ಭಾರತೀಯ ಮಾರುಕಟ್ಟೆಗೆ ಲಗ್ಗೆಯಿಟ್ಟ ದುಬಾರಿ ಬೆಲೆಯ ಲೆಕ್ಸಸ್ ಎಲ್ಎಸ್ 500ಹೆಚ್

Written By:
Recommended Video - Watch Now!
Bangalore Traffic Police Rides With Illegal Number Plate - DriveSpark

5ನೇ ತಲೆಮಾರಿನ ಹೈಬ್ರಿಡ್ ಎಂಜಿನ್ ವೈಶಿಷ್ಟ್ಯತೆಗಳೊಂದಿಗೆ ಅಭಿವೃದ್ಧಿ ಹೊಂದಿರುವ ಲೆಕ್ಸಸ್ ಎಲ್ಎಸ್ 500ಹೆಚ್ ಲಗ್ಷುರಿ ಸೆಡಾನ್ ಕಾರುಗಳು ಭಾರತದಲ್ಲಿ ಬಿಡುಗಡೆಯಾಗಿದ್ದು, ಹೊಸ ಕಾರಿನ ಆರಂಭಿಕ ಬೆಲೆಯನ್ನು ರೂ.1.77 ಕೋಟಿಗೆ ನಿಗದಿ ಮಾಡಲಾಗಿದೆ.

ಭಾರತೀಯ ಮಾರುಕಟ್ಟೆಗೆ ಲಗ್ಗೆಯಿಟ್ಟ ದುಬಾರಿ ಬೆಲೆಯ ಲೆಕ್ಸಸ್ ಎಲ್ಎಸ್ 500ಹೆಚ್

ಜಪಾನ್ ಪ್ರತಿಷ್ಠಿತ ಕಾರು ಉತ್ಪಾದನಾ ಸಂಸ್ಥೆಯಾದ ಲೆಕ್ಸಸ್ ಇದೀಗ ಹೊಸ ಮಾದರಿಯ ಎಲ್ಎಸ್ 500ಹೆಚ್ ಆವೃತ್ತಿಯನ್ನು ಪರಿಚಯಿಸಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಮೂರು ಪ್ರಮುಖ ಮಾದರಿಗಳನ್ನು ಅಭಿವೃದ್ಧಿಗೊಳಿಸಿದೆ.

ಭಾರತೀಯ ಮಾರುಕಟ್ಟೆಗೆ ಲಗ್ಗೆಯಿಟ್ಟ ದುಬಾರಿ ಬೆಲೆಯ ಲೆಕ್ಸಸ್ ಎಲ್ಎಸ್ 500ಹೆಚ್

ಲೆಕ್ಸಸ್ ಸಂಸ್ಥೆಯು ಪರಿಚಯಿಸುತ್ತಿರುವ ಎಲ್ಎಸ್ 500ಹೆಚ್ ಆವೃತ್ತಿಯಲ್ಲೇ ಮೂರು ಪ್ರಮುಖ ವಿಧಗಳಿದ್ದು, ಲಗ್ಷುರಿ, ಆಲ್ಟ್ರಾ ಲಗ್ಷುರಿ ಮತ್ತು ಡಿಸ್ಟ್ನಿಟ್ ಮಾದರಿಗಳು ಲಭ್ಯವಿವೆ. ಹೀಗಾಗಿ ಆರಂಭಿಕ ಕಾರಿನ ದರಕ್ಕೂ ಮತ್ತು ಟಾಪ್ ಎಂಡ್ ಕಾರು ಮಾದರಿಯ ದರಕ್ಕೂ ಸುಮಾರು 17 ಲಕ್ಷ ರೂಪಾಯಿ ವ್ಯತ್ಯಾಸ ಹೊಂದಿವೆ.

ಭಾರತೀಯ ಮಾರುಕಟ್ಟೆಗೆ ಲಗ್ಗೆಯಿಟ್ಟ ದುಬಾರಿ ಬೆಲೆಯ ಲೆಕ್ಸಸ್ ಎಲ್ಎಸ್ 500ಹೆಚ್

ಕಾರುಗಳ ಮಾದರಿ ಬೆಲೆ (ಎಕ್ಸ್‌ಶೋರಂ ಇಂಡಿಯಾ)

ಎಲ್ಎಸ್ 500ಹೆಚ್ ಲಗ್ಷುರಿ -ರೂ. 1,77, 21,000

ಎಲ್ಎಸ್ 500ಹೆಚ್ ಆಲ್ಟ್ರಾ ಲಗ್ಷುರಿ -ರೂ. 1,82,21,000

ಎಲ್ಎಸ್ 500ಹೆಚ್ ಡಿಸ್ಟ್ನಿಟ್ -ರೂ.1,93,71,000

ಭಾರತೀಯ ಮಾರುಕಟ್ಟೆಗೆ ಲಗ್ಗೆಯಿಟ್ಟ ದುಬಾರಿ ಬೆಲೆಯ ಲೆಕ್ಸಸ್ ಎಲ್ಎಸ್ 500ಹೆಚ್

ಎಂಜಿನ್ ವೈಶಿಷ್ಟ್ಯತೆ

ಲೆಕ್ಸಸ್ ಎಲ್ಎಸ್ 500ಹೆಚ್ ಆವೃತ್ತಿಗಳು 3.5-ಲೀಟರ್ ವಿ6 ಎಂಜಿನ್ ಹೊಂದಿದ್ದು, ಎಲೆಕ್ಟ್ರಿಕ್ ಎಂಜಿನ್ ಜೊತೆಗೂಡಿ 354-ಬಿಎಚ್‌ಪಿ ಉತ್ಪಾದಿಸಬಲ್ಲವು. ಇದಕ್ಕೆ ಕಾರಣ ಹೈಬ್ರಿಡ್ ವೈಶಿಷ್ಟ್ಯತೆಗಳನ್ನು ಹೊಂದಿರುವ ಲೆಕ್ಸಸ್ ಕಾರುಗಳಲ್ಲಿ 10-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಒದಗಿಸಲಾಗಿದೆ.

Trending On DriveSpark Kannada:

ನಟ ದರ್ಶನ್ ಖರೀದಿಸಿದ ಲಂಬೋರ್ಗಿನಿ ಅವೆಂಟಡೊರ್ ಸ್ಪೆಷಲ್ ಏನು?

ಮ್ಯಾನುವಲ್ ಕಾರು ಓಡಿಸುವಾಗ ಮಾಡಬಾರದ 5 ಅಂಶಗಳು!

ರಸ್ತೆ ಮಧ್ಯೆ ಚಕ್ರಗಳು ಪಂಚರ್; ತುರ್ತಾಗಿ ಏನು ಮಾಡಬೇಕು?

ಭಾರತೀಯ ಮಾರುಕಟ್ಟೆಗೆ ಲಗ್ಗೆಯಿಟ್ಟ ದುಬಾರಿ ಬೆಲೆಯ ಲೆಕ್ಸಸ್ ಎಲ್ಎಸ್ 500ಹೆಚ್

ಹೀಗಾಗಿ 5.4 ಸೇಕೆಂಡುಗಳಲ್ಲೇ 100 ಕಿಮಿ ವೇಗ ಪಡೆಯಬಲ್ಲ ಶಕ್ತಿಯನ್ನು ಹೊಂದಿದ್ದು, ಈ ಮೂಲಕ ಗರಿಷ್ಠವಾಗಿ 250 ಕಿಮಿ ಟಾಪ್ ಸ್ಪೀಡ್ ಗುರಿ ಸಾಧಿಸುತ್ತವೆ. ಇದರ ಜೊತೆಗೆ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಜೊತೆಜೊತೆಗೆ ಹೈಬ್ರಿಡ್ ಎಂಜಿನ್ ಹಿನ್ನೆಲೆ ಪ್ರತಿ ಲೀಟರ್‌ಗೆ 16 ಕಿ.ಮಿ ಮೈಲೇಜ್ ಹಿಂದಿರುಗಿಸುತ್ತವೆ.

ಭಾರತೀಯ ಮಾರುಕಟ್ಟೆಗೆ ಲಗ್ಗೆಯಿಟ್ಟ ದುಬಾರಿ ಬೆಲೆಯ ಲೆಕ್ಸಸ್ ಎಲ್ಎಸ್ 500ಹೆಚ್

ಇನ್ನು ವಿಶೇಷ ಹೊರ ವಿನ್ಯಾಸಗಳಿಂದಲೇ ಗಮನ ಸೆಳೆಯುವ ಲೆಕ್ಸಸ್ ಕಾರುಗಳು ಸ್ಪಿಂಡಲ್ ಗ್ರಿಲ್ ಪಡೆದುಕೊಂಡಿದ್ದು, ಟ್ರಿಪಲ್ ಎಲ್ಇಡಿ ಹೆಡ್‌ಲ್ಯಾಂಪ್ಸ್, ಅಡ್ಯಾಪ್ಟಿವ್ ಹೈ ಬಿಮ್ ಸಿಸ್ಟಂ, ಎಲ್ಇಡಿ ಡೇ ಟೈಮ್ ರನ್ನಿಂಗ್ ಲೈಟ್ಸ್ ಅಳವಡಿಸಲಾಗಿದೆ.

ಭಾರತೀಯ ಮಾರುಕಟ್ಟೆಗೆ ಲಗ್ಗೆಯಿಟ್ಟ ದುಬಾರಿ ಬೆಲೆಯ ಲೆಕ್ಸಸ್ ಎಲ್ಎಸ್ 500ಹೆಚ್

ಕಾರಿನ ಸುತ್ತಳತೆ

ಸೆಡಾನ್ ಆವೃತ್ತಿಗಳಲ್ಲಿ ವಿಶೇಷ ಡಿಸೈನ್ ಹೊಂದಿರುವ ಲೆಕ್ಸಸ್ ಎಲ್ಎಸ್ 500ಹೆಚ್ ಕಾರುಗಳು 5,235ಎಂಎಂ ಉದ್ದ, 1,900ಎಂಎಂ ಅಗಲ, 1,450ಎಂಎಂ ಎತ್ತರ ಮತ್ತು 3,125ಎಂಎಂ ಲಾಂಗ್ ವೀಲ್ ಬೇಸ್‌ನೊಂದಿಗೆ 430-ಲೀಟರ್ ಬೂಟ್ ಸ್ಪೆಸ್ ಒದಗಿಸಲಾಗಿದೆ.

ಭಾರತೀಯ ಮಾರುಕಟ್ಟೆಗೆ ಲಗ್ಗೆಯಿಟ್ಟ ದುಬಾರಿ ಬೆಲೆಯ ಲೆಕ್ಸಸ್ ಎಲ್ಎಸ್ 500ಹೆಚ್

ಹೀಗಾಗಿ ಬಿಎಂಡಬ್ಲ್ಯು 7 ಸೀರಿಸ್, ಆಡಿ 8 ಮರ್ಸಿಡಿಸ್ ಎಸ್-ಕ್ಲಾಸ್ ಆವೃತ್ತಿಗಳಿಗೆ ತೀವ್ರ ಪೈಪೋಟಿ ನೀಡುವ ಗುಣಹೊಂದಿದ್ದು, ಬರೋಬ್ಬರಿ 14 ಏರ್‌ಬ್ಯಾಗ್ಸ್, ಎಬಿಎಸ್, ಎಲೆಕ್ಟ್ರಿಕ್ ಕಂಟ್ರೋಲ್ ಬ್ರೇಕ್ಸ್, ಕ್ರೂಸ್ ಕಂಟ್ರೋಲರ್, ಹಿಲ್ ಸ್ಟಾರ್ಟ್ ಅಸಿಸ್ಟಂಟ್ ಸಿಸ್ಟಂನೊಂದಿಗೆ ಅಭಿವೃದ್ಧಿ ಹೊಂದಿದೆ.

Trending On DriveSpark Kannada:

'ಟ್ಯೂಬ್‌ಲೆಸ್' ಟೈಯರ್ ಅಂದ್ರೆ ಯಾಕ್ ಎಲ್ರು ಅಷ್ಟೊಂದು ಇಷ್ಟ ಪಡ್ತಾರೆ ಅಂತ ತಿಳ್ಕೊಳಿ ?

ಮಳೆಗಾಲದಲ್ಲಿ ಘಾಟಿ ರಸ್ತೆಯಲ್ಲಿ ಸುರಕ್ಷಿತ ಚಾಲನೆಗಾಗಿ ಅಮೂಲ್ಯ ಟಿಪ್ಸ್

Trending DriveSpark YouTube Videos

Subscribe To DriveSpark Kannada YouTube Channel - Click Here

English summary
Lexus LS 500h Launched In India.
Story first published: Tuesday, January 16, 2018, 15:53 [IST]

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark