ದೇಶಿಯ ಮಾರುಕಟ್ಟೆಗೂ ಲಗ್ಗೆಯಿಟ್ಟ ಲೆಕ್ಸಸ್ ಎನ್ಎಕ್ಸ್ 300ಹೆಚ್..

Written By: Rahul TS

ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಲೆಕ್ಸಸ್ ಸಂಸ್ಥೆಯು 2017ರ ಡಿಸೆಂಬರ್‍‍ನಲ್ಲಿ ತನ್ನ ವಿನೂತನ ಎನ್ಎಕ್ಸ್ 300ಹೆಚ್ ಎಸ್‍ಯುವಿ ಕಾರನ್ನು ಬಿಡುಗಡೆಗೊಳಿಸಿದ್ದು, ಇದೀಗ ಭಾರತೀಯ ಮಾರುಕಟ್ಟೆಯಲ್ಲೂ ಹೊಸ ಕಾರಿನ ಮಾರಾಟ ಪ್ರಕ್ರಿಯೆಗೆ ಚಾಲನೆ ಸಿಕ್ಕಿದೆ.

ದೇಶಿಯ ಮಾರುಕಟ್ಟೆಗೂ ಲಗ್ಗೆಯಿಟ್ಟ ಲೆಕ್ಸಸ್ ಎನ್ಎಕ್ಸ್ 300ಹೆಚ್..

ಹೊಸ ಎನ್ಎಕ್ಸ್ 300ಹೆಚ್ ಎಸ್‍ಯುವಿ ಕಾರು ಎನ್ಎಕ್ಸ್ 300ಹೆಚ್ ಲಗ್ಷುರಿ ಹಾಗೂ ಎನ್ಎಕ್ಸ್ 300ಹೆಚ್ ಅಫ್ ಸ್ಪೋರ್ಟ್ ಎಂಬ ಎರಡು ಆವೃತ್ತಿಗಳಲ್ಲಿ ಮಾರುಕಟ್ಟೆಯಲ್ಲಿ ದೊರೆಯಲಿದ್ದು, ದೆಹಲಿಯ ಎಕ್ಸ್ ಶೋರಂ ಪ್ರಕಾರ ಎನ್ಎಕ್ಸ್ 300ಹೆಚ್ ಲಗ್ಷುರಿ ಕಾರುಗಳು ರೂ.53.18 ಲಕ್ಷಕ್ಕೆ ಮತ್ತು ಎನ್ಎಕ್ಸ್ 300ಹೆಚ್ ಅಫ್ ಸ್ಪೋರ್ಟ್ ಕಾರುಗಳು ರೂ. 55.58 ಲಕ್ಷಕ್ಕೆ ಲಭ್ಯವಿರಲಿವೆ.

ದೇಶಿಯ ಮಾರುಕಟ್ಟೆಗೂ ಲಗ್ಗೆಯಿಟ್ಟ ಲೆಕ್ಸಸ್ ಎನ್ಎಕ್ಸ್ 300ಹೆಚ್..

ಎನ್ಎಕ್ಸ್ 300ಹೆಚ್ ಎಸ್‍ಯುವಿ ಕಾರು 2.5 ಲೀಟರ್ ನಾಲ್ಕು ಸಿಲಿಂಡರ್ ಅನ್ನು ಎಲೆಕ್ಟ್ರಿಕ್ ಮೋಟಾರ್‍‍ನೊಂದಿಗೆ ಜೋಡಿಸಲಾಗಿದ್ದು, 194ಬಿಹೆಚ್‍ಪಿ ಹಾಗು 210ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದೆ. ಕಾರಿನ ಪವರ್ ಯೂನಿಟ್ ಅನ್ನು ಇ-ಸಿವಿಟಿ ಟ್ರ್ಯಾನ್ಸ್ ಮಿಷನ್‍‍ನೊಂದಿಗೆ ಜೋಡಿಸಲಾಗಿದೆ.

ದೇಶಿಯ ಮಾರುಕಟ್ಟೆಗೂ ಲಗ್ಗೆಯಿಟ್ಟ ಲೆಕ್ಸಸ್ ಎನ್ಎಕ್ಸ್ 300ಹೆಚ್..

ಈ ಬಗ್ಗೆ ಮಾತನಾಡಿರುವ ಲೆಕ್ಸಸ್ ಇಂಡಿಯಾದ ಅಧ್ಯಕ್ಷ ಪಿ.ಬಿ. ವೇಣುಗೋಪಾಲ್ ಅವರು, ಭಾರತದಲ್ಲಿ ನಾವು ಯಶಸ್ವಿಯಾಗಿ ಎರಡನೇ ವರ್ಷದತ್ತ ಕಾಲಿಡುತ್ತಿದ್ದು, ಗ್ರಾಹಕರಿಗೆ ಅದ್ಭುತ ಚಾಲನಾ ಅನುಭವನ್ನು ನೀಡುವ ಉದ್ದೇಶದಿಂದ ಎನ್ಎಕ್ಸ್300 ಆವೃತ್ತಿಗಳನ್ನು ಪರಿಚಯಿಸುತ್ತಿದ್ದೇವೆ ಎಂದಿದ್ದಾರೆ.

ದೇಶಿಯ ಮಾರುಕಟ್ಟೆಗೂ ಲಗ್ಗೆಯಿಟ್ಟ ಲೆಕ್ಸಸ್ ಎನ್ಎಕ್ಸ್ 300ಹೆಚ್..

ಇನ್ನು ಲೆಕ್ಸಸ್ 300ಹೆಚ್ ಎಸ್‍ಯುವಿ ಕಾರಿನ ವಿನ್ಯಾಸದ ಬಗ್ಗೆ ಹೇಳುವುದಾದರೇ, ಮುಂಭಾಗದಲ್ಲಿ ಲೆಕ್ಸಸ್ ಚಿಹ್ನೆ ಹೊಂದಿರುವ ಸ್ಪಿಂಡಲ್ ಗ್ರಿಲ್, ಪ್ರೊಜೆಕ್ಟರ್ ಹೆಡ್‍ಲ್ಯಾಂಪ್ಸ್, ಎಲ್ಇಡಿ ಡಿಆರ್‍ಎಲ್ ಹಾಗು ಫಾಗ್ ಲ್ಯಾಂಪ್ಸ್ ಅನ್ನು ಪಡೆದಿದ್ದು, ಕಾರಿನ ಸೈಡ್ ಪ್ರೋಫೈಲ್ ಫ್ಲೇರ್ಡ್ ವೀಲ್ ಆರ್ಚೆಸ್ ಹಾಗು ಕ್ಯಾರಕ್ಟರ್ ಲೈನ್‍‍ಗಳನ್ನು ಕಾರಿನ ದೇಹದ ಮೇಲೆ ಸಜ್ಜುಗೊಳಿಸಲಾಗಿದೆ. ಹಿಂಭಾಗದಲ್ಲಿ ರ್‍ಯಾಂಕ್ಡ್ ವಿಂಡ್‍ಸ್ಕ್ರೀನ್ ಹಾಗು ವ್ರ್ಯಾಪ್ ಅರೌಂಡ್ ಟೈಲ್ ಲೈಟ್‍ಗಳನ್ನು ಪಡೆದಿದೆ.

ದೇಶಿಯ ಮಾರುಕಟ್ಟೆಗೂ ಲಗ್ಗೆಯಿಟ್ಟ ಲೆಕ್ಸಸ್ ಎನ್ಎಕ್ಸ್ 300ಹೆಚ್..

ಇದಲ್ಲದೆ ಲೆಕ್ಸಸ್ 300ಹೆಚ್ ಎಸ್‍ಯುವಿ ಕಾರುಗಳು 8 ಮಾದರಿಗಳಲ್ಲಿ ಅಡ್ಜಸ್ಟ್ ಮಾಡಬಲ್ಲ ಸೀಟ್‍‍ಗಳು, ವಿದ್ಯುತ್ ಸಹಾಯದಿಂದ ಅಡ್ಜಸ್ಟ್ ಮಾಡಬಹುದಾದ ಸ್ಟೀರಿಂಗ್ ವೀಲ್, ಪಾನೊರ್‍ಯಾಮಿಕ್ ಸನ್‍ರೂಫ್, ಡ್ಯುಯಲ್ ಜೋನ್ ಕ್ಲೈಮೇಟ್ ಕಂಟ್ರೋಲ್, ಮುಂಭಾಗ ಹಾಗು ಹಿಂಭಾಗದಲ್ಲಿ ಸೀಟ್ ಹೀಟರ್ ಮತ್ತು ವೆಂಟಿಲೇಟೆಡ್ ಫ್ರಂಟ್ ಸೀಟ್‍ಗಳನ್ನು ಪಡೆದಿದೆ.

ದೇಶಿಯ ಮಾರುಕಟ್ಟೆಗೂ ಲಗ್ಗೆಯಿಟ್ಟ ಲೆಕ್ಸಸ್ ಎನ್ಎಕ್ಸ್ 300ಹೆಚ್..

ಇದಲ್ಲದೆ ಸ್ಟಾರ್ಟ್/ಸ್ಟಾಪ್ ತಂತ್ರಜ್ಞಾನ, ವೈರ್‍‍ಲೆಸ್ ಡಿವೈಸ್ ಚಾರ್ಜರ್, ಪವರ್ ಫೋಲ್ಡಿಂಗ್ ರೀರ್ ಸೀಟ್ಸ್, 10.3 ಇಂಚಿನ ಸ್ಪ್ಲಿಟ್ ಸ್ಕ್ರೀನ್ ಮಲ್ಟಿಮೀಡಿಯಾ ಡಿಸ್ಪ್ಲೇ, ಕ್ರೂಸ್ ಕಂಟ್ರೋಲರ್ ಮತ್ತು ಟಚ್ ಕ್ಯಾಪಸಿಟಿಕ್ ಲೈಟ್ ಹಾಗು ಇನ್ನಿತರೆ ವೈಶಿಷ್ಟ್ಯತೆಗಳನ್ನು ಪಡೆದಿದೆ.

ದೇಶಿಯ ಮಾರುಕಟ್ಟೆಗೂ ಲಗ್ಗೆಯಿಟ್ಟ ಲೆಕ್ಸಸ್ ಎನ್ಎಕ್ಸ್ 300ಹೆಚ್..

ಪ್ರಯಾಣಿಕರ ಸುರಕ್ಷತೆಗಾಗಿ ಕಾರಿನಲ್ಲಿ ಎಂಟು ಏರ್‍‍ಬ್ಯಾಗ್‍ಗಳು, ಎಬಿಎಸ್, ವೆಹಿಕಲ್ ಸ್ಟ್ಯಾಬಿಲಿಟಿ ಕಂಟ್ರೋಲರ್, ಹಿಲ್ ಸ್ಟಾರ್ಟ್ ಅಸ್ಸಿಸ್ಟ್, ಟ್ರಾಕ್ಷನ್ ಕಂಟ್ರೋಲ್ ಸಿಸ್ಟಂ, ರಿಯರ್ ವ್ಯೂ ಕ್ಯಾಮೆರಾ, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಮತ್ತು ಕಾರ್ನೆರಿಂಗ್ ಲೈಟ್‍‍ಗಳನ್ನು ಅಳವಡಿಸಲಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

ಇನೋವಾ ಮತ್ತು ಲಾರಿ ನಡುವೆ ಭೀಕರ ಅಪಘಾತ- 7 ಮಂದಿ ದುರ್ಮರಣ

ರಾತ್ರಿ ವೇಳೆ ಡ್ರೈವಿಂಗ್ ಮಾಡುವ ಮುನ್ನ ಈ ಅಮೂಲ್ಯ ಟಿಪ್ಸ್‌ಗಳನ್ನು ತಪ್ಪದೇ ಪಾಲಿಸಿ...

ರಸ್ತೆ ಮೈಲುಗಲ್ಲುಗಳ ಬಗ್ಗೆ ಖಂಡಿತ ಈ ವಿಚಾರಗಳು ನಿಮಗೆ ಗೊತ್ತಿರೋದಿಲ್ಲ!!

ಮಾರುತಿ ಜಿಪ್ಸಿಗೆ ಗುಡ್ ಬೈ- ಟಾಟಾ ಸಫಾರಿ ಸ್ಟ್ರೋಮ್‌ಗೆ ಫಿದಾ ಆದ ಸೇನೆ...

ಟ್ರಾಫಿಕ್ ರೂಲ್ಸ್ ಬ್ರೇಕ್- ಮಗನನ್ನೇ ಹಿಡಿದು ದಂಡ ವಸೂಲಿ ಮಾಡಿದ ಪೊಲೀಸ್..

Read more on lexus suv
English summary
Lexus NX 300H Deliveries Begin in India.
Story first published: Tuesday, April 10, 2018, 12:44 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark