2020ರ ಆಟೋ ಎಕ್ಸ್‌ಪೋದಲ್ಲಿ ಬಿಡುಗಡೆಯಾಗಲಿದೆ ಟಾಟಾ ಗ್ರಾವಿಟಾಸ್

ಟಾಟಾ ಮೋಟಾರ್ಸ್ ತನ್ನ ಹೊಸ ಗ್ರಾವಿಟಾಸ್ ಎಸ್‍‍ಯುವಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಟಾಟಾ ಕಂಪನಿಯು ಭಾರತದಲ್ಲಿ 7 ಸೀಟಿನ ಗ್ರಾವಿಟಾಸ್ ಎಸ್‍‍ಯುವಿಯನ್ನು ಬಿಡುಗಡೆಗೊಳಿಸಲಿದೆ.

2020ರ ಆಟೋ ಎಕ್ಸ್‌ಪೋದಲ್ಲಿ ಬಿಡುಗಡೆಯಾಗಲಿದೆ ಟಾಟಾ ಗ್ರಾವಿಟಾಸ್

ಈ ಎಸ್‍‍ಯುವಿಯು 2020ರ ಫೆಬ್ರವರಿ ತಿಂಗಳಲ್ಲಿ ನಡೆಯುವ ಆಟೋ ಎಕ್ಸ್ ಪೋದಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. 2020ರ ಏಪ್ರಿಲ್ ತಿಂಗಳಲ್ಲಿ ಜಾರಿಯಾಗಲಿರುವ ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ಹೊಸ ಎಸ್‍‍ಯುವಿಯಲ್ಲಿ ಬಿಎಸ್-6 ಎಂಜಿನ್ ಅನ್ನು ಅಳವಡಿಸಲಾಗಿದೆ.

2020ರ ಆಟೋ ಎಕ್ಸ್‌ಪೋದಲ್ಲಿ ಬಿಡುಗಡೆಯಾಗಲಿದೆ ಟಾಟಾ ಗ್ರಾವಿಟಾಸ್

ಟಾಟಾ ಗ್ರಾವಿಟಾಸ್ ಎಸ್‍‍ಯುವಿನಲ್ಲಿ ಹ್ಯಾರಿಯರ್ ಎಸ್‍‍ಯುವಿಗಿಂತ ವಿಭಿನ್ನವಾದ ಸ್ಪೋರ್ಟಿ ಸ್ಪಾಯ್ಲರ್, ಎಲ್ಇಡಿ ಟೇಲ್‍‍ಲೈಟ್ ಅನ್ನು ಅಳವಡಿಸಲಾಗಿದೆ. ಟಾಟಾ ಕಂಪನಿಯು, ಗ್ರಾವಿಟಾಸ್ ಎಸ್‍‍ಯುವಿನಲ್ಲಿ ತನ್ನ ಸರಣಿಯಲ್ಲಿರುವ ಹ್ಯಾರಿಯರ್‍ ಎಸ್‍‍ಯುವಿನಲ್ಲಿ ಇರುವ ಹಾಗೇ 2.0 ಲೀಟರ್ ಕ್ರಯೋಟೆಕ್ ಡೀಸೆಲ್ ಎಂಜಿನ್ ಅನ್ನು ಅಳವಡಿಸಿದೆ.

2020ರ ಆಟೋ ಎಕ್ಸ್‌ಪೋದಲ್ಲಿ ಬಿಡುಗಡೆಯಾಗಲಿದೆ ಟಾಟಾ ಗ್ರಾವಿಟಾಸ್

ಈ ಎಂಜಿನ್ 173 ಬಿ‍‍ಹೆಚ್‍‍ಪಿ ಪವರ್ ಮತ್ತು 350 ಪೀಕ್ ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಟಾಟಾ ಹ್ಯಾರಿಯರ್ ಎಂಜಿನ್‍‍ಗೆ ಹೋಲಿಸಿದರೆ ಹೊಸ ಎಸ್‍‍ಯುವಿಯ ಎಂಜಿನ್ 30 ಬಿ‍ಹೆಚ್‍‍ಪಿ ಪವರ್ ಹೆಚ್ಚು ಉತ್ಪಾದಿಸುತ್ತದೆ.

2020ರ ಆಟೋ ಎಕ್ಸ್‌ಪೋದಲ್ಲಿ ಬಿಡುಗಡೆಯಾಗಲಿದೆ ಟಾಟಾ ಗ್ರಾವಿಟಾಸ್

ಟಾಟಾ ಹ್ಯಾರಿಯರ್ ಎಸ್‍‍ಯುವಿಯ ರೀತಿಯಲ್ಲೇ 6 ಸ್ಪೀಡ್ ಮ್ಯಾನುವಲ್ ಗೇರ್‍‍‍ಬಾಕ್ಸ್ ಅನ್ನು ಅಳವಡಿಸಲಾಗುವುದು. ಟಾಟಾ ಗ್ರಾವಿಟಾಸ್ 6 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅಳವಡಿಸುವ ಸಾಧ್ಯತೆಗಳಿವೆ. ಆದರೆ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಬಿಡುಗಡೆಯಾದ ನಂತರದ ಹಂತದಲ್ಲಿ ಅಳವಡಿಸಬಹುದು. ಟಾಟಾ ಗ್ರಾವಿಟಾಸ್ ಎಸ್‍‍ಯುವಿ ಬಿಎಸ್-6 ಎಂಜಿನ್ ಅನ್ನು ಹೊಂದಿರಲಿದೆ. ಟಾಟಾ ಗ್ರಾವಿಟಾಸ್ ಹ್ಯಾರಿಯರ್ ಎಸ್‍‍ಯುವಿಯನ್ನು ಆಧರಿಸಿದೆ.

2020ರ ಆಟೋ ಎಕ್ಸ್‌ಪೋದಲ್ಲಿ ಬಿಡುಗಡೆಯಾಗಲಿದೆ ಟಾಟಾ ಗ್ರಾವಿಟಾಸ್

ಹ್ಯಾರಿಯರ್ ಎಸ್‍‍ಯುವಿಯನ್ನು ಈ ವರ್ಷದ ಆರಂಭದಲ್ಲಿ ಭಾರತದಲ್ಲಿ ಬಿಡುಗಡೆ ಗೊಳಿಸಿತ್ತು. 2019ರ ಜಿನೀವಾ ಮೋಟಾರ್ ಶೋದಲ್ಲಿ ಬಜಾರ್ಡ್ ಹೆಸರಿನೊಂದಿಗೆ ಗ್ರಾವಿಟಾಸ್ ಎಸ್‍‍ಯುವಿಯನ್ನು ಅನಾವರಗೊಳಿಸಿತ್ತು.

MOST READ: ದುಬಾರಿ ಬೆಂಝ್ ಕಾರನ್ನು ಹೆಲಿಕಾಪ್ಟರ್ ಮೂಲಕ ಪುಡಿ ಮಾಡಿದ ಭೂಪ

2020ರ ಆಟೋ ಎಕ್ಸ್‌ಪೋದಲ್ಲಿ ಬಿಡುಗಡೆಯಾಗಲಿದೆ ಟಾಟಾ ಗ್ರಾವಿಟಾಸ್

ಹೊಸ 7 ಸೀಟಿನ ಎಸ್‍ಯುವಿಯು ಹ್ಯಾರಿಯರ್‍‍ಗಿಂತ 62 ಎಂಎಂ ಉದ್ದವನ್ನು ಹೊಂದಿದೆ. ಹ್ಯಾರಿಯರ್‍‍ಗೆ ಹೋಲಿಸಿದರೆ ಹೊಸ ಎಸ್‍‍ಯುವಿಯು ಬೂಟ್ ಲಿಡ್ ಅನ್ನು ಹೊಂದಿದೆ. ಕೆಲವು ಸಣ್ಣ ಬದಲಾವಣೆಗಳನ್ನು ಹೊರತುಪಡಿಸಿದರೆ ಗ್ರಾವಿಟಾಸ್ ಎಸ್‍‍ಯುವಿಯು ಹ್ಯಾರಿಯರ್ ಎಸ್‍‍ಯುವಿಯನ್ನೇ ಹೋಲುತ್ತದೆ.

MOST READ: ಕಳ್ಳತನವಾಗಿದ್ದ ಕಾರು ಫಾಸ್ಟ್‌ಟ್ಯಾಗ್‌‍‍ನಿಂದಾಗಿ ವಾಪಸ್ ಸಿಕ್ಕಿದ್ದೆ ಒಂದು ರೋಚಕ

2020ರ ಆಟೋ ಎಕ್ಸ್‌ಪೋದಲ್ಲಿ ಬಿಡುಗಡೆಯಾಗಲಿದೆ ಟಾಟಾ ಗ್ರಾವಿಟಾಸ್

ಟಾಟಾ ಗ್ರಾವಿಟಾಸ್ ಎಸ್‍‍ಯುವಿಯು, ಹ್ಯಾರಿಯರ್ ಎಸ್‍‍ಯುವಿಯ ನಂತರ ಬ್ರ್ಯಾಂಡ್‍ನ ಹೊಸ ಒಮೆಗಾ ಆರ್ಕಿಟ್ಕೆಚರ್ ಆಧರಿಸಿದ ಎರಡನೇ ಆವೃತ್ತಿಯಾಗಿದೆ. ಈ ಎಸ್‍‍ಯುವಿ ಟಾಟಾದ ಇತ್ತೀಚಿನ ಇಂಪ್ಯಾಕ್ಟ್ 2.0 ವಿನ್ಯಾಸವನ್ನು ಹೊಂದಿದೆ.

MOST READ: ನವೆಂಬರ್ ತಿಂಗಳಲ್ಲಿ ಮಾರಾಟವಾದ ರಾಯಲ್ ಎನ್‍‍ಫೀಲ್ಡ್ ಬೈಕ್‍‍ಗಳೆಷ್ಟು ಗೊತ್ತಾ?

2020ರ ಆಟೋ ಎಕ್ಸ್‌ಪೋದಲ್ಲಿ ಬಿಡುಗಡೆಯಾಗಲಿದೆ ಟಾಟಾ ಗ್ರಾವಿಟಾಸ್

ಟಾಟಾ ಗ್ರಾವಿಟಾಸ್ ಎಸ್‍ಯುವಿಯ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.15 ಲಕ್ಷಗಳಾಗಿರಲಿದೆ. ಟಾಟಾ ಗ್ರಾವಿಟಾಸ್ ಎಸ್‍ಯುವಿಯು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಫೋರ್ಡ್ ಎಂಡೀವರ್, ಮಹೀಂದ್ರಾ ಅಲ್ತುರಾಸ್ ಜಿ 4 ಮತ್ತು ಟೊಯೋಟಾ ಫಾರ್ಚೂನರ್ ಎಸ್‍‍ಯುವಿಗಳಿಗೆ ಪೈಪೋಟಿ ನೀಡಲಿದೆ.

Most Read Articles

Kannada
English summary
Tata Gravitas Launch At 2020 Auto Expo - Read in Kananda
Story first published: Saturday, December 28, 2019, 11:59 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X