ಹ್ಯುಂಡೈ ಕಾರುಗಳ ಮೇಲೆ ಭರ್ಜರಿ ಆಫರ್

ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ (ಹೆಚ್‌ಎಂಐಎಲ್) ಕಂಪನಿಯು ಡಿಸೆಂಬರ್ ತಿಂಗಳಿನಲ್ಲಿ ತನ್ನ ಸರಣಿಯ ಪ್ರಮುಖ ಮಾದರಿಗಳ ಮೇಲೆ ಭರ್ಜರಿ ರಿಯಾಯಿತಿಯನ್ನು ಘೋಷಿಸಿದೆ. ಈ ವರ್ಷದ ಅಂತ್ಯದಲ್ಲಿ ಹ್ಯುಂಡೈ ಕಂಪನಿಯು ಬರೊಬ್ಬರಿ ರೂ.2 ಲಕ್ಷದವರೆಗೆ ರಿಯಾಯಿತಿಯನ್ನು ಘೋಷಿಸಿದೆ.

ಹ್ಯುಂಡೈ ಕಾರುಗಳ ಮೇಲೆ ಭರ್ಜರಿ ಆಫರ್

ಗ್ರ್ಯಾಂಡ್ ಐ10 ನಿಯೋಸ್

ಭಾರತದ ಎರಡನೇ ಅತಿದೊಡ್ಡ ಕಾರು ಉತ್ಪಾದನಾ ಕಂಪನಿಯಾದ ಹ್ಯುಂಡೈ ಡಿಸೆಂಬರ್ ತಿಂಗಳಲ್ಲಿ ತನ್ನ ಸರಣಿಯಲ್ಲಿರುವ ಕಾರುಗಳ ಮೇಲೆ ಹಲವಾರು ರಿಯಾಯಿತಿಗಳನ್ನು ನೀಡುತ್ತಿದೆ. ಇದರಲ್ಲಿ ಇತ್ತೀಚಿಗೆ ಬಿಡುಗಡೆಯಾದ ಮೂರನೇ ತಲೆಮಾರಿನ ಗ್ರ್ಯಾಂಡ್ ಐ10 ನಿಯೋಸ್ ಕಾರಿಗೆ ರೂ.20,000 ಎಕ್ಸ್‌ಚೇಂಜ್ ಬೋನಸ್‌ ಅನ್ನು ನೀಡಿದೆ.

ಹ್ಯುಂಡೈ ಕಾರುಗಳ ಮೇಲೆ ಭರ್ಜರಿ ಆಫರ್

ಗ್ರಾಂಡ್ ಐ10 ನಿಯೋಸ್ ಕಾರು 1.2-ಲೀಟರ್ ಕಪ್ಪಾ ಪೆಟ್ರೋಲ್ ಎಂಜಿನ್ ಮೂಲಕ 81-ಬಿಎಚ್‌ಪಿ ಪವರ್ ಮತ್ತು 114-ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಇನ್ನೂ 1.2-ಲೀಟರ್ ಸಿಆರ್‌ಡಿಐ ಡೀಸೆಲ್ ಎಂಜಿನ್ ಮೂಲಕ 76-ಬಿಎಚ್‌ಪಿ, 190-ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಹ್ಯುಂಡೈ ಕಾರುಗಳ ಮೇಲೆ ಭರ್ಜರಿ ಆಫರ್

ಸ್ಯಾಂಟ್ರೊ

ಕಳೆದ ವರ್ಷದ ಕೊನೆಯಲ್ಲಿ ಬಿಡುಗಡೆಯಾದ ಸ್ಯಾಂಟ್ರೊ ಕಾರಿಗೆ ರೂ.30,000 ನಗದು ರಿಯಾಯಿತಿ, ರೂ.20,00 ಎಕ್ಸ್‌ಚೇಂಜ್ ಬೋನಸ್‌ ಮತ್ತು ಪಿಒಐ ಗ್ರಾಹಕರಿಗೆ ರೂ.5,000 ರಿಯಾಯಿತಿಯನ್ನು ಘೋಷಿಸಲಾಗಿದೆ.

ಹ್ಯುಂಡೈ ಕಾರುಗಳ ಮೇಲೆ ಭರ್ಜರಿ ಆಫರ್

ಹ್ಯುಂಡೈ ಸ್ಯಾಂಟ್ರೋ ಕಾರು 1.1 ಲೀಟರ್ ನಾಲ್ಕು ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, ಈ ಎಂಜಿನ್ 68 ಬಿ‍‍ಹೆಚ್‍‍ಪಿ ಪವರ್ ಮತ್ತು 99 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍‍ನೊಂದಿಗೆ 5 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ.

ಹ್ಯುಂಡೈ ಕಾರುಗಳ ಮೇಲೆ ಭರ್ಜರಿ ಆಫರ್

ಗ್ರ್ಯಾಂಡ್ ಐ10

ಸಾಮಾನ್ಯ ಗ್ರ್ಯಾಂಡ್ ಐ10 ಕಾರಿಗೆ ರೂ.40,000 ನಗದು ರಿಯಾಯಿತಿ, ರೂ.30,000 ಎಕ್ಸ್‌ಚೇಂಜ್ ಬೋನಸ್‌ ಮತ್ತು ಪಿಐಒ ಗ್ರಾಹಕರಿಗೆ ರೂ.5,000 ರಿಯಾಯಿತಿಯನ್ನು ಘೋಷಿಸಿದೆ.

ಹ್ಯುಂಡೈ ಕಾರುಗಳ ಮೇಲೆ ಭರ್ಜರಿ ಆಫರ್

ಗ್ರ್ಯಾಂಡ್ ಐ10 ಕಾರು 1.2 ಲೀಟರಿನ ಕಪ್ಪಾ ಪೆಟ್ರೋಲ್ ಎಂಜಿನ್ 82 ಬಿ‍‍ಹೆಚ್‍‍ಪಿ ಪವರ್ ಹಾಗೂ 114 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಸಿಎನ್‍‍ಜಿ ಎಂಜಿನ್ 66 ಬಿ‍‍ಹೆಚ್‍‍ಪಿ ಪವರ್ ಹಾಗೂ 98 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎರಡೂ ಮಾದರಿಗಳಲ್ಲಿ 5 ಸ್ಪೀಡಿನ ಮ್ಯಾನುವಲ್ ಗೇರ್‌ಬಾಕ್ಸ್‌ ಅಳವಡಿಸಲಾಗಿದೆ.

MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಹ್ಯುಂಡೈ ಕಾರುಗಳ ಮೇಲೆ ಭರ್ಜರಿ ಆಫರ್

ಎಕ್ಸೆಂಟ್

ಹ್ಯುಂಡೈ ಎಕ್ಸೆಂಟ್ ವಿಟಿವಿಟಿ ಎಸ್ ಡೀಸೆಲ್ ಆವೃತ್ತಿಗೆ ಈ ತಿಂಗಳು ವಿಶೇಷ ರಿಯಾಯಿತಿ ರೂ.5.39 ಲಕ್ಷ ರಿಯಾಯಿತಿಯನ್ನು ಘೋಷಿಸಿದೆ. ಈ ಕಾರಿನಲ್ಲಿ 1.2 ಲೀಟರ್ ನಾಲ್ಕು ಸಿಲಿಂಡರ್ ಪೆಟ್ರೋಲ್ ಎಂಜಿನ್ 83 ಬಿಹೆಚ್‍‍ಪಿ ಪವರ್ ಮತ್ತು 114 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

MOST READ: ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ ನಿತಿನ್ ಗಡ್ಕರಿ ..!

ಹ್ಯುಂಡೈ ಕಾರುಗಳ ಮೇಲೆ ಭರ್ಜರಿ ಆಫರ್

ಎಲೈಟ್ ಐ20

ಹ್ಯುಂಡೈ ಎಲೈಟ್ ಐ20 ಕಾರಿಗೆ ಭರ್ಜರಿ ರಿಯಾಯಿತಿಯನ್ನು ಘೋಷಿಸಿದೆ. ಹ್ಯುಂಡೈ ಎಲೈಟ್ ಐ20 ಕಾರಿಗೆ ರೂ.10,000 ನಗದು ರಿಯಾಯಿತಿ, ರೂ.20,000 ಎಕ್ಸ್‌ಚೇಂಜ್ ಬೋನಸ್‌ ಮತ್ತು ಪಿಒಐ ಗ್ರಾಹಕರಿಗೆ ರೂ.5,000 ರಿಯಾಯಿತಿಯನ್ನು ಘೋಷಿಸಿದೆ.

MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ಹ್ಯುಂಡೈ ಕಾರುಗಳ ಮೇಲೆ ಭರ್ಜರಿ ಆಫರ್

ಎಲೈಟ್ ಐ20 ಕಾರಿನ 1.4 ಲೀಟರ್ ಡೀಸೆಲ್ ಎಂಜಿನ್ 89 ಬಿಹೆಚ್‍ಪಿ ಪವರ್ ಮತ್ತು 219 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍ನೊಂದಿಗೆ 6 ಸ್ಪೀಡ್ ಮ್ಯಾನುವಲ್ ಗೇರ್‍‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ.

ಹ್ಯುಂಡೈ ಕಾರುಗಳ ಮೇಲೆ ಭರ್ಜರಿ ಆಫರ್

ಹ್ಯುಂಡೈ ವರ್ನಾ

ಹ್ಯುಂಡೈ ವರ್ನಾ ಕಾರು ಮಾರಾಟದಲ್ಲಿ ಇಳಿಕೆಯಾಗಿದೆ. ಇದೇ ಕಾರಣದಿಂದಾಗಿ ಹ್ಯುಂಡೈ ಕಂಪನಿಯು ವರ್ನಾ ಕಾರಿಗೆ ಭರ್ಜರಿ ಆಫರ್ ಅನ್ನು ಘೋಷಿಸಿದೆ. ಹ್ಯುಂಡೈ ವರ್ನಾ ಕಾರಿಗೆ ರೂ.20,000 ನಗದು ರಿಯಾಯಿತಿ, ರೂ.30,000 ವಿನಿಮಯ ಬೋನಸ್ ಮತ್ತು ಪಿ‍ಒಐ ಗ್ರಾಹಕರಿಗೆ ರೂ.10,000 ರಿಯಾಯಿತಿಯನ್ನು ಘೋಷಿಸಿದೆ.

ಹ್ಯುಂಡೈ ಕಾರುಗಳ ಮೇಲೆ ಭರ್ಜರಿ ಆಫರ್

ಕ್ರೆಟಾ

ಮುಂದಿನ ವರ್ಷ ಬಿಎಸ್-6 ಹ್ಯುಂಡೈ ಕ್ರೆಟಾ ಬಿಡುಗಡೆಯಾಗಲಿದೆ. ಹ್ಯುಂಡೈ ಕ್ರೆಟಾ ಕಾರಿಗೆ ಕಿಯಾ ಸೆಲ್ಟೋಸ್ ಕಾರು ಪ್ರಬಲ ಪೈಪೃಟಿಯನ್ನು ನೀಡುತ್ತಿದೆ. ಈ ಮಿಡ್ ಎಸ್‍ಯುವಿಯ 1.6 ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಆವೃತ್ತಿಗಳ ಮೇಲೆ ರೂ.65,000 ನಗದು ರಿಯಾಯಿತಿ ಮತ್ತು ರೂ.30,000 ಎಕ್ಸ್‌ಚೇಂಜ್ ಬೋನಸ್‌ ಅನ್ನು ಘೋಷಿಸಿದೆ.

Most Read Articles

Kannada
English summary
Hyundai Dec 2019 Discounts On i10, i20, Creta, Elantra, Verna, Tucson – Up To Rs. 2 Lakh - Read in Kannada
Story first published: Saturday, December 7, 2019, 16:08 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X