ಬ್ರಿಯೊ ಖರೀದಿಸುವ ಮುನ್ನ ನನ್ನ ಅನುಭವ ಕೇಳಿ

Posted By: * ಪಿಸಿ
Honda Biro Readars review
ಹೋಂಡಾ ಕಂಪನಿಯ ಬ್ರಿಯೊ ನನ್ನ ಕನಸಿನ ಕಾರು. ಖರೀದಿಸುವ ಮುನ್ನ ನನ್ನ ಸ್ನೇಹಿತರೊಬ್ಬರ ಕಾರಲ್ಲಿ ಸಾಕಷ್ಟು ಟೆಸ್ಟ್ ಡ್ರೈವ್ ಮಾಡಿದೆ. ಅಷ್ಟೊಂದು ಅಗ್ಗದ ದರಕ್ಕೆ ಇಷ್ಟು ಸುಂದರ ಕಾರು ಸಿಗುತ್ತೆ ಅನ್ನೋದು ನನಗೆ ಅಚ್ಚರಿ. ಆ ಕಾರಿನ ಕೆಲವು ವಿಷಯಗಳ ಬಗ್ಗೆ ನನ್ನ ಗಮನಕ್ಕೆ ಬಂದ ಅಂಶಗಳು ಈ ಕೆಳಗಿನಂತಿವೆ.

ಮೊದಲ ಬಾರಿಗೆ ಬ್ರಿಯೊ ಕಾರಿನೊಳಗೆ ಕುಳಿತವರಿಗೆ ಅದರ ಇಂಟಿರಿಯರ್ ಗುಣಮಟ್ಟ ಮುಖದಲ್ಲಿ ಅಚ್ಚರಿ ಹುಟ್ಟಿಸುತ್ತದೆ. ಅದರ ಡ್ಯಾಷ್ ಬೋರ್ಡ್, ಸೀಟುಗಳು, ಗಮನಸೆಳೆಯುತ್ತವೆ. ಡ್ರೈವರಿಗಿಂತ ದೂರದಲ್ಲಿ ಅಂದರೆ ಮುಂಭಾಗದಲ್ಲಿ ಕುಳಿತುಕೊಳ್ಳುವ ಪ್ರಯಾಣಿಕನ ಮುಂದೆ ಸ್ಟೀರಿಯೊ ಇಡಲಾಗಿದೆ.

ಸಣ್ಣದಾಗಿ ಆರಾಮವಾಗಿ ಹಿಡಿದುಕೊಳ್ಳಬಹುದಾದ ಸ್ಟಿಯರಿಂಗ್ 3 ಸ್ಪೋಕ್ ವಿನ್ಯಾಸ ಹೊಂದಿದೆ. ಆದರೆ ಸ್ಟೀಯರಿಂಗ್ ವೀಲ್ ಗೆ ಚರ್ಮದ ಹೊದಿಕೆಯಿಲ್ಲ. ಡ್ರೈವರ್ ಸೀಟು ಎತ್ತರದ ಹೊಂದಾಣಿಕೆ ಫೀಚರು ಕೂಡ ಇಲ್ಲ. ಇದು ಎತ್ತರದ ಹ್ಯಾಚ್ ಬ್ಯಾಕ್ ಕಾರು ಅಲ್ಲವಾಗಿರುವುದರಿಂದ ಸೀಟು ತಗ್ಗಿನಲ್ಲಿದೆ. ಕಾರಿನೊಳಗೆ ಸಾಕಷ್ಟು ಸ್ಥಳಾವಕಾಶವೂ ಇದೆ. ಕಾರಿನ ತೂಕ (kerb) ಜಾಝ್ ಗಿಂತ 135 ಕೆ.ಜಿ ಕಡಿಮೆಯಿದೆ.

ಬ್ರಿಯೊ ಇಂಟಿರಿಯರ್ ಕಾಂಪ್ಯಾಕ್ಟ್ ಮಾದರಿಯಾದ್ದಾಗಿದೆ. ಅಂದ್ರೆ ಸ್ವಿಫ್ಟ್ ಕಾರಿನ ಇಂಟಿರಿಯರ್ ಗಾತ್ರದ್ದೇ ಆಗಿದೆ. ಈ ಕಾರಿನೊಳಗೆ ನಾಲ್ಕು ಜನರು ಆರಾಮವಾಗಿ ಕುಳಿತುಕೊಳ್ಳಬಹುದಾಗಿದೆ. ಆದರೆ ಐದು ಜನರು ಕುಳಿತುಕೊಂಡರೆ ಕಂಫರ್ಟ್ ಎನಿಸದು. ಹಿಂಭಾಗದ ಸೀಟು ಸಣ್ಣದಾಗಿದ್ದು ಉದ್ದದ ವ್ಯಕ್ತಿ ಕುಳಿತರೆ ಸ್ವಲ್ಪ ಸಮಯದಲ್ಲಿ ಆತನಿಗೆ ಕತ್ತು ನೋವು ಸುರುವಾದೀತು.

ಹೋಂಡಾ ಬ್ರಿಯೊ ಇಂಧನ ದಕ್ಷತೆ ಪ್ರತಿಲೀಟರ್ ಗೆ ಸುಮಾರು 19.6 ಕಿ.ಮೀ. ಇದೆ. ಬ್ರಿಯೊ ಕಾರಿನಲ್ಲಿ ಇಷ್ಟವಾಗದ ಅಂಶವೆಂದರೆ ಇದು ತುಂಬಾ ಸಣ್ಣ ಕಾರು. ಎಕ್ಸ್ ಟೀರಿಯರ್ ವಿನ್ಯಾಸ ಆಕರ್ಷಕ. ಇದರ ಕುರಿತು ನನ್ನ ಯಾವುದೇ ದೂರು ಇಲ್ಲ. ನಾನು ಬ್ರಿಯೊ ಕಾರು ಖರೀದಿಸಲು ನಿರ್ಧರಿಸಿಬಿಟ್ಟೆ. (ಕನ್ನಡ ಡ್ರೈವ್ ಸ್ಪಾರ್ಕ್)

ಹೋಂಡಾ ಬ್ರಿಯೊ ನನಗೆ ಇಷ್ಟವಾದ ಅಂಶ

* ಪ್ರಮುಖವಾಗಿ ಇದರ ದರ ಕಡಿಮೆ

* ಐ-ವಿಟೆಕ್ ಎಂಜಿನ್

* ಇಂಟಿರಿಯರ್ ಗುಣಮಟ್ಟ ಸೂಪರ್

ಇಷ್ಟವಾಗದ ಅಂಶ

* ಡಿಫಾಗರ್, ಸಿಡಿ ಪ್ಲೇಯರ್ ಮತ್ತು ಡ್ರೈವರ್ ಸೀಟು ಹೊಂದಾಣಿಕೆ ಇಲ್ಲ

* ಸಣ್ಣದಾದ 125 ಲೀಟರ್ ಬೂಟ್ ಸ್ಥಳಾವಕಾಶ

* ಹಿಂಬದಿ ಪ್ರಯಾಣಿಕರಿಗೆ ಸಾಕಷ್ಟು ಸ್ಥಳಾವಕಾಶವಿಲ್ಲ. ಉದ್ದದ ವ್ಯಕ್ತಿಗಳಿಗೆ ಕುಳಿತುಕೊಳ್ಳುವುದು ಕಷ್ಟ.

ಆವೃತ್ತಿ  ದರ
 ಬ್ರಿಯೊ ಇ  3.95 ಲಕ್ಷ ರು.
 ಬ್ರಿಯೊ ಎಸ್  4.35 ಲಕ್ಷ ರು.
 ಬ್ರಿಯೊ ಎಸ್ ಆಪ್ಷನ್  4.91 ಲಕ್ಷ ರು.
 ಬ್ರಿಯೊ ವಿ  5.1 ಲಕ್ಷ ರು.
   
English summary
Honda Biro Readars review: Honda Brio best car to buy. You know why biro is best? Read Brio Review, Price, details and specifications.
Story first published: Thursday, November 10, 2011, 12:19 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark