ಸದ್ದಿಲ್ಲದೆ ಬಿಡುಗಡೆಗೊಂಡ ಅಪ್ಡೇಟೆಡ್ ಹ್ಯುಂಡೈ ಐ20 ಆಕ್ಟೀವ್ ಕಾರು..

Written By: Rahul TS

ಹ್ಯುಂಡೈ ಇಂಡಿಯಾ ಸಂಸ್ಥೆಯು ತಮ್ಮ ಐ10 ಕಾರಿನ ಮುಂದಿನ ಪರಿವರ್ತನೆಯಾದ ಐ20 ಆಕ್ಟೀವ್ ಕಾರನ್ನು ಬಿಡುಗಡೆಗೊಳಿಸಿತ್ತು. ಇದೀಗ ಸಂಸ್ಥೆಯು ಸದ್ದಿಲ್ಲದೆ ತಮ್ಮ ನವೀಕರಿಸಲಾದ ಐ20 ಆಕ್ಟೀವ್ ಕಾರನ್ನು ಬಿಡುಗಡೆಗೊಳಿಸಿದ್ದು, ವಿನ್ಯಾಸದಲ್ಲಿ ಹಾಗು ವೈಶಿಷ್ಟ್ಯತೆಗಳಲ್ಲಿ ಗುರುತರ ಬದಲಾವಣೆಗಳನ್ನು ಪಡೆದುಕೊಂಡಿದೆ.

ಸದ್ದಿಲ್ಲದೆ ಬಿಡುಗಡೆಗೊಂಡ ಅಪ್ಡೇಟೆಡ್ ಹ್ಯುಂಡೈ ಐ20 ಆಕ್ಟೀವ್ ಕಾರು..

ಬಿಡುಗಡೆಗೊಂಡ ಹ್ಯುಂಡೈ ಐ20 ಆಕ್ಟೀವ್ ಕಾರಿನ ಬೇಸ್ ವೇರಿಯಂಟ್ ಮಾದರಿಗಳು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ 6.99 ಲಕ್ಷಕ್ಕೆ ನಿಗದಿಪಡಿಸಲಾಗಿದ್ದು, ಇನ್ನು ಟಾಪ್ ವೇರಿಯಂಟ್ ಮಾದರಿಯ ಕಾರುಗಳಿಗೆ ರೂ 10 ಲಕ್ಷದ ಬೆಲಯನ್ನು ನಿಗದಿಪಡಿಸಲಾಗಿದೆ ಎನ್ನಲಾಗಿದೆ.

ಸದ್ದಿಲ್ಲದೆ ಬಿಡುಗಡೆಗೊಂಡ ಅಪ್ಡೇಟೆಡ್ ಹ್ಯುಂಡೈ ಐ20 ಆಕ್ಟೀವ್ ಕಾರು..

ಹೊಸ ಐ20 ಆಕ್ಟೀವ್ ಕಾರುಗಳು ಕಾರಿನ ಒಳಭಾಗದಲ್ಲಿ ಮತ್ತು ಹೊರಭಾಗದಲ್ಲಿ ನವೀಕರಿಸಲಾಗಿದ್ದು, ಡ್ಯುಯಲ್ ಟೋನ್ ಮೆರಿನ ಬ್ಲೂ ಮತ್ತು ಪೋಲಾರ್ ವೈಟ್ ಪೇಯಿಂಟ್ ಸ್ಕೀಮ್ ಅಲ್ಲದೆ ಬ್ರೌನ್/ಬ್ಲಾಕ್ ಮತ್ತು ವೈಟ್/ಬ್ಲಾಕ್ ಡ್ಯುಯಲ್ ಟೋನ್ ಬಣ್ಣದಲ್ಲಿ ಖರೀದಿಗೆ ಲಭ್ಯವಿರಲಿದೆ.

ಸದ್ದಿಲ್ಲದೆ ಬಿಡುಗಡೆಗೊಂಡ ಅಪ್ಡೇಟೆಡ್ ಹ್ಯುಂಡೈ ಐ20 ಆಕ್ಟೀವ್ ಕಾರು..

ಇದಲ್ಲದೆ ಹ್ಯುಂಡೈ ಐ20 ಕಾರುಗಳು ಹೊಸ ಬೂಟ್ ಲಿಡ್ ಆಪ್ಲಿಂಕ್ ಮತ್ತು ಆಕ್ಟೀವ್ ಲೇಬಲ್ ಅನ್ನು ಕಾರಿನ ಹಿಂಭಾಗದಲ್ಲಿ ಅಳವಡಿಸಲಾಗಿದೆ. ಇನ್ನು ಕಾರಿನ ಒಟ್ಟಾರೆ ವಿನ್ಯಾಸವು ಹಿಂದಿನ ಮಾದರಯಲ್ಲೆ ಇರಲಿದ್ದು ಕಾರಿನ ಲುಕ್ ಅನ್ನು ಹೆಚ್ಚಿಸಲು ಹೊಸದಾಗಿ ಬಾಡಿ ಕ್ಲೇಡಿಂಗ್ ಮತ್ತು ರೂಫ್ ರೈಲ್ಸ್ ಅನ್ನು ಅಳವಡಿಸಲಾಗಿದೆ.

ಸದ್ದಿಲ್ಲದೆ ಬಿಡುಗಡೆಗೊಂಡ ಅಪ್ಡೇಟೆಡ್ ಹ್ಯುಂಡೈ ಐ20 ಆಕ್ಟೀವ್ ಕಾರು..

ನವೀಕರಿಸಲಾದ ಹೊಸ ಹ್ಯುಂಡೈ ಐ20 ಆಕ್ಟೀವ್ ಕಾರಿನ ಒಳಭಾಗದಲ್ಲಿ 7 ಇಂಚಿನ ಇನ್ಫೋಟೈನ್ಮೆಂಟ್ ಸಿಸ್ಟಂ ಅನ್ನು ಅಳವಡಿಸಲಾಗಿದ್ದು, ಒಳಭಾಗದ ಕ್ಯಾಬಿನ್, ಡ್ಯಾಶ್‍‍ಬೋರ್ಡ್ ಮತ್ತು ಸೀಟ್‍‍‍ಗಳು ದೇಹದ ಬಣ್ಣದಿಂದ ಸಜ್ಜುಗೊಂಡಿದೆ. ಇನ್ನು ಟಾಪ್ ವೇರಿಯಂಟ್‍‍ನ ಕಾರುಗಳು ವಿಶೇಷವಾಗಿ ಐಎಸ್ಒಫಿಕ್ಸ್ ಚೈಲ್ಡ್ ಸೀಟ್ ಮೌಂಟ್‍‍ಗಳನ್ನು ಪಡೆದುಕೊಂಡಿರಲಿವೆ.

ಸದ್ದಿಲ್ಲದೆ ಬಿಡುಗಡೆಗೊಂಡ ಅಪ್ಡೇಟೆಡ್ ಹ್ಯುಂಡೈ ಐ20 ಆಕ್ಟೀವ್ ಕಾರು..

ಎಂಜಿನ್ ಸಾಮರ್ಥ್ಯ

ಅಪ್ಡೇಟೆಡ್ ಹ್ಯುಂಡೈ ಐ20 ಕಾರುಗಳು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‍‍ಗಳಲ್ಲಿ ದೊರೆಯಲಿದೆ. ಕಾರಿನ ಪೆಟ್ರೋಲ್ ಮಾದರಿಗಳು 1.2 ಲೀಟರ್ ಪೆಟ್ರೋಲ್ ಎಂಜಿನ್ ಸಹಾಯದಿಂದ 82ಬಿಹೆಚ್‍ಪಿ ಮತ್ತು 114ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, 5 ಸ್ಪೀಡ್ ಗೇರ್‍‍ಬಾಕ್ಸ್ ನೊಂಡಿಗೆ ಜೋಡಿಸಲಾಗಿದೆ.

ಸದ್ದಿಲ್ಲದೆ ಬಿಡುಗಡೆಗೊಂಡ ಅಪ್ಡೇಟೆಡ್ ಹ್ಯುಂಡೈ ಐ20 ಆಕ್ಟೀವ್ ಕಾರು..

ಇನ್ನು ಕಾರಿನ ಡೀಸೆಲ್ ಮಾದರಿಗಳು 1.4 ಡೀಸೆಲ್ ಎಂಜಿನ್ ಸಹಾಯದಿಂದ 89ಬಿಹೆಚ್‍ಪಿ ಮತ್ತು 220ಎನ್ಎಂ ಟಾರ್ಕ್ ಅನ್ನು ಉತ್ಪಾದಿಸಲಿದ್ದು, 6 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಸದ್ದಿಲ್ಲದೆ ಬಿಡುಗಡೆಗೊಂಡ ಅಪ್ಡೇಟೆಡ್ ಹ್ಯುಂಡೈ ಐ20 ಆಕ್ಟೀವ್ ಕಾರು..

ಬಿಡುಗಡೆಗೊಂಡ ನವೀಕರಿಸಲಾದ ಹೊಸ ಹ್ಯುಂಡೈ ಐ20 ಆಕ್ಟೀವ್ ಕಾರುಗಳು ತನ್ನ ಹಳೆಯ ಮಾದರಿಗಿಂತ ವಿನ್ಯಾಸದಲ್ಲಿ ಮತ್ತು ವೈಶಿಷ್ಟ್ಯತೆಗಳನ್ನು ಪಡೆದುಕೊಂಡಿದ್ದು, ಮಾರುಕಟ್ಟೆಯಲ್ಲಿ ಫೋರ್ಡ್ ಫ್ರೀಸ್ಟೈಲ್, ಟೊಯೊಟಾ ಇಟಿಯೊಸ್ ಮತ್ತು ಫಿಯಾಟ್ ಅರ್ಬನ್ ಕಾರ್ ಕಾರುಗಳಿಗೆ ಪೈಪೋಟಿಯನ್ನು ನೀಡಲಿದೆ.

ಸದ್ದಿಲ್ಲದೆ ಬಿಡುಗಡೆಗೊಂಡ ಅಪ್ಡೇಟೆಡ್ ಹ್ಯುಂಡೈ ಐ20 ಆಕ್ಟೀವ್ ಕಾರು..

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

ಅಪ್ರಾಪ್ತರ ಕೈಗೆ ಬೈಕ್ ಕೊಟ್ಟಿದ್ದಕ್ಕೆ ಜೈಲು ಪಾಲಾದ 26 ಪೋಷಕರು

ಟ್ರಾಫಿಕ್ ರೂಲ್ಸ್ ಬ್ರೇಕ್- ಮಗನನ್ನೇ ಹಿಡಿದು ದಂಡ ವಸೂಲಿ ಮಾಡಿದ ಪೊಲೀಸ್..

ಹೆಲ್ಮೆಟ್ ಹಾಕದ ಬೈಕ್ ಸವಾರನ ಮೇಲೆ ಶೂ ಎಸೆದ ಟ್ರಾಫಿಕ್ ಪೊಲೀಸ್....

ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿ ಪೊಲೀಸರಿಂದಲೇ ಟ್ರೋಲ್ ಆದ ಯುವಕ..

ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದ ಅತಿ ದುಬಾರಿ ಬೆಲೆಯ ಫೈರ್ ಫೈಟಿಂಗ್ ಟ್ರಕ್...

Read more on hyundai i20
English summary
updated-hyundai-i20-active-launched-india-gets-new-features.
Story first published: Wednesday, May 2, 2018, 13:05 [IST]

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark