ಐಷಾರಾಮಿ ಕಾರು ನೋಂದಣಿಯಲ್ಲಿ ದೋಖಾ- ಅಮಲಾ ನಂತರ ಫಹಾದ್ ಪಾಸಿಲ್ ಸರದಿ..!!

ನಟಿ ಅಮಲಾ ಪೌಲ್ ಪುದುಚೇರಿಯಲ್ಲಿ ನೋಂದಣಿ ಮಾಡಿಸಿ ಕೇರಳದಲ್ಲಿ ಕಾನೂನು ಬಾಹಿರವಾಗಿ ಬಳಕೆ ಮಾಡುತ್ತಿದ್ದ ಹಿನ್ನೆಲೆ ಸಿಕ್ಕಿಬಿದ್ದಿದ್ದು, ಇದೀಗ ಮತ್ತೊಬ್ಬ ಮಾಲಿವುಡ್ ನಟ ಫಹಾದ್ ಪಾಸಿಲ್ ಇಂತದ್ದೆ ಪ್ರಕರಣದಲ್ಲಿ ಸಿಲುಕಿಕೊಂಡಿದ್ದಾರೆ.

By Praveen

ಕಳೆದ ಸೆಪ್ಟೆಂಬರ್‌ನಲ್ಲಿ ಐಷಾರಾಮಿ ಮರ್ಸಿಡಿಸ್ ಬೆಂಝ್ ಎಸ್350 ಕಾರು ಖರೀದಿಸಿದ್ದ ನಟಿ ಅಮಲಾ ಪೌಲ್ ಪುದುಚೇರಿಯಲ್ಲಿ ನೋಂದಣಿ ಮಾಡಿಸಿ ಕೇರಳದಲ್ಲಿ ಕಾನೂನು ಬಾಹಿರವಾಗಿ ಬಳಕೆ ಮಾಡುತ್ತಿದ್ದ ಹಿನ್ನೆಲೆ ಸಿಕ್ಕಿಬಿದ್ದಿದ್ದು, ಇದೀಗ ಮತ್ತೊಬ್ಬ ಮಾಲಿವುಡ್ ನಟ ಫಹಾದ್ ಪಾಸಿಲ್ ಇಂತದ್ದೆ ಪ್ರಕರಣದಲ್ಲಿ ಸಿಲುಕಿಕೊಂಡಿರುವ ಬಗ್ಗೆ ವರದಿಯಾಗಿದೆ.

ಐಷಾರಾಮಿ ಕಾರು ನೋಂದಣಿಯಲ್ಲಿ ದೋಖಾ- ಅಮಲಾ ನಂತರ ಫಹಾದ್ ಪಾಸಿಲ್ ಸರದಿ..

ನಟಿ ಅಮಲಾ ಪೌಲ್ ರೀತಿಯಲ್ಲೇ ನಟ ಫಹಾದ್ ಕೂಡಾ ಪುದುಚೇರಿಯಲ್ಲಿ 70 ಲಕ್ಷ ಮೌಲ್ಯದ ಮರ್ಸಿಡಿಸ್ ಬೆಂಝ್ ಇ-ಕ್ಲಾಸ್ ಕಾರು ಅನ್ನು ಖರೀದಿ ಮಾಡಿದ್ದು, ಇದಕ್ಕಾಗಿ 90 ಸಾವಿರ ಪಾವತಿಸಿ ಪುದಚೇರಿಯಲ್ಲಿ ಹೊಸ ಕಾರು ನೋಂದಣಿ ಮಾಡಿದ್ದಾರೆ.

ಐಷಾರಾಮಿ ಕಾರು ನೋಂದಣಿಯಲ್ಲಿ ದೋಖಾ- ಅಮಲಾ ನಂತರ ಫಹಾದ್ ಪಾಸಿಲ್ ಸರದಿ..

ಆದ್ರೆ ಸಾರಿಗೆ ನಿಯಮದ ಪ್ರಕಾರ ಯಾವ ರಾಜ್ಯದ ರಸ್ತೆಗಳನ್ನು ಬಳಕೆ ಮಾಡಲಾಗುತ್ತೊ ಆಯಾ ರಾಜ್ಯಗಳ ಸಾರಿಗೆ ಇಲಾಖೆಯ ನೋಂದಣಿಯನ್ನು ಕೂಡಾ ಕಡ್ಡಾಯ ಹೊಂದಿರಬೇಕು. ಹೀಗಿದ್ದರು ನಟ ಫಹಾದ್ ಮಾತ್ರ ಪುದುಚೇರಿಯಲ್ಲಿ ನೋಂದಣಿ ಮಾಡಿ ಕೇರಳದಲ್ಲಿ ಬಳಕೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

ಐಷಾರಾಮಿ ಕಾರು ನೋಂದಣಿಯಲ್ಲಿ ದೋಖಾ- ಅಮಲಾ ನಂತರ ಫಹಾದ್ ಪಾಸಿಲ್ ಸರದಿ..

ಪುದುಚೇರಿಯಲ್ಲಿಯೇ ಏಕೆ ಕಾರು ನೋಂದಣಿ?

ನಿಮಗೆಲ್ಲಾ ಗೊತ್ತಿರುವ ಪ್ರಕಾರ ಪುದುಚೇರಿಯು ಕೇಂದ್ರಾಡಳಿತ ಪ್ರದೇಶವಾಗಿರುವ ಹಿನ್ನೆಲೆ ಕೆಲವು ತೆರಿಗೆಗಳಿಂದ ಮುಕ್ತವಾಗಿದ್ದು, ಇತರೆ ರಾಜ್ಯಗಳಿಂತ ಅತ್ಯಂತ ಕಡಿಮೆ ಪ್ರಮಾಣದ ತೆರಿಗೆಯಲ್ಲಿ ಕಾರು ನೋಂದಣಿ ಸಾಧ್ಯವಾಗುತ್ತಿರುವುದೇ ಇಂತಹ ಪ್ರಕರಣಗಳು ಹೆಚ್ಚಲು ಕಾರಣವಾಗುತ್ತಿದೆ.

Recommended Video

2017 Skoda Octavia RS Launched In India | In Kannada - DriveSpark ಕನ್ನಡ
ಐಷಾರಾಮಿ ಕಾರು ನೋಂದಣಿಯಲ್ಲಿ ದೋಖಾ- ಅಮಲಾ ನಂತರ ಫಹಾದ್ ಪಾಸಿಲ್ ಸರದಿ..

ಒಂದು ವೇಳೆ 1 ಕೋಟಿ ಮೌಲ್ಯದ ಕಾರು ನೋಂದಣಿಗೆ ಇತರೆ ರಾಜ್ಯಗಳಲ್ಲಿ 15 ರಿಂದ 18 ಲಕ್ಷ ರೂಪಾಯಿ ತೆರಿಗೆ ಪಾವತಿಸಲೇ ಬೇಕಾದ ಅನಿವಾರ್ಯತೆಯಿದ್ದು, ಇದು ಪುದುಚೇರಿಯಲ್ಲಿ ಕೇವಲ 1 ರಿಂದ 1.50 ಲಕ್ಷಕ್ಕೆ ಪೂರ್ಣ ನೋಂದಣಿ ಪ್ರಕ್ರಿಯೆ ಮುಗಿಯುತ್ತದೆ.

ಐಷಾರಾಮಿ ಕಾರು ನೋಂದಣಿಯಲ್ಲಿ ದೋಖಾ- ಅಮಲಾ ನಂತರ ಫಹಾದ್ ಪಾಸಿಲ್ ಸರದಿ..

ಇದೇ ಉದ್ದೇಶದಿಂದಲೇ ನಟ ಫಹಾದ್ ಕೂಡಾ ಪುದುಚೇರಿಯಲ್ಲಿ ತನ್ನ 70 ಲಕ್ಷ ಮೌಲ್ಯದ ಮರ್ಸಿಡಿಸ್ ಬೆಂಝ್ ಇ-ಕ್ಲಾಸ್ ಕಾರನ್ನು ನೋಂದಣಿ ಮಾಡಿಸಿದ್ದು, ನಟಿ ಅಮಲಾ ಪೌಲ್ ಪ್ರಕರಣ ಹೊರಬರುತ್ತಿದ್ದಂತೆ ಫಹಾದ್ ಕೇಸ್ ಕೂಡಾ ಭಾರೀ ಚರ್ಚೆಗೆ ಕಾರಣವಾಗಿದೆ.

ತಪ್ಪದೇ ಓದಿ-100 ಸಿಸಿ ಬೈಕ್ ವಿಚಾರದಲ್ಲಿ ಕೊನೆಗೂ ಸಾರ್ವಜನಿಕರ ವಿರೋಧಕ್ಕೆ ಮಣಿದ ರಾಜ್ಯ ಸರ್ಕಾರ..!!

ಐಷಾರಾಮಿ ಕಾರು ನೋಂದಣಿಯಲ್ಲಿ ದೋಖಾ- ಅಮಲಾ ನಂತರ ಫಹಾದ್ ಪಾಸಿಲ್ ಸರದಿ..

ಈ ಮಧ್ಯೆ ನಟಿ ಅಮಲಾ ಪೌಲ್ ಐಷಾರಾಮಿ ಕಾರು ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಪುದುಚೇರಿ ಗವರ್ನರ್ ಕಿರಣ್ ಬೇಡಿ ಅವರು, "ನಾವು ಇಂಥಹ ಮೋಸಗಳಿಗೆ ಕೊನೆ ಹಾಡಬೇಕಿದ್ದು, ಇಂಥಹ ತಂತ್ರಗಳು ನಮ್ಮ ವ್ಯವಸ್ಥೆಯನ್ನು ಭ್ರಷ್ಟಗೊಳಿಸುತ್ತವೆ' ಎಂದಿದ್ದಾರೆ.

ಐಷಾರಾಮಿ ಕಾರು ನೋಂದಣಿಯಲ್ಲಿ ದೋಖಾ- ಅಮಲಾ ನಂತರ ಫಹಾದ್ ಪಾಸಿಲ್ ಸರದಿ..

ಹೀಗಾಗಿಯೇ ನಟಿ ಅಮಲಾ ಪೌಲ್ ವಿರುದ್ಧ ಪ್ರಕರಣ ದಾಖಲಿಸಿರುವ ಕೇರಳ ಸಾರಿಗೆ ಇಲಾಖೆಯ ಅಧಿಕಾರಿಗಳು 20 ಲಕ್ಷ ದಂಡವಿಧಿಸಿದ್ದು, ಇದೀಗ ಫಹಾದ್ ಪಾಸಿಲ್ ವಿರುದ್ಧ ಪ್ರಕರಣದಲ್ಲಿ ಕೇರಳ ಸಾರಿಗೆ ಇಲಾಖೆ ಅಧಿಕಾರಿಗಳು ಯಾವ ಕ್ರಮ ಕೈಗೊಳ್ಳುತ್ತಾರೆ ಎಂಬುವುದನ್ನು ಕಾಯ್ದುನೋಡಬೇಕಿದೆ.

Trending On DriveSpark Kannada:

ಹೊಸ ಕಾರಿನ ನೋಂದಣಿಯಲ್ಲಿ ಮೋಸ ಮಾಡಿದ್ದ ಅಮಲಾ ಪೌಲ್‌‌ಗೆ 20 ಲಕ್ಷ ದಂಡ..!!

ಡಿಸೆಂಬರ್ 1ರ ನಂತರ ಟೋಲ್‌ಗಳಲ್ಲಿ ಕಾರುಗಳು ಕಾಯುವ ಹಾಗಿಲ್ಲ !!

Most Read Articles

Kannada
English summary
Read in Kannada: Fahadh Faasil evade Taxes Registering Luxury Car Pudhucherry. Click for Details...
Story first published: Friday, November 3, 2017, 13:51 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X