ಸದ್ಯದಲ್ಲೇ ಟಾಟಾ ಕ್ಸೆನಾನ್ ಪಿಕಪ್ ಲಾಂಚ್

Written By:

ಭಾರತ ವಾಣಿಜ್ಯ ಮಾರುಕಟ್ಟೆಯಲ್ಲಿ ಟಾಟಾ ಕ್ಸೆನಾನ್ ಪಿಕಪ್‌ಗಳಿಗೆ ಉತ್ತಮ ಬೇಡಿಕೆಯಿದೆ. ಪ್ರಸ್ತುತ ದೇಶದ ಅತಿ ದೊಡ್ಡ ವಾಹನ ತಯಾರಿಕ ಕಂಪನಿಯಾಗಿರುವ ಟಾಟಾ ಮೋಟಾರ್ಸ್, ತನ್ನ ಜನಪ್ರಿಯ ಕ್ಸೆನಾನ್ ಪಿಕಪನ್ನು ಆಸ್ಟ್ರೇಲಿಯಾದಲ್ಲಿ ಲಾಂಚ್ ಮಾಡುವ ಯೋಜನೆ ಹೊಂದಿದೆ.

ಈ ಮೂಲಕ ವಿದೇಶದಲ್ಲೂ ಉತ್ತಮ ಮಾರಾಟ ಕಾಯ್ದುಕೊಳ್ಳುವ ನಿರೀಕ್ಷೆಯನ್ನು ಟಾಟಾ ಹೊಂದಿದೆ. ಎಂಟ್ರಿ ಲೆವೆಲ್ ಪಿಕಪ್‌ಗಳಲ್ಲಿ ಸ್ಥಾನ ಪಡೆದಿರುವ ಕ್ಸೆನಾನ್ ಮುಂಬರುವ ಅಕ್ಟೋಬರ್ ತಿಂಗಳಲ್ಲಿ ಆಸ್ಟ್ರೇಲಿಯಾ ರಸ್ತೆಗಿಳಿಯುವ ನಿರೀಕ್ಷೆಯಿದೆ.

ಬಲ್ಲ ಮೂಲಗಳ ಪ್ರಕಾರ ಟಾಟಾ ಕ್ಸೆನಾನ್ ಪಿಕಪ್‌ಗಳಿಗೆ, ಕಾಂಗಾರೂ ನಾಡಿನಲ್ಲಿ ಉಥ್ತಮ ಬೇಡಿಕೆ ಸಿಗುವ ನಿರೀಕ್ಷೆಯಿದೆ. ಆಸ್ಟ್ರೇಲಿಯಾದ ಫ್ಯೂಶನ್ ಆಟೋಮೋಟಿವ್ ಟಾಟಾ ಕ್ಸೆನಾನ್ ಪಿಕಪ್‌ಗಳ ವಿತರಣೆಯನ್ನು ನಡೆಸಲಿದೆ.

ಟಾಟಾ ಕ್ಸೆನಾನ್ ಪಿಕಪ್ 2.2 ಲೀಟರ್ DICOR ಡೀಸೆಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, 148 ಹಾರ್ಸ್ ಪವರ್ ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ. ಇದು 5 ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ನಿಂದ ನಿಯಂತ್ರಿಸಲ್ಪಡಲಿದೆ. ಒಟ್ಟು ಆರು ವೆರಿಯಂಟ್‌ಗಳಲ್ಲಿ ಟಾಟಾ ಕ್ಸೆನಾನ್ ಪಿಕಪ್ ಲಭ್ಯವಿರಲಿದೆ. ಕ್ಯಾಬ್ ಚಾಸೀಸ್, ಸಿಂಗಲ್ ಕ್ಯಾಬ್, ಡಬಲ್ ಕ್ಯಾಬ್ ಬಾಡಿ ಸ್ಟೈಲ್ 4x4 ಮತ್ತು 4x2 ವರ್ಷನ್‌ಗಳಲ್ಲಿ ಕಾಣಿಸಿಕೊಳ್ಳಲಿದೆ.

ಹಾಗೆಯೇ ಡ್ಯುಯಲ್ ಏರ್ ಬ್ಯಾಗ್, ಎಬಿಎಸ್, ಇಎಸ್‌ಪಿ, ಏರ್‌ಕಾನ್, ಪವರ್ ಸ್ಟೀರಿಂಗ್, ಆಡಿಯೋ ಸಿಸ್ಟಂ ಹಾಗೂ ಬ್ಲ್ಯೂಟೂತ್, ಯುಎಸ್‌ಬಿ, ಆಕ್ಸ್ ಇನ್ ಕನೆಕ್ಟಿವಿಟಿ ಸೇವೆ ಲಭ್ಯವಿರಲಿದೆ. ಇದರ ಜತೆ ಟಚ್ ಸ್ಕ್ರೀನ್ ಮಲ್ಟಿ ಮೀಡಿಯಾ ಮಾಹಿತಿ ಸಿಸ್ಟಂ ಹಾಗೂ ರಿಯರ್ ಪಾರ್ಕಿಂಗ್ ಕ್ಯಾಮೆರಾ ತಂತ್ರಜ್ಞಾನಗಳು ಲಭ್ಯವಿರಲಿದೆ.

ಇದು 35,000 ಆಸ್ಟ್ರೇಲಿಯನ್ ಡಾಲರ್‌ಗೆ ಆಗಮನವಾಗರಿದೆ. ಅಂದರೆ ಭಾರತೀಯ ರುಪಾಯಿ ಪ್ರಕಾರ 20.36 ಲಕ್ಷ ರು.ಗಳಾಗಿರಲಿದೆ.

English summary
Tata Motors is vying for a significant market share in Australia’s entry-level pickup segment with the Xenon.
Story first published: Monday, August 26, 2013, 11:19 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark