ಎಲೆಕ್ಟ್ರಿಕ್ ಕಾರುಗಳ ಅಭಿವೃದ್ಧಿಗಾಗಿ ಗುಜುರಾತ್‌ನಿಂದ ಹೊಸ ಪ್ಲ್ಯಾನ್

By Praveen Sannamani

ದೇಶಾದ್ಯಂತ ಎಲೆಕ್ಟ್ರಿಕ್‌ ಕಾರುಗಳ ಅಭಿವೃದ್ಧಿ ಮತ್ತು ಬಳಕೆಗಾಗಿ ಕೇಂದ್ರ ಸರ್ಕಾರದಿಂದ ಸಾಕಷ್ಟು ಉತ್ತೇಜನ ಸಿಗುತ್ತಿದ್ದು, ಈ ಮಧ್ಯೆ ಗುಜರಾತ್ ಸರ್ಕಾರವು ತಮ್ಮಲ್ಲೇ ಎಲೆಕ್ಟ್ರಿಕ್ ಕಾರುಗಳ ನಿರ್ಮಾಣ ಘಟಕ ನಿರ್ಮಾಣ ಮಾಡುವಂತೆ ಹೂಡಿಕೆದಾರರನ್ನ ಸೆಳೆಯುವ ಪ್ರಯತ್ನಕ್ಕೆ ಕೈಹಾಕಿದೆ.

ಎಲೆಕ್ಟ್ರಿಕ್ ಕಾರುಗಳ ಅಭಿವೃದ್ಧಿಗಾಗಿ ಗುಜುರಾತ್‌ನಿಂದ ಹೊಸ ಪ್ಲ್ಯಾನ್

2030ರ ವೇಳೆಗೆ ಬಹುತೇಕ ವಾಹನ ಉತ್ಪಾದನಾ ಸಂಸ್ಥೆಗಳು ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳ ಉತ್ಪಾದನೆಯನ್ನು ನಿಲ್ಲಿಸಲಿದ್ದು, ಭವಿಷ್ಯ ಯೋಜನೆಗಳಿಗಾಗಿ ಸದ್ಯ ಕಾರ್ಯಾಚರಣೆಯಲ್ಲಿರುವ ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು ಎಲೆಕ್ಟ್ರಿಕ್ ಮತ್ತು ಹೈಬ್ರಿಡ್ ವಾಹನ ವಾಹನಗಳ ಉತ್ಪಾದನೆಗಾಗಿ ಭಾರೀ ಪ್ರಮಾಣದ ಹೂಡಿಕೆ ಮಾಡುತ್ತಿವೆ.

ಎಲೆಕ್ಟ್ರಿಕ್ ಕಾರುಗಳ ಅಭಿವೃದ್ಧಿಗಾಗಿ ಗುಜುರಾತ್‌ನಿಂದ ಹೊಸ ಪ್ಲ್ಯಾನ್

ಇದೇ ಸಂದರ್ಭದಲ್ಲಿ ತಮ್ಮಲ್ಲೇ ಹೊಸ ಎಲೆಕ್ಟ್ರಿಕ್ ಕಾರುಗಳ ಘಟಕಗಳನ್ನ ತೆರೆಯುವಂತೆ ಹೂಡಿಕೆದಾರರನ್ನ ಸೆಳೆಯುತ್ತಿರುವ ಗುಜರಾತ್ ಸರ್ಕಾರವು, ಹೊಸ ಘಟಕಗಳಿಗೆ ಅತಿ ಕಡಿಮೆ ಅವಧಿಯಲ್ಲಿ ಸರ್ಕಾರದ ಕಡೆಯಿಂದ ಸಿಗಬೇಕಾದ ಮೂಲಸೌಕರ್ಯ ಮತ್ತು ಸೌಲಭ್ಯಗಳನ್ನ ಒದಗಿಸುವ ಭರವಸೆ ನೀಡುತ್ತಿದೆ.

ಎಲೆಕ್ಟ್ರಿಕ್ ಕಾರುಗಳ ಅಭಿವೃದ್ಧಿಗಾಗಿ ಗುಜುರಾತ್‌ನಿಂದ ಹೊಸ ಪ್ಲ್ಯಾನ್

ಹೀಗಾಗಿ ಹೊಸದಾಗಿ ಎಲೆಕ್ಟ್ರಿಕ್ ಕಾರು ಉತ್ಪಾದನಾ ಘಟಕವನ್ನು ತೆರೆಯುವ ಯೋಜನೆಯಲ್ಲಿರುವ ಆಟೋ ಉತ್ಪಾದನಾ ಸಂಸ್ಥೆಗಳು ಗುಜರಾತ್‌ನತ್ತ ಮುಖಮಾಡುತ್ತಿದ್ದು, ಸರಳ ಕೈಗಾರಿಕಾ ನೀತಿ ಮತ್ತು ಮೂಲಭೂತ ಸೌಕರ್ಯಗಳನ್ನ ಒದಗಿಸುವ ಗುಜರಾತ್‌ನಲ್ಲೇ ಹೊಸ ಘಟಕಗಳನ್ನು ತೆರೆಯಲು ಒಲವು ತೋರುತ್ತಿದ್ದಾರೆ.

ಎಲೆಕ್ಟ್ರಿಕ್ ಕಾರುಗಳ ಅಭಿವೃದ್ಧಿಗಾಗಿ ಗುಜುರಾತ್‌ನಿಂದ ಹೊಸ ಪ್ಲ್ಯಾನ್

ಇದಕ್ಕೆ ನಿದರ್ಶನ ಎನ್ನುವಂತೆ ಕಳೆದ ತಿಂಗಳು ಜಪಾನ್ ದೈತ್ಯ ವಾಹನ ಸಂಸ್ಥೆಯಾದ ಸುಜುಕಿ ಸಂಸ್ಥೆಯು 1,700 ಕೋಟಿ ಹೂಡಿಕೆಯೊಂದಿಗೆ ಗುಜರಾತ್‌ನಲ್ಲಿ ಮೊದಲ ಅಯಾನ್ ಬ್ಯಾಟರಿ ಉತ್ಪಾದನಾ ಘಟಕವನ್ನು ತೆರಯಲು ಯೋಜನೆ ರೂಪಿಸಿದ್ದು, ಸ್ವತಃ ಸುಜುಕಿ ಸಿಇಒ ಒಸಾಮು ಸುಜುಕಿ ಅವರೇ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಮಾತುಕತೆ ನಡೆಸಿ ಹೊಸ ಯೋಜನೆಗೆ ನೆರವು ಕೋರಿದ್ದನ್ನ ನಾವಿಲ್ಲಿ ಸ್ಮರಿಸಬಹುದು.

ಎಲೆಕ್ಟ್ರಿಕ್ ಕಾರುಗಳ ಅಭಿವೃದ್ಧಿಗಾಗಿ ಗುಜುರಾತ್‌ನಿಂದ ಹೊಸ ಪ್ಲ್ಯಾನ್

ಒಟ್ಟಿನಲ್ಲಿ ಕೇಂದ್ರ ಸರ್ಕಾರವು ಎಲೆಕ್ಟ್ರಿಕ್ ಕಾರುಗಳ ಅಭಿವೃದ್ಧಿ ಯೋಜನೆಗೆ ಸಹಕರಿಸಲು ಹೊಸ ಹೊಸ ಯೋಜನೆಗಳನ್ನು ರೂಪಿಸುತ್ತಿದ್ದಂತೆ ಇತ್ತ ಗುಜರಾತ್ ಸರ್ಕಾರವು ಭವಿಷ್ಯದ ಯೋಜನೆಯಾಗಿರುವ ಎಲೆಕ್ಟ್ರಿಕ್ ಕಾರುಗಳ ನಿರ್ಮಾಣದ ಘಟಕಗಳನ್ನು ತಮ್ಮಲ್ಲೇ ನಿರ್ಮಾಣ ಮಾಡುವಂತೆ ಹೂಡಿಕೆದಾರರನ್ನು ಆಕರ್ಷಣೆ ಮಾಡುತ್ತಿದೆ.

ಎಲೆಕ್ಟ್ರಿಕ್ ಕಾರುಗಳ ಅಭಿವೃದ್ಧಿಗಾಗಿ ಗುಜುರಾತ್‌ನಿಂದ ಹೊಸ ಪ್ಲ್ಯಾನ್

ಇದಲ್ಲದೇ ಕಳೆದ ಎರಡು ತಿಂಗಳ ಹಿಂದಷ್ಟೇ ಕೇಂದ್ರ ಸರ್ಕಾರವು ಪ್ರಮುಖ ದಿನಬಳಕೆ ವಸ್ತುಗಳ ಮೇಲಿನ ಜಿಎಸ್‌ಟಿ ಪ್ರಮಾಣವನ್ನು ಇಳಿಕೆ ಮಾಡಿದ್ದು, ಇದರಲ್ಲಿ ಎಲೆಕ್ಟ್ರಿಕ್ ಕಾರುಗಳ ಮುಖ್ಯ ಮುಖ್ಯ ತಾಂತ್ರಿಕ ಅಂಶವಾದ ಎಲೆಕ್ಟ್ರಿಕ್ ಬ್ಯಾಟರಿಗಳ ಮೇಲಿನ ಜಿಎಸ್‌ಟಿ ತೆರಿಗೆ ಪ್ರಮಾಣವನ್ನು ಸಹ ತಗ್ಗಿಸಿರುವುದು ಇವಿ ಕಾರುಗಳ ಮೇಲಿನ ಬೆಲೆ ಇಳಿಕೆಗೆ ಸಹಕಾರಿಯಾಗುವುದರ ಜೊತೆಗೆ ಮಾರಾಟಕ್ಕೂ ಅನುಕೂಲವಾಗಲಿದೆ.

ಎಲೆಕ್ಟ್ರಿಕ್ ಕಾರುಗಳ ಅಭಿವೃದ್ಧಿಗಾಗಿ ಗುಜುರಾತ್‌ನಿಂದ ಹೊಸ ಪ್ಲ್ಯಾನ್

ಇದರಿಂದ ಎಲೆಕ್ಟ್ರಿಕ್ ಬ್ಯಾಟರಿಗಳ ಮೇಲೆ ಇಷ್ಟು ದಿನ ಇದ್ದ ಶೇ.28ರಷ್ಟು ಜಿಎಸ್‌ಟಿ ತೆರಿಗೆಯು ಇನ್ಮುಂದೆ ಶೇ.18ಕ್ಕೆ ಇಳಿಕೆಯಾಗಲಿದ್ದು, ಪರಿಸರಕ್ಕೆ ಪೂರಕವಾಗಿರುವ ಎಲೆಕ್ಟ್ರಿಕ್ ಕಾರುಗಳ ಅಭಿವೃದ್ದಿ ಮತ್ತು ಮಾರಾಟಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಹಲವು ಜನಪರ ಯೋಜನೆಗಳನ್ನ ರೂಪಿಸಿತ್ತಿದೆ.

ಎಲೆಕ್ಟ್ರಿಕ್ ಕಾರುಗಳ ಅಭಿವೃದ್ಧಿಗಾಗಿ ಗುಜುರಾತ್‌ನಿಂದ ಹೊಸ ಪ್ಲ್ಯಾನ್

ಇದರಿಂದ ಎಲೆಕ್ಟ್ರಿಕ್ ಕಾರು ಉತ್ಪಾದನಾ ಸಂಸ್ಥೆಗಳು ಭಾರತದಲ್ಲಿ ಬೃಹತ್ ಪ್ರಮಾಣದ ಬಂಡವಾಳ ಹೂಡಿಕೆ ಎದರು ನೋಡುತ್ತಿದ್ದು, ಕಡಿಮೆ ಅವಧಿಯಲ್ಲಿ ಸೂಕ್ತ ಮೂಲಸೌಕರ್ಯಗಳು ಸಿಗುವ ರಾಜ್ಯಗಳತ್ತ ಮುಖ ಮಾಡುತ್ತಿದ್ದಾರೆ.

ಎಲೆಕ್ಟ್ರಿಕ್ ಕಾರುಗಳ ಅಭಿವೃದ್ಧಿಗಾಗಿ ಗುಜುರಾತ್‌ನಿಂದ ಹೊಸ ಪ್ಲ್ಯಾನ್

ಇದರಿಂದ ಕರ್ನಾಟಕ ಸರ್ಕಾರವು ಸಹ ಎಲೆಕ್ಟ್ರಿಕ್ ಅಭಿವೃದ್ಧಿ ಎದುರು ನೋಡುತ್ತಿರುವ ಸಂಸ್ಥೆಗಳನ್ನು ತಮ್ಮತ್ತ ಸೆಳೆಯಲು ಇದೊಂದು ಸೂಕ್ತ ಸಮಯವಾಗಿದ್ದು, ಇದರಿಂದ ಯುವ ಸಮುದಾಯಕ್ಕೆ ವಿಫುಲವಾದ ಉದ್ಯೋಗ ಅವಕಾಶಗಳು ದೊರೆಯಲಿದೆ ಎನ್ನಬಹುದು.

ಎಲೆಕ್ಟ್ರಿಕ್ ಕಾರುಗಳ ಅಭಿವೃದ್ಧಿಗಾಗಿ ಗುಜುರಾತ್‌ನಿಂದ ಹೊಸ ಪ್ಲ್ಯಾನ್

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

ಪ್ರತಿ ಚಾರ್ಜ್‌ಗೆ 547 ಕಿ.ಮೀ ಮೈಲೇಜ್ ನೀಡುತ್ತೆ ಈ ನಿಸ್ಸಾನ್ ಇವಿ ಕಾರು....

ಲಿಫ್ಟ್ ಕೊಟ್ಟ ತಪ್ಪಿಗೆ ಕೋರ್ಟ್‌ನಲ್ಲಿ ದಂಡ ಕಟ್ಟಿದ ಕಾರು ಮಾಲೀಕ..

ಹೈವೇಯಲ್ಲಿ ಡ್ರೈವಿಂಗ್ ಮಾಡಲು 11 ಬಹುಮೂಲ್ಯ ಟಿಪ್ಸ್

ಎಲೆಕ್ಟ್ರಿಕ್ ಕಾರು ಖರೀದಿಸುವ ಗ್ರಾಹಕರಿಗೆ ಕೇಂದ್ರದಿಂದ 2.50 ಲಕ್ಷ ಪ್ರೋತ್ಸಾಹ ಧನ...

ಟೋಲ್ ಕಟ್ಟಿ ಅಂದಿದ್ದೆ ತಪ್ಪಾಯ್ತು- ಬ್ಯಾರಿಕೇಡ್ ಮುರಿದ ಹಾಕಿದ ಶಾಸಕ ಜಾರ್ಜ್

Most Read Articles

Kannada
English summary
Gujarat Attracts Electric Vehicle Makers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X