ಮಾರುತಿ ಸುಜುಕಿ ಸ್ವಿಫ್ಟ್‌ಗೆ ಟಕ್ಕರ್ ಕೊಡಲಿದೆ ಪ್ಯೂಜೊ ಹೊಸ ಕಾರು '208'

Written By:

ಫ್ರಾನ್ಸ್ ಮೂಲದ ಐಕಾನಿಕ್ ವಾಹನ ಸಂಸ್ಥೆಯಾಗಿರುವ ಪ್ಯೂಜೊ ಭಾರತಕ್ಕೆ ರಿ ಎಂಟ್ರಿ ಕೊಡಲು ಸಜ್ಜಾಗುತ್ತಿದ್ದು, ಮೊದಲ ಹಂತದಲ್ಲೇ ಬಿಡುಗಡೆ ಮಾಡಲಾಗುತ್ತಿರುವ 208 ಎನ್ನುವ ಹ್ಯಾಚ್‌ಬ್ಯಾಕ್ ಮಾದರಿಯೊಂದು ಜನಪ್ರಿಯ ಸ್ವಿಫ್ಟ್‌ಗೆ ತೀವ್ರ ಸ್ಪರ್ಧೆ ನೀಡುವ ತವಕದಲ್ಲಿದೆ.

ಮಾರುತಿ ಸುಜುಕಿ ಸ್ವಿಫ್ಟ್‌ಗೆ ಟಕ್ಕರ್ ಕೊಡಲಿದೆ ಪ್ಯೂಜೊ ಹೊಸ ಕಾರು '208'

ಹೌದು, ಪ್ಯೂಜೊ ಸಂಸ್ಥೆಯು 2020ರಲ್ಲಿ ತನ್ನ ಮೊದಲ ಹ್ಯಾಚ್‌ಬ್ಯಾಕ್ ಕಾರನ್ನು ಬಿಡುಗಡೆ ಮಾಡಲಿದೆ ಎಂಬ ಮಾಹಿತಿ ಡ್ರೈವ್ ಸ್ಪಾರ್ಕ್‌ಗೆ ಸಿಕ್ಕಿದ್ದು, ಇದಕ್ಕೂ ಬಿಡುಗಡೆಯಾಗಲಿರುವ ಹೊಸ ಕಾರಿನ ಸ್ಪಾಟ್ ಟೆಸ್ಟಿಂಗ್ ನಡೆಸುತ್ತಿರುವುದು ಹ್ಯಾಚ್‌ಬ್ಯಾಕ್ ಕಿಂಗ್ ಎಂದೇ ಜನಪ್ರಿಯವಾಗಿರುವ ಸ್ವಿಫ್ಟ್‌ಗೆ ನೇರ ಸ್ಪರ್ಧಿಯಾಗಲಿದೆ.

Recommended Video - Watch Now!
Fighter Jet Crash In Goa - DriveSpark
ಮಾರುತಿ ಸುಜುಕಿ ಸ್ವಿಫ್ಟ್‌ಗೆ ಟಕ್ಕರ್ ಕೊಡಲಿದೆ ಪ್ಯೂಜೊ ಹೊಸ ಕಾರು '208'

ಈ ಮೂಲಕ ಭಾರತೀಯ ಗ್ರಾಹಕರನ್ನು ತನ್ನತ್ತ ಸೆಳೆಯುವ ಉದ್ದೇಶ ಹೊಂದಿರುವ ಪ್ಯೂಜೊ ಸಂಸ್ಥೆಯು ಸ್ವಿಫ್ಟ್ ಬೆಲೆಗಳಿಂತ ಕಡಿಮೆ ದರಗಳಲ್ಲಿ ಹೊಸ ಕಾರನ್ನು ಪರಿಚಯಿಸುವ ಬಗ್ಗೆ ಚಿಂತನೆ ನಡೆಸುತ್ತಿದ್ದು, ಪುಣೆ ಹೊರವಲಯದಲ್ಲಿ ಸ್ಪಾಟ್ ಟೆಸ್ಟಿಂಗ್ ನಡೆಸುತ್ತಿದೆ.

ಮಾರುತಿ ಸುಜುಕಿ ಸ್ವಿಫ್ಟ್‌ಗೆ ಟಕ್ಕರ್ ಕೊಡಲಿದೆ ಪ್ಯೂಜೊ ಹೊಸ ಕಾರು '208'

ಇದಕ್ಕಾಗಿ ಹೊಸ ಕಾರಿನ ಖರ್ಚನ್ನು ಕಡಿಮೆ ಮಾಡಲು ವಾಹನ ತಯಾರಕ ಕಂಪನಿಯು ಮಾಡ್ಸನ್ ಸುಮಿ, ಯುನೋ ಮಿಂಡಾ, ಸ್ಪಾರ್ಕ್ ಮಿಂಡಾ ಮತ್ತು ರಾನ್ ಗ್ರೂಪ್‌ ಸಹಾಯ ಹರಸುತ್ತಿದೆ. ಈ ಕಂಪನಿಗಳು ಹ್ಯಾಚ್‌ಬ್ಯಾಕ್ ಕಾರಿಗೆ ಮೂಲ ಘಟಕಗಳನ್ನು ಪೂರೈಸಲಿವೆ.

ಮಾರುತಿ ಸುಜುಕಿ ಸ್ವಿಫ್ಟ್‌ಗೆ ಟಕ್ಕರ್ ಕೊಡಲಿದೆ ಪ್ಯೂಜೊ ಹೊಸ ಕಾರು '208'

ಸದ್ಯದ ಮಾಹಿತಿ ಪ್ರಕಾರ ಪ್ಯೂಜೊ ಸಂಸ್ಥೆಯು 2020ರ ವೇಳೆಗೆ ಎರಡು ಅಥವಾ ಮೂರು ಹ್ಯಾಚ್‌ಬ್ಯಾಕ್ ರೂಪಾಂತರಗಳನ್ನು ಪ್ರಾರಂಭಿಸುತ್ತದೆ ಎಂದು ವರದಿಯಾಗಿದೆ. ಈ ಬಗ್ಗೆ ಕಂಪನಿಯ ಅಧಿಕೃತ ಮಾಹಿತಿ ತಿಳಿದುಬಂದಿಲ್ಲ.

Trending On DriveSpark Kannada:

ಮಾರ್ಚ್‌ನಲ್ಲಿ ಬಿಡುಗಡೆಯಾಗಲಿರುವ 2018ರ ಮಾರುತಿ ಸುಜುಕಿ ಸ್ವಿಫ್ಟ್ ಬೆಲೆ ಎಷ್ಟು ಗೊತ್ತಾ?

ಹಾಫ್ ಹೆಲ್ಮೆಟ್ ವಿರುದ್ಧ ಭರ್ಜರಿ ಕಾರ್ಯಚರಣೆ- ಬೈಕ್ ಸವಾರರಿಗೆ ಬಿಗ್ ಶಾಕ್...

2017ರಲ್ಲಿ ಸಾಮಾಜಿಕ ಜಾಣತಾಣಗಳಲ್ಲಿ ಅತಿಹೆಚ್ಚು ಸದ್ದು ಮಾಡಿದ ಟಾಪ್ 10 ಬೈಕ್‌ಗಳು...

ಮಾರುತಿ ಸುಜುಕಿ ಸ್ವಿಫ್ಟ್‌ಗೆ ಟಕ್ಕರ್ ಕೊಡಲಿದೆ ಪ್ಯೂಜೊ ಹೊಸ ಕಾರು '208'

ಪ್ಯೂಜೊ ಕಂಪನಿಯು ಪೂರೈಕೆದಾರರೊಂದಿಗೆ ಸುಮಾರು 4 ಲಕ್ಷ ಕಾರುಗಳ ಸರಬರಾಜು ಮಾಡುವ ಒಪ್ಪಂದಕ್ಕೆ ಸಹಿ ಹಾಕಲಿದ್ದು, ಕಾರುಗಳನ್ನು ಚೆನ್ನೈನಲ್ಲಿರುವ ಹಿಂದೂಸ್ಥಾನ್ ಮೋಟಾರ್ಸ್‌ನ ಉತ್ಪಾದನಾ ಘಟಕದಲ್ಲಿ ತಯಾರಿಸಲು ಯೋಜನೆ ರೂಪಿಸಲಾಗುತ್ತಿದೆ. ಈ ಘಟಕದಿಂದ 1 ಲಕ್ಷ ಕಾರುಗಳನ್ನು ಹೊರತರಲು ಕಂಪನಿಯು ಉದ್ದೇಶಿಸಿದೆ.

ಮಾರುತಿ ಸುಜುಕಿ ಸ್ವಿಫ್ಟ್‌ಗೆ ಟಕ್ಕರ್ ಕೊಡಲಿದೆ ಪ್ಯೂಜೊ ಹೊಸ ಕಾರು '208'

ಎಸ್‌ಯುವಿ ವಿಭಾಗದ ನಂತರ ಭಾರತದಲ್ಲಿ ಅತಿವೇಗವಾಗಿ ಬೆಳೆಯುತ್ತಿರುವ ಎರಡನೆಯ ವಿಭಾಗವಾಗಿ ಪ್ರೀಮಿಯಂ ಹ್ಯಾಚ್‌ಬ್ಯಾಕ್ ವಿಭಾಗ ಗುರುತಿಸಿಕೊಂಡಿದೆ. ಈ ಎರಡು ವಿಭಾಗದ ಕಡೆ ಪ್ಯೂಜೊ ಕಂಪನಿ ಹೆಚ್ಚು ಗಮನಹರಿಸಿದೆ.

ಮಾರುತಿ ಸುಜುಕಿ ಸ್ವಿಫ್ಟ್‌ಗೆ ಟಕ್ಕರ್ ಕೊಡಲಿದೆ ಪ್ಯೂಜೊ ಹೊಸ ಕಾರು '208'

ಮಾರುತಿ ಕಂಪನಿಯ ಸ್ವಿಫ್ಟ್ ಕಾರಿನ ಪ್ರತಿಸ್ಪರ್ಧಿಯನ್ನು ಹೊರತುಪಡಿಸಿ, ಪ್ಯೂಜೊ ಕಂಪನಿ ಇನ್ನೂ ಮೂರು ಹೊಸ ಮಾದರಿಗಳನ್ನು ವಿವಿಧ ವಿಭಾಗದಲ್ಲಿ ಪರಿಚಯಿಸಲು ಯೋಜಿಸಿದೆ. ಈ ಲೆಕ್ಕಾಚಾರದ ಪ್ರಕಾರ ಹಲವು ಕಾರುಗಳಿಗೆ ಸ್ಪರ್ಧೆ ನೀಡುವ ಹೊಸ ಕಾರುಗಳು ಮಾರುಕಟ್ಟೆಗೆ ಲಗ್ಗೆಯಿಡುವ ಸಾಧ್ಯತೆಗಳಿವೆ.

Image Source:TeamBHP

Trending On DriveSpark Kannada:

ಇನ್ಮುಂದೆ ಈ ಕೆಳಕಂಡ ಕಾರುಗಳನ್ನು ಖರೀದಿಸಲು ಆಗೋದಿಲ್ಲ...

ಸ್ಪಾಟ್ ಟೆಸ್ಟಿಂಗ್‌ನಲ್ಲೇ ಸ್ಕೂಟರ್ ಪ್ರಿಯರನ್ನು ಸೆಳೆದ ಟಿವಿಎಸ್ ಗ್ರಾಫೈಟ್..!

Trending DriveSpark YouTube Videos

Subscribe To DriveSpark Kannada YouTube Channel - Click Here

English summary
Peugeot’s Maruti Swift Rival Spotted Testing In India.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark