ಆಡಿ ಕ್ಯೂ5 ಕಾರಿಗೆ ಟಾಂಗ್ ಕೊಡಲು ಬರಲಿದೆ ಬಿಎಂಡಬ್ಲ್ಯು ಎಕ್ಸ್3

Written By: Rahul TS

ಪ್ರತಿಷ್ಠಿತ ಐಷಾರಾಮಿ ವಾಹನ ತಯಾರಕ ಸಂಸ್ಥೆಯಾದ ಬಿಎಂಡಬ್ಲ್ಯು ತನ್ನ ಹೊಸ ಎಕ್ಸ್3 ಕಾರು ಬಿಡುಗಡೆಗೆ ಸಜ್ಜುಗೊಂಡಿದ್ದು, ಸಂಸ್ಥೆಯು ಕಾರಿನ ಬಗ್ಗೆ ಬಿಡುಗಡೆ ಹಾಗೂ ತಾಂತ್ರಿಕ ಅಂಶಗಳ ಬಗ್ಗೆ ಮಾಹಿತಿ ಹೊರಹಾಕಿದೆ.

ಆಡಿ ಕ್ಯೂ5 ಕಾರಿಗೆ ಟಾಂಗ್ ಕೊಡಲು ಬರಲಿದೆ ಬಿಎಂಡಬ್ಲ್ಯು ಎಕ್ಸ್3

ಬಿಎಂಡಬ್ಲ್ಯು ಎಕ್ಸ್3 ಕಾರು ಈ ಮೊದಲು 2018ರ ಆಟೋ ಎಕ್ಸ್ ಪೋ ಮೇಳದಲ್ಲಿ ಪ್ರದರ್ಶನಗೊಂಡಿದ್ದು, ಇದೇ ಏಪ್ರಿಲ್ ತಿಂಗಳು 19ರಂದು ಬಿಡುಗಡೆಗೊಳ್ಳಲಿದೆ ಎನ್ನಲಾಗಿದೆ. ಹಳೆಯ ಮಾದರಿಗಿಂತ ಹೊಸ ವಿನ್ಯಾಸ ಮತ್ತು ತಾಂತ್ರಿಕ ಅಂಶಗಳನ್ನು ಪಡೆದಿರಲಿದೆ ಎನ್ನಲಾಗಿದೆ.

ಆಡಿ ಕ್ಯೂ5 ಕಾರಿಗೆ ಟಾಂಗ್ ಕೊಡಲು ಬರಲಿದೆ ಬಿಎಂಡಬ್ಲ್ಯು ಎಕ್ಸ್3

2018ರ ಎಕ್ಸ್ 3 ಕಾರು ಬಿಎಂಡಬ್ಲ್ಯು ಸಂಸ್ಥೆಯ 5 ಸಿರೀಸ್ ಕಾರುಗಳಲ್ಲಿನ ಕ್ಲಾರ್ ಕ್ಲಸ್ಟರ್ ಆರ್ಕಿಟೆಕ್ಚರ್ ಪ್ಲಾಟ್‍ಫಾರ್ಮ್ ಅನ್ನು ಹೋಲಿಕೆ ಪಡೆದಿದ್ದು, ಇದರಿಂದಾಗಿ ಈ ಎಸ್‍ಯುವಿ ಕಾರು ಹಳೆಯ ಮಾದರಿಗಿಂತ 55 ಕೆಜಿ ತೂಕವನ್ನು ಕಡಿಮೆಯಾಗಿದೆ.

ಆಡಿ ಕ್ಯೂ5 ಕಾರಿಗೆ ಟಾಂಗ್ ಕೊಡಲು ಬರಲಿದೆ ಬಿಎಂಡಬ್ಲ್ಯು ಎಕ್ಸ್3

ಇದಲ್ಲದೇ ಎಕ್ಸ್ 3 ಹೊಸ ಕಾರಿನಲ್ಲಿ ದೊಡ್ಡ ಗಾತ್ರದ ಗ್ರಿಲ್, ಫ್ರಂಟ್ ಬಂಪರ್ಸ್, ದೊಡ್ಡ ಏರ್ ಇಂಟೇಕ್, ಎಲ್ಇಡಿ ಹೆಡ್‍ಲ್ಯಾಂಪ್ಸ್, ಫಾಗ್ ಲ್ಯಾಂಪ್ಸ್ ಮತ್ತು 3ಡಿ ಟೈಲ್ ಲೈಟ್‌ಗಳನ್ನು ಪಡಿದಿದ್ದು, ಲೋವರ್ ವೇರಿಯಂಟ್ ಕಾರುಗಳಲ್ಲಿ 18 ಇಂಚಿನ ಚಕ್ರಗಳು ಮತ್ತು ಟಾಪ್ ಸ್ಪೆಕ್ ಕಾರುಗಳಲ್ಲಿ 21 ಇಂಚಿನ ಚಕ್ರಗಳೊಂದಿಗೆ ಆಲ್ ವೀಲ್ ಡ್ರೈವ್ ಸಿಸ್ಟಂ ಅನ್ನು ಪಡೆದಿರಲಿವೆ.

ಆಡಿ ಕ್ಯೂ5 ಕಾರಿಗೆ ಟಾಂಗ್ ಕೊಡಲು ಬರಲಿದೆ ಬಿಎಂಡಬ್ಲ್ಯು ಎಕ್ಸ್3

ಕಾರಿನ ಇಂಟಿರಿಯರ್ ಬಗ್ಗೆ ಹೇಳುವುದಾದರೆೇ, 10.25 ಟಚ್‍ಸ್ಕ್ರೀನ್ ಡಿಸ್ಪ್ಲೆ ನೊಂದಿಗೆ ಕಾರ್‍‍‍ಪ್ಲೇ, ಆಂಡ್ರಾಯ್ಡ್ ಆಟೋ, ಎಮ್ಬಿಯಂಟ್ ಲೈಟಿಂಗ್ ಮತ್ತು ಹೆಡ್ಸ್ ಅಪ್ ಡಿಸ್ಪ್ಲೇ ಯನ್ನು ಬಳಸಲಾಗಿದ್ದು, ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗಿದೆ.

ಆಡಿ ಕ್ಯೂ5 ಕಾರಿಗೆ ಟಾಂಗ್ ಕೊಡಲು ಬರಲಿದೆ ಬಿಎಂಡಬ್ಲ್ಯು ಎಕ್ಸ್3

ಎಂಜಿನ್ ಸಾಮರ್ಥ್ಯ

ಹೊಸ ಬಿಎಂಡಬ್ಲ್ಯು ಎಕ್ಸ್3 ಕಾರುಗಳು ಎರಡು ಡೀಸೆಲ್ ಆವೃತ್ತಿಗಳಲ್ಲಿ ಲಭ್ಯವಿರಲಿದ್ದು, ಎಕ್ಸ್ ಡ್ರೈವ್ 20ಡಿ ಮಾದರಿಯು 190 ಬಿಹೆಚ್‍ಪಿ ಮತ್ತು 400 ಎನ್ಎಂ ಟಾರ್ಕ್ ಅನ್ನು ಉತ್ಪಾದನೆ ಮಾಡಲಿದೆ.

ಆಡಿ ಕ್ಯೂ5 ಕಾರಿಗೆ ಟಾಂಗ್ ಕೊಡಲು ಬರಲಿದೆ ಬಿಎಂಡಬ್ಲ್ಯು ಎಕ್ಸ್3

ಹಾಗೆಯೇ, ಎಕ್ಸ್ ಡ್ರೈವ್ 30ಡಿ ಮಾದರಿಯು 248 ಬಿಹೆಚ್‍ಪಿ ಮತ್ತು 620 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಎರಡು ಎಂಜಿನ್‌ಗಳನ್ನು 8-ಸ್ಪೀಡ್ ಸ್ಟೆಪ್ಟ್ರೋಫಿಕ್ ಟ್ರಾನ್ಸ್ ಮಿಷನ್‍ನೊಂದಿಗೆ ಜೋಡಿಸಲಾಗಿದೆ.

ಆಡಿ ಕ್ಯೂ5 ಕಾರಿಗೆ ಟಾಂಗ್ ಕೊಡಲು ಬರಲಿದೆ ಬಿಎಂಡಬ್ಲ್ಯು ಎಕ್ಸ್3

ಕಾರಿನ ಬೆಲೆಯನ್ನು ದೆಹಲಿಯ ಎಕ್ಸ್ ಶೋರಂ ಪ್ರಕಾರ ಸುಮಾರು 50 ರಿಂದ 60 ಲಕ್ಷದ ವರೆಗೆ ಇರಬಹುದೆಂದು ಅಂದಾಜಿಸಲಾಗಿದ್ದು, ಮರ್ಸಿಡಿಸ್ ಬೆಂಜ್ ಜಿಎಲ್‍ಸಿ, ವೋಲ್ವೊ ಎಕ್ಸ್ ಸಿ60 ಮತ್ತು ಆಡಿ ಕ್ಯೂ5 ಕಾರುಗಳಿಗೆ ತೀವ್ರ ಪೈಪೋಟಿಯನ್ನು ನೀಡಲಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

1. ಎಎಂಟಿ ಕಾರುಗಳನ್ನು ಚಾಲನೆ ಮಾಡುವ ಮುನ್ನ ಈ ವಿಚಾರಗಳು ಗೊತ್ತಿರಲಿ...

2. ನಟ ಸುದೀಪ್ ಹೊಸ ಜೀಪ್ ಕಂಪಾಸ್ ಖರೀದಿಸಿದ್ದು ಯಾರಿಗಾಗಿ ಗೊತ್ತಾ?

3. ಕಾನೂನು ಬಾಹಿರ ಬೈಕ್ ಮಾಡಿಫೈಗೆ ಬ್ರೇಕ್ ಹಾಕಲು ಬೆಂಗಳೂರು ಪೊಲೀಸರಿಂದ ಹೊಸ ಅಸ್ತ್ರ..

4. ಟ್ರಾಫಿಕ್ ರೂಲ್ಸ್ ಬ್ರೇಕ್- ಮಗನನ್ನೇ ಹಿಡಿದು ದಂಡ ವಸೂಲಿ ಮಾಡಿದ ಪೊಲೀಸ್..

5. 30 ಕೋಟಿಗೂ ಹೆಚ್ಚು ಬೆಲೆಬಾಳುವ ಈ ಐಷಾರಾಮಿ ಎಸ್‌ಯುವಿ ಕಾರಿನ ವಿಶೇಷತೆ ಏನು?

Read more on bmw luxury car
English summary
2018 BMW X3 India Launch Date Revealed — Set To Rival The Audi Q5 And Mercedes-Benz GLC.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark