ಗ್ರಾಹಕರ ಮನಗೆದ್ದ ಮಹೀಂದ್ರಾ ಬೊಲೆರೊ ಮಾರಾಟದಲ್ಲಿ ಹೊಸ ದಾಖಲೆ

Written By:

ಕಳೆದ 18 ವರ್ಷಗಳ ಹಿಂದೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದ್ದ ಬೊಲೆರೊ ಕಾರುಗಳು ಅಂದಿನಿಂದ ಈ ವರೆಗೂ ಒಂದೇ ಪ್ರಮಾಣದಲ್ಲಿ ಬೇಡಿಕೆಯನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಈ ಮೂಲಕ ಬೊಲೆರೊ ಮಾರಾಟದಲ್ಲಿ ಹೊಸ ದಾಖಲೆ ಹುಟ್ಟುಹಾಕಿದೆ.

ಗ್ರಾಹಕರ ಮನಗೆದ್ದ ಮಹೀಂದ್ರಾ ಬೊಲೆರೊ ಮಾರಾಟದಲ್ಲಿ ಹೊಸ ದಾಖಲೆ

ಅಗಸ್ಟ್ 10, 2000ರಲ್ಲಿ ಮೊದಲ ಬಾರಿಗೆ ಬಿಡುಗಡೆಯಾಗಿ ಕಾಲಕ್ಕೆ ತಕ್ಕಂತೆ ಹಲವು ಬದಲಾವಣೆಗಳನ್ನು ಹೊಂದುತ್ತಲೇ ಗ್ರಾಹಕರನ್ನು ಸೆಳೆಯುತ್ತಿರುವ ಮಹೀಂದ್ರಾ ಬೊಲೆರೊ ಕಾರುಗಳು ಇಂದಿಗೆ 10 ಲಕ್ಷ ಯುನಿಟ್‌ಗಳು ಮಾರಾಟಗೊಂಡಿದ್ದು, ಎಸ್‌ಯುವಿ ಕಾರುಗಳ ವಿಭಾಗದಲ್ಲಿನ ಬೊಲೆರೊ ಜನಪ್ರಿಯತೆಗೆ ಮತ್ತೊಂದು ಹೆಗ್ಗಳಿಕೆ ಎನ್ನಬಹುದು.

ಗ್ರಾಹಕರ ಮನಗೆದ್ದ ಮಹೀಂದ್ರಾ ಬೊಲೆರೊ ಮಾರಾಟದಲ್ಲಿ ಹೊಸ ದಾಖಲೆ

ಜೊತೆಗೆ ಕಳೆದು ತಿಂಗಳ ಹಿಂದಷ್ಟೇ ಭಾರತದಲ್ಲಿನ ಟಾಪ್ 10 ಕಾರುಗಳ ಮಾರಾಟದಲ್ಲೂ 10ನೇ ಸ್ಥಾನ ಪಡೆದಿದ್ದ ಬೊಲೆರೊ ಕಾರುಗಳು ಹತ್ತಾರು ಹೊಸ ನಮೂನೆಯ ಕಾರುಗಳನ್ನು ಹಿಂದಿಕ್ಕಿ ಮಾರಾಟದಲ್ಲಿ ಹೊಸ ಸಂಚಲನ ಮೂಡಿಸಿತ್ತು.

ಗ್ರಾಹಕರ ಮನಗೆದ್ದ ಮಹೀಂದ್ರಾ ಬೊಲೆರೊ ಮಾರಾಟದಲ್ಲಿ ಹೊಸ ದಾಖಲೆ

ಪ್ರಸಕ್ತ ವರ್ಷದ ಮಾರುಕಟ್ಟೆಯಲ್ಲಿ ಶೇ.23ರಷ್ಟು ಮಾರಾಟ ದಾಖಲೆ ಕಂಡಿರುವ ಮಹಿಂದ್ರಾ ಬೊಲೆರೊ ಕಾರುಗಳು, ನಗರ ಮತ್ತು ಗ್ರಾಮೀಣ ಭಾಗದ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿವೆ ಎನ್ನಬಹುದು.

ಗ್ರಾಹಕರ ಮನಗೆದ್ದ ಮಹೀಂದ್ರಾ ಬೊಲೆರೊ ಮಾರಾಟದಲ್ಲಿ ಹೊಸ ದಾಖಲೆ

ಬೊಲೆರೊದ ಈ ಅನಿರೀಕ್ಷಿತ ಮಾರಾಟ ಏರಿಕೆಯ ಹಿಂದೆ ಗ್ರಾಮೀಣ ಜನರು ಮತ್ತೆ ಬೊಲೆರೊದತ್ತ ಆಕರ್ಷಿತರಾಗಿರುವುದನ್ನು ತೋರಿಸುತ್ತಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದು, ಕಳೆದ ಫೆಬ್ರುವರಿ ಅತಿಹೆಚ್ಚು ಬೊಲೆರೊ ಮಾರಾಟವಾಗಿರುವುದು ಮಹೀಂದ್ರಾ ಸಂಸ್ಥೆಗೆ ಮತ್ತಷ್ಟು ಬಲ ತಂದಿದೆ.

ಗ್ರಾಹಕರ ಮನಗೆದ್ದ ಮಹೀಂದ್ರಾ ಬೊಲೆರೊ ಮಾರಾಟದಲ್ಲಿ ಹೊಸ ದಾಖಲೆ

ಹೀಗಾಗಿ ಭಾರತದಲ್ಲಿ ಮಾರಾಟವಾಗುತ್ತಿರುವ ಬೆಸ್ಟ್ ಎಸ್‌ಯುವಿಗಳಲ್ಲಿ ಸದ್ಯ ಮೂರನೇ ಸ್ಥಾನದಲ್ಲಿರುವ ಮಹೀಂದ್ರಾ ಸಂಸ್ಥೆಯು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಪ್ರಮುಖ ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಾಗುತ್ತಿದೆ.

ಗ್ರಾಹಕರ ಮನಗೆದ್ದ ಮಹೀಂದ್ರಾ ಬೊಲೆರೊ ಮಾರಾಟದಲ್ಲಿ ಹೊಸ ದಾಖಲೆ

ಡೀಸೆಲ್ ಎಂಜಿನ್‌ಗಳಲ್ಲಿ ಮಾತ್ರವೇ ಲಭ್ಯವಿರುವ ಮಹೀಂದ್ರಾ ಬೊಲೆರೊ ಕಾರುಗಳು ಆರಂಭಿಕವಾಗಿ 1.5-ಲೀಟರ್ ಡಿಸೇಲ್ ಎಂಜಿನ್ ಹೊಂದಿದ್ದು, ಟಾಪ್ ವೆರಿಯೆಂಟ್‌ಗಳು 2.5-ಲೀಟರ್ ಡೀಸೆಲ್ ಎಂಜಿನ್ ಪಡೆದಿರುವುದರಿಂದ ಆದ್ಯತೆ ಮೇರೆಗೆ ಆಯ್ಕೆ ಮಾಡಬಹುದಾಗಿದೆ.

ಗ್ರಾಹಕರ ಮನಗೆದ್ದ ಮಹೀಂದ್ರಾ ಬೊಲೆರೊ ಮಾರಾಟದಲ್ಲಿ ಹೊಸ ದಾಖಲೆ

2.5-ಲೀಟರ್ ಡೀಸೆಲ್ ಎಂಜಿನ್ ಹೊಂದಿರುವ ಟಾಪ್ ವೆರಿಯೆಂಟ್‌ಗಳು ಪರ್ಫಾಮೆನ್ಸ್ ಕಾರು ಮಾದರಿಗಳಾದರೇ ಆರಂಭಿಕ 1.5-ಲೀಟರ್ ಡಿಸೇಲ್ ಎಂಜಿನ್ ಹೊಂದಿರುವ ಬೊಲೆರೊ ಕಾರುಗಳು ಉತ್ತಮ ಮೈಲೇಜ್ ನೀಡಬಲ್ಲ ಆವೃತ್ತಿಗಳಾಗಿವೆ ಎನ್ನಬುಹುದು.

ಗ್ರಾಹಕರ ಮನಗೆದ್ದ ಮಹೀಂದ್ರಾ ಬೊಲೆರೊ ಮಾರಾಟದಲ್ಲಿ ಹೊಸ ದಾಖಲೆ

ಇದರಿಂದಾಗಿಯೇ ನಗರ ಪ್ರದೇಶಗಳ ಗ್ರಾಹಕರನ್ನು ಅಷ್ಟೇ ಅಲ್ಲದೇ ಗ್ರಾಮೀಣ ಭಾಗದ ಗ್ರಾಹಕರನ್ನು ಸಹ ತನ್ನತ್ತ ಸೆಳೆದಿರುವ ಬೊಲೆರೊ ಕಾರುಗಳು, ಅತಿ ಕಡಿಮೆ ಅವಧಿಯಲ್ಲೇ 10 ಲಕ್ಷ ಕಾರು ಮಾರಾಟ ಗುರಿ ತಲುಪುವಲ್ಲಿ ಯಶಸ್ವಿಯಾಗಿವೆ ಎನ್ನಬುಹುದು.

ಗ್ರಾಹಕರ ಮನಗೆದ್ದ ಮಹೀಂದ್ರಾ ಬೊಲೆರೊ ಮಾರಾಟದಲ್ಲಿ ಹೊಸ ದಾಖಲೆ

ಈ ಬಗ್ಗೆ ಮಾತನಾಡಿರುವ ಮಹೀಂದ್ರಾ ಕಾರು ಮಾರಾಟ ವಿಭಾಗದ ಮುಖ್ಯಸ್ಥ ವಿಜಯ್ ರಾಮ್ ನಕ್ರಾ, ಹತ್ತು ಹಲವು ವಿಶೇಷತೆಗಳಿಗೆ ಕಾರಣವಾಗಿರುವ ಬೊಲೆರೊ ಕಾರುಗಳು ಮಾರಾಟದಲ್ಲಿ ಹೊಸ ದಾಖಲೆ ಸೃಷ್ಠಿಯಾಗಿದ್ದು, ಹೊಸ ಬಿಡುಗಡೆ ಮಾಡಲಾಗಿರುವ ಬೊಲೆರೊ ಪವರ್ ಪ್ಲಸ್ ಕಾರುಗಳ ಮಾರಾಟದಲ್ಲಿ ಮತ್ತಷ್ಟು ಜನಪ್ರಿಯತೆ ಪಡೆಯುವ ವಿಶ್ವಾಸವಿದೆ ಎಂದಿದ್ದಾರೆ.

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

ಈ ಹೊಸ ಕಾರಿನ ಬೆಲೆ ಮತ್ತು ಮೈಲೇಜ್ ಬಗ್ಗೆ ತಿಳಿದ್ರೆ ಈಗಲೇ ಬುಕ್ ಮಾಡ್ತೀರಾ!

ಉದ್ಯಮಿ ಮುಖೇಶ್ ಅಂಬಾನಿಯ ಬೆಂಗಾವಲು ಪಡೆಗೆ ಮೊತ್ತೊಂದು ಅಸ್ತ್ರ ಸೇರ್ಪಡೆ...

ಇನೋವಾ ಮತ್ತು ಲಾರಿ ನಡುವೆ ಭೀಕರ ಅಪಘಾತ- 7 ಮಂದಿ ದುರ್ಮರಣ

ಮಾರಾಟಕ್ಕಿರುವ 132 ಕೋಟಿ ಮೌಲ್ಯದ ಈ ನಂಬರ್ ಪ್ಲೇಟ್‌ ವಿಶೇಷತೆ ಏನು?

ರಾಯಲ್ ಎನ್‌ಫೀಲ್ಡ್‌ ಲೆದರ್ ಜಾಕೇಟ್ ಅಸಲಿ ಕಥೆ ಗೊತ್ತಾ? ಗೊತ್ತಾದ್ರೆ ನೀವು ಅದನ್ನ ಮುಟ್ಟೋದಿಲ್ಲ ಬಿಡಿ..!!

Read more on mahindra bolero
English summary
Mahindra Bolero Still Going Strong — Crosses 10 Lakh Sales Milestone.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark