ಮಾನ್ಸೂನ್ ವೇಳೆಯಲ್ಲಿ ತಂಪಾಗಿಸಲಿರುವ ನೂತನ ಕಾರುಗಳು

Written By:

ಕಳೆದೆರಡು ವರ್ಷಗಳ ಅವಧಿಯಲ್ಲಿ ಭಾರತೀಯ ವಾಹನ ಮಾರುಕಟ್ಟೆ ಅದರಲ್ಲೂ ಪ್ರಮುಖವಾಗಿಯೂ ಪ್ರಯಾಣಿಕ ಕಾರು ಮಾರುಕಟ್ಟೆಯಲ್ಲಿ ಕ್ರಾಂತಿಕಾರಿ ಬದಲವಾವಣೆಗಳು ಕಂಡುಬಂದಿದೆ. ಅನೇಕ ನೂತನ ಮತ್ತು ಪರಿಷ್ಕೃತ ಕಾರುಗಳು ನಿರಂತರ ಅವಧಿಯಲ್ಲಿ ಬಿಡುಗಡೆಯಾಗುತ್ತಲೇ ಇದು, ಈಗಲೂ ಈ ಪ್ರಕ್ರಿಯೆ ಧನಾತ್ಮಕ ಅಂಶವಾಗಿ ಮುಂದುವರಿಯುತ್ತಿದೆ.

ಈಗ ಬಿಸಿಲ ದೆಗೆಯ ನಂತರ ಗ್ರಾಹಕರು ಮಳೆಗಾಲವನ್ನು ಬರಮಾಡಿಕೊಳ್ಳಲು ಸಜ್ಜಾಗುತ್ತಿದೆ. ವಾಹನ ಮಾರುಕಟ್ಟೆ ಸಹ ಇದರಿಂದ ಹೊರತಾಗಿಲ್ಲ. ಮಾನ್ಸೂನ್ ವೇಳೆಯಲ್ಲಿ ಸುರಿಯುವ ಮಳೆ ಹೇಗೆ ಪ್ರಕೃತಿಯನ್ನು ತಂಪಾಗಿಸಲಿದೆಯೋ ಅದೇ ರೀತಿ ಮುಂಚೂಣಿಯ ವಾಹನ ಸಂಸ್ಥೆಗಳು ಕೆಲವು ಗಮನಾರ್ಹ ಮಾದರಿಗಳನ್ನು ಬಿಡುಗಡೆ ಮಾಡಲು ಸಜ್ಜಾಗುತ್ತಿದೆ.

01. ದಟ್ಸನ್ ರೆಡಿ ಗೊ

01. ದಟ್ಸನ್ ರೆಡಿ ಗೊ

ಈಗಾಗಲೇ ಭರ್ಜರಿ ಅನಾವರಣ ಕಂಡಿರುವ ದಟ್ಸನ್ ರೆಡಿ ಗೊ ಬುಕ್ಕಿಂಗ್ ಪ್ರಕ್ರಿಯೆ ಆರಂಭಗೊಂಡಿದ್ದು, ಜೂನ್ ಮೊದಲ ವಾರದಿಂದಲೇ ವಿತರಣೆ ಆರಂಭವಾಗಲಿದೆ. ರೆನೊ ಕ್ವಿಡ್ ಹಂಚಿಕೊಂಡಿರುವ ಅದೇ ಸಿಎಂಎಫ್-ಎಂ ತಳಹದಿಯಲ್ಲಿ ನಿರ್ಮಾಣವಾಗಿರುವ ದಟ್ಸನ್ ರೆಡಿ ಗೊ 799 ಸಿಸಿ ತ್ರಿ ಸಿಲಿಂಡರ್ ಎಂಜಿನ್ ಪಡೆಯಲಿದ್ದು, ಐದು ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಸಹ ಕಾಣಬಹುದಾಗಿದೆ.

 ದಟ್ಸನ್ ರೆಡಿ ಗೊ

ದಟ್ಸನ್ ರೆಡಿ ಗೊ

ದಟ್ಸನ್ ರೆಡಿ ಗೊ ಅಂದಾಜು 2.5 ಲಕ್ಷ ರು.ಗಳಿಂದ ಗರಿಷ್ಠ 3.5 ಲಕ್ಷ ರು.ಗಳ ಬೆಲೆ ಪರಿಧಿಯಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಹೊಂದಲಾಗಿದೆ. ಒಟ್ಟಿನಲ್ಲಿ ಈ ಕ್ರಾಸೋವರ್ ಶೈಲಿಯ ಎಂಟ್ರಿ ಲೆವೆಲ್ ಕಾರನ್ನು ಭಾರತೀಯರು ಹೇಗೆ ಬರ ಮಾಡಿಕೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

02. ಫೋಕ್ಸ್ ವ್ಯಾಗನ್ ಎಮಿಯೊ

02. ಫೋಕ್ಸ್ ವ್ಯಾಗನ್ ಎಮಿಯೊ

ಕಾಂಪಾಕ್ಟ್ ಸೆಡಾನ್ ಕಾರು ವಿಭಾಗಕ್ಕೂ ಕಾಲಿಟ್ಟಿರುವ ಜರ್ಮನಿಯ ಮೂಲದ ಫೋಕ್ಸ್ ವ್ಯಾಗನ್, ಕೈಗೆಟುಕುವ ದರಗಳಲ್ಲಿ ಗುಣಮಟ್ಟದ ಕಾರೊಂದನ್ನು ಕೊಡುಗೆಯಾಗಿ ನೀಡುತ್ತಿದೆ. ಅದುವೇ, ಎಮಿಯೊ. ಪ್ರಮುಖವಾಗಿಯೂ ದೇಶದ ಮಾರುಕಟ್ಟೆಯನ್ನು ಗುರಿಯಾಗಿರಿಸಿಕೊಂಡು ನಿರ್ಮಿಸಿರುವ ಫೋಕ್ಸ್ ವ್ಯಾಗನ್ ಎಮಿಯೊ ಈ ಸೆಗ್ಮೆಂಟ್ ನಲ್ಲಿ ಇದೇ ಮೊದಲ ಬಾರಿಗೆ ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ, ರೈನ್ ಸೆನ್ಸಿಂಗ್ ವೈಪರ್, ಕ್ರೂಸ್ ಕಂಟ್ರೋಲ್ ಮುಂತಾದ ವೈಶಿಷ್ಟ್ಯಗಳನ್ನು ನೀಡಲಿದೆ.

ಫೋಕ್ಸ್ ವ್ಯಾಗನ್ ಎಮಿಯೊ

ಫೋಕ್ಸ್ ವ್ಯಾಗನ್ ಎಮಿಯೊ

ಫೋಕ್ಸ್ ವ್ಯಾಗನ್ ಎಮಿಯೊ 1.2 ಲೀಟರ್ ಎಂಪಿಐ ಪೆಟ್ರೋಲ್ ಮತ್ತು 1.5 ಲೀಟರ್ ಡೀಸೆಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು, ಏಳು ಸ್ಪೀಡ್ ಡಿಎಸ್ ಜಿ ಗೇರ್ ಬಾಕ್ಸ್ ಇದರಲ್ಲಿರುತ್ತದೆ. ಇನ್ನು ಸುರಕ್ಷತೆಗೂ ಆದ್ಯತೆ ಕೊಡಲಾಗಿದ್ದು, ಡ್ಯುಯಲ್ ಏರ್ ಬ್ಯಾಗ್ ಮತ್ತು ಎಬಿಎಸ್ ಸ್ಟ್ಯಾಂಡರ್ಡ್ ಆಗಿ ದೊರಕುವ ಸಾಧ್ಯತೆಯಿದೆ. ಇನ್ನು 5.5 ಲಕ್ಷ ರು.ಗಳಿಂದ 8.5 ಲಕ್ಷ ರು.ಗಳ ಬೆಲೆ ಪರಿಧಿಯಲ್ಲಿ ಬಿಡುಗಡೆಯಾಗಲಿರುವ ನಿರೀಕ್ಷೆ ಹೊಂದಿರುವ ಫೋಕ್ಸ್ ವ್ಯಾಗನ್ ಎಮಿಯೊ ಜೂನ್ ಮಧ್ಯಂತರ ಅವಧಿಯಲ್ಲಿ ಬಿಡುಗಡೆಯಾಗಲಿದೆ.

03. ಟಾಟಾ ಹೆಕ್ಸಾ

03. ಟಾಟಾ ಹೆಕ್ಸಾ

ದೇಶದ ಅತಿ ದೊಡ್ಡ ವಾಹನ ಸಂಸ್ಥೆ ಟಾಟಾ ಮೋಟಾರ್ಸ್ ಕಳೆದ ಕೆಲವು ಸಮಯಗಳಿಂದ ಹೆಕ್ಸಾ ಕ್ರೀಡಾ ಬಳಕೆಯ ವಾಹನವನ್ನು ತೆರೆಮರೆಯಲ್ಲಿ ಸಜ್ಜು ಮಾಡುವ ಬಗ್ಗೆ ನಾವು ವರದಿ ಮಾಡಿರುತ್ತೇವೆ. ಪ್ರಸ್ತುತ ಟಾಟಾರಿ ಆರಿಯಾ ತಳಹದಿಯ ನೂತನ ಪ್ರೀಮಿಯಂ ಎಸ್ ಯುವಿ 2016 ಜೂನ್ ತಿಂಗಳಲ್ಲಿ ಬಿಡುಗಡೆಯಾಗಲಿದೆ.

