ಟಾಟಾ ನ್ಯಾನೊ: ಮರೆಯಲಾಗದ ಸಿಹಿಕಹಿ ನೆನಪು

ರತನ್ ಟಾಟಾ ಕನಸಿನ ಕೂಸು ನ್ಯಾನೊ ಆಗಮಿಸಿ ಮೂರು ವರ್ಷಗಳು ಕಳೆದಿವೆ. ಈ ಮೂರು ವರ್ಷಗಳು ನ್ಯಾನೊ ಪಾಲಿಗೆ ಹೂವಿನ ಹಾಸಿಗೆಯಾಗಿರಲಿಲ್ಲ. ಕಲ್ಲುಮುಳ್ಳು ಮಾತ್ರವಲ್ಲದೇ ಬೆಂಕಿಯ ಹಾದಿಯಾಗಿತ್ತು. ಸವಾಲುಗಳನ್ನು ಎದುರಿಸಿ ಎದೆಗುಂದದೆ ಹೊಸ ಸಾಧ್ಯತೆಗಳತ್ತ ದೃಷ್ಟಿಹರಿಸುತ್ತಿರುವ ನ್ಯಾನೊ ಕಾರು ನಡೆದು ಬಂದ ಹಾದಿ ನೆನಪಿಸಿಕೊಳ್ಳಲು ಇದು ಸೂಕ್ತ ಸಮಯವೂ ಹೌದು.

ಟಾಟಾ ನ್ಯಾನೊ: ಇದು ಜಗತ್ತಿನ ಅಗ್ಗದ ಕಾರು. ದರ 1.50 ಲಕ್ಷ ರು.ನಿಂದ 2.16 ಲಕ್ಷ ರು. ಆಸುಪಾಸಿನಲ್ಲಿದೆ. ಇತ್ತೀಚೆಗೆ 2012ರ ನೂತನ ನ್ಯಾನೊ ಆವೃತ್ತಿ ಕೂಡ ಆಗಮಿಸಿದೆ. ಪ್ರಯಾಣಿಕ ಸಣ್ಣಕಾರು ಮಾರುಕಟ್ಟೆಯಲ್ಲಿ ಎಲ್ಲರ ಮೆಚ್ಚುಗೆಗೆ ನ್ಯಾನೊ ಪಾತ್ರವಾಗಿದೆ.

ಆರಂಭ ವಿಗ್ನ: ಒಂದು ಲಕ್ಷ ರುಪಾಯಿಗೆ ಕಾರು ಖರೀದಿಸುವ ಕನಸನ್ನು ದೇಶದ ಜನರಲ್ಲಿ ರತನ್ ಟಾಟಾ ಮೂಡಿಸಿದ್ದರು. ರಸ್ತೆಗಿಳಿಯುವ ಮುನ್ನವೇ ಇದು ಹೊಸ ಹೈಪ್ ಉಂಟು ಮಾಡಿತ್ತು. ಆದರೆ ಪಶ್ಚಿಮ ಬಂಗಾಳವು ನ್ಯಾನೊ ಕಾರಿಗೆ ಆರಂಭ ವಿಗ್ನ ಮಾಡಿತ್ತು. ಸಿಂಗೂರು ಭೂವಿವಾದ ನ್ಯಾನೊ ಪಾಲಿಗೆ ನಷ್ಟವುಂಟು ಮಾಡಿತ್ತು. ನಂತರ ಗುಜರಾತಿಗೆ ನ್ಯಾನೊ ಘಟಕ ಸ್ಥಳಾಂತರವಾಯಿತು.

ಅನಾವರಣ: ಪ್ರಪ್ರಥಮ ಬಾರಿಗೆ ನ್ಯಾನೊ ಅನಾವರಣ ಮಾಡಿದ್ದು 2008ರ ಜನವರಿ ತಿಂಗಳಲ್ಲಿ. ಆ ಸಮಯದಲ್ಲಿ ರತನ್ ಟಾಟಾ ಆಸ್ಪತ್ರೆಯಲ್ಲಿದ್ದರು. ಅವರಿಗೆ ಕೈಕಾಲು ಆಡಿಸಲು ಸಾಧ್ಯವಾಗದಂತೆ ಇಂಜೆಕ್ಷನ್ ಪವರಿನಿಂದ ಮರಗಟ್ಟಿ ಹೋಗಿದ್ದರು. ಸ್ಟ್ರೆಚರ್(ಕೈ ಮಂಚ) ಮೇಲೆ ಮಲಗಿಕೊಂಡೇ ಹೋಗಿ ನ್ಯಾನೊ ಅನಾವರಣ ಮಾಡಿದ್ದರು. ಇದೊಂದು ಭಾವುಕ ಕಥೆ.

ನ್ಯಾನೊ ಬೆಂಕಿ: ನ್ಯಾನೊ ಕಾರಿನ ಕುರಿತು ಜನಮೆಚ್ಚುಗೆ ಕುರಿತು ಅಪಸ್ವರಕ್ಕೆ ಕಾರಣವಾದದ್ದು ಬೆಂಕಿ. ಹಲವು ನ್ಯಾನೊ ಕಾರುಗಳು ಬೆಂಕಿಗಾಹುತಿಯಾಗುವ ಮೂಲಕ ಖರೀದಿದಾರರಲ್ಲಿ ಭೀತಿ ಹುಟ್ಟಿಸಿತು. ನಂತರ ಕಂಪನಿಯು ಕಾರಲ್ಲಿ ಬೆಂಕಿ ಕಾಣಿಸಿಕೊಳ್ಳುವ ಸಮಸ್ಯೆಯನ್ನು ಪರಿಹರಿಸಿತು. ಉರಿದು ಹೋದ ನ್ಯಾನೊ ಕಾರುಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

ಮಹಿಳೆಯರ ನೆಚ್ಚಿನ ಕಾರು: ಟಾಟಾ ಮೋಟರ್ಸ್ ನಡೆಸಿದ ಸಮೀಕ್ಷೆಗಳ ಪ್ರಕಾರ ದೇಶದಲ್ಲಿ ನ್ಯಾನೊ ಮಹಿಳೆಯರ ಅಚ್ಚುಮೆಚ್ಚಿನ ಕಾರೆಂಬ ಖ್ಯಾತಿ ಪಡೆದಿದೆ. ಬೆಂಗಳೂರು ಮಹಿಳೆಯರಿಗಂತೂ ನ್ಯಾನೊ ಅಚ್ಚುಮೆಚ್ಚು ಎನ್ನುವುದು ಸಾಬೀತಾಗಿದೆ.

ನೇಪಾಳದಲ್ಲಿ ಫೇಮಸ್: ಜಗತ್ತಿನ ಅಗ್ಗದ ಕಾರು ನ್ಯಾನೊಗೆ ನೇಪಾಳದಲ್ಲಿ ಅತ್ಯಧಿಕ ಬೇಡಿಕೆ ಕಾಣುತ್ತಿದೆ. ನೇಪಾಳಕ್ಕೆ ನ್ಯಾನೊ ಆಗಮಿಸಿದ ಮೂರೇ ದಿನಗಳಲ್ಲಿ ಸುಮಾರು 200 ಗ್ರಾಹಕರು ಬುಕ್ಕಿಂಗ್ ಮಾಡಿಕೊಂಡಿದ್ದರು. ಕಂಪನಿಯ ನಿರೀಕ್ಷೆಗೂ ಮೀರಿ ನೇಪಾಳದಲ್ಲಿ ನ್ಯಾನೊಗೆ ಮೆಚ್ಚುಗೆ ವ್ಯಕ್ತವಾಗಿದೆ.

ನ್ಯಾನೊ ಬಹುಮಾನ: ಲಕ್ಕಿ ಡ್ರಾ ಇತ್ಯಾದಿಗಳಿಗೆ ಬಹುಮಾನ ನೀಡುವ ಜನಪ್ರಿಯ ವಾಹನವಾಗಿ ನ್ಯಾನೊ ಹೊರಹೊಮ್ಮಿದೆ. ಜನಸಂಖ್ಯೆ ನಿಯಂತ್ರಣ ಅಪರೇಷನ್ ಮಾಡಿಸಿಕೊಳ್ಳುವರಿಗೆ ನ್ಯಾನೊ ಕಾರು ಗೆಲ್ಲುವ ಅವಕಾಶವನ್ನು ನೀಡಲಾಗಿತ್ತು. ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿ, ನ್ಯಾನೊ ಕಾರು ಗೆಲ್ಲಿರಿ.

ಪೊಲೀಸ್ ವಾಹನ: ಮುಂಬೈ ಪೊಲೀಸರು ಕಳ್ಳರನ್ನು ಹಿಡಿಯಲು, ಗಸ್ತು ತಿರುಗಲು ನ್ಯಾನೊ ಕಾರನ್ನು ಬಳಕೆ ಮಾಡಲು ಆರಂಭಿಸಿದ್ದಾರೆ. ಇದಕ್ಕಾಗಿ ಹಲವು ನ್ಯಾನೊ ಕಾರುಗಳನ್ನು ಆರ್ಡರ್ ಮಾಡಿದ್ದರು. ನಂತರ ಗೋವಾ ಪೊಲೀಸರು ಕೂಡ ನ್ಯಾನೊ ಕಾರನ್ನು ಪೊಲೀಸ್ ಗಸ್ತು ವಾಹನವಾಗಿ ಬಳಕೆ ಮಾಡಲು ಪ್ರಯತ್ನಿಸಿದ್ದರು.

ಸಿಎನ್‌ಜಿ ನ್ಯಾನೊ: ಡೀಸೆಲ್ ನ್ಯಾನೊ ಹೊರತರುವ ಯೋಜನೆ ಕಂಪನಿಗಿದೆ. ಕಂಪನಿಯು ದೆಹಲಿ ವಾಹನ ಪ್ರದರ್ಶನದಲ್ಲಿ ಸಿಎನ್ ಜಿ ನ್ಯಾನೊ ಪ್ರದರ್ಶಿಸಿತ್ತು.

ಜಾಗತಿಕವಾಗಿ: ನ್ಯಾನೊ ಕಾರಿಗೆ ವಿಶ್ವದೆಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. "ಕಡಿಮೆ ವೆಚ್ಚದ ಕಾರು ಸೆಗ್ಮೆಂಟಿನಲ್ಲಿ ಒಂದು ಲಕ್ಷ ರುಪಾಯಿ ಅಥವಾ 3 ಸಾವಿರ ಡಾಲರ್ ಕಾರನ್ನು ಜಾಗತಿಕ ಗುಣಮಟ್ಟದೊಂದಿಗೆ ಉತ್ಪಾದಿಸಿರುವುದು ನಿಜಕ್ಕೂ ಗ್ರೇಟ್" ಎಂದು ಅಮೆರಿಕದ ಆರ್ಥಿಕ ಪ್ರಗತಿ, ಶಕ್ತಿ ಮತ್ತು ಪರಿಸರ ವಿಭಾಗದ ಕಾರ್ಯದರ್ಶಿ ರಾಬರ್ಟ್ ಡಿ ಹಾರ್ಮೆಟ್ಸ್ ಹೇಳಿದ್ದರು.

Most Read Articles

Kannada
English summary
Tata Nano 3rd Year Journey, Highlights. Its fiery times for Tata Nano. Women's favorite car Nano. Tata nano catches fire. CNG Nano, Diesel Nano. Read Tata Nano highlights.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X