2ನೇ ತ್ರೈಮಾಸಿಕ ಅವಧಿಯಲ್ಲಿ ಹೆಚ್ಚಿದ ಮರ್ಸಿಡಿಸ್ ಬೆಂಝ್ ಕಾರಿನ ಮಾರಾಟ ಪ್ರಕ್ರಿಯೆ

Written By:

ಭಾರತೀಯ ಮಾರುಕಟ್ಟೆಯಲ್ಲಿ ಐಷಾರಾಮಿ ಕಾರುಗಳಿಗೆ ಬೇಡಿಕೆ ಹೆಚ್ಚುತ್ತಿದ್ದು, ಮರ್ಸಿಡಿಸ್ ಬೆಂಝ್ ಕಾರುಗಳ ಮಾರಾಟ ಪ್ರಕ್ರಿಯೆ ಕೂಡಾ ಕಳೆದ ಅವಧಿಗಿಂತ ದ್ಪಿಗುಣಗೊಂಡಿದೆ.

ದೇಶಿಯವಾಗಿ ಐಷಾರಾಮಿ ಕಾರುಗಳ ಉತ್ಪಾದನೆ ಮತ್ತು ಮಾರಾಟ ಪ್ರಕ್ರಿಯೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಸಾಂಪ್ರದಾಯಿಕ ಕಾರು ಮಾದರಿಯಾದ ಮರ್ಸಿಡಿಸ್ ಬೆಂಝ್ ಉತ್ಪನ್ನಗಳಿಗೆ ಅತಿ ಹೆಚ್ಚಿನ ಬೇಡಿಕೆ ಸೃಷ್ಠಿಯಾಗಿದೆ.

2017ರ ಜನವರಿಯಿಂದ ಜೂನ್ ಅಂತ್ಯಕ್ಕೆ ಮರ್ಸಿಡಿಸ್ ಬೆಂಝ್ ಉತ್ಪಾದಿತ 7, 171 ಕಾರುಗಳು ಮಾರಾಟಗೊಂಡಿದ್ದು, ಇದು ಕಳೆದ ವರ್ಷದ ಇದೇ ಅವಧಿಯಲ್ಲಿನ ಮಾರಾಟ ಪ್ರಕ್ರಿಯೆಗಿಂತ ಶೇ.18ರಷ್ಟು ಹೆಚ್ಚಳವಾಗಿದೆ.

ಕಾರು ಮಾರಾಟ ಪ್ರಕ್ರಿಯೆಯಲ್ಲಿನ ತಂತ್ರಗಾರಿಕೆಯಿಂದ ಮರ್ಸಿಡಿಸ್ ಬೆಂಝ್ ಬೇಡಿಕೆಯಲ್ಲಿ ಹೆಚ್ಚಳವಾಗಿದ್ದು, ವರ್ಷದ ಆರಂಭದಲ್ಲಿ ಬಿಡುಗಡೆಯಾದ ಕೆಲವು ಐಷಾರಾಮಿ ಆವೃತ್ತಿಗಳು ಮರ್ಸಿಡಿಸ್ ಬೆಂಝ್ ಜನಪ್ರಿಯತೆಯನ್ನು ಮತ್ತಷ್ಟು ದ್ವಿಗುಣಗೊಳಿಸಿವೆ ಎಂದರೇ ತಪ್ಪಾಗಲಾರದು.

ಇತ್ತೀಚೆಗೆ ಬಿಡುಗಡೆಯಾದ ಮರ್ಸಿಡಿಸ್ ಬೆಂಝ್ ಜಿಎಲ್‌ಎ ಕಾರು ಸರಣಿಗಳು ಮತ್ತು ಲಾಂಗ್ ವೀಲ್ಹ್ ಬೇಸ್ ಇ-ಕ್ಲಾಸ್ ಮಾದರಿಗಳಿಗೆ ಹೆಚ್ಚಿನ ಬೇಡಿಕೆಯಿದ್ದು, ವರ್ಷದ ಅಂತ್ಯಕ್ಕೆ ಹೊಸ ದಾಖಲೆ ಸೃಷ್ಠಿಸುವ ಭರವಸೆ ಹುಟ್ಟುಹಾಕಿವೆ.

ಇನ್ನು ಐಷಾರಾಮಿ ಕಾರು ಮಾರಾಟ ಹೆಚ್ಚಳ ಬಗ್ಗೆ ಮಾತನಾಡಿರುವ ಮರ್ಸಿಡಿಸ್ ಬೆಂಝ್ ಇಂಡಿಯಾ ಸಿಇಓ ರೋಲ್ಯಾಂಡ್ ಫೋಲ್ಗರ್, ಭಾರತೀಯ ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಗುಣವಾಗಿ ಮತ್ತಷ್ಟು ಹೊಸ ಕಾರಗಳನ್ನು ಬಿಡುಗಡೆ ಮಾಡುವ ಬಗ್ಗೆ ಸುಳಿವು ನೀಡಿದ್ದಾರೆ.

English summary
Read in Kannada about Mercedes-Benz India Post Record Sales For Q2 2017.
Story first published: Monday, July 10, 2017, 19:59 [IST]
Please Wait while comments are loading...

Latest Photos