ಮಾತನಾಡುವ ಕಾರುಗಳು: ಮಾತಾಡು ಮಾತಾಡು ಮಲ್ಲಿಗೆ!

ಕೆಲವು ವಾರಗಳ ಹಿಂದೆ ಮಾತನಾಡುವ ವಾಹನಗಳು ಅಮೆರಿಕದಲ್ಲಿ ಅಚ್ಚರಿ ಹುಟ್ಟಿಸಿವೆ. ಸುಮಾರು 2,800ರಷ್ಟು ಕಾರುಗಳು, ಟ್ರಕುಗಳು ಮತ್ತು ಬಸ್ಸುಗಳು ಪರಸ್ಪರ ಸಂವಹನ ನಡೆಸಿ ಮಿಚಿಗನ್ ನಗರದ ರಸ್ತೆಯಲ್ಲಿ ಶಿಸ್ತಾಗಿ ಚಲಿಸಿವೆ. ಈ ವಾಹನಗಳು ತಮ್ಮೊಳಗೆ ಪರಸ್ಪರ ಸಂವಹನ ನಡೆಸಿವೆ.

ವಯರ್ ಲೆಸ್ ಸಾಧನದ ಮೂಲಕ ವಾಹನಗಳು ಪರಸ್ಪರ ಸಂವಹನ ನಡೆಸಿವೆ. ಮುಂದೆ ಪೆಟ್ರೋಲ್ ಬಂಕ್ ಎಲ್ಲಿದೆ? ಮುಂದಿನ ರಸ್ತೆಯಲ್ಲಿ ಅಪಾಯವಿದೆಯೇ? ವಾತಾವರಣ ಹೇಗಿದೆ? ಅಲ್ಲಿ ರೆಸ್ಟೂರೆಂಟ್ ಇದೆಯಾ? ಸಂಚಾರ ದಟ್ಟಣೆ ಹೇಗಿದೆ? ಇತ್ಯಾದಿ ಮಾಹಿತಿಗಳನ್ನು ಕಾರುಗಳು ವಿನಿಮಯ ಮಾಡಿಕೊಂಡಿವೆ.

ವಾಹನಗಳು ಪರಸ್ಪರ ಸಂವಹನ ನಡೆಸುವಂತೆ ಮಾಡುವ ಈ ಸಾಧನವು ಸಂಭಾವ್ಯ ಅಪಘಾತಗಳನ್ನು ತಪ್ಪಿಸಲಿವೆ ಎಂದು ಅಮೆರಿಕ ಸಾರಿಗೆ ವಿಭಾಗ ಅಭಿಪ್ರಾಯಪಟ್ಟಿದೆ. ಈ ಸಾಧನವನ್ನು ಎಲ್ಲಾ ವಾಹನಗಳು ಅಳವಡಿಸುವಂತೆ ಸೂಚಿಸಲಾಗಿದೆ. ಸದ್ಯ ಸುಮಾರು 500 ಕಾರುಗಳು ಇಂತಹ ಸಾಧನವನ್ನು ಅಳವಡಿಸಿಕೊಂಡಿವೆ.

ಇಂತಹದ್ದೇ ಸಾಧನವನ್ನು ಫೋಕ್ಸ್ ವ್ಯಾಗನ್ ಜಿಟಿಐ ಕಾರು ಅಳವಡಿಸಿದೆ. ಕಾರಿನ ಬ್ರೇಕ್ ಲೈಟ್ ಆನ್ ಆಗುವ ಮುನ್ನವೇ ಕಾರಿನ ಮುಂಭಾಗದಲ್ಲಿ ಯಾವುದಾದರೂ ಅಪಾಯವಿದ್ದರೆ ಕಾರು ನಿಧಾನವಾಗುತ್ತದೆ. ಆಡಿ ಕೂಡ ಇಂತಹ ಸಾಧನವನ್ನು ಪರೀಕ್ಷಾತ್ಮಕವಾಗಿ ಅಳವಡಿಸುತ್ತಿದೆ.

ಆದರೆ ನೂತನ ಸಾಧನವು ಕಾರುಗಳ ನಡುವೆ ಸಂವಹನ ಏರ್ಪಾಡುವಂತೆ ಮಾಡುತ್ತದೆ. ಕಾರಿನಲ್ಲಿರುವ ವಿಶೇಷ ಸಾಧನವು ಪಕ್ಕದ ಕಾರಿಗೆ ಮಾಹಿತಿ ರವಾನಿಸುತ್ತದೆ. ಕಾರುಗಳ ಮಾತುಗಳನ್ನು ಚಾಲಕ ಸರಿಯಾಗಿ ಆಲಿಸಿದರೆ(ಆಕಳಿಸದೆ) ಭವಿಷ್ಯದಲ್ಲಿ ಅಪಘಾತಗಳು ಕಡಿಮೆಯಾಗುವುದರಲ್ಲಿ ಸಂಶಯವಿಲ್ಲ.

Most Read Articles

Kannada
English summary
Speaking Cars in Ann Arbor, Michigan. Recently More then 2,00 cars, Trucks and Buses start talkin to each other. Vehicles new Wireless devices will allow the vehicles to send signals to each other.
Story first published: Thursday, August 23, 2012, 12:15 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X