2020ರ ಆರಂಭದಲ್ಲಿ ಬಿಡುಗಡೆಯಾಗಲಿದೆ ಆಡಿ ಕ್ಯೂ8

ಜರ್ಮನಿಯ ಐಷಾರಾಮಿ ಕಾರು ತಯಾರಕರಾದ ಆಡಿ ಕಂಪನಿಯು ತನ್ನ ಪ್ರಮುಖ ಎಸ್‍‍ಯು‍ವಿ ಕ್ಯೂ8 ಅನ್ನು 2020ರ ಜನವರಿ 15ರಂದು ಭಾರತದಲ್ಲಿ ಬಿಡುಗಡೆಗೊಳಿಸುವುದಾಗಿ ತಿಳಿಸಿದೆ. 2025ರ ವೇಳೆಗೆ ದೇಶಿಯ ಮಾರುಕಟ್ಟೆಗಳಲ್ಲಿ ತನ್ನ ಅಸ್ತಿತ್ವವನ್ನು ಬಲಪಡಿಸಲು ಸಜ್ಜಾಗುತ್ತಿದೆ ಎಂದು ಕಂಪನಿ ಹೇಳಿದೆ.

2020ರ ಆರಂಭದಲ್ಲಿ ಬಿಡುಗಡೆಯಾಗಲಿದೆ ಆಡಿ ಕ್ಯೂ8

ವಆಡಿ ಮುಖ್ಯಸ್ಥರಾದ ಬಲ್ಬೀರ್ ಸಿಂಗ್ ಧಿಲ್ಲಾನ್ ಅವರು ಮಾತನಾಡಿ, 2025ರ ವೇಳೆಗೆ ನಮಗೆ ಮಾರುಕಟ್ಟೆಯಲ್ಲಿ ಅಸ್ತಿತ್ವವನ್ನು ಬಲಪಡಿಸಲು ಸಿ ಮತ್ತು ಡಿ ಸೆಗ್‍‍ಮೆಂಟ್‍‍ಗಳು ಆಧಾರಸ್ತಂಭವಾಗಿದೆ. ಕ್ಯೂ8 ಮಾದರಿಯು ಡಿ ಸೆಗ್‍‍ಮೆಂಟ್‍ನಲ್ಲಿ ಸೇರುತ್ತದೆ ಎಂದು ಹೇಳಿದ್ದಾರೆ.

2020ರ ಆರಂಭದಲ್ಲಿ ಬಿಡುಗಡೆಯಾಗಲಿದೆ ಆಡಿ ಕ್ಯೂ8

ಕಳೆದ ವಾರಾಂತ್ಯದಲ್ಲಿ ಆಡಿ ಎಲ್ಲಾ ಹೊಸ ಕ್ಯೂ8 ಕಾರು ಬುಕ್ಕಿಂಗ್ ಸ್ವೀಕರಿಸಲು ಪ್ರಾರಂಭಿಸಿದೆ ಎಂಬ ವಂದತಿಗಳಿವೆ. ಆದರೆ ಪುಣೆ, ಮುಂಬೈ ಮತ್ತು ದೆಹಲಿ ಮೂಲದ ಡೀಲರುಗಳು ತಾವು ಬುಕ್ಕಿಂಗ್ ಸ್ವೀಕರಿಸಲು ಪ್ರಾರಂಭಿಸಿಲ್ಲ ಎಂದು ಹೇಳಿದ್ದಾರೆ.

2020ರ ಆರಂಭದಲ್ಲಿ ಬಿಡುಗಡೆಯಾಗಲಿದೆ ಆಡಿ ಕ್ಯೂ8

ಹೊಸ ಕ್ಯೂ8 ಎಸ್‍‍ಯು‍ವಿ ಮುಂದಿನ ವರ್ಷದ ಜನವರಿ 15ರಂದು ಬಿಡುಗಡೆಯಾಗಲಿದೆ ಎಂದು ಧಿಲ್ಲಾನ್ ಅವರು ಹೇಳಿದ್ದಾರೆ. ಕ್ಯೂ8 ಆಡಿಯ ಎರಡನೇ ಬಿಎಸ್-6 ಮಾದರಿಯಾಗಿದೆ. ಮೊದಲನೆಯ ಬಿಎಸ್-6 ಮಾದರಿ ಆಡಿ ಎ6 ಬಿಡುಗಡೆಯಾಗಿದೆ. ಐಷಾರಾಮಿ ಶೈಲಿಯ ನಾಲ್ಕು ಡೋರಿನ ಆಯ್ಕೆಯನ್ನು ಮತ್ತು ಹಲವು ಉನ್ನತ ಗುಣಮಟ್ಟದ ವೈಶಿಷ್ಟ್ಯಗಳನ್ನು ಹೊಂದಿರಲಿದೆ. ಖರೀದಿದಾರರ ಅದ್ಯತೆಗಳಿಗೆ ಅನುಗುಣವಾಗಿ ತನ್ನ ಕ್ಯೂ8 ಅಭಿವೃದ್ದಿಪಡಿಸಲಾಗುತ್ತಿದೆ ಎಂದು ಕಂಪನಿ ಹೇಳಿದೆ.

2020ರ ಆರಂಭದಲ್ಲಿ ಬಿಡುಗಡೆಯಾಗಲಿದೆ ಆಡಿ ಕ್ಯೂ8

ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಲಭ್ಯವಿರುವ ಆಡಿ ಕ್ಯೂ8 ಎಸ್‍ಯು‍ವಿಯು 3.0 ಲೀಟರ್ ಟರ್ಬೊಚಾರ್ಜ್ಡ್ ವಿ6 ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 335ಬಿ‍ಹೆಚ್‍‍ಪಿ ಪವರ್ ಮತ್ತು 500 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿ‍‍ನ್‍ನೊಂದಿಗೆ 8ಸ್ಪೀಡ್ ಟಿಪ್ಟ್ರೋನಿಕ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ ಮತ್ತು ಕಂಪನಿಯ ಕ್ವಾಟ್ರೋ ಅಲ್-ವ್ಹೀಲ್ ಡ್ರೈವ್ ಅನ್ನು ಅಳವಡಿಸಲಾಗಿದೆ.

2020ರ ಆರಂಭದಲ್ಲಿ ಬಿಡುಗಡೆಯಾಗಲಿದೆ ಆಡಿ ಕ್ಯೂ8

ಕ್ಯೂ8 ಎಸ್‍‍ಯು‍ವಿಯು ಮೂರು ಝೋನ್ ಕ್ಲೈಮೆಂಟ್ ಕಂಟ್ರೋಲ್, ಆಟೋ ಡಿಮ್ಮಂಗ್ ಇಂಟಿರಿಯರ್ ರೇರ್ ವ್ಯೂ ಮಿರರ್, ಡಿಜಿಟಲ್ ಕಂಪಾಸ್, ಪವರ್‍ ಶೇಡ್‍‍ನೊಂದಿಗೆ ಸನ್‍‍ರೂಫ್, ಹೊಂದಾಣಿಕೆ ಮಾಡಬಹುದಾದ ಪವರ್ ಫ್ರಂಟ್ ಸೀಟ್, ಹೈ ಬೀಮ್ ಅಸಿಸ್ಟ್ ಹೊಂದಿರುವ ಪೂರ್ಣ ಪ್ರಮಾಣದ ಎಲ್‍ಇ‍ಡಿ ಹೆಡ್‍‍ಲೈಟ್‍‍ಗಳು ಮತ್ತು ಇನ್ಫೋಟೇನ್‍‍ಮೆಂಟ್ ಮೋಡ್‍‍ಗಳಲ್ಲಿ ಕಾರ್ಯನಿರ್ವಹಿಸುವ ಎಲ್‍‍ಸಿಡಿ ಡಿಜಿ‍‍ಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ.

2020ರ ಆರಂಭದಲ್ಲಿ ಬಿಡುಗಡೆಯಾಗಲಿದೆ ಆಡಿ ಕ್ಯೂ8

ಕ್ಯೂ8ನಲ್ಲಿ ಸುರಕ್ಷತೆ ಉನ್ನತ ಗುಣಮಟ್ಟದ ವೈಶಿಷ್ಟ್ಯಗಳನ್ನು ಅಳವಡಿಸಲಾಗಿದೆ. ಸುರಕ್ಷತೆಗಾಗಿ ಆರು - ಏರ್‍‍ಬ್ಯಾಗ್‍‍ಗಳು, ಎಲೆಕ್ಟ್ರಾನಿಕ್ ಸ್ಟಬಿಲಿಟಿ ಕಂಟ್ರೋಲ್, ಎಬಿಎಸ್ ನೊಂದಿಗೆ ಇಬಿಡಿ, ಟಯರ್ ಫ್ರಶರ್ ಮ್ಯಾನೇಜ್‍‍ಮೆಂಟ್ ಸಿಸ್ಟಂ, ಎಲ್ಕೆಟ್ರೋಮ್ಯಾಗ್‍‍ನೇಟಿಕ್ ಪಾರ್ಕಿಂಗ್ ಬ್ರೇಕ್ ಮತ್ತು ಲೋವರ್ ಆಂಕರ್‍‍ಗಳನ್ನು ಅಳವಡಿಸಲಾಗಿದೆ.

MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

2020ರ ಆರಂಭದಲ್ಲಿ ಬಿಡುಗಡೆಯಾಗಲಿದೆ ಆಡಿ ಕ್ಯೂ8

ಕ್ಯೂ8 ಮಾದರಿಗಳಲ್ಲಿನ ಯಾವುದೇ ಬದಲಾವಣೆಗಳ ಬಗ್ಗೆ ಮಾಹಿತಿಗಾಗಿ ಕಾಯಬೇಕಾಗಿದೆ. ಇಂಟಿರಿಯರ್‍‍ನಲ್ಲಿ ಅಂತರರಾಷ್ಟ್ರೀಯ ಮಟ್ಟದ ವೈಶಿಷ್ಟ್ಯಗಳನ್ನು ಒಳಗೊಂಡಿರಲಿದೆ ಎಂದು ನಿರೀಕ್ಷಿಸಹುದು. ಆಡಿ ಎಂಜಿನ್‍‍ನಲ್ಲಿ ಸಣ್ಣ ಮಟ್ಟದ ಬದಲಾವಣೆಯನ್ನು ಮಾಡಬಹುದು ಎಂದು ನಿರೀಕ್ಷಿಸಬಹುದು.

MOST READ: ಸದ್ದಿಲ್ಲದೇ ಕಾರುಗಳನ್ನು ರಿಕಾಲ್ ಮಾಡುತ್ತಿದೆ ಮಾರುತಿ

2020ರ ಆರಂಭದಲ್ಲಿ ಬಿಡುಗಡೆಯಾಗಲಿದೆ ಆಡಿ ಕ್ಯೂ8

ಪ್ರಸ್ತುತ ಆಡಿ ಕ್ಯೂ8 ಮಾದರಿಗೆ ಭಾರತೀಯ ಎಕ್ಸ್ ಶೋರೂಂ ಪ್ರಕಾರ ಬೆಲೆಯು ರೂ.48.66 ಲಕ್ಷಗಳಾಗಿರಲಿದೆ. ಹೊಸ ಆಡಿ ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿ ಇಲ್ಲ. ಆದರೆ ಕ್ಯೂ8 ಎಸ್‍‍ಯುವಿಯ ಬೆಲೆಯನ್ನು ಭಾರತೀಯ ಎಕ್ಸ್ ಶೋರೂಂ ಪ್ರಕಾರ ರೂ.90ಲಕ್ಷಗಳಾಗಿರಬಹುದು ಎಂದು ನಿರೀಕ್ಷಿಸಬಹುದು.

MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

2020ರ ಆರಂಭದಲ್ಲಿ ಬಿಡುಗಡೆಯಾಗಲಿದೆ ಆಡಿ ಕ್ಯೂ8

ಆಡಿ ಶ್ರೇಣಿಯ ಕಾರುಗಳಿಗೆ ಬಿಎಂಡಬ್ಲ್ಯು ಮತ್ತು ಮರ್ಸಿಡಿಸ್ ಬೆಂಝ್ ಕಾರುಗಳು ಪ್ರಬಲ ಪೈಪೋಟಿಯನ್ನು ನೀಡುತ್ತಿವೆ. ಎಸ್‍‍ಯು‍ವಿಯನ್ನು ಕಸ್ಟಮೈಸ್ ಮಾಡುದರಿಂದ ಮಾರಾಟ ಸಂಖ್ಯೆಯನ್ನು ಹೆಚ್ಚಿಸುವ ಸಾಧ್ಯತೆಗಳಿದೆ. ಇದರಿಂದ ದೇಶಿಯ ಮಾರುಕಟ್ಟೆಯಲ್ಲಿ ತಮ್ಮ ಅಸ್ತಿತ್ವವನ್ನು ಭದ್ರಪಡಿಸಲು ಕ್ಯೂ8 ಸಹಾಯ ಮಾಡಬಹುದು.

Most Read Articles

Kannada
English summary
Audi Q8 India Launch Confirmed For 15 January 2020: Details And Expected Price -Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X