಟ್ರಯಂಫ್ ಬೋನೆವಿಲ್ಲೆ ಸ್ಪೀಡ್‍‍ಮಾಸ್ಟರ್ ಬೋನೆವಿಲ್ಲೆ ಸ್ಪೀಡ್‍ಮಾಸ್ಟರ್ ಫೋರ್ಟ್‍‍ಫೋಲಿಯೊಗೆ ಸೇರಿದ ಮತ್ತೊಂದು ಬೈಕ್ ಆಗಿದ್ದು, ಇದು ಬೋನೆವಿಲ್ಲೆ ಬೈಕ್‍‍ಗಳ ಸರಣಿಯಲ್ಲಿ ಆರನೆಯ ಸ್ಥಾನವನ್ನು ಪದೆದುಕೊಂಡಿದೆ. ಟ್ರಯಂಫ್ ಸಂಸ್ಥೆಯು ತಮ್ಮ ಬೋನೆವಿಲ್ಲೆ ಸ್ಪೀಡ್‍ಮಾಸ್ಟರ್ ರೋಡ್ ಟೆಸ್ಟ್ ರಿವ್ಯೂ ಮಾಡಲು ಡ್ರೈವ್‍‍‍ಸ್ಪಾರ್ಕ್‍‍ಗೆ ಅವಕಾಶವನ್ನು ನೀಡಿದೆ.

ರೋಡ್ ಟೆಸ್ಟ್ ರಿವ್ಯೂ-ಕ್ಲಾಸಿಕ್ ಶೈಲಿಯಲ್ಲಿ ಮಿಂಚಿದ ಟ್ರಯಂಫ್ ಬೋನೆವಿಲ್ಲೆ ಸ್ಪೀಡ್‍ಮಾಸ್ಟರ್..

ಟ್ರಯಂಫ್ ಬೋನೆವಿಲ್ಲೆ ಸ್ಪೀಡ್‍‍ಮಾಸ್ಟರ್ ಒಂದು ಕ್ಲಾಸಿಕ್ ಕ್ರೂಸರ್ ಬೈಕ್ ಆಗಿದ್ದು, ಪರ್ಫಾರ್ಮೆನ್ಸ್ ಅನುಭವವನ್ನು ಸವಿಯಲು ಬಯಸುವ ಚಾಲಕರಿಗೆ ಇದೊಂದು ಉತ್ತಮ ಬೈಕ್ ಆಗಿದೆ. ಬೋನೆವಿಲ್ಲೆ ಸ್ಪೀಡ್‍ಮಾಸ್ಟರ್‍ ಬೈಕ್ ನಮ್ಮೊಂದಿಗೆ ಎರಡು ದಿನಗಳ ಕಾಲ ಉಳಿದಿದ್ದು, ಈ ಎರಡು ದಿನಗಳಲ್ಲಿ ಈ ಬೈಕ್‍ ರೈಡಿಂಗ್‍‍ನ ಅನುಭವವನ್ನು ನಾವಿಂದು ನಿಮಗೆ ನೀಡಲಿದ್ದೇವೆ.

ರೋಡ್ ಟೆಸ್ಟ್ ರಿವ್ಯೂ-ಕ್ಲಾಸಿಕ್ ಶೈಲಿಯಲ್ಲಿ ಮಿಂಚಿದ ಟ್ರಯಂಫ್ ಬೋನೆವಿಲ್ಲೆ ಸ್ಪೀಡ್‍ಮಾಸ್ಟರ್..

