ಟಾಟಾ ನೆಕ್ಸನ್ ಕಾರುಗಳ ಖರೀದಿಗೆ ಇನ್ಮುಂದೆ ಕಾಯಬೇಕಿಲ್ಲ..

ಟಾಟಾ ಮೋಟಾರ್ಸ್ ಉತ್ಪಾದಿತ ನೆಕ್ಸನ್ ಎಸ್‌ಯುವಿ ಖರೀದಿ ಪ್ರಕ್ರಿಯೆ ಜೋರಾಗಿದ್ದು, ಈ ಹಿನ್ನೆಲೆ ಉತ್ಪಾದನಾ ಕಾರ್ಯವನ್ನು ತೀವ್ರಗೊಳಿಸಿರುವ ಟಾಟಾ ಸಂಸ್ಥೆಯು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹೊಸ ಕಾರುಗಳನ್ನು ಒದಗಿಸಲು ಬೃಹತ್ ಯೋಜನೆ ರೂಪಿಸಿದೆ.

By Praveen

ವಿಶೇಷ ಹೊರ ವಿನ್ಯಾಸ ಮತ್ತು ಅತ್ಯುತ್ತಮ ಎಂಜಿನ್ ಕಾರ್ಯಕ್ಷಮತೆ ಹಿನ್ನೆಲೆ ಗ್ರಾಹಕರ ಮೊದಲ ಆಯ್ಕೆಯಾಗುತ್ತಿರುವ ಟಾಟಾ ನೆಕ್ಸನ್ ಕಾರು ಸದ್ಯ ಖರೀದಿಗೆ ಮಾಡಬೇಕಾದರೇ ನಾಲ್ಕರಿಂದ ಆರು ವಾರಗಳ ಕಾಲ ಕಾಯಬೇಕಿದ್ದು, ಇದಕ್ಕಾಗಿ ಟಾಟಾ ಸಂಸ್ಥೆಯು ಹೊಸ ಯೋಜನೆಯೊಂದನ್ನು ರೂಪಿಸಿದೆ.

ಟಾಟಾ ನೆಕ್ಸನ್ ಕಾರುಗಳ ಖರೀದಿಗೆ ಇನ್ಮುಂದೆ ಕಾಯಬೇಕಿಲ್ಲ..

ತನ್ನ ಪ್ರಮುಖ ಕಾರು ಉತ್ಪಾದನಾ ಘಟಕಗಳಲ್ಲಿ ಇತರೆ ಕಾರುಗಳ ಉತ್ಪಾದನೆಗಿಂತ ನೆಕ್ಸನ್ ಉತ್ಪಾದನೆಗೆ ಹೆಚ್ಚಿನ ಗಮನಹರಿಸುತ್ತಿರುವ ಟಾಟಾ ಸಂಸ್ಥೆಯು ಪ್ರತಿ ತಿಂಗಳು 5 ಸಾವಿರ ಹೊಸ ಕಾರನ್ನು ಹೊರತರುವ ಉದ್ದೇಶ ಹೊಂದಿದೆ.

ಟಾಟಾ ನೆಕ್ಸನ್ ಕಾರುಗಳ ಖರೀದಿಗೆ ಇನ್ಮುಂದೆ ಕಾಯಬೇಕಿಲ್ಲ..

ಇದರಿಂದ ಗ್ರಾಹಕರ ಕಾಯುವಿಕೆ ಅವಧಿಯು ಗಣನೀಯ ಪ್ರಮಾಣದಲ್ಲಿ ತಗ್ಗಲಿದ್ದು, ಬುಕ್ಕಿಂಗ್ ಮಾಡಿದ ಒಂದು ಅಥವಾ ಎರಡು ವಾರದಲ್ಲಿ ಹೊಸ ಕಾರುಗಳು ಗ್ರಾಹಕರ ಕೈಸೇರುವ ನೀರಿಕ್ಷೆಗಳಿವೆ ಎನ್ನಲಾಗಿದೆ.

Recommended Video

Tata Nexon Price And Features Variant-wise - DriveSpark
ಟಾಟಾ ನೆಕ್ಸನ್ ಕಾರುಗಳ ಖರೀದಿಗೆ ಇನ್ಮುಂದೆ ಕಾಯಬೇಕಿಲ್ಲ..

ಇನ್ನು ಸದ್ಯ ಪರಿಸ್ಥಿತಿಯಲ್ಲಿ ಟಾಟಾ ಸಂಸ್ಥೆಯು ಪ್ರತಿ ತಿಂಗಳು 3 ಸಾವಿರ ನೆಕ್ಸನ್ ಕಾರುಗಳನ್ನು ಉತ್ಪಾದನೆ ಮಾಡಿದ್ದು, ಬಿಡುಗಡೆಯಾದ ನಂತರ ಇದುವರೆಗೆ 6 ಸಾವಿರ ಕಾರುಗಳನ್ನು ಮಾರಾಟ ಮಾಡಿದೆ. ಹೀಗಾಗಿ ಕಾರು ಮಾರಾಟದಲ್ಲಿ ನಂ.1 ಸ್ಥಾನದಲ್ಲಿರುವ ಟಿಗೋರ್ ಕಾರನ್ನು ಹಿಂದಿಕ್ಕುವ ತವಕದಲ್ಲಿದೆ.

ಟಾಟಾ ನೆಕ್ಸನ್ ಕಾರುಗಳ ಖರೀದಿಗೆ ಇನ್ಮುಂದೆ ಕಾಯಬೇಕಿಲ್ಲ..

ಟಾಟಾ ನೆಕ್ಸನ್ ಕಾರಿನ ವೈಶಿಷ್ಟ್ಯತೆಗಳು ಹೀಗಿವೆ...

ತಾಂತ್ರಿಕ ವೈಶಿಷ್ಟ್ಯತೆಗಳು, ಬೆಲೆ ಮತ್ತು ವಿನ್ಯಾಸಗಳ ವಿಚಾರದಲ್ಲಿ ಉಳಿದ ಎಸ್‌ಯುವಿ ಕಾರು ಮಾದರಿಗಳಿಂತ ಉತ್ತಮ ಸೌಲಭ್ಯಗಳನ್ನು ಹೊಂದಿರುವ ಟಾಟಾ ನೆಕ್ಸನ್, ಪೆಟ್ರೋಲ್ ಮತ್ತು ಡೀಸೆಲ್ ಆವೃತ್ತಿಯಲ್ಲಿ ಖರೀದಿ ಲಭ್ಯವಿದೆ.

ತಪ್ಪದೇ ಓದಿ-ನಿಮ್ಮ ಕಾರಿನ ಮೈಲೇಜ್ ಹೆಚ್ಚಳವಾಗಬೇಕೇ? ಈ ಕೆಳಗಿನ ವಿಧಾನಗಳನ್ನು ತಪ್ಪದೇ ಪಾಲಿಸಿ..

ಟಾಟಾ ನೆಕ್ಸನ್ ಕಾರುಗಳ ಖರೀದಿಗೆ ಇನ್ಮುಂದೆ ಕಾಯಬೇಕಿಲ್ಲ..

ಪೆಟ್ರೋಲ್ ಆವೃತ್ತಿಯ ಆರಂಭಿಕ ಕಾರಿನ ಬೆಲೆಯು ರೂ. 5.94 ಲಕ್ಷಕ್ಕೆ ಮತ್ತು ಉನ್ನತ ಆವೃತ್ತಿಯ ಬೆಲೆಯು ರೂ.8.59 ಲಕ್ಷಕ್ಕೆ ಲಭ್ಯವಿದ್ದರೇ ಡೀಸೆಲ್ ಆವೃತ್ತಿಯ ಆರಂಭಿಕ ಬೆಲೆಯು ರೂ. 6.85 ಲಕ್ಷಕ್ಕೆ ಮತ್ತು ಉನ್ನತ ಆವೃತ್ತಿಯನ್ನು ರೂ.9.54 ಲಕ್ಷಕ್ಕೆ ಖರೀದಿಸಬಹುದಾಗಿದೆ.

ಟಾಟಾ ನೆಕ್ಸನ್ ಕಾರುಗಳ ಖರೀದಿಗೆ ಇನ್ಮುಂದೆ ಕಾಯಬೇಕಿಲ್ಲ..

ಎಂಜಿನ್ ಸಾಮರ್ಥ್ಯ

ಹೊಸದಾಗಿ ಬಿಡುಗಡೆಯಾಗಿರುವ ಟಾಟಾ ನೆಕ್ಸನ್ ಕಾರು 1.2 ಲೀಟರ್ ಪೆಟ್ರೋಲ್ ಎಂಜಿನ್ ಮತ್ತು 1.5 ಲೀಟರ್ ಡೀಸೆಲ್ ಎಂಜಿನ್ ಆಯ್ಕೆ ಹೊಂದಿದೆ. ಈ ಎಂಜಿನ್‌ಗಳು 6 ಸ್ಪೀಡ್ ಮ್ಯಾನ್ಯುವಲ್ ಗೇರ್ ಬಾಕ್ಸ್ ಜೋಡಣೆ ಹೊಂದಿದೆ.

ಟಾಟಾ ನೆಕ್ಸನ್ ಕಾರುಗಳ ಖರೀದಿಗೆ ಇನ್ಮುಂದೆ ಕಾಯಬೇಕಿಲ್ಲ..

ಮೈಲೇಜ್

ನೆಕ್ಸನ್ ಕಾರು ಮಾದರಿಗಳಲ್ಲಿ ಡಿಸೇಲ್ ಆವೃತ್ತಿಯು ಪ್ರತಿ ಲೀಟರ್‌ಗೆ 21 ಕಿಮಿ ಮೈಲೇಜ್ ನೀಡಿದ್ದಲ್ಲಿ ಪೆಟ್ರೋಲ್ ಆವೃತ್ತಿಯು ಪ್ರತಿ ಲೀಟರ್ 17ಕಿಮಿ ಮೈಲೇಜ್ ಒದಗಿಸುತ್ತವೆ.

ಟಾಟಾ ನೆಕ್ಸನ್ ಕಾರುಗಳ ಖರೀದಿಗೆ ಇನ್ಮುಂದೆ ಕಾಯಬೇಕಿಲ್ಲ..

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಭಾರತೀಯ ಮಧ್ಯಮ ವರ್ಗದ ಗ್ರಾಹಕರಿಗೆ ಟಾಟಾ ನೆಕ್ಸನ್ ಎಸ್‌ಯುವಿ ಒಂದು ಉತ್ತಮ ಆಯ್ಕೆಯಾಗಿದ್ದು, ಕೈಗೆಟುಕುವ ದರ ಲಭ್ಯವಾಗಿರುವುದು ಕಾರು ಖರೀದಿಗೆ ಉತ್ತಮ ವಾತಾವರಣ ಕಲ್ಪಿಸಲಾಗಿದೆ ಎನ್ನಬಹುದು.

Trending On DriveSpark Kannada:

ರಸ್ತೆ ಬದಿ ಇದ್ದ ಹೆಲ್ಮೆಟ್‌ಗಳನ್ನು ಟ್ರಾಫಿಕ್ ಪೊಲೀಸರು ಒಡೆದು ಹಾಕಿದ್ದೇಕೆ?

ಸ್ಪ್ಲೆಂಡರ್ ಪ್ಲಸ್ ಬೈಕಿಗೆ 10,800 ರೂ ದಂಡ ಹಾಕಿದ್ರು !! ನಗರದಲ್ಲಿ ನಡೀತಿದೆ 'ಆಪರೇಷನ್‌ ಚೀತಾ'

Most Read Articles

Kannada
English summary
Read in Kannada about Tata Nexon Waiting Period To Decrease.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X