ಟಾಟಾ ಹೆಕ್ಸಾ

ಟಾಟಾ ಹೆಕ್ಸಾ

ದೊಡ್ಡದಾದ ಫ್ರಂಟ್ ಗ್ರಿಲ್, ಬಂಪರ್, ಎಲ್ ಇಡಿ ಟೈಲ್ ಲ್ಯಾಂಪ್, ಲೆಥರ್ ಸೀಟು, ಟಚ್ ಸ್ಕ್ರೀನ್ ಇನ್ಪೋಟೈನ್ಮೆಂಟ್ ಸಿಸ್ಟಂ, ಆರು ಏರ್ ಬ್ಯಾಗ್, ಎಬಿಎಸ್ ಮುಂತಾದ ವೈಶಿಷ್ಟ್ಯಗಳನ್ನು ಪಡೆಯಲಿರುವ ಟಾಟಾ ಹೆಕ್ಸಾ ವ್ಯಾರಿಕೋರ್ 400 ಡೀಸೆಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದೆ. ಪ್ರಸ್ತುತ ಎಸ್ ಯುವಿ 13ರಿಂದ 18 ಲಕ್ಷ ರು.ಗಳ ಅಸುಪಾಸಿನಲ್ಲಿ ಬಿಡುಗಡೆಯಾಗಲಿದೆ.

04. ಮರ್ಸಿಡಿಸ್ ಬೆಂಝ್ ಜಿಎಲ್ ಸಿ

04. ಮರ್ಸಿಡಿಸ್ ಬೆಂಝ್ ಜಿಎಲ್ ಸಿ

ಜರ್ಮನಿಯ ಐಷಾರಾಮಿ ವಾಹನ ಸಂಸ್ಥೆ ಮರ್ಸಿಡಿಸ್ ಬೆಂಝ್ ಮುಂಬರುವ ಜೂನ್ ತಿಂಗಳಲ್ಲೇ ನೂತನ ಜಿಎಲ್ ಸಿ ಮಾದರಿಯನ್ನು ಬಿಡುಗಡೆ ಮಾಡಲಿದೆ. ಅಂದ ಹಾಗೆ ಭಾರತಕ್ಕೆ ಡೀಸೆಲ್ ಆವೃತ್ತಿಯನ್ನು ಮಾತ್ರ ಪರಿಚಯಿಸಲಿದ್ದು, 9ಜಿ ಟ್ರಾನಿಕ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಇದರಲ್ಲಿರುತ್ತದೆ.

ಮರ್ಸಿಡಿಸ್ ಬೆಂಝ್ ಜಿಎಲ್ ಸಿ

ಮರ್ಸಿಡಿಸ್ ಬೆಂಝ್ ಜಿಎಲ್ ಸಿ

ಮರ್ಸಿಡಿಸ್ ಬೆಂಝ್ ಜಿಎಲ್ ಸಿ 220 ಡಿ ಮತ್ತು ಜಿಎಲ್ ಸಿ 250 ಡಿ ಮಾದರಿಗಳು ಅನುಕ್ರಮವಾಗಿ 168 (400 ಎನ್ ಎಂ ತಿರುಗುಬಲ) ಮತ್ತು 201 ಅಶ್ವಶಕ್ತಿಯನ್ನು (500 ಎನ್ ಎಂ ತಿರುಗುಬಲ) ಉತ್ಪಾದಿಸಲಿದೆ. ಇದು 35ರಿಂದ 45 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ.

ಮಾನ್ಸೂನ್ ವೇಳೆಯಲ್ಲಿ ತಂಪಾಗಿಸಲಿರುವ ನೂತನ ಕಾರುಗಳು

ಈಗ ಪ್ರಸ್ತುತ ಪಟ್ಟಿಯಲ್ಲಿರುವ ನಿಮ್ಮ ನೆಚ್ಚಿನ ಕಾರಿನ ಬಗ್ಗೆ ಅನಿಸಿಕೆಗಳನ್ನು ನಮ್ಮ ಜೊತೆ ಹಂಚಿಕೊಳ್ಳಿರಿ.

Read more on ಕಾರು car
English summary
New Vehicles Launching In India During June 2016

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark