ಭಾರತಕ್ಕೆ ಎಂಟ್ರಿ ನೀಡಲು ತುದಿಗಾಲ ಮೇಲೆ ನಿಂತ ಪಿಎಸ್‌ಎ ಗ್ರೂಪ್‌

ವಾಹನಗಳ ಉತ್ಪಾದನೆ ಮತ್ತು ಮಾರಾಟದಲ್ಲಿ ವಿಫುಲ ಅವಕಾಶಗಳನ್ನು ತೆರೆದುಕೊಳ್ಳುತ್ತಿರುವ ಭಾರತೀಯ ಮಾರುಕಟ್ಟೆಯಲ್ಲಿ ಇದೀಗ ಫ್ರೆಂಚ್ ಕಾರು ಉತ್ಪಾದಕರು ಹೊಸ ಸಂಚಲನ ಸೃಷ್ಠಿಸಲು ತಮ್ಮ ವಿನೂತನ ಕಾರು ಮಾದರಿಗಳನ್ನು ಬಿಡುಗಡೆಗೊಳಿಸುವತ್ತ ಚಿಂತನೆಯಲ್ಲಿದ್ದು, ಜನಪ್ರಿಯ ಪಿಎಸ್ಎ ಗ್ರೂಪ್ ಸಹ ವಿನೂತನ ವಿನ್ಯಾಸದ ಎಸ್‌ಯುವಿ ಕಾರುಗಳನ್ನು ಭಾರತಕ್ಕೆ ಪರಿಚಯಿಸುವ ಇರಾದೆಯಲ್ಲಿದೆ.

ಭಾರತಕ್ಕೆ ಎಂಟ್ರಿ ನೀಡಲು ತುದಿಗಾಲ ಮೇಲೆ ನಿಂತ ಪಿಎಸ್‌ಎ ಗ್ರೂಪ್‌

ಈ ಸಂಬಂಧ ಭಾರತೀಯ ಮಾರುಕಟ್ಟೆಯಲ್ಲಿ ಈಗಾಗಲೇ ಹಲವು ಸುತ್ತಿನ ಮಾರುಕಟ್ಟೆ ಅಧ್ಯಯನ ನಡೆಸಿರುವ ಪಿಎಸ್ಎ ಗ್ರೂಪ್, ಮೊದಲ ಹಂತದಲ್ಲೇ ಎಸ್‌ಯುವಿ ಕಾರುಗಳನ್ನು ಪರಿಚಯಿಸುವ ಬಗ್ಗೆ ಮಾತುಕತೆ ನಡೆಸಿದೆ. ಹೀಗಾಗಿ ಎಲ್ಲವೂ ಅಂದುಕೊಂಡಂತೆ ಆದಲ್ಲಿ ಪಿಎಸ್ಎ ಗ್ರೂಪ್ ನಿರ್ಮಾಣದ ಸಿಟ್ರೊಯಿನ್ ಎಸ್‌ಯುವಿ ಕಾರುಗಳು ದೇಶಿಯ ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ.

ಭಾರತಕ್ಕೆ ಎಂಟ್ರಿ ನೀಡಲು ತುದಿಗಾಲ ಮೇಲೆ ನಿಂತ ಪಿಎಸ್‌ಎ ಗ್ರೂಪ್‌

ಇದಕ್ಕಾಗಿಯೇ ಮೊದಲ ಹಂತವಾಗಿ ಬ್ರಾಂಡ್ ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಭಾರತೀಯ ಗ್ರಾಹಕರನ್ನು ಸೆಳೆಯಲು ಸಿಟ್ರೊಯಿನ್ ಕಾರುಗಳನ್ನು ಆಮದು ಮಾಡಿಕೊಳ್ಳುತ್ತಿರುವ ಪಿಎಸ್ಎ ಗ್ರೂಪ್, ಜಾಹೀರಾತು ಮತ್ತು ಆಸಕ್ತ ಗ್ರಾಹಕರಿಗೆ ಟೆಸ್ಟ್ ಡ್ರೈವ್‌ಗಳನ್ನು ಕಲ್ಪಿಸಿ ಬ್ರಾಂಡ್ ಪರಿಚಯಿಸಲು ಯೋಜನೆ ರೂಪಿಸಿದೆ.

ಭಾರತಕ್ಕೆ ಎಂಟ್ರಿ ನೀಡಲು ತುದಿಗಾಲ ಮೇಲೆ ನಿಂತ ಪಿಎಸ್‌ಎ ಗ್ರೂಪ್‌

ಮೂಲಗಳ ಪ್ರಕಾರ ಪಿಎಸ್ಎ ಗ್ರೂಪ್‌ನ ಸಿಟ್ರೊಯಿನ್ ಸಿ84 ಮತ್ತು ಸಿಟ್ರೊಯಿನ್ ಸಿ5-ಏರೋಕ್ರಾಸ್ ಎಸ್‌ಯುವಿಗಳನ್ನು ಮೊದಲ ಹಂತದಲ್ಲಿ ಬಿಡುಗಡೆ ಮಾಡಲಿದ್ದು, ಮಧ್ಯಮ ಗಾತ್ರದ ಐಷಾರಾಮಿ ಮಾದರಿಗಳಾದ ಜೀಪ್ ಕಂಪಾಸ್, ಹ್ಯುಂಡೈ ಟಕ್ಸನ್ ಮತ್ತು ಸ್ಕೋಡಾ ಕರೋಕ್ ಎಸ್‌ಯುವಿ ತ್ರೀವ ಪೈಪೋಟಿ ನೀಡುವ ನೀರಿಕ್ಷೆಯಲ್ಲಿದೆ.

ಭಾರತಕ್ಕೆ ಎಂಟ್ರಿ ನೀಡಲು ತುದಿಗಾಲ ಮೇಲೆ ನಿಂತ ಪಿಎಸ್‌ಎ ಗ್ರೂಪ್‌

ಜೊತೆಗೆ ಹೊಸ ಕಾರುಗಳನ್ನು ಪರಿಚಯಿಸುವುದಕ್ಕೂ ಮುನ್ನ ದೇಶದ 80 ಪ್ರಮುಖ ನಗರಗಳಲ್ಲಿ 'ಎಕ್ಸ್‌ಪಿರೆನ್ಸ್ ಸ್ಟೋರ್'ಗಳನ್ನು ತೆರೆಯಲಿದ್ದು, ಈ ಮೂಲಕ ಗ್ರಾಹಕರನ್ನು ಹೊಸ ಕಾರ್ ಬ್ರಾಂಡ್‌ನತ್ತ ಸೆಳೆಯುವ ಮಾರುಕಟ್ಟೆ ತಂತ್ರಗಳನ್ನು ಬಳಸುತ್ತಿದೆ. ಇದಲ್ಲದೇ ಬೆಲೆಗಳಲ್ಲಿ ತುಸು ದುಬಾರಿ ಎನ್ನಿಸಲಿರುವ ಪಿಎಸ್ಎ ಗ್ರೂಪ್ ಕಾರುಗಳ ಬೆಲೆ ತಗ್ಗಿಸುವ ಉದ್ದೇಶದಿಂದ ಚೆನ್ನೈನಲ್ಲಿ ಅಸೆಂಬ್ಲಿ ಯೂನಿಟ್ ತೆರೆಯಲು ನಿರ್ಧರಿಸಿದ್ದು, ಸ್ಥಳೀಯ ಲಭ್ಯವಾಗುವ ಶೇ.90ರಷ್ಟು ತಾಂತ್ರಿಕ ಬಿಡಿಭಾಗಗಳನ್ನು ಬಳಕೆ ಮಾಡಿಕೊಂಡು ಲಾಭಾಂಶ ಮತ್ತು ಕಾರಿನ ಬೆಲೆ ಇಳಿಕೆಗೆ ಸಹಕಾರಿಯಾಗುವಂತೆ ಯೋಜನೆ ಹಮ್ಮಿಕೊಂಡಿದೆ.

MOST READ: ವಾಹನ ಚಾಲಕರೇ ಇತ್ತ ಗಮನಿಸಿ - ಅಕ್ಟೋಬರ್ 1 ರಿಂದ ಜಾರಿಯಾಗಲಿದೆ ಹೊಸ ರೂಲ್ಸ್

ಭಾರತಕ್ಕೆ ಎಂಟ್ರಿ ನೀಡಲು ತುದಿಗಾಲ ಮೇಲೆ ನಿಂತ ಪಿಎಸ್‌ಎ ಗ್ರೂಪ್‌

ಇನ್ನು ಭಾರತದಲ್ಲಿ ಪಿಎಸ್‌ಎ ಗ್ರೂಪ್‌ನ ಮತ್ತೊಂದು ಅಂಗಸಂಸ್ಥೆಯಾದ ಪ್ಯೂಜೊ ಕೂಡಾ ಭಾರತದಲ್ಲಿ ಈಗಾಗಲೇ ತನ್ನ ವಾಣಿಜ್ಯ ಚಟುವಟಿಕೆಗಳನ್ನು ಆರಂಭಗೊಳಿಸಿದ್ದು, 2019ರ ಮಧ್ಯಂತರದಲ್ಲಿ ಹೊಸ ಕಾರುಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಎಂಜಿನ್ ಕಾರ್ಯಕ್ಷಮತೆ ಕುರಿತಂತೆ ಸ್ಪಾಟ್ ಟೆಸ್ಟಿಂಗ್ ನಡೆಸುವ ಮೂಲಕ ಗ್ರಾಹಕರನ್ನು ಸೆಳೆಯುವ ಪ್ರಯತ್ನದಲ್ಲಿದೆ.

Most Read Articles

Kannada
English summary
Citroen Plans 90% Localisation in India — French Automaker Gets Indian Twist. Read in Kannada.
Story first published: Tuesday, March 12, 2019, 9:46 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X