ಭಾರತದಲ್ಲಿ ಬಿಡುಗಡೆಗೊಂಡ ಹೊಸ ರೇಂಜ್ ರೋವರ್ ಮತ್ತು ರೇಂಜ್ ರೋವರ್ ಸ್ಪೋರ್ಟ್ ಕಾರುಗಳು..

ಬ್ರಿಟಿಷ್ ಮೂಲದ ಐಷಾರಾಮಿ ವಾಹನ ತಯಾರಕ ಸಂಸ್ಥೆಯಾದ ಲ್ಯಾಂಡ್ ರೋವರ್ ತಮ್ಮ ರೇಂಜ್ ರೋವರ್ ಸ್ಪೋರ್ಟ್ ಫೇಸ್‍‍ಲಿಫ್ಟ್ ಮತ್ತು ರೇಂಜ್ ರೋವರ್ ವೌಗ್ ಕಾರುಗಳನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ.

ಬ್ರಿಟಿಷ್ ಮೂಲದ ಐಷಾರಾಮಿ ವಾಹನ ತಯಾರಕ ಸಂಸ್ಥೆಯಾದ ಲ್ಯಾಂಡ್ ರೋವರ್ ತಮ್ಮ ರೇಂಜ್ ರೋವರ್ ಸ್ಪೋರ್ಟ್ ಫೇಸ್‍‍ಲಿಫ್ಟ್ ಮತ್ತು ರೇಂಜ್ ರೋವರ್ ವೌಗ್ ಕಾರುಗಳನ್ನು ಭಾರತದಲ್ಲಿ ಬಿಡುಗಡೆಗೊಳಿಸಿದ್ದು, ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ 99.48 ಲಕ್ಷ ಮತ್ತು ರೂ 1.74 ಕೋಟಿಗೆ ಬೆಲೆಯನ್ನು ನಿಗದಿಪಡಿಸಲಾಗಿದೆ.

ಭಾರತದಲ್ಲಿ ಬಿಡುಗಡೆಗೊಂಡ ಹೊಸ ರೇಂಜ್ ರೋವರ್ ಮತ್ತು ರೇಂಜ್ ರೋವರ್ ಸ್ಪೋರ್ಟ್ ಕಾರುಗಳು..

ಲಾಸ್ ಏಂಜಲ್ಸ್ ಮೋಟಾರ್ ಶೋನಲ್ಲಿ ಮೊದಲಬಾರಿಗೆ ಈ ಕಾರುಗಳು ಕಾಣಿಸಿಕೊಂಡಿದ್ದು, ಹಲವಾರು ಬಾರಿ ಭಾರತೀಯ ರಸ್ಥೆಗಳಲ್ಲಿ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡಿದ್ದವು. ಹೊಸ ಕಾರುಗಳ ಖರೀದಿಗಾಗಿ ದೇಶದಾದ್ಯಂತ ಅಧಿಕೃತ ಲ್ಯಾಂಡ್ ರೋವರ್ ಡೀಲರ್‍‍ಗಳ ಹತ್ತಿರ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ.

ಭಾರತದಲ್ಲಿ ಬಿಡುಗಡೆಗೊಂಡ ಹೊಸ ರೇಂಜ್ ರೋವರ್ ಮತ್ತು ರೇಂಜ್ ರೋವರ್ ಸ್ಪೋರ್ಟ್ ಕಾರುಗಳು..

ಬಿಡುಗಡೆಗೊಂಡ ರೇಂಜ್ ರೋವರ್ ಸ್ಪೋರ್ಟ್ ಮತ್ತು ರೇಂಜ್ ರೋವರ್ ಫೇಸ್‍‍ಲಿಫ್ಟ್ ಕಾರುಗಳು ಹಳೆಯ ಮಾದರಿಗಿಂತ ನವೀಕರಿಸಲಾದ ವಿನ್ಯಾಸವನ್ನು ಪಡೆದಿದ್ದು, ತಾಂತ್ರಿಕತೆಯಲ್ಲಿ ಯಾವುದೆ ಬದಲಾವಣೆಗಳನ್ನು ಪಡೆದಿಲ್ಲ ಎನ್ನಲಾಗಿದೆ.

ಭಾರತದಲ್ಲಿ ಬಿಡುಗಡೆಗೊಂಡ ಹೊಸ ರೇಂಜ್ ರೋವರ್ ಮತ್ತು ರೇಂಜ್ ರೋವರ್ ಸ್ಪೋರ್ಟ್ ಕಾರುಗಳು..

ರೇಂಜ್ ರೋವರ್ ಸ್ಪೋರ್ಟ್ ಮತ್ತು ರೇಂಜ್ ರೋವರ್ ಫೇಸ್‍‍ಲಿಫ್ಟ್ ಕಾರುಗಳು 3.0 ಲೀಟರ್ ವಿ6 ಮಿಲ್ ಡೀಸೆಲ್ ಎಂಜಿನ್ ಸಹಾಯದಿಂದ 255 ಬಿಹೆಚ್‍ಪಿ ಮತ್ತು 600ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಮತ್ತು 4.4 ಲೀಟರ್ ಮಿಲ್ ಎಂಜಿನ್‍‍ಗಳು 335 ಹೆಚ್‍ಪಿ ಮತ್ತು 740ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿವೆ.

ಭಾರತದಲ್ಲಿ ಬಿಡುಗಡೆಗೊಂಡ ಹೊಸ ರೇಂಜ್ ರೋವರ್ ಮತ್ತು ರೇಂಜ್ ರೋವರ್ ಸ್ಪೋರ್ಟ್ ಕಾರುಗಳು..

ಇನ್ನು ರೇಂಜ್ ರೋವರ್ ಸ್ಪೋರ್ಟ್ ಮತ್ತು ರೇಂಜ್ ರೋವರ್ ಫೇಸ್‍‍ಲಿಫ್ಟ್ ಕಾರುಗಳು 3.0 ಲೀಟರ್ ಸೂಪರ್‍‍ಚಾರ್ಜ್ಡ್ ವಿ6 ಮೋಟರ್ ಎಂಜಿನ್‍‍ಗಳು 335 ಹೆಚ್‍ಪಿ ಮತ್ತು 450ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, 5.0 ಲೀಟರ್ ವಿ8 ಸೂಪರ್‍‍‍ಚಾರ್ಜ್ಡ್ ಎಂಜಿನ್‍‍ಗಳು 518ಎನ್ಎಂ ಮತ್ತು 625 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದೆ. ಇನ್ನು ಈ ಎರಡು ಎಂಜಿನ್‍‍ಗಳನ್ನು 8 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಭಾರತದಲ್ಲಿ ಬಿಡುಗಡೆಗೊಂಡ ಹೊಸ ರೇಂಜ್ ರೋವರ್ ಮತ್ತು ರೇಂಜ್ ರೋವರ್ ಸ್ಪೋರ್ಟ್ ಕಾರುಗಳು..

ಕಾರಿನ ಹೊರಭಾಗದಲ್ಲಿ ಪಿಕ್ಸೆಲ್ ಲೇಸರ್ ಎಲ್ಇಶಿ ಲೈಟ್ಸ್, ಅಟ್ಲಾಸ್ ಮೆಶ್ ಗ್ರಿಲ್ ಮತ್ತು ನವೀಕರಿಸಲಾದ ಬಂಪರ್‍‍ಗಳನ್ನು ಅಳವಡಿಸಲಾಗಿದ್ದು, ಇನ್ನು ಹಿಂಭಾಗದಲ್ಲಿ ಎಲ್ಇಡಿ ಟೈಲ್ ಲೈಟ್ಸ್, ಟಾಪರ್ಡ್ ರೇಕ್ ಮತ್ತು ರೀಯರ್ ವಿಂಡ್‍ಸ್ಕ್ರೀನ್ ಅನ್ನು ಅಳವಡಿಸಲಾಗಿದೆ.

ಭಾರತದಲ್ಲಿ ಬಿಡುಗಡೆಗೊಂಡ ಹೊಸ ರೇಂಜ್ ರೋವರ್ ಮತ್ತು ರೇಂಜ್ ರೋವರ್ ಸ್ಪೋರ್ಟ್ ಕಾರುಗಳು..

ಇನ್ನು ಕಾರಿನ ಒಳಭಾಗದಲ್ಲಿ 10 ಇಂಚಿನ ಟಚ್ ಪ್ರೋ ಇನ್ಫೋಟೈನ್ಮೆಂಟ್ ಸಿಸ್ಟಂ, ಹಾಟ್ ಸ್ಟೋನ್ ಮಸಾಜ್ ಮತ್ತು ಹೀಟಿಂಗ್ ಫಂಕ್ಷನ್‍‍ಗಳನ್ನು ಪಡೆದ ಸೀಟ್‍‍ಗಳು, ಸೂಚನೆಯಿಂದ ನಿಯಂತ್ರಿಸಬಹುದಾದ ಸನ್‍‍ಬ್ಲೈಂಡ್ಸ್, ಏರ್ ಕ್ಯಾಬಿನ್ ಐಒನೈಸೇಷನ್, ಮತ್ತು ಕ್ರೂಸ್ ಕಂಟ್ರೋಲ್ ವೈಶಿಷ್ಟ್ಯತೆಗಳನ್ನು ಅಳವಡಿಸಲಾಗಿದೆ.

ಭಾರತದಲ್ಲಿ ಬಿಡುಗಡೆಗೊಂಡ ಹೊಸ ರೇಂಜ್ ರೋವರ್ ಮತ್ತು ರೇಂಜ್ ರೋವರ್ ಸ್ಪೋರ್ಟ್ ಕಾರುಗಳು..

ಹೊಸದಾಗಿ ಬಿಡುಗಡೆಗೊಂಡ ರೇಂಜ್ ರೋವರ್ ಸ್ಪೋರ್ಟ್ ಮತ್ತು ರೇಂಜ್ ರೋವರ್ ಫೇಸ್‍‍ಲಿಫ್ಟ್ ಕಾರುಗಳು ಮಾರುಕಟ್ಟೆಯಲ್ಲಿ ಈಗಾಗಲೆ ಮಾರಾಟಕ್ಕಿರುವ ಆಡಿ ಕ್ಯೂ7, ಮರ್ಸಿಡಿಸ್ ಬೆಂಝ್ ಜಿಎಲ್ಎಸ್ ಮತ್ತು ಬಿಎಂಡಬ್ಲ್ಯೂ ಎಕ್ಸ್5 ಕಾರುಗಳಿಗೆ ಪೈಪೋಟಿಯನ್ನು ನೀಡಲಿದೆ.

ಭಾರತದಲ್ಲಿ ಬಿಡುಗಡೆಗೊಂಡ ಹೊಸ ರೇಂಜ್ ರೋವರ್ ಮತ್ತು ರೇಂಜ್ ರೋವರ್ ಸ್ಪೋರ್ಟ್ ಕಾರುಗಳು..

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

ಬ್ಯಾಡ್ಜ್ ವಿಚಾರದಲ್ಲಿ ಕಾರು ಚಾಲಕರಿಗೆ ಸಿಹಿ ಸುದ್ದಿ ನೀಡಿದ ಕೇಂದ್ರ....

ಲಂಚಾವತಾರ ಬಿಚ್ಚಿಟ್ಟ ಯುವಕನಿಗೆ ಪೊಲೀಸರಿಂದಲೇ ಲಂಚದ ಆಮೀಷ...

ಇನ್ಮುಂದೆ ನಿಮ್ಮ ಹೀರೋ ಬೈಕಿಗೆ ಬೇಕಾದ ಸ್ಪೇರ್‌ಪಾರ್ಟ್‌ಗಳನ್ನು ಇಲ್ಲಿ ಖರೀದಿಸಿ...

ಭಾರತದ ಸೇನಾಪಡೆಗಾಗಿಯೆ ವಿಶೇಷವಾಗಿ ತಯಾರಿಸಲ್ಪಟ್ಟ ಟಾಟಾ ಸಫಾರಿ ಸ್ಟೋರ್ಮ್ ಕಾರುಗಳು..

ಗ್ರಾಹಕನ ಕೈ ಸೇರುವ ಮುನ್ನವೇ ಗ್ಯಾರೇಜ್ ಸೇರಿದ ಮಾರುತಿ ಸುಜುಕಿ ಹೊಸ ಡಿಜೈರ್

Most Read Articles

Kannada
English summary
2018 Range Rover & Range Rover Sport launched in India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X