ಮೊದಲನೆಯದಾಗಿ ಬೋನೆವಿಲ್ಲೆ ಸ್ಪೀಡ್‍ಮಾಸ್ಟರ್ ತನ್ನ ಬೃಹತ್ ಆಕಾರದಿಂದ ರಸ್ತೆಯಲ್ಲಿ ಪ್ರಯಾಣದ ವೇಳೆ ಹಲವರ ಆಕರ್ಷಣೆಗೆ ಗುರಿಯಾಯಿತು. ಈ ಮೋಟರ್‍‍ಸೈಕಲ್ ಟ್ರಯಂಫ್ ಬಾಬರ್ ಪ್ಲಾಟ್‍‍ಫಾರ್ಮ್‍ ಅನ್ನು ಆದರಿಸಿದ್ದು, ಮತ್ತು ಅದೇ ಪ್ಲಾಟ್‍‍ಫಾರ್ಮ್‍‍ನ ಚಾಸಿಸ್ ಅನ್ನು ಹಂಚಿಕೊಂಡಿದೆ. ಆದರೆ ಸ್ಪೀಡ್‍ಮಾಸ್ಟರ್ ಬಾಬರ್‍‍‍ನಂತೆ ಅಲ್ಲದೇ ಪರಿಪೂರ್ಣವಾದ ಕ್ರೂಸರ್ ಬೈಕ್ ಎಂದೇ ಹೇಳಬಹುದು.

ರೋಡ್ ಟೆಸ್ಟ್ ರಿವ್ಯೂ-ಕ್ಲಾಸಿಕ್ ಶೈಲಿಯಲ್ಲಿ ಮಿಂಚಿದ ಟ್ರಯಂಫ್ ಬೋನೆವಿಲ್ಲೆ ಸ್ಪೀಡ್‍ಮಾಸ್ಟರ್..

ಬೈಕಿನ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ಸ್ ನ ನಡುವಲ್ಲಿ ವೃತ್ತಾಕಾರದ ಹೆಡ್‍‍ಲೈಟ್ ಕ್ಲಸ್ಟರ್ ಅನ್ನು ಪಡೆದುಕೊಂಡಿದೆ. ಇದರಲ್ಲಿ ಅಳವಡಿಸಲಾಗಿರುವ ಪೂರ್ಣ ಎಲ್ಇಡಿ ಯೂನಿಟ್ ಸೂರ್ಯನ ಬೆಳಕಿನಲ್ಲಿ ಬಹು ಪ್ರಕಾಶಮಾನವಾಗಿ ಕಾಣಿಸುತ್ತದೆ. ಆಲದೇ ಈ ಬೈಕ್ ಪೂರ್ಣ ಎಲ್ಇಡಿ ಟೈಲ್‍‍ಲೈಟ್ ಅನ್ನು ಕೂಡ ಪಡೆದಿದೆ.

ರೋಡ್ ಟೆಸ್ಟ್ ರಿವ್ಯೂ-ಕ್ಲಾಸಿಕ್ ಶೈಲಿಯಲ್ಲಿ ಮಿಂಚಿದ ಟ್ರಯಂಫ್ ಬೋನೆವಿಲ್ಲೆ ಸ್ಪೀಡ್‍ಮಾಸ್ಟರ್..

ದೊಡ್ಡದಾದ ಅನಲಾಗ್ ಸ್ಪೀಡೋಮೀಟರ್ ಮತ್ತು ಸಣ್ಣ ಡಿಜಿಟಲ್ ಡಿಸ್ಪ್ಲೇಯೊಂದಿಗೆ ಮೋಟಾರ್ಸೈಕಲ್ ಸಿಂಗಲ್-ಪಾಡ್ ಇನ್ಸ್ಟ್ರೂಮೆಂಟ್ ಕ್ಲಸ್ಟರ್ ಹೊಂದಿದೆ. ಕ್ಲಸ್ಟರ್ ಬಲಭಾಗದದಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದು ಇದರಲ್ಲಿ ಗೇರ್-ಸ್ಥಾನದ ಸೂಚಕ, ಟ್ರಿಪ್ ಮೀಟರ್, ರಿಯಲ್-ಟೈಮ್ ಎಫಿಶಿಯನ್ಸಿ, ರೇಂಜ್, ವಿದ್ಯುತ್ ವಿಧಾನಗಳು ಮತ್ತು ಟೇಕೊಮೀಟರ್ ವಿವರಗಳನ್ನು ಸಣ್ಣ ಪರದೆಯು ಸಂಯೋಜಿಸುತ್ತದೆ.

ರೋಡ್ ಟೆಸ್ಟ್ ರಿವ್ಯೂ-ಕ್ಲಾಸಿಕ್ ಶೈಲಿಯಲ್ಲಿ ಮಿಂಚಿದ ಟ್ರಯಂಫ್ ಬೋನೆವಿಲ್ಲೆ ಸ್ಪೀಡ್‍ಮಾಸ್ಟರ್..

ಇನ್ನು ಸ್ಪೀಡ್‍‍ಮಾಸ್ಟರ್ 12 ಲೀಟರ್‍‍ನ ಫ್ಯುಯಲ್ ಟ್ಯಾಂಕ್‍‍ನ ಮೇಲೆ ಕ್ರೋಮ್ ಫಿನಿಷ್‍ನೊಂದಿಗೆ ಟ್ರಯಂಫ್ ಬ್ಯಾಡ್ಜಿಂಗ್ ಅನ್ನು ಪಡೆದುಕೊಂಡಿದೆ. ಆದರೇ ಇದರ ಟ್ಯಾಂಕ್ ಸೈಜ್ ಕ್ರೂಸರ್ ಬೈಕ್‍‍ಗಳಿಗೆ ಹೋಲಿಸಿದರೆ ಕಡಿಮೆಯೆ, ಏಕೆಂದರೆ ಈ ಬೈಕ್ ನೀಡುವ ಮೈಲೇಜ್‍‍ಗೆ ಧೀರ್ಘಕಾಲದ ಪ್ರಯಾಣದಲ್ಲಿ ಸುಮಾರು 160ಕಿಲೋಮೀಟರ್‍‍ನ ನಂತರ ನಿಂತು ಹೋಗುತ್ತದೆ.

ರೋಡ್ ಟೆಸ್ಟ್ ರಿವ್ಯೂ-ಕ್ಲಾಸಿಕ್ ಶೈಲಿಯಲ್ಲಿ ಮಿಂಚಿದ ಟ್ರಯಂಫ್ ಬೋನೆವಿಲ್ಲೆ ಸ್ಪೀಡ್‍ಮಾಸ್ಟರ್..

ಬಾಬರ್ ಬ್ರಿಟಿಷ್ ಉತ್ಪಾದಕರ ಜನಪ್ರಿಯ ಮೋಟಾರ್‍‍ಸೈಕಲ್‍ಗಳಲ್ಲಿ ಒಂದಾಗಿದ್ದು ಎಲ್ಲದಕ್ಕೂ ನೆಚ್ಚಿನ ಮಾದರಿಯಾಗಿದೆ. ಆದರೆ ಇದು ಕೆಲವು ನ್ಯೂನತೆಗಳನ್ನು ಹೊಂದಿದ್ದು; ಒಂದೆಡೆಗೆ ಹಿಂಬದಿಯ ಸವಾರರ ಸೀಟ್ ಕೊರತೆಯಾದರೆ ಮತ್ತೊಂದೆಡೆ ಸ್ಪೀಡ್‍‍ಮಾಸ್ಟರ್ ಬೈಕ್ ಹಿಂಬದಿಯ ಸೀಟ್ ಮತ್ತು ಲಗೇಜ್ ಪ್ಯಾನಿಯರ್‍‍ಗಳನ್ನು ಪಡೆದುಕೊಂಡಿದೆ.

ರೋಡ್ ಟೆಸ್ಟ್ ರಿವ್ಯೂ-ಕ್ಲಾಸಿಕ್ ಶೈಲಿಯಲ್ಲಿ ಮಿಂಚಿದ ಟ್ರಯಂಫ್ ಬೋನೆವಿಲ್ಲೆ ಸ್ಪೀಡ್‍ಮಾಸ್ಟರ್..

ರೋಡ್‍ ಟೆಸ್ಟಿಂಗ್ ರಿವ್ಯೂ ವೇಳೆ ನಮ್ಮೊಂದಿಗಿದ್ದ ಸ್ಪೀಡ್‍ಮಾಸ್ಟರ್ ಬೈಕ್‍‍ನಲ್ಲಿ ಕ್ಲಾಸಿಕ್ ಕಿಟ್ ಅನ್ನು ಅಳವಡಿಸಲಾಗಿದ್ದು, ಇದರಲ್ಲಿ ದೊಡ್ಡ ಗಾತ್ರದ ವಿಂಡ್‍‍ಸ್ಕ್ರೀನ್, ಸೌಕರ್ಯವಾದ ಚಾಲಕನ ಮತ್ತು ಬ್ಯಾಕ್‍‍ರೆಸ್ಟ್ ನೊಂದಿಗೆ ಹಿಂಬದಿಯ ಸೀಟ್ ಇದ್ದು ಜೊತೆಗೆ ಮಾವೆರಿಕ್ ಕಿಟ್ ಕೂಡ ಅಳವಡಿಸಲಾಗಿತ್ತು.

ರೋಡ್ ಟೆಸ್ಟ್ ರಿವ್ಯೂ-ಕ್ಲಾಸಿಕ್ ಶೈಲಿಯಲ್ಲಿ ಮಿಂಚಿದ ಟ್ರಯಂಫ್ ಬೋನೆವಿಲ್ಲೆ ಸ್ಪೀಡ್‍ಮಾಸ್ಟರ್..

ಈ ಬೈಕಿನ ಮತ್ತೊಂದು ಆಕರ್ಷಕ ಭಾಗವೆಂದರೆ ಇದರ ಹಿಂಭಾಗ. ಈ ಬೈಕಿನ ಹಿಂಭಾಗದಲ್ಲಿ ಮೋನೊಷಾಕ್ ಅಬ್ಸಾರ್ಬರ್ ಅನ್ನು ಪಡೆದುಕೊಂಡಿದ್ದು, ಇದಲದೆ ಫೌಕ್ಸ್ ಕಾರ್ಬೋರೇಟರ್ಸ್, ಚಾಪ್ಡ್ ಟ್ವಿನ್ ಎಕ್ಸಾಸ್ಟ್ ಮತ್ತು ಹ್ಯಾಂಡಲ್‍‍ಬಾರ್‍‍ಗಳನ್ನು ಒದಗಿಸಲಾಗಿದೆ.

ರೋಡ್ ಟೆಸ್ಟ್ ರಿವ್ಯೂ-ಕ್ಲಾಸಿಕ್ ಶೈಲಿಯಲ್ಲಿ ಮಿಂಚಿದ ಟ್ರಯಂಫ್ ಬೋನೆವಿಲ್ಲೆ ಸ್ಪೀಡ್‍ಮಾಸ್ಟರ್..

ರೆಟ್ರೋ ಮಾಡರ್ನ್ ವಿನ್ಯಾಸವನ್ನು ಹೊಂದಿರುವ ಈ ಬೈಕ್ ನೋಡಲು ಬಹು ಆಕರ್ಷಕವಾಗಿದ್ದು, ಈ ಬೈಕಿನ ಫಿನಿಷಿಂಗ್ ಅನ್ನು ಕೂಡಾ ತುಂಬಾ ಅಚ್ಚುಕಟ್ಟಾಗಿ ಡಿಸೈನ್ ಮಾಡಲಾಗಿದೆ. ಒಟ್ಟಾರೆಯಾಗಿ ಬೋನೆವಿಲ್ಲೆ ಸ್ಪೀಡ್‍‍ಮಾಸ್ಟರ್ ರೆಟ್ರೋ ಮಾದರಿಯ ಮಾಡರ್ನ್ ಕ್ರೂಸರ್ ಬೈಕಿನ ಅನುಭವವನ್ನು ನೀಡುತ್ತದೆ.

ರೋಡ್ ಟೆಸ್ಟ್ ರಿವ್ಯೂ-ಕ್ಲಾಸಿಕ್ ಶೈಲಿಯಲ್ಲಿ ಮಿಂಚಿದ ಟ್ರಯಂಫ್ ಬೋನೆವಿಲ್ಲೆ ಸ್ಪೀಡ್‍ಮಾಸ್ಟರ್..

ಎಂಜಿನ್ ಸಾಮರ್ಥ್ಯ

ಸ್ಪೀಡ್‍‍ಮಾಸ್ಟರ್ 1200ಸಿಸಿ ಹೈ ಟಾರ್ಕ್, ಪ್ಯಾರಲಲ್ ಟ್ವಿನ್ ಎಂಜಿನ್ ಅನ್ನು ಹೊಂದಿದ್ದು, ಸರಾಸರಿಯಾಗಿ 76ಬಿಹೆಚ್‍‍ಪಿ ಮತ್ತು 106ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂದಿದೆ. ಮತ್ತು ಎಂಜಿನ್ ಅನ್ನು 6 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ರೋಡ್ ಟೆಸ್ಟ್ ರಿವ್ಯೂ-ಕ್ಲಾಸಿಕ್ ಶೈಲಿಯಲ್ಲಿ ಮಿಂಚಿದ ಟ್ರಯಂಫ್ ಬೋನೆವಿಲ್ಲೆ ಸ್ಪೀಡ್‍ಮಾಸ್ಟರ್..

ಥ್ರೊಟಲ್‍‍ನಲ್ಲಿನ ಸಾಫ್ಟ್ ಟ್ವಿಸ್ಟ್ ಕ್ಷಣದ ನೋಟೀಸ್‍‍ನಲ್ಲಿ 260 ಕಿ.ಗ್ರಾಂ ಬೆಹೆಮೊಥ್ನಿಂದಟ್ರಿಪಲ್-ಡಿಜಿಟ್ ವೇಗವನ್ನು ಹೆಚ್ಚಿಸುತ್ತದೆ. ಇದು ಕ್ಲಚ್ ಟಾರ್ಕ್ ಅಸ್ಸಿಸ್ಟ್ ಮಾಡುತ್ತದೆ ಮತ್ತು ಟ್ರಾಫಿಕ್ ಪರಿಸ್ಥಿತಿಗಳನ್ನು ನಿಲ್ಲಿಸಲು ಮತ್ತು ನಿಜವಾಗಿಯೂ ಸೂಕ್ಷ್ಮ ಅನುಭವವನ್ನು ನೀಡುತ್ತದೆ. ಒಂದು ಅನಾನುಕೂಲವೆಂದರೆ ಮೋಟಾರುಸೈಕಲ್ ಟ್ರಾಫಿಕ್‍‍ನಲ್ಲಿ ಸಿಕ್ಕಿಬಿದ್ದಾಗ ಎಂಜಿನ್‍‍ಣ ಭಾಗವು ಸ್ವಲ್ಪಮಟ್ಟಿಗೆ ಬಿಸಿಯಾಗಲು ಶುರುಮಾಡುತ್ತದೆ. ರೇಡಿಯೇಟರ್ ಫ್ಯಾನ್ ಬಿಸಿ ಗಾಳಿಯನ್ನು ಸವಾರರ ಕಾಲಿಗೆ ತಟ್ಟುವ ಹಾಗೆ ಮಾಡುತ್ತದೆ.

ರೋಡ್ ಟೆಸ್ಟ್ ರಿವ್ಯೂ-ಕ್ಲಾಸಿಕ್ ಶೈಲಿಯಲ್ಲಿ ಮಿಂಚಿದ ಟ್ರಯಂಫ್ ಬೋನೆವಿಲ್ಲೆ ಸ್ಪೀಡ್‍ಮಾಸ್ಟರ್..

ರೈಡ್-ಬೈ-ವೈರ್ ಥ್ರೊಟಲ್ ರೈನ್ ಮತ್ತು ರೋಡ್ ಎಂಬ ಎರಡು ರೈಡಿಂಗ್ ಮೋಡ್‍‍ಗಳನು ಒದಗಿಸುತ್ತದೆ. ರೋಡ್ ಮೋಡ್‍ನಲ್ಲಿ, ಪೂರ್ಣ ಶಕ್ತಿಯು ಪ್ರಸ್ತಾಪವನ್ನು ಹೊಂದಿದೆ. ಆದರೆ ರೈನ್ ಮೋಡ್‍‍ನಲ್ಲಿ (ಜಾರು ಪರಿಸ್ಥಿತಿಗಳಿಗೆ), ಥ್ರೊಟಲ್ ಪ್ರತಿಕ್ರಿಯೆ ಹೋಲಿಸಿದರೆ ಸ್ವಲ್ಪ ಕಡಿಮೆಯಾಗಿದೆ. ಈ ಮೋಟಾರ್‍‍ಸೈಕಲ್‍‍ನಲ್ಲಿ ಕ್ರೂಸ್ ಕಂಟ್ರೋಲ್ ಕೂಡ ಇದೆ ಹಾಗು ಎಬಿಎಸ್ ಮತ್ತು ಟ್ರ್ಯಾಕ್ಷನ್ ಕಂಟ್ರೋಲ್ (ಸ್ವಿಚ್ಬಲ್) ಅನ್ನು ಸ್ಟ್ಯಾಂಡರ್ಡ್ ಆಗಿ ಅಳವಡಿಸಲಾಗಿದೆ.

ರೋಡ್ ಟೆಸ್ಟ್ ರಿವ್ಯೂ-ಕ್ಲಾಸಿಕ್ ಶೈಲಿಯಲ್ಲಿ ಮಿಂಚಿದ ಟ್ರಯಂಫ್ ಬೋನೆವಿಲ್ಲೆ ಸ್ಪೀಡ್‍ಮಾಸ್ಟರ್..

ಟ್ರಯಂಫ್ ಸ್ಪೀಡ್‍‍‍ಮಾಸ್ಟರ್‍‍ನ ಅನಾಕೂಲತೆ ಎಂದರೆ ಇದರಲ್ಲಿನ ಗ್ರೌಂಡ್ ಕ್ಲಿಯರೆನ್ಸ್. ಹಿಂಬದಿಯ ಸವಾರರೊಂದಿದೆ, ಮೋಟಾರ್‍‍ಸೈಕಲ್ ರಸ್ತೆಯ ಮೇಲೆ ಪ್ರತಿಯೊಂದು ಪ್ರಮುಖ ಅನಿಶ್ಚಿತತೆಯ ಮೇಲೆ ಅದರ ಅಂಡರ್‍‍ಬೆಲ್ಲಿಯನ್ನು ತಾಕುವ ಹಾಗೆ ಮಾಡುತ್ತದೆ. ಸ್ಪೀಡ್‍‍ಮಾಸ್ಟರ್ ಬೈಕ್ ಅನ್ನು ರಸ್ತೆಯ ಕಾರ್ನರ್‍‍ಗಳಲ್ಲಿ ಟರ್ನ್ ಮಾಡಿದಾಗ ಇದರ ಫುಟ್‍‍ಫೆಗ್‍‍ಗಳು ರಸ್ತೆಯನ್ನು ಮುಟ್ಟುತ್ತದೆ. ಆದ್ದರಿಂದ, ಬೋನೆವಿಲ್ಲೆ ಸ್ಪೀಡ್‍‍ಮಾಸ್ಟರ್ ಆದರ್ಶ ಮೋಟಾರ್ಸೈಕಲ್ ಒಂದು ಅಲ್ಲವೆಂದು ಹೇಳಬಹುದು

ರೋಡ್ ಟೆಸ್ಟ್ ರಿವ್ಯೂ-ಕ್ಲಾಸಿಕ್ ಶೈಲಿಯಲ್ಲಿ ಮಿಂಚಿದ ಟ್ರಯಂಫ್ ಬೋನೆವಿಲ್ಲೆ ಸ್ಪೀಡ್‍ಮಾಸ್ಟರ್..

ಸಸ್ಪೆಂಷನ್ ಕಠಿಣ ಭಾಗದಲ್ಲಿದೆ ಮತ್ತು ಸವಾರರು ಟಾರ್ಮ್ಯಾಕ್ ಸ್ಥಿತಿಯ ಸಣ್ಣದೊಂದು ವ್ಯತ್ಯಾಸಗಳನ್ನು ಸಹ ಅನುಭವಿಸಬಹುದು. ಬೆನ್ನಿನ ಸಮಸ್ಯೆಗಳಿರುವ ರೈಡರ್‍‍ಗಳು ಇದರಲ್ಲಿ ಧೀರ್ಘ ಸವಾರಿ ಮಾಡಲು ಕಷ್ಟವಾಗಬಹುದು. ಟ್ರಯಂಫ್ ಸ್ಪೀಡ್‍‍ಮಾಸ್ಟರ್ ಬೈಕ್‍‍ನಲ್ಲಿ 16 ಇಂಚಿನ ಎವೊನ್ ಕೋಬ್ರಾ ಟೈರ್‍‍ಗಳನ್ನು ಅಳವಡಿಸಲಾಗಿದೆ.

ರೋಡ್ ಟೆಸ್ಟ್ ರಿವ್ಯೂ-ಕ್ಲಾಸಿಕ್ ಶೈಲಿಯಲ್ಲಿ ಮಿಂಚಿದ ಟ್ರಯಂಫ್ ಬೋನೆವಿಲ್ಲೆ ಸ್ಪೀಡ್‍ಮಾಸ್ಟರ್..

ಮೈಲೇಜ್

ಬೋನೆವಿಲ್ಲೆ ಸ್ಪೀಡ್‍‍ಮಾಸ್ಟರ್ ಕ್ರೂಸರ್ ಬೈಕ್ ನಗರ ಭಾಗದಲ್ಲಿ ಪ್ರತೀ ಕಿಲೋಮೀಟರ್‍‍ಗೆ 17 ಕಿಲೋಮೀಟರ್‍ ಮೈಲೇಜ್ ನೀಡಿದರೆ, ಹೆದ್ದಾರಿಗಳಲ್ಲಿ 21 ಕಿಲೋಮೀಟರ್ ಮೈಲೇಜ್ ನೀಡುತ್ತದೆ. ಮೇಲಿ ಹೇಳಿದ ಹಾಗೆ ಇದರಲ್ಲಿನ ಫ್ಯುಯಲ್ ಟ್ಯಾಂಕ್ ಸಾಮರ್ಥ್ಯದೊಂದಿಗೆ ಸುಮಾರು 160 ರಿಂದ 170 ಕಿಲೋಮೀಟರ್ ಅನ್ನು ತಲುಪಬಹುದಾಗಿದೆ.

ರೋಡ್ ಟೆಸ್ಟ್ ರಿವ್ಯೂ-ಕ್ಲಾಸಿಕ್ ಶೈಲಿಯಲ್ಲಿ ಮಿಂಚಿದ ಟ್ರಯಂಫ್ ಬೋನೆವಿಲ್ಲೆ ಸ್ಪೀಡ್‍ಮಾಸ್ಟರ್..

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಟ್ರಯಂಫ್ ಬೋನೆವಿಲ್ಲೆ ಸ್ಪೀಡ್‍‍ಮಾಸ್ಟರ್ ಬೈಕ್ ಕಠಿಣವಾದ ಸಸ್ಪೆಂಷನ್ ಮತ್ತು ಎಂಜಿನ್ ಹೀಟಿಂಗ್ ಎಂಬ ನೂನ್ಯತೆಯನ್ನು ಪಡೆದಿದೆ. ಭಾರತೀಯ ಮಾರುಕಟ್ಟೆಯಲ್ಲಿ 13.40 ಲಕ್ಷದ ಆನ್‍‍ರೋಡ್ ಬೆಲೆಯನ್ನು ಪಡೆದುಕೊಂಡಿರುವ ಈ ಬೈಕ್ ರೆಟ್ರೋ ಮಾದರಿಯ ಕ್ಲಾಸಿಕ್ ಕ್ರೂಸರ್ ಮೋಟರ್‍‍ಸೈಕಲ್ ಅನುಭವವನ್ನು ಪಕ್ಕ ನೀಡುತ್ತದೆ.

Most Read Articles

Kannada
English summary
Triumph Bonneville Speedmaster Road Test Review — A Retro Looking Modern Classic Cruiser.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X